• English
  • Login / Register

6.99 ಲಕ್ಷ ರೂ.ಗೆ Hyundai i20 ನ Facelift ಆವೃತ್ತಿ ಬಿಡುಗಡೆ

ಹುಂಡೈ I20 ಗಾಗಿ tarun ಮೂಲಕ ಸೆಪ್ಟೆಂಬರ್ 08, 2023 06:51 pm ರಂದು ಮಾರ್ಪಡಿಸಲಾಗಿದೆ

  • 46 Views
  • ಕಾಮೆಂಟ್‌ ಅನ್ನು ಬರೆಯಿರಿ

ತಾಜಾ ಸ್ಟೈಲಿಂಗ್ ಮತ್ತು  ಬದಲಾವಣೆ ಮಾಡಿದ ಇಂಟೀರಿಯರ್ ಡಿಸೈನ್‌ನೊಂದಿಗೆ, ಈ ಹಬ್ಬದ ಸೀಸನ್ ನಲ್ಲಿ i20 ಹ್ಯಾಚ್‌ಬ್ಯಾಕ್  ಸೌಮ್ಯವಾದ ಅಪ್ಡೇಟ್ ಅನ್ನು ಪಡೆಯುತ್ತಿದೆ 

Hyundai i20 2023

  • ಹುಂಡೈ ಐ20 ಫೇಸ್‌ಲಿಫ್ಟ್ ನ ಎಕ್ಸ್ ಶೋರೂಂ ಬೆಲೆ 6.99 ಲಕ್ಷ ರೂ.ನಿಂದ 11.01 ಲಕ್ಷ ರೂ. ವರೆಗೆ  ಇದೆ. 
  • ಇದು ಹೊಸ ಬೇಸ್-ಮಾಡೆಲ್ ಆಗಿರುವ ಎರಾ ಆವೃತ್ತಿಯನ್ನು ಪಡೆಯುತ್ತದೆ.
  • ಸ್ಪೋರ್ಟ್ಸ್ ಆವೃತ್ತಿಯು ಮರುವಿನ್ಯಾಸಗೊಳಿಸಲಾದ ಮುಂಭಾಗದ ಪ್ರೊಫೈಲ್, ಹೊಸ ಅಲಾಯ್ ವೀಲ್ ಗಳು ಮತ್ತು ಮಾರ್ಪಾಡು ಮಾಡಿರುವ ಹಿಂಭಾಗದ ಬಂಪರ್ ನ್ನು ಪಡೆಯುತ್ತದೆ.
  • ಹೊಸ ಡ್ಯುಯಲ್-ಟೋನ್ ಬ್ಲಾಕ್ ಮತ್ತು ಗ್ರೇ ಥೀಮ್‌ಗಾಗಿ ಪ್ರಿ-ಫೇಸ್‌ಲಿಫ್ಟ್ ನ ಇಂಟೀರಿಯರ್ ನ್ನು ಹಾಗೆಯೆ ಉಳಿಸಿಕೊಳ್ಳಲಾಗಿದೆ.
  • ಆರು ಏರ್‌ಬ್ಯಾಗ್‌ಗಳು, ESC, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ ಈಗ ಸ್ಟ್ಯಾಂಡರ್ಡ್ ಆಗಿದೆ. 
  • ಇದು 1-ಲೀಟರ್ ಟರ್ಬೊ-ಪೆಟ್ರೋಲ್ ಆಯ್ಕೆಯನ್ನು ಕಳೆದುಕೊಳ್ಳುತ್ತದೆ ಮತ್ತು ಮಾನ್ಯುಯಲ್ ಮತ್ತು IVT ಜೊತೆಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮಾತ್ರ ಪಡೆಯುತ್ತದೆ.

 ಹ್ಯುಂಡೈ i20ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಎಕ್ಸ್ ಶೋರೂಂ ಬೆಲೆ  6.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಪ್ರಸ್ತುತ ಪೀಳಿಗೆಯು 2020e ನಲ್ಲಿ ಭಾರತದಲ್ಲಿ ಪ್ರಾರಂಭವಾದ ನಂತರ ಹ್ಯಾಚ್‌ಬ್ಯಾಕ್ ತನ್ನ ಮೊದಲ ಗಂಭೀರ ಅಪ್ಡೇಟ್ ಅನ್ನು ಪಡೆಯುತ್ತದೆ. ಬುಕಿಂಗ್‌ಗಳು ಈಗಾಗಲೇ ತೆರೆದಿದ್ದು, ವಿತರಣೆಗಳು ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ. ವೇರಿಯಂಟ್‌ವಾರು ಬೆಲೆಗಳು ಈ ಕೆಳಗಿನಂತಿವೆ:

ಬೆಲೆ ಪರಿಶೀಲನೆ

ಟ್ರಾನ್ಸ್ಮಿಷನ್ 

ಎರಾ

ಮ್ಯಾಗ್ನಾ

ಸ್ಪೋರ್ಟ್ಜ್ 

ಆಸ್ತಾ

ಆಸ್ತಾ (ಒ) 

ಎಂಟಿ

6.99 ಲಕ್ಷ ರೂ.

7.77 ಲಕ್ಷ ರೂ.

8.33 ಲಕ್ಷ ರೂ.

9.30 ಲಕ್ಷ ರೂ.

9.98 ಲಕ್ಷ ರೂ.

ಐವಿಟಿ 

-

-

9.34 ಲಕ್ಷ ರೂ.

-

11.01 ಲಕ್ಷ ರೂ.

ಹೊಸ ಬೇಸ್-ಆವೃತ್ತಿ ಎರಾ ದಿಂದಾಗಿ, ಹ್ಯುಂಡೈ i20 ನ ಆರಂಭಿಕ ಬೆಲೆ ಕಡಿಮೆಯಾಗಿದೆ. ಇನ್ನು ಮುಂದೆ ಟರ್ಬೊ-ಪೆಟ್ರೋಲ್ ಎಂಜಿನ್ ನ ಆಯ್ಕೆ ಇಲ್ಲದಿರುವುದರಿಂದ, ಟಾಪ್-ಎಂಡ್ ಬೆಲೆ ಕೂಡ ಕಡಿಮೆಯಾಗಿದೆ.

ಸ್ಟೈಲಿಂಗ್ ನಲ್ಲಿ ಬದಲಾವಣೆ

Hyundai i20 2023

ಇದರಲ್ಲಿ ಆಗಿರುವ ಬದಲಾವಣೆಗಳು ಸೂಕ್ಷ್ಮವಾಗಿದ್ದರೂ, ಅವುಗಳನ್ನು ಇನ್ನೂ ಸುಲಭವಾಗಿ ಗುರುತಿಸಬಹುದಾಗಿದೆ. ಕ್ಯಾಸ್ಕೇಡಿಂಗ್ ಗ್ರಿಲ್ ವಿನ್ಯಾಸ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು  ಬದಲಾವಣೆ ಮಾಡಲಾಗಿದೆ, ಆದರೆ ಎಲ್ಇಡಿ ಡಿಆರ್ಎಲ್ ಗಳು ಇನ್ನೂ ತಲೆಕೆಳಗಿಯೇ ಇದೆ.  ಫಾಗ್ ಲ್ಯಾಂಪ್ ಗಳನ್ನು ಬಿಟ್ಟುಬಿಡಲಾಗಿದೆ, ಆದರೆ ಏರ್ ಡ್ಯಾಮ್ ವಿನ್ಯಾಸವನ್ನು ಸ್ವಲ್ಪಮಟ್ಟಿಗೆ ನವೀಕರಿಸಲಾಗಿದೆ. ರೇಸಿಂಗ್ ಸ್ಕರ್ಟ್‌ಗಳಂತೆ ಕಾಣುವ ಮರುವಿನ್ಯಾಸಗೊಳಿಸಲಾದ ಬಂಪರ್‌ಗಳು ಮುಂಭಾಗದ ನೋಟವನ್ನು ಹೆಚ್ಚಿಸುತ್ತದೆ. 

ಹೊಸ 16-ಇಂಚಿನ ಅಲಾಯ್ ವೀಲ್ ಗಳಿಂದಾಗಿ i20 ಫೇಸ್‌ಲಿಫ್ಟ್ ಸ್ವಲ್ಪ ವಿಭಿನ್ನವಾಗಿ ಕಾಣುತ್ತದೆ. ಹಿಂದಿನ ಪ್ರೊಫೈಲ್ ಅನ್ನು ಈ ಹಿಂದಿನ Z-ಆಕಾರದ LED ಟೈಲ್ ಲ್ಯಾಂಪ್‌ಗಳೊಂದಿಗೆ ಮಾರ್ಪಾಡು ಮಾಡಿರುವ ಬಂಪರ್‌ನೊಂದಿಗೆ ನವೀಕರಿಸಲಾಗಿದೆ. 

ಇಂಟೀರಿಯರ್ ನಲ್ಲಿ ಸೂಕ್ಷ್ಮ ಬದಲಾವಣೆಗಳು

Hyundai i20 2023

ಒಳಭಾಗವು ಈ ಹಿಂದಿನ -ಫೇಸ್‌ಲಿಫ್ಟ್ ಮಾದರಿಯಂತೆಯೇ ಕಾಣುತ್ತದೆ, ಹೊಸ ಡ್ಯುಯಲ್-ಟೋನ್ ಕಪ್ಪು ಮತ್ತು ಬೂದು ಇಂಟೀರಿಯರ್ ನ್ನು ಉಳಿಸಿ, ಇದು ಎಲ್ಲ-ಬ್ಲಾಕ್ ಥೀಮ್ ಅನ್ನು ಬದಲಾಯಿಸುತ್ತದೆ. ಸೆಮಿ-ಲೆಥೆರೆಟ್ ಅಪ್ಹೋಲ್‌ಸ್ಟರಿಗಾಗಿ ಲೆಥೆರೆಟ್ ಸೀಟ್‌ಗಳನ್ನು ಬದಲಾಯಿಸಲಾಗಿದೆ, ಆದರೆ ಡೋರ್ ಟ್ರಿಮ್‌ಗಳಲ್ಲಿ ಸಾಫ್ಟ್ ಟಚ್ ಮೆಟೀರಿಯಲ್ ಗಳ ಸುಳಿವುಗಳು ಇನ್ನೂ ಇವೆ.

