ಕಿಯಾ ಸೆಲ್ಟೋಸ್ ಮತ್ತು ಕಿಯಾ ಕಾರೆನ್ಸ್ ಕಾರುಗಳಿಗೆ ರೂ. 30,000 ದಷ್ಟು ಬೆಲೆ ಹೆಚ್ಚಳ
ಕಿಯಾ ಸೆಲ್ಟೋಸ್ ಗಾಗಿ rohit ಮೂಲಕ ಅಕ್ಟೋಬರ್ 09, 2023 12:12 pm ರಂದು ಪ್ರಕಟಿಸಲಾಗಿದೆ
- 120 Views
- ಕಾಮೆಂಟ್ ಅನ್ನು ಬರೆಯಿರಿ
ಬೆಲೆಯೇರಿಕೆ ಉಂಟಾದರೂ ಎರಡೂ ಮಾದರಿಗಳ ಆರಂಭ ಬೆಲೆಯಲ್ಲಿ ಯಾವುದೇ ಬದಲಾವಣೆ ಉಂಟಾಗದು
- ಕಿಯಾ ಸಂಸ್ಥೆಯು ಟಾಪ್ ಸ್ಪೆಕ್ ಸೆಲ್ಟೋಸ್ ವೇರಿಯಂಟ್ ಗಳ ಬೆಲೆಯನ್ನು ರೂ. 30,000 ದಷ್ಟು ಹೆಚ್ಚಿಸಿದೆ.
- ಈ SUV yu ಈಗ ರೂ. 10.90 ರಿಂದ ರೂ. 20.30 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
- ಕರೆನ್ಸ್ ಕಾರಿನ ಬೆಲೆಯನ್ನು ರೂ. 15,000 ದಷ್ಟು ಹೆಚ್ಚಿಸಲಾಗಿದೆ.
- ಕಿಯಾ MPVಯು ಈಗ ರೂ. 10.45 ರಿಂದ ರೂ. 19.45 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಅನ್ನು ಈ ವರ್ಷದ ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಮೊದಲ ಬಾರಿಗೆ ಇದರ ಬೆಲೆಯಲ್ಲಿ ಹೆಚ್ಚಳ ಉಂಟಾಗಿದ್ದರೂ, ಎಲ್ಲಾ ವೇರಿಯಂಟ್ ಗಳಲ್ಲಿ ಈ ಬೆಲೆ ಹೆಚ್ಚಳ ಉಂಟಾಗಿಲ್ಲ. ಈ ಕಾರು ತಯಾರಕ ಸಂಸ್ಥೆಯು ಕರೆನ್ಸ್ MPV ಯನ್ನು ಸಹ ಈ ಬೆಲೆ ಪರಿಷ್ಕರಣೆಯಲ್ಲಿ ಸೇರಿಸಿಕೊಂಡಿದೆ. ಎರಡು ಕಿಯಾ ಮಾದರಿಗಳ ವೇರಿಯಂಟ್ ವಾರು ಬೆಲೆ ಪರಿಷ್ಕರಣೆಯನ್ನು ಇಲ್ಲಿ ನೀಡಲಾಗಿದೆ:
ಸೆಲ್ಟೋಸ್
|
|||
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
GTX+ ಟರ್ಬೋ ಪೆಟ್ರೋಲ್ DCT |
ರೂ 19.80 ಲಕ್ಷ |
ರೂ 20 ಲಕ್ಷ |
+ರೂ 20,000 |
X-ಲೈನ್ ಟರ್ಬೋ ಪೆಟ್ರೋಲ್ DCT |
ರೂ 20 ಲಕ್ಷ |
ರೂ 20.30 ಲಕ್ಷ |
+ರೂ 30,000 |
GTX+ ಡೀಸೆಲ್ AT |
ರೂ 19.80 ಲಕ್ಷ |
ರೂ 20 ಲಕ್ಷ |
+ರೂ 20,000 |
X-ಲೈನ್ ಡೀಸೆಲ್ AT |
ರೂ 20 ಲಕ್ಷ |
ರೂ 20.30 ಲಕ್ಷ |
+ರೂ 30,000 |
- ಕಿಯಾ ಸಂಸ್ಥೆಯು ಸೆಲ್ಟೋಸ್ ಮಾದರಿಯ ಹಯರ್ ಸ್ಪೆಕ್ GTX+ ಮತ್ತು X-ಲೈನ್ ವೇರಿಯಂಟ್ ಗಳ ಬೆಲೆಯನ್ನು ರೂ. 30,000 ದಷ್ಟು ಹೆಚ್ಚಿಸಿದೆ.
