Login or Register ಅತ್ಯುತ್ತಮ CarDekho experience ಗೆ
Login

ಎಡಿಎಎಸ್ ಪಡೆಯುವ ಮೊದಲ ಸಬ್-4ಎಂ ಎಸ್‌ಯುವಿ ಎನಿಸಲಿರುವ Hyundai Venue

published on ಸೆಪ್ಟೆಂಬರ್ 05, 2023 03:41 pm by shreyash for ಹುಂಡೈ ವೆನ್ಯೂ

ವೆನ್ಯು ಕಾರಿನ ಟರ್ಬೊ ಪೆಟ್ರೋಲ್‌ ವೇರಿಯಂಟ್‌ ಗಳು ಈಗ iMT ಬದಲಿಗೆ ಸೂಕ್ತ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಆಯ್ಕೆಯೊಂದಿಗೆ ದೊರೆಯಲಿವೆ.

2023ರ ಟಾಟಾ ನೆಕ್ಸನ್‌ ರಸ್ತೆಗಿಳಿಯುವುದರೊಂದಿಗೆ ಸಬ್‌ ಕಾಂಪ್ಯಾಕ್ಟ್‌ SUV ವಿಭಾಗದಲ್ಲಿ ಸ್ಪರ್ಧೆಯು ತಾರಕಕ್ಕೆ ಏರಿದೆ. ಈಗ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಮ್ಸ್‌ (ADAS) ಅನುಭವವನ್ನು ಒದಗಿಸುವುದಕ್ಕಾಗಿ ಹ್ಯುಂಡೈ ವೆನ್ಯು ಮತ್ತು ವೆನ್ಯು N ಲೈನ್ ವಾಹನಗಳನ್ನು ಪರಿಷ್ಕರಿಸಲಾಗಿದೆ. ಹ್ಯುಂಡೈ ಸಂಸ್ಥೆಯು ಈ ಎರಡೂ ಮಾದರಿಗಳ ಟರ್ಬೊ ಪೆಟ್ರೋಲ್‌ ವೇರಿಯಂಟ್‌ ಗಳ ಟ್ರಾನ್ಸ್‌ ಮಿಶನ್‌ ಆಯ್ಕೆಗಳಿಗೆ ಬದಲಾವಣೆಗಳನ್ನು ಮಾಡಿದೆ.

ಪರಿಷ್ಕೃತ ಬೆಲೆಗಳು

ಹೊಸ ADAS ತಂತ್ರಜ್ಞಾನವು ಹ್ಯುಂಡೈ ವೆನ್ಯು ಮತ್ತು ವೆನ್ಯು N ಲೈನ್‌ ನ N8 ವೇರಿಯಂಟ್‌ ನ ಟಾಪ್‌ ಸ್ಪೆಕ್‌ SX(O) ವೇರಿಯಂಟ್‌ ಗಳಲ್ಲಿ ಮಾತ್ರವೇ ದೊರೆಯಲಿದೆ. ವೆನ್ಯು ವಾಹನದ ನೈಟ್‌ ಆವೃತ್ತಿಯಲ್ಲಿ ಸೇಫ್ಟಿ ಅಸಿಸ್ಟೆನ್ಸ್‌ ಸಿಸ್ಟಂಗಳನ್ನು ದೊರೆಯುವುದಿಲ್ಲ. ADAS ಹೊಂದಿರುವ ಮಾದರಿಗಳ ಪರಿಷ್ಕೃತ ಬೆಲೆಗಳು ಇಲ್ಲಿವೆ:

ವೆನ್ಯು 1-ಲೀಟರ್‌ ಟರ್ಬೊ ಪೆಟ್ರೋಲ್

ವೇರಿಯಂಟ್‌ ಗಳು

ಪರಿಷ್ಕೃತ ಬೆಲೆ

ಹಳೆಯ ಬೆಲೆ

ವ್ಯತ್ಯಾಸ

SX (O)

ರೂ 12.44 ಲಕ್ಷ

ರೂ 12.35 ಲಕ್ಷ

+ ರೂ 9,000

SX (O) DCT

ರೂ 13.23 ಲಕ್ಷ

ರೂ 13.03 ಲಕ್ಷ

+ ರೂ 20,000

ವೆನ್ಯು 1.5-ಲೀಟರ್ ಡೀಸೆಲ್

ವೇರಿಯಂಟ್‌ ಗಳು

ಪರಿಷ್ಕೃತ ಬೆಲೆ

ಹಳೆಯ ಬೆಲೆ

ವ್ಯತ್ಯಾಸ

SX (O) MT

ರೂ 13.19 ಲಕ್ಷ

ರೂ 12.99 ಲಕ್ಷ

+ ರೂ 20,000

ವೆನ್ಯು N ಲೈನ್

ವೇರಿಯಂಟ್‌ ಗಳು

ಪರಿಷ್ಕೃತ ಬೆಲೆ

ಹಳೆಯ ಬೆಲೆ

ವ್ಯತ್ಯಾಸ

N8 MT

ರೂ 12.96 ಲಕ್ಷ

ಅನ್ವಯವಾಗುವುದಿಲ್ಲ

ಅನ್ವಯವಾಗುವುದಿಲ್ಲ

N8 MT

ರೂ 13.75 ಲಕ್ಷ

ರೂ 13.66 ಲಕ್ಷ

+ ರೂ 9,000

ಗಮನಿಸಿ:- ಮೇಲೆ ಪಟ್ಟಿ ಮಾಡಿದ ಪ್ರತಿ ವೇರಿಯಂಟ್‌ ಸಹ ರೂ. 15,000 ದಷ್ಟು ಹೆಚ್ಚುವರಿ ಬೆಲೆಗೆ ಡ್ಯುವಲ್‌ ಟೋನ್‌ ಎಕ್ಸ್‌ ಟೀರಿಯರ್‌ ಜೊತೆಗೆ ಲಭ್ಯ.

ವೆನ್ಯು ವಾಹನವು ADAS ತಂತ್ರಜ್ಞಾನದೊಂದಿಗೆ ಬರಲಿರುವ ಮೊದಲ ಕಾಂಪ್ಯಾಕ್ಟ್ SUV‌ ವಾಹನವೆನಿಸಲಿದೆ ಮಾತ್ರವಲ್ಲದೆ ಇಂತಹ ಗುಣವಿಶೇಷವನ್ನು ಒದಗಿಸುವ (ADAS ಹೊಂದಿರುವ ಹೋಂಡಾ ಸಿಟಿ ಕಾರಿನ ಆರಂಭಿಕ ಮಾದರಿಗಿಂತ ರೂ. 15000 ದಷ್ಟು ಅಗ್ಗ) ಅತ್ಯಂತ ಅಗ್ಗದ ಮಾದರಿಯಾಗಲಿದೆ. ಪರಿಷ್ಕೃತ ನೆಕ್ಸನ್‌ ಸೇರಿದಂತೆ, ಈ ವಿಭಾಗದ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸುವುದಕ್ಕಾಗಿ ತನ್ನ ಸಬ್‌-4m ಅನ್ನು ಹ್ಯುಂಡೈ ಸಂಸ್ಥೆಯು ಹೇಗೆ ಸಿದ್ಧಪಡಿಸಿದೆ ಎಂಬುದನ್ನು ನೋಡೋಣ.

ವೆನ್ಯು ADAS ಕಿಟ್

ಚಾಲಕನ ನೆರವು ವ್ಯವಸ್ಥೆಯ ಪಟ್ಟಿಯು ಫಾರ್ವರ್ಡ್‌ ಕೊಲಿಶನ್‌ ವಾರ್ನಿಂಗ್‌ (ಕಾರು, ಪಾದಚಾರಿ ಮತ್ತು ಸೈಕಲಿಗಾಗಿ), ಲೇನ್‌ ಕೀಪ್‌ ಅಸಿಸ್ಟಂಟ್‌ ಮತ್ತು ಡಿಪಾರ್ಚರ್‌ ವಾರ್ನಿಂಗ್‌, ಡ್ರೈವರ್‌ ಅಟೆನ್ಶನ್‌ ವಾರ್ನಿಂಗ್‌, ಹೈ ಬೀಮ್‌ ಅಸಿಸ್ಟ್‌, ಲೇನ್‌ ಫಾಲೊವಿಂಗ್‌ ಅಸಿಸ್ಟ್‌ ಮತ್ತು ಲೀಡಿಂಗ್‌ ವೆಹಿಹಲ್‌ ಲೇನ್‌ ಡಿಪಾರ್ಚರ್‌ ಅಲರ್ಟ್‌ ಅನ್ನು ಹೊಂದಿರಲಿದೆ.

ವೆನ್ಯು ಮಾದರಿಯ ADAS ಸೂಟ್‌ ನ ಪಟ್ಟಿಯಲ್ಲಿ ಇನ್ನೂ ಅಟೋಮ್ಯಾಟಿಕ್‌ ಎಮರ್ಜೆನ್ಸಿ ಬ್ರೇಕಿಂಗ್‌ ಮತ್ತು ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ವ್ಯವಸ್ಥೆಯು ಕಾಣಿಸಿಕೊಂಡಿಲ್ಲ. ಅಂದರೆ ಸಬ್‌ ಕಾಂಪ್ಯಾಕ್ಟ್ SUV‌ ಯಲ್ಲಿರುವ ADAS ಕಿಟ್‌, ADAS ಹಂತ 1 ರ ತಂತ್ರಜ್ಞಾನವನ್ನಷ್ಟೆ ಅನುಸರಿಸುತ್ತದೆ.

ಹ್ಯುಂಡೈ ಸಬ್‌ ಕಾಂಪಾಕ್ಟ್ SUV‌ ವಾಹನದಲ್ಲಿ ಈಗಾಗಲೇ ಇರುವ ಇತರ ಸುರಕ್ಷತಾ ವೈಶಿಷ್ಟ್ಯಗಳೆಂದರೆ, ಆರು ಏರ್‌ ಬ್ಯಾಗುಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಸಿಸ್ಟಂ (ESC), ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS), ರಿಯರ್‌ ವ್ಯೂ ಕ್ಯಾಮರಾ, ರಿಯರ್‌ ಪಾರ್ಕಿಂಗ್‌ ಸೆನ್ಸಾರ್‌ ಮತ್ತು ಹಿಲ್‌ ಹೋಲ್ಡ್‌ ಅಸಿಸ್ಟ್.

ಪವರ್‌ ಟ್ರೇನ್‌ ಪರಿಷ್ಕರಣೆ

ಹ್ಯುಂಡೈ ಸಂಸ್ಥೆಯು, ವೆನ್ಯು ಮತ್ತು ವೆನ್ಯು N ಲೈನ್‌ ಮಾದರಿಗಳ 1-ಲೀಟರ್‌ ಟರ್ಬೊ ಪೆಟ್ರೋಲ್ (120PS ಮತ್ತು 172Nm) ವಾಹನಗಳಿಗೆ ಇಂಟಲಿಜೆಂಟ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ (iMT, ಕ್ಲಚ್‌ ಪೆಡಲ್‌ ಇಲ್ಲದೆಯೇ ಮ್ಯಾನುವಲ್)‌ ಅನ್ನು ನಿಲ್ಲಿಸಿದೆ. ಇದರ ಬದಲಿಗೆ ಈ ವಾಹನಗಳು 6 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಬರಲಿವೆ. ಇದರೊಂದಿಗೆ 7 ಸ್ಪೀಡ್‌ ಡ್ಯುವಲ್‌ ಕ್ಲಚ್‌ ಟ್ರಾನ್ಸ್‌ ಮಿಶನ್‌ (DCT) ಸಹ ಲಭಿಸಲಿದೆ. ಇಲ್ಲಿ, ಟರ್ಬೊ ಪೆಟ್ರೋಲ್‌ ವೇರಿಯಂಟ್‌ ಗಳು, ಮೇಲೆ ಉಲ್ಲೇಖಿಸದ ವೆನ್ಯು ಮಾದರಿಯ ಒಂದು ವೇರಿಯಂಟ್‌ ವಿಚಾರದಲ್ಲಿ ಹೆಚ್ಚು ಕೈಗೆಟಕುವ ವಾಹನವೆನಿಸಲಿವೆ. ಅಲ್ಲದೆ ವೆನ್ಯು N ಲೈನ್‌ ಮಾದರಿಯು ಈ ಹಿಂದೆ DCT ಆಯ್ಕೆಗೆ ಮಾತ್ರವೇ ಸೀಮಿತವಾಗಿದ್ದ ಕಾರಣ ಇದು ಇನ್ನೂ ಹೆಚ್ಚಿನ ಅಗ್ಗದ ವಾಹನವೆನಿಸಲಿದೆ.

ಹ್ಯುಂಡೈ ಟರ್ಬೊ ಪೆಟ್ರೋಲ್ MT ವೇರಿಯಂಟ್‌ ಗಳ ಬೆಲೆಗಳು ಇಲ್ಲಿವೆ:

ವೆನ್ಯು 1-ಲೀಟರ್‌ ಟರ್ಬೊ ಪೆಟ್ರೋಲ್

ವೇರಿಯಂಟ್‌ ಗಳು

ಹೊಸ MT ಬೆಲೆ

ಹಳೆಯ iMT ಬೆಲೆ

ವ್ಯತ್ಯಾಸ

S (O)

ರೂ 10.32 ಲಕ್ಷ

ರೂ 10.44 ಲಕ್ಷ

Rs 16,000

SX(O)

ರೂ 12.44 ಲಕ್ಷ

ರೂ 12.35 ಲಕ್ಷ

+ ರೂ 9,000

ವೆನ್ಯು SX(O) ಟರ್ಬೊ ಪೆಟ್ರೋಲ್ MT‌ ವಾಹನವು iMT ಜೊತೆಗೆ ದುಬಾರಿ ಎನಿಸಲಿದ್ದು, S(O) ಗಿಂತ ಇದು ಭಿನ್ನವೆನಿಸಲಿದೆ. ಏಕೆಂದರೆ ಈಗ ಇದು ADAS ತಂತ್ರಜ್ಞಾನವನ್ನು ಸಹ ಒದಗಿಸುತ್ತಿದ್ದು, ತ್ರೀ-ಪೆಡಲ್‌ ಮ್ಯಾನುವಲ್‌ ಗೆ ಹೆಚ್ಚಿನ ಪ್ರೀಮಿಯಂ ಅನ್ನು ಸೇರಿಸಲಿದೆ.

ವೆನ್ಯು N ಲೈನ್

ವೇರಿಯಂಟ್‌ ಗಳು

ಹೊಸ MT ಬೆಲೆಗಳು

DCT ಬೆಲೆಗಳು

ವ್ಯತ್ಯಾಸ

N6

ರೂ 12 ಲಕ್ಷ

ರೂ 12.80 ಲಕ್ಷ

+ ರೂ 80,000

N8

ರೂ 12.96 ಲಕ್ಷ

ರೂ 13.75 ಲಕ್ಷ

+ ರೂ 79,000

ಗಮನಿಸಿ:- ವೆನ್ಯು S(O) ಹೊರತುಪಡಿಸಿ ಮೇಲೆ ಪಟ್ಟಿ ಮಾಡಿದ ಪ್ರತಿ ವೇರಿಯಂಟ್‌ ಸಹ ರೂ. 15,000 ದಷ್ಟು ಹೆಚ್ಚುವರಿ ಬೆಲೆಗೆ ಡ್ಯುವಲ್‌ ಟೋನ್‌ ಎಕ್ಸ್‌ ಟೀರಿಯರ್‌ ಜೊತೆಗೆ ಲಭ್ಯ.

ಹೊಸ ಟ್ರಾನ್ಸ್‌ ಮಿಶನ್‌ ಆಯ್ಕೆಯು, ವೆನ್ಯು N ಲೈನ್‌ ಅನ್ನು ರೂ. 80,000 ದಷ್ಟು ಹೆಚ್ಚು ಆಕ್ಸೆಸಿಬಲ್‌ ಆಗಿ ಮಾಡಲಿದೆ. 1 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಜೊತೆಗೆ ಹ್ಯುಂಡೈ ವೆನ್ಯು ಮಾದರಿಯ ಸ್ಪೋರ್ಟಿಯರ್‌ ಆವೃತ್ತಿ.

ಸಾಮಾನ್ಯ ವೆನ್ಯು ಮಾದರಿಯ ಇತರ ಎಂಜಿನ್‌ ಆಯ್ಕೆಗಳು, 5 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಹೊಂದಿಸಲಾದ 1.2-ಲೀಟರ್‌ ಪೆಟ್ರೋಲ್‌ ಎಂಜಿನ್ (83PS ಮತ್ತು 114Nm), ಮತ್ತು ಕೇವಲ 6 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಹೊಂದಿಸಲಾದ 1.5-ಲೀಟರ್‌ ಡೀಸೆಲ್‌ ಎಂಜಿನ್ (116PS ಮತ್ತು 250Nm) ಜೊತೆಗೆ ಲಭ್ಯ. ವೆನ್ಯು ಮಾದರಿಯ ಟಾಪ್‌ ಸ್ಪೆಕ್ SX(O)‌ ವೇರಿಯಂಟ್‌ ಕಾರು, ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್‌ ಎಂಜಿನ್‌ ಆಯ್ಕೆಯನ್ನು ಹೊಂದಿಲ್ಲ.

ಪ್ರತಿಸ್ಪರ್ಧಿಗಳು

ಹ್ಯುಂಡೈ ವೆನ್ಯು ಮಾದರಿಯು ಮಾರುತಿ ಬ್ರೆಜಾ, ಕಿಯಾ ಸೋನೆಟ್, ಟಾಟಾ ನೆಕ್ಸನ್ ಫೇಸ್‌ ಲಿಫ್ಟ್, ಮಹೀಂದ್ರಾ XUV300, ರೆನಾಲ್ಟ್‌ ಕೈಗರ್ ಮತ್ತು ನಿಸಾನ್‌ ಮ್ಯಾಗ್ನೈಟ್‌ ಜೊತೆಗೆ ಸ್ಪರ್ಧಿಸಲಿದೆ. ಇನ್ನೊಂದೆಡೆ ವೆನ್ಯು N ಲೈನ್‌ ಕಾರು, ಮಹೀಂದ್ರಾ XUV300 ಮಾದರಿಯ ಟರ್ಬೋ ಸ್ಪೋರ್ಟ್‌ ವೇರಿಯಂಟ್‌ ಗಳಿಗೆ ಸ್ಪರ್ಧೆಯೊಡ್ಡಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯುಂಡೈ ವೆನ್ಯು ಆನ್‌ ರೋಡ್‌ ಬೆಲೆ

s
ಅವರಿಂದ ಪ್ರಕಟಿಸಲಾಗಿದೆ

shreyash

  • 43 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Hyundai ವೆನ್ಯೂ

Read Full News

explore similar ಕಾರುಗಳು

ಹುಂಡೈ ವೆನ್ಯೂ

ಡೀಸಲ್24.2 ಕೆಎಂಪಿಎಲ್
ಪೆಟ್ರೋಲ್20.36 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಸಪ್ಟೆಂಬರ್ ಕೊಡುಗೆಗಳು

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