Login or Register ಅತ್ಯುತ್ತಮ CarDekho experience ಗೆ
Login

ಇನ್ನೊಂದು ಲಕ್ಷುರಿ ಟ್ರಿಮ್ ನ ಪಡೆಯುತ್ತಿರುವ ಕಿಯಾ ಕಾರೆನ್ಸ್ : ಇಲ್ಲಿದೆ ಅದರ ಬೆಲೆಯ ಮಾಹಿತಿ..

published on ಏಪ್ರಿಲ್ 07, 2023 11:11 pm by ansh for ಕಿಯಾ ಕೆರೆನ್ಸ್

ಈ ಹೊಸ ಲಕ್ಷುರಿ (O) ಟ್ರಿಮ್ ಅನ್ನು ಲಕ್ಷುರಿ ಮತ್ತು ಲಕ್ಷುರಿ ಪ್ಲಸ್ ಟ್ರಿಮ್‌ಗಳ ನಡುವೆ ಇಡಲಾಗಿದೆ.

  • ಇದು ಕೇವಲ 7-ಸೀಟರ್ ಲೇಔಟ್‌ನೊಂದಿಗೆ ಮಾತ್ರ ಬರುತ್ತದೆ.
  • ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಎರಡರಲ್ಲೂ ಕೇವಲ ಆಟೋ ಟ್ರಾನ್ಸ್‌ಮಿಶನ್‌ಗಳೊಂದಿಗೆ ಮಾತ್ರ ಬರುತ್ತದೆ.
  • ಲಕ್ಷುರಿ ಟ್ರಿಮ್‌ಗೆ ಹೋಲಿಸಿದರೆ ಸಿಂಗಲ್-ಪೇನ್ ಸನ್‌ರೂಫ್ ಮತ್ತು ಡ್ರೈವ್ ಮೋಡ್ ಆ್ಯಂಬಿಯೆಂಟ್ ಲೈಟಿಂಗ್ ಪಡೆದಿದೆ.
  • ರೂ17 ಲಕ್ಷದಿಂದ ರೂ 17.70 ತನಕ ಬೆಲೆ ನಿಗದಿಪಡಿಸಲಾಗಿದೆ.

ಕಾರೆನ್ಸ್‌ಗೆ ಕಿಯಾ ಹೊಸ ಟ್ರಿಮ್ ಅನ್ನು ಪರಿಚಯಿಸಿದ್ದು ಇದನ್ನು ಲಕ್ಷುರಿ ಮತ್ತು ಲಕ್ಷುರಿ ಪ್ಲಸ್ ಟ್ರಿಮ್‌ಗಳ ಮಧ್ಯೆ ಇಡಲಾಗಿದೆ. ಇತ್ತೀಚೆಗೆ ಸೇರಿಸಲಾದ ಲಕ್ಷುರಿ (O), 7-ಸೀಟರ್ ಕಾನ್ಫಿಗರೇಶನ್‌ನೊಂದಿಗೆ ಮಾತ್ರ ಬರುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಇಂಜಿನ್‌ಗಳನ್ನು ಹೊಂದಿದೆ, ಇವು ಕೇವಲ ಮ್ಯಾನುವಲ್ ಟ್ರಾನ್ಸ್‌ಮಿಶನ್ ಆಯ್ಕೆಯೊಂದಿಗೆ ಬರುತ್ತದೆ.

ಬೆಲೆ

ವೇರಿಯೆಂಟ್

ಲಕ್ಷುರಿ (O)

ಲಕ್ಷುರಿ ಪ್ಲಸ್

ವ್ಯತ್ಯಾಸ

1.5-ಲೀಟರ್ ಟರ್ಬೋ-ಪೆಟ್ರೋಲ್ DCT - 7 ಸೀಟರ್

ರೂ 17 ಲಕ್ಷ

ರೂ 18.45 ಲಕ್ಷ

- ರೂ 1.45 ಲಕ್ಷ

1.5-ಲೀಟರ್ ಡೀಸೆಲ್ AT - 7 ಸೀಟರ್

ರೂ 17.70 ಲಕ್ಷ

ರೂ 18.80 ಲಕ್ಷ

- ರೂ 1.10 ಲಕ್ಷ

* ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ ಪ್ರಕಾರ

ಈ ಲಕ್ಷುರಿ (O) ಟ್ರಿಮ್, ಟಾಪ್-ಸ್ಪೆಕ್ ಲಕ್ಷುರಿ ಪ್ಲಸ್ ಟ್ರಿಮ್‌ಗಿಂತ ಗಣನೀಯವಾಗಿ ಹೆಚ್ಚು ಕೈಗೆಟುಕುವಂತಿದೆ. ಇದರ ಟರ್ಬೋ-ಪೆಟ್ರೋಲ್ ವೇರಿಯೆಂಟ್ ಬೆಲೆ ರೂ 1.45 ಲಕ್ಷದಷ್ಟು ಕಡಿಮೆ ಹಾಗೂ ಇದರ ಡೀಸೆಲ್ ವೇರಿಯೆಂಟ್ ಬೆಲೆ ರೂ 1.10 ಲಕ್ಷದಷ್ಟು ಕಡಿಮೆ ಇದೆ.

ಪವರ್‌ಟ್ರೇನ್

ಈ ಹೊಸ ಟ್ರಿಮ್ ಎರಡು ಪವರ್‌ಟ್ರೇನ್ ಆಯ್ಕೆಗಳನ್ನು ಪಡೆದಿದೆ: 1.5-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ (160PS ಮತ್ತು 253Nm) ಅನ್ನು 7-ಸ್ಪೀಡ್ DCTಯೊಂದಿಗೆ (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಶನ್) ಜೋಡಿಸಲಾಗಿದೆ ಮತ್ತು 1.5-ಲೀಟರ್ ಡೀಸೆಲ್ ಯೂನಿಟ್ (116PS ಮತ್ತು 250Nm) ಅನ್ನು 6-ಸ್ಪೀಡ್ ಆಟೋಮೇಟಡ್ ಇಂಜಿನ್‌ನೊಂದಿಗೆ ಜೋಡಿಸಲಾಗಿದೆ. ಈ ಇಂಜಿನ್‌ಗಳು ರೇಂಜ್‌ನಾದ್ಯಂತ 6-ಸ್ಪೀಡ್ iMT ಅನ್ನು ಪಡೆದಿವೆ ಆದರೆ ಟ್ರಾನ್ಸ್‌ಮಿಶನ್ ಆಯ್ಕೆಯು ಹೊಸ ವೇರಿಯೆಂಟ್‌ನೊಂದಿಗೆ ಲಭ್ಯವಿರವುದಿಲ್ಲ

ಇದನ್ನೂ ಓದಿ: 2023 EV6ಗಾಗಿ ಏಪ್ರಿಲ್ 15ರಂದು ಕಿಯಾ ಬುಕಿಂಗ್‌ಗಳನ್ನು ತೆರೆಯಲಿದೆ

ಕಾರೆನ್ಸ್‌ನ ಆರಂಭಿಕ ವೇರಿಯೆಂಟ್‌ಗಳು ಕೂಡಾ 1.5-ಲೀಟರ್ ಪೆಟ್ರೋಲ್ ಇಂಜಿನ್ (115PS ಮತ್ತು 144Nm) ಪಡೆದಿದ್ದು ಇದನ್ನು ಕೇವಲ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್‌ನೊಂದಿಗೆ ಮಾತ್ರ ಜೋಡಿಸಲಾಗಿದೆ. ಈ MPV ಯ ಎಲ್ಲಾ ಮೂರು ಇಂಜಿನ್‌ಗಳು BS6 ಫೇಸ್ ಎರಡು ಮಾನದಂಡಗಳಿಗೆ ಅನುಗುಣವಾಗಿವೆ.

ಫೀಚರ್‌ಗಳು ಮತ್ತು ಸುರಕ್ಷತೆ

ಈ ಲಕ್ಷುರಿ (O) ಟ್ರಿಮ್ ಅನ್ನು ಲಕ್ಷುರಿ ಟ್ರಿಮ್‌ಗೆ ಹೋಲಿಸಿದರೆ ಇದು ಸಿಂಗಲ್-ಪೇನ್ ಸನ್‌ರೂಫ್, ಮೂಡ್ ಲೈಟಿಂಗ್‌ನೊಂದಿಗೆ ಜೋಡಿಸಲಾದ ಮಲ್ಟಿ ಡ್ರೈವ್ ಮೋಡ್‌ಗಳು ಮೂಡ್ ಲೈಟಿಂಗ್‌ನೊಂದಿಗೆ ಮತ್ತು LED ಕ್ಯಾಬಿನ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಅಲ್ಲದೇ ಈ ಟ್ರಿಮ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಇದರೊಂದಿಗೆ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ನಾಲ್ಕು ಸ್ಪೀಕರ್‌ನ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 64-ಕಲರ್ ಆ್ಯಂಬಿಂಯೆಂಟ್ ಲೈಟಿಂಗ್ ಮತ್ತು LED ಹೆಡ್‌ಲ್ಯಾಂಪ್‌ಗಳು ಮತ್ತು DRLಗಳು ಮುಂತಾದ ಫೀಚರ್‌ಗಳನ್ನು ಒಳಗೊಂಡಿದೆ. ಈ ಲಕ್ಷುರಿ (O) ಟ್ರಿಮ್ ವಾತಾಯನದ ಫ್ರಂಟ್ ಸೀಟುಗಳು, ವೈರ್‌ಲೆಸ್ ಚಾರ್ಜರ್ ಮತ್ತು ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಮ್ ಅನ್ನೂ ಒಳಗೊಂಡಿದೆ ಮತ್ತು ಇವುಗಳು ಕೇವಲ ಟಾಪ್ ಸ್ಪೆಕ್ ಲಕ್ಷುರಿ ಪ್ಲಸ್ ಟ್ರಿಮ್‌ನಲ್ಲಿ ಮಾತ್ರ ಲಭ್ಯವಿರುತ್ತದೆ

ಇದನ್ನೂ ನೋಡಿ: ನವೀಕೃತ ಕಿಯಾ ಸೋನೆಟ್‌ನ ರಹಸ್ಯ ಪಾದಾರ್ಪಣೆ; 2024ರಲ್ಲಿ ಭಾರತದಲ್ಲಿ ಬಿಡುಗಡೆ

ಸುರಕ್ಷತೆಯ ವಿಚಾರಕ್ಕೆ ಬಂದಾಗ, ಕಾರೆನ್ಸ್‌ನ ಎಲ್ಯಾ ಟ್ರಿಮ್‌ಗಳು ಒಂದೇ ರೀತಿಯ ಫೀಚರ್‌ಗಳನ್ನು ಒಳಗೊಂಡಿದ್ದು, ಇದು ಆರು ಏರ್‌ಬ್ಯಾಗ್‌ಗಳು, ABS ಮತ್ತು EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲ್ಲಾ ವ್ಹೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿದೆ.

ಪ್ರತಿಸ್ಪರ್ಧಿಗಳು

ರೂ 10.45 ಲಕ್ಷ ಮತ್ತು 18.90 ಲಕ್ಷದ (ಎಕ್ಸ್-ಶೋರೂಂ), ನಡುವೆ ಬರುವ ತನ್ನ ಗಾತ್ರ ಮತ್ತು ಬೆಲೆ ಶ್ರೇಣಿಯೊಂದಿಗೆ ಇದು ಮಾರುತಿ ಎರ್ಟಿಗ, XL6, ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಇನ್ನೋವಾ ಕ್ರಿಸ್ಟಾದ ಕೆಲವು ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಇನ್ನಷ್ಟು ಓದಿ : ಕಾರೆನ್ಸ್ ಡೀಸೆಲ್

a
ಅವರಿಂದ ಪ್ರಕಟಿಸಲಾಗಿದೆ

ansh

  • 16 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಕೆರೆನ್ಸ್

Read Full News

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