- ಇತ್ತೀಚೆಗೆ ಸೇರ್ಪಡೆಗೊಳಿಸಲಾದ GTX+ (S) ಮತ್ತು X-ಲೈನ್ (S) ಸೇರಿದಂತೆ ಇತರ ಯಾವುದೇ ವೇರಿಯಂಟ್ ಗಳು ಹಿಂದಿನ ಬೆಲೆಯಲ್ಲೇ ದೊರೆಯಲಿದ್ದು, ಈ SUV ಗಳ ಬೆಲೆಯು ಈಗಲೂ ರೂ. 10.90 ಲಕ್ಷದಿಂದಲೇ ಪ್ರಾರಂಭಗೊಳ್ಳಲಿದೆ.
ಕಾರೆನ್ಸ್
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
1.5-ಲೀಟರ್ ಪೆಟ್ರೋಲ್ |
|||
ಪ್ರೀಮಿಯಂ |
ರೂ 10.45 ಲಕ್ಷ |
ರೂ 10.45 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
ಪ್ರೆಸ್ಟೀಜ್ |
ರೂ 11.65 ಲಕ್ಷ |
ರೂ 11.75 ಲಕ್ಷ |
+ರೂ 10,000 |
1.5-ಲೀಟರ್ ಟರ್ಬೊ ಪೆಟ್ರೋಲ್ |
|||
ಪ್ರೀಮಿಯಂ iMT |
ರೂ 12 ಲಕ್ಷ |
ರೂ 12 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
ಪ್ರೆಸ್ಟೀಜ್ iMT |
ರೂ 13.25 ಲಕ್ಷ |
ರೂ 13.35 ಲಕ್ಷ |
+ರೂ 10,000 |
ಪ್ರೆಸ್ಟೀಜ್ ಪ್ಲಸ್ iMT |
ರೂ 14.75 ಲಕ್ಷ |
ರೂ 14.85 ಲಕ್ಷ |
+ರೂ 10,000 |
ಪ್ರೆಸ್ಟೀಜ್ ಪ್ಲಸ್ DCT |
ರೂ 15.75 ಲಕ್ಷ |
ರೂ 15.85 ಲಕ್ಷ |
+ರೂ 10,000 |
ಲಕ್ಷುರಿ iMT |
ರೂ 16.20 ಲಕ್ಷ |
ರೂ 16.35 ಲಕ್ಷ |
+ರೂ 15,000 |
ಲಕ್ಷುರಿ (O) DCT |
ರೂ 17 ಲಕ್ಷ |
ರೂ 17.15 ಲಕ್ಷ |
+ರೂ 15,000 |
ಲಕ್ಷುರಿ ಪ್ಲಸ್ iMT 6-ಸೀಟರ್ |
ರೂ 17.50 ಲಕ್ಷ |
ರೂ 17.65 ಲಕ್ಷ |
+ರೂ 15,000 |
ಲಕ್ಷುರಿ ಪ್ಲಸ್ iMT |
ರೂ 17.55 ಲಕ್ಷ |
ರೂ 17.70 ಲಕ್ಷ |
+ರೂ 15,000 |
ಲಕ್ಷುರಿ ಪ್ಲಸ್ DCT 6-ಸೀಟರ್ |
ರೂ 18.40 ಲಕ್ಷ |
ರೂ 18.55 ಲಕ್ಷ |
+ರೂ 15,000 |
ಲಕ್ಷುರಿ ಪ್ಲಸ್ DCT |
ರೂ 18.45 ಲಕ್ಷ |
ರೂ 18.60 ಲಕ್ಷ |
+ರೂ 15,000 |
X-ಲೈನ್ DCT 6-ಸೀಟರ್ |
ರೂ 18.95 ಲಕ್ಷ |
ರೂ 18.95 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
1.5-ಲೀಟರ್ ಡೀಸೆಲ್ |
|||
ಪ್ರೀಮಿಯಂ iMT |
ರೂ 12.65 ಲಕ್ಷ |
ರೂ 12.65 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
ಪ್ರೆಸ್ಟೀಜ್ iMT |
ರೂ 13.85 ಲಕ್ಷ |
ರೂ 13.95 ಲಕ್ಷ |
+ರೂ 10,000 |
ಪ್ರೆಸ್ಟೀಜ್ ಪ್ಲಸ್ iMT |
ರೂ 15.35 ಲಕ್ಷ |
ರೂ 15.45 ಲಕ್ಷ |
+ರೂ 10,000 |
ಲಕ್ಷುರಿ iMT |
ರೂ 16.80 ಲಕ್ಷ |
ರೂ 16.95 ಲಕ್ಷ |
+ರೂ 15,000 |
