• English
  • Login / Register

1 ಲಕ್ಷದಷ್ಟು ಬುಕಿಂಗ್‌ಗಳನ್ನು ಪಡೆದ Kia Seltos Facelift; 80,000 ಗ್ರಾಹಕರಿಗೆ ಸನ್‌ರೂಫ್ ಆವೃತ್ತಿಯ ಮೇಲೆ ಒಲವು..!

ಕಿಯಾ ಸೆಲ್ಟೋಸ್ ಗಾಗಿ shreyash ಮೂಲಕ ಫೆಬ್ರವಾರಿ 06, 2024 08:29 pm ರಂದು ಪ್ರಕಟಿಸಲಾಗಿದೆ

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

2023 ರ ಜುಲೈಯಿಂದ ಕಿಯಾ ಸರಾಸರಿ 13,500 ನಷ್ಟು ಸೆಲ್ಟೋಸ್ ಬುಕಿಂಗ್‌ಗಳನ್ನು ಪಡೆದುಕೊಂಡಿದೆ

Kia Seltos

  • ಕಿಯಾ ಹೊಸ ಸೆಲ್ಟೋಸ್‌ಗಾಗಿ ತನ್ನ ಬುಕಿಂಗ್ ಮೈಲಿಗಲ್ಲು ಕುರಿತು ಕೆಲವು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡಿದೆ.
  • 80 ಪ್ರತಿಶತ ಸೆಲ್ಟೋಸ್ ಖರೀದಿದಾರರು ಟಾಪ್‌-ಎಂಡ್‌ ಆವೃತ್ತಿಗಳನ್ನು ಆಯ್ದುಕೊಳ್ಳುತ್ತಿದ್ದಾರೆ (HTK+ ಮೇಲಿನ).
  • ಒಟ್ಟು ಬುಕ್ಕಿಂಗ್‌ಗಳಲ್ಲಿ 58 ಪ್ರತಿಶತವು ಕಿಯಾ ಸೆಲ್ಟೋಸ್‌ನ ಪೆಟ್ರೋಲ್ ಟ್ರಿಮ್‌ಗಳಿಗಾಗಿ ಆಗಿದೆ, ಆದರೆ ಸುಮಾರು 50 ಪ್ರತಿಶತವು ಆಟೋಮ್ಯಾಟಿಕ್‌ ಆವೃತ್ತಿಯನ್ನು ಆರಿಸಿಕೊಂಡಿದೆ.
  • ಸುರಕ್ಷತೆಯ ವಿಷಯಕ್ಕೆ ಬಂದಾಗ, 40 ಪ್ರತಿಶತ ಖರೀದಿದಾರರು ಕಿಯಾ ಸೆಲ್ಟೋಸ್‌ನ ADAS-ಸುಸಜ್ಜಿತ ಆವೃತ್ತಿಯನ್ನು ಆರಿಸಿಕೊಳ್ಳುತ್ತಿದ್ದಾರೆ. 

ಕಿಯಾ ಸೆಲ್ಟೋಸ್  2023ರ ಜುಲೈನಲ್ಲಿ ಪ್ರಮುಖ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿತು, ಅದರೊಂದಿಗೆ ಇದು ತಾಜಾ ವಿನ್ಯಾಸವನ್ನು ಮಾತ್ರವಲ್ಲದೆ ಹೊಸ ವೈಶಿಷ್ಟ್ಯಗಳು, ಸುಧಾರಿತ ಸುರಕ್ಷತೆ ಮತ್ತು ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ ಆಯ್ಕೆಯನ್ನು ಸಹ ಪಡೆದುಕೊಂಡಿದೆ.  ಇದೀಗ ಕಿಯಾ ಸೆಲ್ಟೋಸ್‌ನ ಒಟ್ಟು ಬುಕಿಂಗ್‌ಗಳು ಬಿಡುಗಡೆ ಆದಗಿನಿಂದ ಒಂದು ಲಕ್ಷದ ಗಡಿ ದಾಟಿದೆ. ಸರಾಸರಿಯಾಗಿ ಹೇಳುವುದಾದರೆ, ಈ ಅವಧಿಯಲ್ಲಿ ಫೇಸ್‌ಲಿಫ್ಟೆಡ್ ಸೆಲ್ಟೋಸ್ ಪ್ರತಿ ತಿಂಗಳು 13,500 ನಷ್ಟು ಬುಕಿಂಗ್‌ಗಳನ್ನು ಪಡೆದಿದೆ. 

