ಈ ಮಾರ್ಚ್‌ನಲ್ಲಿ Hyundai ಕಾರುಗಳ ಖರೀದಿಯ ವೇಳೆಯಲ್ಲಿ ಸುಮಾರು 43,000 ರೂ.ಗಿಂತ ಹೆಚ್ಚು ಲಾಭವನ್ನು ಪಡೆಯಿರಿ
ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗಾಗಿ shreyash ಮೂಲಕ ಮಾರ್ಚ್ 12, 2024 06:07 pm ರಂದು ಪ್ರಕಟಿಸಲಾಗಿದೆ
- 31 Views
- ಕಾಮೆಂಟ್ ಅನ್ನು ಬರೆಯಿರಿ
ಗ್ರಾಂಡ್ i10 ನಿಯೋಸ್ ಮತ್ತು ಔರಾ ಕೂಡ ರೂ. 3,000 ಕಾರ್ಪೊರೇಟ್ ರಿಯಾಯಿತಿಯೊಂದಿಗೆ ಲಭ್ಯವಿದೆ
- ಹ್ಯುಂಡೈ ಗ್ರಾಂಡ್ i10 ನಿಯೋಸ್‌ನೊಂದಿಗೆ ಗರಿಷ್ಠ ರೂ. 43,000 ವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
- ಹುಂಡೈ ಔರಾದೊಂದಿಗೆ ರೂ. 33,000 ವರೆಗಿನ ಉಳಿತಾಯವನ್ನು ಪಡೆಯಬಹುದು.
- ಹ್ಯುಂಡೈ i20 ಯೊಂದಿಗೆ ರೂ. 25,000 ವರೆಗಿನ ಕೊಡುಗೆಗಳನ್ನು ನೀಡಲಾಗುತ್ತಿದೆ.
- ಹ್ಯುಂಡೈ ವೆನ್ಯೂ ಖರೀದಿಯೊಂದಿಗೆ ಗ್ರಾಹಕರು ರೂ.30,000 ವರೆಗೆ ಉಳಿಸಬಹುದು.
- ಎಲ್ಲಾ ಕೊಡುಗೆಗಳು ಮಾರ್ಚ್ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.
ಎಲ್ಲಾ ಹ್ಯುಂಡೈ ಕಾಂಪ್ಯಾಕ್ಟ್ ಕಾರುಗಳಿಗೆ ಈ ಮಾರ್ಚ್‌ನಲ್ಲಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಕೊಡುಗೆಗಳಲ್ಲಿ ನಗದು ರಿಯಾಯಿತಿಗಳು, ವಿನಿಮಯ ಬೋನಸ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ. ಈ ಪ್ಯಾನ್-ಇಂಡಿಯಾ ಪ್ರಯೋಜನಗಳನ್ನು ಎಕ್ಸ್‌ಟರ್, i20 N ಲೈನ್, ವೆನ್ಯೂ N ಲೈನ್, ಕ್ರೆಟಾ, ಅಲ್ಕಾಜರ್, ಟಕ್ಸನ್, ಕೋನಾ ಎಲೆಕ್ಟ್ರಿಕ್ ಮತ್ತು ಐಯೊನಿಕ್ 5 ನಂತಹ ಕೆಲವು ಹ್ಯುಂಡೈ ಮಾಡೆಲ್ ಗಳಿಗೆ ನೀಡಲಾಗುತ್ತಿಲ್ಲ ಎಂಬುದನ್ನು ಗಮನಿಸಬೇಕು.
ಹುಂಡೈ ಗ್ರಾಂಡ್ i10 ನಿಯೋಸ್
ಕೊಡುಗೆಗಳು |
ಮೊತ್ತ |
ಕ್ಯಾಶ್ ಡಿಸ್ಕೌಂಟ್ |
ರೂ. 30,000 ವರೆಗೆ |
ವಿನಿಮಯ ಬೋನಸ್ |
ರೂ. 10,000 ವರೆಗೆ |
ಕಾರ್ಪೊರೇಟ್ ಡಿಸ್ಕೌಂಟ್ |
ರೂ. 3,000 ವರೆಗೆ |
ಒಟ್ಟು ಪ್ರಯೋಜನಗಳು |
ರೂ. 43,000 ವರೆಗೆ |
-
ಎಲ್ಲಾ ಇತರ ಹ್ಯುಂಡೈ ಮಾಡೆಲ್‌ಗಳಿಗೆ ಹೋಲಿಸಿದರೆ ಹ್ಯುಂಡೈ ಗ್ರಾಂಡ್ i10 ನಿಯೋಸ್ ಇಲ್ಲಿ ಅತಿ ಹೆಚ್ಚು ರಿಯಾಯಿತಿಯನ್ನು ಪಡೆಯುತ್ತದೆ.
-
ಇದರ ಬೆಲೆಯು ರೂ. 5.92 ಲಕ್ಷ ಮತ್ತು ರೂ. 8.56 ಲಕ್ಷದ ನಡುವೆ ಇದೆ.