ಲಕ್ಷುರಿ (O) AT |
ರೂ 17.70 ಲಕ್ಷ |
ರೂ 17.85 ಲಕ್ಷ |
+ರೂ 15,000 |
ಲಕ್ಷುರಿ ಪ್ಲಸ್ iMT 6-ಸೀಟರ್ |
ರೂ 18 ಲಕ್ಷ |
ರೂ 18.15 ಲಕ್ಷ |
+ರೂ 15,000 |
ಲಕ್ಷುರಿ ಪ್ಲಸ್ AT 6-ಸೀಟರ್ |
ರೂ 18.90 ಲಕ್ಷ |
ರೂ 19.05 ಲಕ್ಷ |
+ರೂ 15,000 |
ಲಕ್ಷುರಿ ಪ್ಲಸ್ AT |
ರೂ 18.95 ಲಕ್ಷ |
ರೂ 18.95 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
X-ಲೈನ್ AT 6-ಸೀಟರ್ |
ರೂ 19.45 ಲಕ್ಷ |
ರೂ 19.45 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
-
ಕಿಯಾ ಕಾರೆನ್ಸ್ ಮಾದರಿಯ ಒಟ್ಟಾರೆ ಬೆಲೆ ಶ್ರೇಣಿಯ ಮೇಲೆ ಈ ಬೆಲೆ ಹೆಚ್ಚಳದಿಂದಾಗಿ ಯಾವುದೇ ಪರಿಣಾಮ ಉಂಟಾಗಿಲ್ಲ. ಈ MPV ಯು ಇನ್ನೂ ಸಹ ರೂ. 10.45 ಲಕ್ಷದಿಂದ ರೂ. 19.45 ಲಕ್ಷದ ವರೆಗಿನ ಬೆಲೆಯಲ್ಲೇ ಲಭ್ಯ.
-
ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್ ಗಳ ಅರಂಭಿಕ ಬೆಲೆಯಲ್ಲೂ ಪರಿಷ್ಕರಣೆ ಉಂಟಾಗಿಲ್ಲ.
-
ಕಿಯಾ ಸಂಸ್ಥೆಯು ಕಾರೆನ್ ಮಾದರಿಯ ಮಿಡ್ ಸ್ಪೆಕ್ ವೇರಿಯಂಟ್ ಗಳ ಆರಂಭಿಕ ಬೆಲೆಯನ್ನು ರೂ. 15,000 ದಷ್ಟು ಹೆಚ್ಚಿಸಿದೆ.
ಇದನ್ನು ಸಹ ಓದಿರಿ: ಕಿಯಾ ಕಾರೆನ್ಸ್ X-ಲೈನ್ ಬಿಡುಗಡೆ, ಬೆಲೆಗಳು ರೂ. 18.95 ಲಕ್ಷದಿಂದ ಪ್ರಾರಂಭ
ಕಿಯಾ ಸ್ಪರ್ಧಿಗಳು
ಕಿಯಾ ಸೆಲ್ಟೋಸ್ ಮಾದರಿಯು ಹ್ಯುಂಡೈ ಕ್ರೆಟಾ, ಮಾರುತಿ ಗ್ರಾಂಡ್ ವಿಟಾರ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಹೋಂಡಾ ಎಲೆವೇಟ್, ಸ್ಕೋಡಾ ಕುಶಕ್, ಫೋಕ್ಸ್ ವ್ಯಾಗನ್ ಟೈಗುನ್, ಸಿಟ್ರನ್ C3 ಏರ್ ಕ್ರಾಸ್, ಮತ್ತು MG ಆಸ್ಟರ್ ಜೊತೆಗೆ ಸ್ಪರ್ಧಿಸಲಿದೆ. ಇದೇ ವೇಳೆ ಕಿಯಾದ ಕಾರೆನ್ಸ್ MPV ಯು ಮಾರುತಿ ಎರ್ಟಿಗಾ/ ಟೊಯೊಟಾ ರುಮಿಯೊನ್ ಮತ್ತು ಮಾರುತಿ XL6 ಜೊತೆಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದ್ದು, ಟೊಟೊಯಾ ಇನೋವಾ ಕ್ರಿಸ್ಟ ಮತ್ತು ಟೊಯೊಟಾ ಇನೋವಾ ಹೈಕ್ರಾಸ್ಬದಲಿಗೆ ಅಗ್ಗದ ಆಯ್ಕೆ ಎನಿಸಲಿದೆ.
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ
ಇದನ್ನು ಸಹ ನೋಡಿರಿ: ಸೆಪ್ಟೆಂಬರ್ 2023ರಲ್ಲಿ ಅತೀ ಹೆಚ್ಚು ಮಾರಾಟವಾದ ಟಾಪ್ 15 ಕಾರುಗಳಿವು
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೆಲ್ಟೊಸ್ ಡೀಸೆಲ್
0 out of 0 found this helpful