80 ಪ್ರತಿಶತ ಖರೀದಿದಾರರ ಒಲವು ಟಾಪ್‌-ಎಂಡ್‌ ಆವೃತ್ತಿಗಳ ಮೇಲೆ

ಕಿಯಾ ಪ್ರಕಾರ, 80 ಪ್ರತಿಶತದಷ್ಟು ಸೆಲ್ಟೋಸ್ ಖರೀದಿದಾರರು ಉತ್ತಮ-ಸಜ್ಜಿತ ವೇರಿಯೆಂಟ್‌ಗಳನ್ನು (HTK+ ಮೇಲಿನ) ಬಯಸುತ್ತಾರೆ, ಜೊತೆಗೆ ಪನೋರಮಿಕ್ ಸನ್‌ರೂಫ್‌ಅನ್ನು ಅಳವಡಿಸಲಾಗಿರುವ ಎಸ್‌ಯುವಿ ವೇರಿಯೆಂಟ್‌ಗಳನ್ನು ಆಯ್ಕೆ ಮಾಡುತ್ತಾರೆ. ಫೇಸ್‌ಲಿಫ್ಟ್‌ನೊಂದಿಗಿನ ದೊಡ್ಡ ವೈಶಿಷ್ಟ್ಯದ ನವೀಕರಣಗಳಲ್ಲಿ ಒಂದಾದ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಪರಿಚಯವಾಗಿದೆ ಮತ್ತು 40 ಪ್ರತಿಶತದಷ್ಟು ಹೊಸ ಸೆಲ್ಟೋಸ್ ಖರೀದಿದಾರರು ಈ ಸುರಕ್ಷತಾ ವೈಶಿಷ್ಟ್ಯವನ್ನು ಬಯಸುತ್ತಾರೆ ಎಂದು ಕಿಯಾ ಬಹಿರಂಗಪಡಿಸಿದೆ.

ಇದನ್ನು ಸಹ ಪರಿಶೀಲಿಸಿ: ಒಂದು ತಿಂಗಳಲ್ಲಿ ಬರೋಬ್ಬರಿ 51,000 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದ Hyundai Creta Facelift

ಆಟೋಮ್ಯಾಟಿಕ್‌ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆ

ಕಿಯಾ ಸೆಲ್ಟೋಸ್ 1.5-ಲೀಟರ್ ನೆಚುರಲಿ ಆಸ್ಪಿರೇಟೆಡ್ (NA) ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಬ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಮೂರು ಎಂಜಿನ್‌ಗಳು ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನ ಆಯ್ಕೆಯನ್ನು ಪಡೆಯುತ್ತದೆ ಮತ್ತು ಕಿಯಾ ಪ್ರಕಾರ, ಹೊಸ ಸೆಲ್ಟೋಸ್‌ಗಾಗಿ ಆದ ಎಲ್ಲಾ ಬುಕಿಂಗ್‌ಗಳಲ್ಲಿ ಸುಮಾರು 50 ಪ್ರತಿಶತವು ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನ ಆಯ್ಕೆಗಳಿಗಾಗಿ ಆಗಿದೆ. ಡೀಸೆಲ್ ಚಾಲಿತ ಆಯ್ಕೆಗೆ ಇನ್ನೂ ಹೆಚ್ಚಿನ ಬೇಡಿಕೆಯಿದೆ ಎಂದು ತಿಳಿದುಬಂದಿದೆ, ಇದು ಇದುವರೆಗಿನ ಒಟ್ಟು ಬುಕ್ಕಿಂಗ್‌ಗಳಲ್ಲಿ ಶೇಕಡಾ 42 ರಷ್ಟಿದೆ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

ಕಿಯಾವು ಡ್ರೈವರ್‌ಗಾಗಿ ಡಿಜಿಟಲ್‌ ಡಿಸ್‌ಪ್ಲೇ ಮತ್ತು ಟಚ್‌ಸ್ಕ್ರೀನ್‌ ಇಂಫೋಟೈನ್‌ಮೆಂಟ್‌ ಸೇರಿದಂತೆ 10.25-ಇಂಚಿನ ಎರಡು ಡಿಸ್‌ಪ್ಲೇಗಳು, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ  ಸೆಲ್ಟೋಸ್ ಅನ್ನು ಸಜ್ಜುಗೊಳಿಸಿದೆ. ಇದು ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಲೈಟಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಸಹ ಪಡೆಯುತ್ತದೆ.