ಇದನ್ನು ಕೂಡ ಓದಿ: ಈ ನಗರಗಳಲ್ಲಿ ಕಾಂಪ್ಯಾಕ್ಟ್ SUV ಯನ್ನು ಖರೀದಿಸಲು ಎಂಟು ತಿಂಗಳವರೆಗೆ ಕಾಯಬೇಕಾಗಬಹುದು
ಹ್ಯುಂಡೈ ಔರಾ
ಕೊಡುಗೆಗಳು |
ಮೊತ್ತ |
ಕ್ಯಾಶ್ ಡಿಸ್ಕೌಂಟ್ |
ರೂ. 20,000 ವರೆಗೆ |
ವಿನಿಮಯ ಬೋನಸ್ |
ರೂ. 10,000 ವರೆಗೆ |
ಕಾರ್ಪೊರೇಟ್ ಡಿಸ್ಕೌಂಟ್ |
ರೂ. 3,000 ವರೆಗೆ |
ಒಟ್ಟು ಪ್ರಯೋಜನಗಳು |
ರೂ. 33,000 ವರೆಗೆ |
-
ಗ್ರಾಂಡ್ i10 ನಿಯೋಸ್ ಗೆ ಹೋಲಿಸಿದರೆ, ಹ್ಯುಂಡೈ ಔರಾ ರೂ.20,000 ಗಳಷ್ಟು ಕಡಿಮೆ ರಿಯಾಯಿತಿಯನ್ನು ಹೊಂದಿದೆ.
-
ಹ್ಯುಂಡೈ ಔರಾ ಸಬ್-4m ಸೆಡಾನ್ ಬೆಲೆಯೂ 6.49 ಲಕ್ಷದಿಂದ ಶುರುವಾಗಿ 9.05 ಲಕ್ಷದವರೆಗೆ ಇದೆ.
ಹ್ಯುಂಡೈ i20
ಕೊಡುಗೆಗಳು |
ಮೊತ್ತ |
ಕ್ಯಾಶ್ ಡಿಸ್ಕೌಂಟ್ |
ರೂ. 15,000 ವರೆಗೆ |
ವಿನಿಮಯ ಬೋನಸ್ |
ರೂ. 10,000 ವರೆಗೆ |
ಒಟ್ಟು ಪ್ರಯೋಜನಗಳು |
ರೂ. 25,000 ವರೆಗೆ |
-
ಮೇಲೆ ತಿಳಿಸಲಾದ ರಿಯಾಯಿತಿಗಳು ಹ್ಯುಂಡೈ i20 ಯ ಎಲ್ಲಾ ವೇರಿಯಂಟ್ ಗಳಿಗೆ ಲಭ್ಯವಿದೆ.
-
ಇಲ್ಲಿ ಗ್ರಾಂಡ್ i10 ನಿಯೋಸ್ ಮತ್ತು ಔರಾದಂತೆ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುವುದಿಲ್ಲ.
-
ಹುಂಡೈ i20 ಬೆಲೆಯು ರೂ. 7.04 ಲಕ್ಷದಿಂದ ಶುರುವಾಗಿ ರೂ. 11.21 ಲಕ್ಷದವರೆಗೆ ಇದೆ.
ಇದನ್ನು ಕೂಡ ಓದಿ: ಮಾರುತಿ ಮತ್ತು ಟಾಟಾ ಕಾರುಗಳು ಫೆಬ್ರವರಿ 2024 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ
ಹ್ಯುಂಡೈ ವೆನ್ಯೂ
ಕೊಡುಗೆಗಳು |
ಮೊತ್ತ |
ಕ್ಯಾಶ್ ಡಿಸ್ಕೌಂಟ್ |
ರೂ. 20,000 ವರೆಗೆ |
ವಿನಿಮಯ ಬೋನಸ್ |
ರೂ. 10,000 ವರೆಗೆ |
ಒಟ್ಟು ಪ್ರಯೋಜನಗಳು |
ರೂ. 30,000 ವರೆಗೆ |
-
ಹ್ಯುಂಡೈ ವೆನ್ಯೂಗೆ ಕೂಡ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿಲ್ಲ, ಆದರೆ ನಗದು ಲಾಭ ಮತ್ತು ವಿನಿಮಯ ಬೋನಸ್ ಲಭ್ಯವಿದೆ.
-
ವೆನ್ಯೂ N ಲೈನ್‌ನೊಂದಿಗೆ ಯಾವುದೇ ಕೊಡುಗೆಗಳನ್ನು ನೀಡಲಾಗುತ್ತಿಲ್ಲ.
-
ಹ್ಯುಂಡೈ ವೆನ್ಯೂ ಬೆಲೆಯು ರೂ. 7.94 ಲಕ್ಷದಿಂದ ಶುರುವಾಗಿ ರೂ.13.48 ಲಕ್ಷದವರೆಗೆ ಇದೆ
ಟಿಪ್ಪಣಿಗಳು
-
ಮೇಲೆ ತಿಳಿಸಲಾದ ರಿಯಾಯಿತಿಗಳು ಮಾಡೆಲ್ ಗಳ ವೇರಿಯಂಟ್ ಅನ್ನು, ರಾಜ್ಯ ಮತ್ತು ನಗರಗಳನ್ನು ಅವಲಂಬಿಸಿ ಬದಲಾಗಬಹುದು. ಇತರ ಹ್ಯುಂಡೈ ಮಾಡೆಲ್ ಗಳಿಗೆ ಸ್ಥಳೀಯ ಕೊಡುಗೆಗಳು ಕೂಡ ಲಭ್ಯವಿರಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಹುಂಡೈ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
-
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ
ಇನ್ನಷ್ಟು ಓದಿ: ಗ್ರಾಂಡ್ i10 ನಿಯೋಸ್ AMT