Renault Triber: NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಪಡೆದದ್ದು ಕೇವಲ 2-ಸ್ಟಾರ್ ಸುರಕ್ಷತಾ ರೇಟಿಂಗ್ ..!
ಚಾಲಕನ ಪಾದವಿಡುವ ಜಾಗವನ್ನು ಸ್ಥಿರವೆಂದು ರೇಟ್ ಮಾಡಲಾಗಿದೆ, ಆದರೆ, ರೆನಾಲ್ಟ್ ಟ್ರೈಬರ್‌ನ ಬಾಡಿಶೆಲ್ ಅನ್ನು ಅಸ್ಥಿರವೆಂದು ಪರಿಗಣಿಸಲಾಗಿದೆ ಮತ್ತು ಹೆಚ್ಚಿನ ಲೋಡಿಂಗ್‌ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ
-
ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ಟ್ರೈಬರ್ 22.29/34 ಅನ್ನು ಪಡೆದುಕೊಂಡಿದೆ.
-
ಮಕ್ಕಳು ಪ್ರಯಾಣಿಸುವಾಗಿನ ರಕ್ಷಣೆಗಾಗಿ ಇದು 19.99/49 ಸ್ಕೋರ್ ಮಾಡಿದೆ.
-
ದಕ್ಷಿಣ ಆಫ್ರಿಕಾ-ಸ್ಪೆಕ್ ಟ್ರೈಬರ್‌ನಲ್ಲಿನ ಸುರಕ್ಷತಾ ವೈಶಿಷ್ಟ್ಯಗಳು ನಾಲ್ಕು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಮುಂಭಾಗದ ಆಸನಗಳಿಗೆ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಒಳಗೊಂಡಿದೆ.
ದಕ್ಷಿಣ ಆಫ್ರಿಕಾದ ರೆನಾಲ್ಟ್ ಟ್ರೈಬರ್‌ಗಾಗಿ ನಡೆಸಿದ ಹೊಸ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳನ್ನು ಗ್ಲೋಬಲ್ NCAP ಬಿಡುಗಡೆ ಮಾಡಿದೆ, ಇದನ್ನು ಭಾರತದಲ್ಲಿ ತಯಾರಿಸಿದ ಮೊಡೆಲ್ ಅಗಿದೆ. ಸಬ್-4ಎಮ್ ಕ್ರಾಸ್‌ಒವರ್ ಎಮ್‌ಪಿವಿಯು ಕಳಪೆ ಸುರಕ್ಷತಾ ರೇಟಿಂಗ್‌ಗಳನ್ನು ಪಡೆಯಿತು, ವಯಸ್ಕ ಪ್ರಯಾಣಿಕರ ರಕ್ಷಣೆ ಮತ್ತು ಮಕ್ಕಳು ಪ್ರಯಾಣಿಸುವಾಗಿನ ರಕ್ಷಣೆ ಎರಡರಲ್ಲೂ ತಲಾ 2 ಸ್ಟಾರ್‌ಗಳನ್ನು ಗಳಿಸಿತು. ಇಂಡಿಯಾ-ಸ್ಪೆಕ್ ಟ್ರೈಬರ್ ಅನ್ನು 2021 ರಲ್ಲಿ ಗ್ಲೋಬಲ್ ಎನ್‌ಸಿಎಪಿ ಪರೀಕ್ಷಿಸಿದಾಗ, ಹಿಂದಿನ ಮಾನದಂಡಗಳ ಆಧಾರದ ಮೇಲೆ 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿತ್ತು. ಆದರೆ, ನವೀಕರಿಸಿದ ಜಾಗತಿಕ NCAP ಮಾನದಂಡಗಳ ಅಡಿಯಲ್ಲಿ, ಟ್ರೈಬರ್ ಸುರಕ್ಷತೆಯ ನಿರೀಕ್ಷೆಗಳನ್ನು ತಲುಪಲು ವಿಫಲವಾಗಿದೆ.
ಪ್ರತಿ ಪರೀಕ್ಷೆಯಲ್ಲಿ ರೆನಾಲ್ಟ್ ಟ್ರೈಬರ್‌ನ ಪರ್ಫಾರ್ಮೆನ್ಸ್ ಕುರಿತ ವಿವರವಾದ ಚಿತ್ರಣ ಇಲ್ಲಿದೆ.
ರಕ್ಷಣೆ |
ವಯಸ್ಕ ಪ್ರಯಾಣಿಕರ ರಕ್ಷಣೆ |
ಮಕ್ಕಳು ಪ್ರಯಾಣಿಸುವಾಗಿನ ರಕ್ಷಣೆ |
ರೇಟಿಂಗ್ |
2 ಸ್ಟಾರ್‌ಗಳು |
2 ಸ್ಟಾರ್‌ಗಳು |
ಸ್ಕೋರ್ |
22.29/34 |
19.99/49 |
ಬಾಡಿಶೆಲ್ ಸಮಗ್ರತೆ |
ಅಸ್ಥಿರ |
|
ಪಾದ ಇಡುವ ಜಾಗ |
ಚಾಲಕನ ಬದಿಯು ಸ್ಥಿರವಾಗಿರುತ್ತದೆ ಆದರೆ ಪ್ರಯಾಣಿಕರ ಬದಿಗೆ ಸಮ್ಮಿತೀಯವಾಗಿರುವುದಿಲ್ಲ |
ವಯಸ್ಕ ಪ್ರಯಾಣಿಕರ ರಕ್ಷಣೆ (34 ರಲ್ಲಿ 22.29 ಅಂಕಗಳು)
ಮುಂಭಾಗದ ಡಿಕ್ಕಿ ಪರೀಕ್ಷೆ (64 kmph)
ಮುಂಭಾಗದ ಇಂಪ್ಯಾಕ್ಟ್ ಕ್ರ್ಯಾಶ್ ಪರೀಕ್ಷೆಯಲ್ಲಿ, ರೆನಾಲ್ಟ್ ಟ್ರೈಬರ್ ಚಾಲಕ ಮತ್ತು ಸಹ-ಚಾಲಕನ ತಲೆ ಮತ್ತು ಕುತ್ತಿಗೆಗೆ 'ಉತ್ತಮ' ರಕ್ಷಣೆಯನ್ನು ತೋರಿಸಿದೆ. ಚಾಲಕನ ಮೊಣಕಾಲುಗಳು 'ಮಾರ್ಜಿನಲ್' ರಕ್ಷಣೆಯನ್ನು ಪಡೆದರೆ, ಪ್ರಯಾಣಿಕರ ಮೊಣಗಂಟುಗಳು 'ಉತ್ತಮ' ರಕ್ಷಣೆಯನ್ನು ಪ್ರದರ್ಶಿಸಿದವು. ಏಕೆಂದರೆ ಕಾರಿನ ಮುಂಭಾಗದ ಹಿಂಭಾಗದ ಅಪಾಯಕಾರಿ ರಚನೆಗಳಿಂದ ಚಾಲಕನ ಮೊಣಕಾಲುಗಳ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಚಾಲಕನಿಗೆ ಎದೆಯ ರಕ್ಷಣೆಯನ್ನು 'ದುರ್ಬಲ' ಎಂದು ರೇಟ್ ಮಾಡಲಾಗಿದೆ, ಆದರೆ ಪ್ರಯಾಣಿಕರಿಗೆ ಇದು 'ಸಮರ್ಪಕ' ಎಂದು ರೇಟ್ ಮಾಡಲಾಗಿದೆ. ಎರಡು ಬದಿಯ ಪ್ರಯಾಣಿಕರ ಮೊಣಕಾಲಿನ ಭಾಗಕ್ಕೆ 'ಸಮರ್ಪಕ' ರಕ್ಷಣೆಯನ್ನು ತೋರಿಸಿದವು.
ಬದಿಯಿಂದ ಅಪಘಾತ ಪರೀಕ್ಷೆ (50 kmph)
ತಲೆ, ಸೊಂಟ ಮತ್ತು ಹೊಟ್ಟೆಯು 'ಉತ್ತಮ' ರಕ್ಷಣೆಯನ್ನು ಪಡೆದರೆ, ಎದೆಯು 'ದುರ್ಬಲ' ರಕ್ಷಣೆ ಎಂದು ಪಲಿತಾಂಶ ಪಡೆದಿದೆ.
ಬದಿಯ ಕಂಬಕ್ಕೆ ಡಿಕ್ಕಿ ಟೆಸ್ಟ್
ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳ ಅಲಭ್ಯತೆಯಿಂದಾಗಿ ಈ ಕ್ರ್ಯಾಶ್ ಪರೀಕ್ಷೆಯನ್ನು ನಡೆಸಲಾಗಿಲ್ಲ.
ಮಕ್ಕಳು ಪ್ರಯಾಣಿಸುವಾಗಿನ ರಕ್ಷಣೆ (49 ರಲ್ಲಿ 19.99 ಅಂಕಗಳು)
ಮುಂಭಾಗದ ಡಿಕ್ಕಿ ಪರೀಕ್ಷೆ (64 kmph)
3 ವರ್ಷ ವಯಸ್ಸಿನ ಮಕ್ಕಳ ಗೊಂಬೆಗೆ, ISOFIX ಆಂಕಾರೇಜ್ ಅನ್ನು ಬಳಸಿಕೊಂಡು ಮುಂಭಾಗಕ್ಕೆ ಮುಖ ಮಾಡಿದಂತೆ ಚೈಲ್ಡ್ ಸೀಟ್‌ಗಳನ್ನು ಸ್ಥಾಪಿಸಲಾಗಿದೆ. ಆದರೆ, ಮಗುವಿನ ಕುತ್ತಿಗೆ ಮತ್ತು ಎದೆಯ ರಕ್ಷಣೆಯನ್ನು ಕಳಪೆ ಎಂದು ರೇಟ್ ಮಾಡಲಾಗಿದೆ; ಮುಂಭಾಗದ ಡಿಕ್ಕಿಯ ಸಮಯದಲ್ಲಿ ತಲೆಗೆ ಒಡ್ಡಿಕೊಳ್ಳುವುದನ್ನು ತಡೆಯಲು ಆಂಕಾರೇಜ್ ಹಾಕಲು ಸಾಧ್ಯವಾಗಲಿಲ್ಲ.
18 ತಿಂಗಳ ಮಗುವಿನ ಗೊಂಬೆಯ ಸಂದರ್ಭದಲ್ಲಿ, ಮಗುವಿನ ಆಸನವನ್ನು ಹಿಂಬದಿಯಲ್ಲಿ ಜೋಡಿಸಲಾಗಿದೆ ಮತ್ತು ಅದು ಮಗುವಿನ ತಲೆಗೆ ಸಂಪೂರ್ಣ ರಕ್ಷಣೆ ನೀಡುತ್ತದೆ.
ಬದಿಯಿಂದ ಅಪಘಾತ ಪರೀಕ್ಷೆ (50 kmph)
ಎರಡೂ ಮಕ್ಕಳ ಸಂಯಮ ವ್ಯವಸ್ಥೆಗಳು (ಚೈಲ್ಡ್ ರಿಸ್ಟ್ರೇಂಟ್ ಸಿಸ್ಟಮ್) ಬದಿಯಿಂದ ಅಪಘಾತ ಪರೀಕ್ಷೆಯ ಸಮಯದಲ್ಲಿ ಸಂಪೂರ್ಣ ರಕ್ಷಣೆ ನೀಡಲು ನಿರ್ವಹಿಸುತ್ತಿದ್ದವು.
ಇದನ್ನು ಸಹ ಓದಿ: Maruti Suzuki Ertiga: NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಕಳಪೆ 1-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದ ಭಾರತ-ನಿರ್ಮಿತ ಮೊಡೆಲ್
ಬಾಡಿ ಶೆಲ್ ಸಮಗ್ರತೆ ಮತ್ತು ಫುಟ್‌ವೆಲ್
ರೆನಾಲ್ಟ್ ಟ್ರೈಬರ್‌ನ ಬಾಡಿಶೆಲ್ ಅನ್ನು ಅಸ್ಥಿರವೆಂದು ರೇಟ್ ಮಾಡಲಾಗಿದೆ ಮತ್ತು ಇದು ಹೆಚ್ಚಿನ ಲೋಡಿಂಗ್‌ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ. ಫುಟ್‌ವೆಲ್ ಪ್ರದೇಶಕ್ಕೆ ಬಂದಾಗ, ಚಾಲಕನ ಬದಿಯ ಪ್ರದೇಶವು ಸ್ಥಿರವಾಗಿದೆ ಆದರೆ ಅದೇ ಮಟ್ಟದ ರಕ್ಷಣೆಯನ್ನು ಪ್ರಯಾಣಿಕರ ಕಡೆಯಿಂದ ನೀಡಲಾಗಿಲ್ಲ.
ದಕ್ಷಿಣ-ಆಫ್ರಿಕಾದ ಟ್ರೈಬರ್‌ನಲ್ಲಿನ ಸುರಕ್ಷತಾ ವೈಶಿಷ್ಟ್ಯಗಳು
ದಕ್ಷಿಣ-ಆಫ್ರಿಕಾದ ರೆನಾಲ್ಟ್ ಟ್ರೈಬರ್‌ನಲ್ಲಿನ ಸುರಕ್ಷತಾ ವೈಶಿಷ್ಟ್ಯಗಳು ನಾಲ್ಕು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಮುಂಭಾಗದ ಆಸನಗಳಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನು ಒಳಗೊಂಡಿವೆ. ಇದು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಇಂಡಿಯಾ-ಸ್ಪೆಕ್ ಟ್ರೈಬರ್‌ನೊಂದಿಗೆ ನೀಡಲ್ಪಟ್ಟ ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ನೀಡಲಾಗುವುದಿಲ್ಲ. ಇಂಡಿಯಾ-ಸ್ಪೆಕ್ ಮಾಡೆಲ್ ಹಿಂದಿನ ಸೀಟ್‌ಗಳಿಗೆ ಸೀಟ್‌ಬೆಲ್ಟ್ ರಿಮೈಂಡರ್‌ಗಳನ್ನು ಮತ್ತು 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಸಹ ನೀಡುತ್ತದೆ.
ಭಾರತದಲ್ಲಿನ ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಭಾರತದಲ್ಲಿ ರೆನಾಲ್ಟ್ ಟ್ರೈಬರ್‌ನ ಎಕ್ಸ್‌ಶೋರೂಮ್ ಬೆಲೆ(ದೆಹಲಿ) 6 ಲಕ್ಷ ರೂ.ನಿಂದ 8.97 ಲಕ್ಷ ರೂ.ವರೆಗೆ ಇದೆ. ಇದು ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದನ್ನು ಮಾರುತಿ ಎರ್ಟಿಗಾ ಮತ್ತು ಕಿಯಾ ಕ್ಯಾರೆನ್ಸ್‌ಗಳಿಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.
ವಾಹನ ಜಗತ್ತಿನ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ರೆನಾಲ್ಟ್ ಟ್ರೈಬರ್ ಎಎಮ್‌ಟಿ