ಸುರಕ್ಷತೆಯ ದೃಷ್ಟಿಯಿಂದ, ಸೆಲ್ಟೋಸ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್ ಕೀಪ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಹಾಗು ಎಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಬರುತ್ತದೆ. 

ಪವರ್‌ಟ್ರೇನ್‌ಗಳ ಮಾಹಿತಿ

ಎಂಜಿನ್-ವಾರು ವಿಶೇಷಣಗಳು ಮತ್ತು ಗೇರ್‌ಬಾಕ್ಸ್‌ನ ಆಯ್ಕೆಗಳನ್ನು ಕೆಳಗೆ ವಿವರಿಸಲಾಗಿದೆ:

ಇಂಜಿನ್

1.5-ಲೀಟರ್ ಎನ್‌ಎ ಪೆಟ್ರೋಲ್

1.5-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್

115 ಪಿಎಸ್

160 ಪಿಎಸ್‌

116 ಪಿಎಸ್

ಟಾರ್ಕ್

144 ಎನ್ಎಂ

253 ಎನ್‌ಎಮ್‌

250 ಎನ್ಎಂ

ಗೇರ್‌ಬಾಕ್ಸ್‌

6-ಸ್ಪೀಡ್‌ ಮ್ಯಾನುಯಲ್‌ / ಸಿವಿಟಿ

6-ಸ್ಪೀಡ್ ಐಎಮ್‌ಟಿ / 7-ಸ್ಪೀಡ್‌ ಡಿಸಿಟಿ

6-ಸ್ಪೀಡ್ ಮ್ಯಾನುಯಲ್‌ / 6-ಸ್ಪೀಡ್ ಐಎಮ್‌ಟಿ / 6-ಸ್ಪೀಡ್ ಆಟೋಮ್ಯಾಟಿಕ್‌ 

2024 ರ ಜನವರಿಯಲ್ಲಿ, ಕಿಯಾ ಸೆಲ್ಟೋಸ್‌ನ ಡೀಸೆಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪರಿಚಯಿಸಿತು. ಐಎಮ್‌ಟಿ ಸೆಟಪ್ (ಕ್ಲಚ್ ಪೆಡಲ್ ಇಲ್ಲದೆ ಮ್ಯಾನುಯಲ್‌) ಆಯ್ಕೆಯನ್ನು ನೀಡುವ ತನ್ನ ಸೆಗ್ಮೆಂಟ್‌ನಲ್ಲಿ ಇದು ಏಕೈಕ ಎಸ್‌ಯುವಿ ಆಗಿದೆ.

ಬೆಲೆ ರೇಂಜ್‌ ಮತ್ತು ಪ್ರತಿಸ್ಪರ್ಧಿಗಳು

 ದೆಹಲಿಯಲ್ಲಿ ಕಿಯಾ ಸೆಲ್ಟೋಸ್‌ನ ಎಕ್ಸ್‌ ಶೋರೂಮ್‌ ಬೆಲೆ 10.90 ಲಕ್ಷ ರೂ.ನಿಂದ ಪ್ರಾರಂಭವಾಗಿ ಸುಮಾರು 20.30 ಲಕ್ಷ ರೂ.ವರೆಗೆ ಇರಲಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗನ್, ಹೋಂಡಾ ಎಲಿವೇಟ್, ಎಂಜಿ ಆಸ್ಟರ್ ಮತ್ತು ಸಿಟ್ರೊಯೆನ್ ಸಿ 3 ಏರ್‌ಕ್ರಾಸ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಇನ್ನಷ್ಟು ಓದಿ: ಕಿಯಾ ಸೆಲ್ಟೋಸ್ ಡೀಸೆಲ್

was this article helpful ?

Write your Comment on Kia ಸೆಲ್ಟೋಸ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience