ಟಾಟಾ ಪಂಚ್‌ಗೆ ಪೈಪೋಟಿ ನೀಡಲಿರುವ ಹ್ಯುಂಡೈನ ನೂತನ 'ಎಕ್ಸ್‌ಟರ್' ಹೆಸರಿನ ಎಸ್‌ಯುವಿ ಕಾರು
ಹೊಸ ಮೈಕ್ರೋ ಎಸ್‌ಯುವಿ ಬಹುಶಃ ಜೂನ್ ವೇಳೆಗೆ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.
- ಹ್ಯುಂಡೈ ತನ್ನ ಮುಂಬರುವ ಮೈಕ್ರೋ ಎಸ್‌ಯುವಿಯನ್ನು 'ಎಕ್ಸ್‌ಟರ್' ಎಂದು ಹೆಸರಿಸಿದೆ.
- ಇದು ನೇರ ನಿಲುವಿನೊಂದಿಗೆ ರಗಡ್ ನೋಟವನ್ನು ಹೊಂದಿದೆ ಮತ್ತು ಹಲವಾರು ವಿಶಿಷ್ಟ ಸಾದೃಶ ಎಲಿಮೆಂಟ್‌ಗಳನ್ನು ಸಹ ಪಡೆದುಕೊಂಡಿದೆ.
- ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್, ಆರು ಏರ್‌ಬ್ಯಾಗ್‌ಗಳು ಮತ್ತು ಟಿಪಿಎಂಎಸ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.
- 83PS 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವುದನ್ನು ನಿರೀಕ್ಷಿಸಲಾಗಿದೆ; 1-ಲೀಟರ್ ಟರ್ಬೊ-ಪೆಟ್ರೋಲ್ ಯುನಿಟ್ ಆಯ್ಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.
- ಎಕ್ಸ್‌ಟರ್‌ನ ಬೆಲೆ ಸುಮಾರು ರೂ.6 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).
ಹ್ಯುಂಡೈ ತನ್ನ ಮುಂಬರುವ ಹೊಚ್ಚ ಹೊಸ ಮೈಕ್ರೋ ಎಸ್‌ಯುವಿಯ ಹೆಸರು 'ಎಕ್ಸ್‌ಟರ್' ಆಗಿರಲಿದೆ ಎನ್ನುವುದನ್ನು ದೃಢಪಡಿಸಿದೆ. ಅದರ ಬಿಡುಗಡೆಯು ಸನ್ನಿಹಿತವಾಗಿದೆ ಎಂದು ಕಾರು ತಯಾರಕರು ದೃಢಪಡಿಸಿದ್ದಾರೆ ಮತ್ತು ಇದನ್ನು ಜೂನ್‌ನಲ್ಲಿ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಇತ್ತೀಚಿನ ಟೀಸರ್ ಈ ಎಸ್‌ಯುವಿ ಕಾರಿನ ಔಟ್‌ಲೈನ್ ಅನ್ನು ಅನಾವರಣ ಮಾಡಿದೆ, ಅದರಲ್ಲಿ ಕಾರು ಎತ್ತರ ನಿಲುವನ್ನು ಹೊಂದಿರುವುದು ಖಚಿತವಾಗಿದೆ. ಬಾಡಿ ಕ್ಲಾಡಿಂಗ್, ರೂಫ್ ರೈಲ್‌ಗಳು ಮತ್ತು ಹೆವಿ ಬಾನೆಟ್‌ನಂತಹ ಕೆಲವು ರಗಡ್ ಅಂಶಗಳನ್ನು ಆನ್‌ಬೋರ್ಡ್‌ನಲ್ಲಿ ನಾವು ನಿರೀಕ್ಷಿಸುತ್ತಿದ್ದೇವೆ. ಹಿಂದಿನ ಸ್ಪೈ ಶಾಟ್‌ಗಳು H-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲೈಟ್‌ಗಳು ಮತ್ತು ಫಂಕಿ ಅಲಾಯ್ ವ್ಹೀಲ್‌ಗಳನ್ನು ಒಳಗೊಂಡಂತೆ ಎಕ್ಸ್‌ಟರ್‌ನ ಕೆಲವು ವಿಶಿಷ್ಟ ವಿಷ್ಯುಯಲ್ ಎಲಿಮೆಂಟ್‌ಗಳನ್ನು ನಮಗೆ ತೋರಿಸಿವೆ.
ಹ್ಯುಂಡೈ ಎಕ್ಸ್‌ಟರ್ ವಿಶಿಷ್ಟವಾದ ಕ್ಯಾಬಿನ್ ಅನ್ನು ಹೊಂದುವ ನಿರೀಕ್ಷೆಯಿದೆ, ಇದು ಗ್ರ್ಯಾಂಡ್ i10 ನಿಯೋಸ್ ಮತ್ತು ವೆನ್ಯೂನ ಸಂಯೋಜನೆಯಾಗಿರಬಹುದು. ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಎಲೆಕ್ಟ್ರಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮುಂತಾದ ವೈಶಿಷ್ಟ್ಯಗಳನ್ನು ಇದರಲ್ಲಿ ನಿರೀಕ್ಷಿಸಬಹುದು.
ಎಕ್ಸ್‌ಟರ್ 1.2-ಲೀಟರ್ ಪೆಟ್ರೋಲ್‌ನಿಂದ ಚಾಲಿತವಾಗಲಿದ್ದು ಅದು 83 PS ಶಕ್ತಿಯನ್ನು ಉತ್ಪಾದಿಸುತ್ತದೆ, ಇದೇ ಎಂಜಿನ್ ಗ್ರಾಂಡ್ i10 ನಿಯೋಸ್, i20, ಔರಾ ಮತ್ತು ವೆನ್ಯೂನ ಮೂಲ ವೇರಿಯಂಟ್‌ಗಳಲ್ಲಿ ಕೂಡ ಕಂಡುಬರುತ್ತದೆ. ಮ್ಯಾನ್ಯುಯೆಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳ ಆಯ್ಕೆ ಮತ್ತು ಸಿಎನ್‌ಜಿ ಆಯ್ಕೆಯನ್ನು ನೀಡಲಾಗಿದೆ. ಎಕ್ಸ್‌ಟರ್ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಕೂಡ ಲಭ್ಯವಾಗುವ ನಿರೀಕ್ಷೆಯಿದೆ.
ಹ್ಯುಂಡೈ ಎಕ್ಸ್‌ಟರ್‌ನ ಬೆಲೆ ಸುಮಾರು 6 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ (ಎಕ್ಸ್ ಶೋರೂಂ) ನಿರೀಕ್ಷೆಯಿದೆ. ಕಾರು ತಯಾರಿಕರಿಂದ, ಇದು ಗ್ರ್ಯಾಂಡ್ i10 ಗೆ ಹೆಚ್ಚು ರಗಡ್ ಪರ್ಯಾಯ ಸ್ಥಾನ ಪಡೆಯಲಿದೆ. ಹೊಸ ಮೈಕ್ರೋ ಎಸ್‌ಯುವಿ ಟಾಟಾ ಪಂಚ್, ಸಿಟ್ರೊಯೆನ್ C3, ಮಾರುತಿ ಇಗ್ನಿಸ್ ಮತ್ತು ಇತರ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.