ಸಣ್ಣ ವೈಶಿಷ್ಟ್ಯಗಳ ಮರುಹೊಂದಾಣಿಕೆ

Hyundai i20 Facelift Launched At Rs 6.99 Lakh

ಇದು ಎಲೆಕ್ಟ್ರಿಕ್ ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಡಿಜಿಟೈಸ್ಡ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಏರ್ ಪ್ಯೂರಿಫೈಯರ್ ನಂತಹ ವೈಶಿಷ್ಟ್ಯಗಳನ್ನು ನೀಡುವುದನ್ನು ಮುಂದುವರೆಸಿದೆ.

ಉನ್ನತೀಕರಿಸಿದ ಸುರಕ್ಷತಾ ವೈಶಿಷ್ಟ್ಯಗಳು

Hyundai i20 Facelift Launched At Rs 6.99 Lakh

i20 ಫೇಸ್‌ಲಿಫ್ಟ್ ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕಾರೇಜ್, ESC, ಹಿಲ್ ಅಸಿಸ್ಟ್ ಕಂಟ್ರೋಲ್, ಹಗಲು-ರಾತ್ರಿ IRVM, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ ಮತ್ತು ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುವ ಮೂಲಕ ಎಲ್ಲಾ ಪ್ರಯಾಣಿಕರಿಗೆ ಸುರಕ್ಷತಾ ಭಾಗವನ್ನು ಸುಧಾರಿಸಿದೆ. ಟಾಪ್ ಎಂಡ್ ವೇರಿಯೆಂಟ್ ಗಳು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತವೆ.

ಸುಧಾರಿಸಿದ ಪವರ್‌ಟ್ರೇನ್  

Hyundai i20 Facelift Launched At Rs 6.99 Lakh

i20 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಕಳೆದುಕೊಳ್ಳುವುದರಿಂದ ಆಗುವ ದೊಡ್ಡ ಬದಲಾವಣೆಯು ಪ್ರೀಮಿಯಂ ಹ್ಯಾಚ್‌ಬ್ಕ್‌ಗೆ ಹಿನ್ನಡೆ ಉಂಟಾಗಿದೆ. ಈಗ ಈ ಸುಧಾರಿತ ಹ್ಯಾಚ್‌ಬ್ಯಾಕ್ ನಲ್ಲಿ ಶಕ್ತಿಯನ್ನು ಉತ್ಪಾದಿಸುವುದು 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾತ್ರ ಆಗಿದೆ, ಇದು 83PS ಮತ್ತು 115Nm ನಲ್ಲಿ ಪವರ್ ಹೊರಹಾಕುತ್ತದೆ. ಟ್ರಾನ್ಸ್ಮಿಸನ್ ಆಯ್ಕೆಗಳು 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ನ್ನು ಒಳಗೊಂಡಿವೆ, ಎರಡನೆಯದು ಪವರ್ ಫಿಗರ್ ಅನ್ನು 88PS ಗೆ ಹೆಚ್ಚಿಸುತ್ತದೆ.

ಟರ್ಬೊ-ಪೆಟ್ರೋಲ್ ಎಂಜಿನ್, ಎನ್ ಲೈನ್ ವೇರಿಯೆಂಟ್ ಗಳಿಗೆ ಪ್ರತ್ಯೇಕವಾಗಿ ಉಳಿಯುವ ಸಾಧ್ಯತೆಯಿದೆ, ಇದು ಶೀಘ್ರದಲ್ಲೇ ಫೇಸ್‌ಲಿಫ್ಟ್ ಪಡೆಯುವ ನಿರೀಕ್ಷೆಯಿದೆ.

ಪ್ರತಿಸ್ಪರ್ಧಿಗಳು

ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೊಜ್, ಮಾರುತಿ ಬಲೆನೊ ಮತ್ತು ಟೊಯೊಟಾ ಗ್ಲಾನ್ಜಾದಂತಹ ಪ್ರೀಮಿಯಂ ಹ್ಯಾಚ್ ಬ್ಯಾಕ್ ಗಳಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ i20 ಮುಂದುವರಿಯುತ್ತದೆ.

ಇನ್ನಷ್ಟು ಓದಿ : ಹುಂಡೈ ಐ20 2023ರ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai I20

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience