Login or Register ಅತ್ಯುತ್ತಮ CarDekho experience ಗೆ
Login

Skoda Kylaqನ ಪರಿಚಯಾತ್ಮಕ ಬೆಲೆಗಳು ಈಗ 2025ರ ಏಪ್ರಿಲ್ ಅಂತ್ಯದವರೆಗೆ ಅನ್ವಯ

ಏಪ್ರಿಲ್ 02, 2025 09:18 pm ರಂದು dipan ಮೂಲಕ ಪ್ರಕಟಿಸಲಾಗಿದೆ

ಕೈಲಾಕ್ ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್ ಪ್ಲಸ್ ಮತ್ತು ಪ್ರೆಸ್ಟೀಜ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ, ಇವುಗಳ ಬೆಲೆ 7.89 ಲಕ್ಷ ರೂ.ನಿಂದ 14.40 ಲಕ್ಷ ರೂ. (ಎಕ್ಸ್ ಶೋರೂಂ) ವರೆಗೆ ಇರುತ್ತದೆ

ಸ್ಕೋಡಾ ಕೈಲಾಕ್ ಅನ್ನು ಜೆಕ್ ಮೂಲದ ಈ ಕಾರು ತಯಾರಕರ ಭಾರತದಲ್ಲಿ ಅತ್ಯಂತ ಕೈಗೆಟುಕುವ ಎಸ್‌ಯುವಿ ಕಾರಾಗಿ ಬಿಡುಗಡೆ ಮಾಡಲಾಯಿತು, ಇದರ ಬೆಲೆ ರೂ 7.89 ಲಕ್ಷ ರೂ.ನಿಂದ 14.40 ಲಕ್ಷ ರೂ.ವರೆಗೆ (ಪರಿಚಯಾತ್ಮಕ ಎಕ್ಸ್-ಶೋರೂಂ, ಪ್ಯಾನ್-ಇಂಡಿಯಾ) ಇದೆ. ಇದನ್ನು 4 ತಿಂಗಳ ಹಿಂದೆಯೇ, ನಿಖರವಾಗಿ 2024ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದ್ದರೂ, ಸ್ಕೋಡಾ ತನ್ನ ಬೆಲೆಯನ್ನು ಏಪ್ರಿಲ್ 30, 2025 ರವರೆಗೆ ಹೆಚ್ಚಿಸದಿರಲು ನಿರ್ಧರಿಸಿದೆ. ಕೈಲಾಕ್ 33,333 ಬುಕಿಂಗ್‌ಗಳನ್ನು ಸಾಧಿಸುವವರೆಗೆ ಪರಿಚಯಾತ್ಮಕ ಬೆಲೆಗಳು ಹೀಗೆಯೇ ಇರುತ್ತದೆ ಎಂದು ಸ್ಕೋಡಾ ಈ ಹಿಂದೆ ಹೇಳಿತ್ತು.

ಜೆಕ್ ಮೂಲದ ಈ ಕಾರು ತಯಾರಕರು ಸ್ಕೋಡಾ ಕೈಲಾಕ್‌ನೊಂದಿಗೆ ನೀಡುವ ಎಲ್ಲವನ್ನೂ ನೋಡೋಣ:

ಎಕ್ಸ್‌ಟೀರಿಯರ್‌

ಸ್ಕೋಡಾ ಕೈಲಾಕ್ ಕಪ್ಪು ಬಣ್ಣದ ಐಕಾನಿಕ್ ಸ್ಕೋಡಾ "ಬಟರ್‌ಫ್ಲೈ" ಗ್ರಿಲ್ ಮತ್ತು ಡ್ಯುಯಲ್-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಹುಬ್ಬು-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಟ್ರೆಂಡಿಯಾಗಿರುವ ವಿನ್ಯಾಸದೊಂದಿಗೆ ಬರುತ್ತದೆ. ಮುಂಭಾಗದ ಬಂಪರ್‌ನ ಮಧ್ಯ ಭಾಗವು ಕಪ್ಪು ಬಣ್ಣದಲ್ಲಿ ಫಿನಿಶ್‌ ಮಾಡಲಾಗಿದ್ದು, ಇದು ಸಬ್-4ಎಮ್‌ ಎಸ್‌ಯುವಿಗೆ ರಗಡ್‌ ಆದ ಆಕರ್ಷಣೆಯನ್ನು ನೀಡುತ್ತದೆ.

ಪ್ರೊಫೈಲ್‌ನಲ್ಲಿ, ಇದು 17-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು, ಕಪ್ಪು ರೂಫ್ ರೈಲ್‌ಗಳು ಮತ್ತು ಕಪ್ಪು ಬಾಡಿ ಕ್ಲಾಡಿಂಗ್ ಅನ್ನು ಪಡೆಯುತ್ತದೆ, ಅದು ಇದಕ್ಕೆ ವ್ಯತಿರಿಕ್ತ ನೋಟವನ್ನು ನೀಡುತ್ತದೆ. ಆಧುನಿಕ ಕಾರುಗಳಂತೆ ಇದು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಪಡೆಯದಿದ್ದರೂ, ಸುತ್ತುವರಿಯುವ ಟೈಲ್ ಲೈಟ್‌ಗಳನ್ನು ಸ್ಕೋಡಾ ಅಕ್ಷರಗಳೊಂದಿಗೆ ಕಪ್ಪು ಪಟ್ಟಿಯಿಂದ ಜೋಡಿಸಲಾಗಿದೆ. ಹಿಂಭಾಗದ ಬಂಪರ್ ಕಪ್ಪು ಬಣ್ಣದ್ದಾಗಿದ್ದು, ಕೃತಕ ಸಿಲ್ವರ್‌ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ.

ಇಂಟೀರಿಯರ್‌, ಫೀಚರ್‌ಗಳು ಮತ್ತು ಸುರಕ್ಷತೆ

ಒಳಗೆ, ಸ್ಕೋಡಾ ಕೈಲಾಕ್ ಕಪ್ಪು ಮತ್ತು ಬೂದು ಬಣ್ಣದ ಥೀಮ್‌ನಲ್ಲಿ ಫಿನಿಶ್‌ ಮಾಡಿದ ಲೇಯರ್ಡ್ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಬರುತ್ತದೆ. ಇದು ಎರಡು ಡಿಜಿಟಲ್ ಸ್ಕ್ರೀನ್‌ಗಳು, 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಕ್ರೋಮ್ ಸುತ್ತುವರೆದಿರುವ ದೊಡ್ಡ ಎಸಿ ವೆಂಟ್‌ಗಳನ್ನು ಒಳಗೊಂಡಿದೆ. ಇದು ಕಪ್ಪು ಸೀಟ್ ಕವರ್‌ಅನ್ನು ಪಡೆಯುತ್ತದೆ ಮತ್ತು ಎಲ್ಲಾ ಸೀಟುಗಳು ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ಗಳು ಮತ್ತು 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿವೆ.

ಸ್ಕೋಡಾ ಕೈಲಾಕ್ 10.1-ಇಂಚಿನ ಟಚ್‌ಸ್ಕ್ರೀನ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್‌ಗಳೊಂದಿಗೆ ಬರುತ್ತದೆ. ಇದು ಆಟೋ ಎಸಿ, ಸಿಂಗಲ್-ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ವೆಂಟಿಲೇಶನ್‌ ಫಂಕ್ಷನ್‌ನೊಂದಿಗೆ 6-ರೀತಿಯಲ್ಲಿ ಬಟನ್‌ನಲ್ಲಿ ಆಡ್ಜಸ್ಟ್‌ ಮಾಡಬಹುದಾದ ಮುಂಭಾಗದ ಸೀಟುಗಳನ್ನು ಸಹ ಹೊಂದಿದೆ.

ಸುರಕ್ಷತೆಯ ವಿಷಯದಲ್ಲಿ, ಕೈಲಾಕ್ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟ್ರಾಕ್ಷನ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಹೊಂದಿದೆ. ಇದು ಸೆನ್ಸಾರ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಹಿಂಭಾಗದ ಡಿಫಾಗರ್ ಅನ್ನು ಸಹ ಹೊಂದಿದೆ. ಸ್ಕೋಡಾ ಕೈಲಾಕ್ ಭಾರತ್ NCAP ನಿಂದ 5-ಸ್ಟಾರ್ ಕ್ರ್ಯಾಶ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಬಿಡುಗಡೆಯಾದ ಎರಡು ತಿಂಗಳಲ್ಲಿಯೇ ಗಮನಾರ್ಹ ಮಾರಾಟದ ಮೈಲಿಗಲ್ಲನ್ನು ದಾಟಿದ Kia Syros

ಪವರ್‌ಟ್ರೈನ್‌ ಆಯ್ಕೆಗಳು

ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ ಮೊಡೆಲ್‌ಗಳಿಂದ ಸ್ಕೋಡಾ ಕೈಲಾಕ್ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಇವುಗಳ ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

115 ಪಿಎಸ್‌

ಟಾರ್ಕ್‌

178 ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್ ಮ್ಯಾನ್ಯುವಲ್‌ / 6-ಸ್ಪೀಡ್ AT*

ಇಂಧನ ದಕ್ಷತೆ

ಪ್ರತಿ ಲೀ.ಗೆ 19.68 ಕಿ.ಮೀ. (ಮ್ಯಾನ್ಯುವಲ್‌) / 19.05 ಕಿ.ಮೀ. (AT)

AT = ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಸ್ಕೋಡಾ ಕೈಲಾಕ್ ಬೆಲೆ 7.89 ಲಕ್ಷ ರೂ.ನಿಂದ 14.40 ಲಕ್ಷ ರೂ.ವರೆಗೆ (ಪರಿಚಯಾತ್ಮಕ, ಎಕ್ಸ್-ಶೋರೂಂ, ಪ್ಯಾನ್-ಇಂಡಿಯಾ) ಇರಲಿದ್ದು, ಮತ್ತು ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಕಿಯಾ ಸೋನೆಟ್, ಹುಂಡೈ ವೆನ್ಯೂ, ಮಹೀಂದ್ರಾ XUV 3XO, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಕಿಯಾ ಸಿರೋಸ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

Share via

Write your Comment on Skoda kylaq

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಫೇಸ್ ಲಿಫ್ಟ್
Rs.65.90 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.10 - 11.23 ಲಕ್ಷ*
ಹೊಸ ವೇರಿಯೆಂಟ್
Rs.18.99 - 32.41 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