ಭಾರತದಲ್ಲಿ ಜುಲೈ 4 ರಂದು ನವೀಕೃತ ಕಿಯಾ ಸೆಲ್ಟೋಸ್‌ನ ಪಾದಾರ್ಪಣೆ
ಕಿಯಾ ಸೆಲ್ಟೋಸ್ ಗಾಗಿ ansh ಮೂಲಕ ಜೂನ್ 21, 2023 02:33 pm ರಂದು ಪ್ರಕಟಿಸಲಾಗಿದೆ
- 17 Views
- ಕಾಮೆಂಟ್ ಅನ್ನು ಬರೆಯಿರಿ
ಈ ನವೀಕರಣದೊಂದಿಗೆ, ಈ ಕಾಂಪ್ಯಾಕ್ಟ್ ಎಸ್‌ಯುವಿ ವಿಹಂಗಮ ಸನ್‌ರೂಫ್ ಮತ್ತು ADAS ನಂತಹ ಜನಪ್ರಿಯ ಫೀಚರ್‌ಗಳನ್ನು ಪಡೆಯುತ್ತದೆ
-
ಈ ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಡೀಲರ್‌ಶಿಪ್ ಹಂತದ ಮುಂಗಡ ಬುಕಿಂಗ್‌ಗಳು ರೂ. 25000 ಮುಂಗಡ ಮೊತ್ತಕ್ಕೆ ಪ್ರಾರಂಭವಾಗಿವೆ.
-
1.5 ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಸೇರ್ಪಡೆಯೊಂದಿಗೆ ಈಗ ಕೈಬಿಡಲಾದ ಮಾದರಿಯಂತೆಯೇ ಅದೇ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಆಯ್ಕೆಗಳನ್ನು ಪಡೆಯಬಹುದೆಂದು ನಾವು ನಿರೀಕ್ಷಿಸಿದ್ದೇವೆ.
-
ADAS ಮತ್ತು ವಿಹಂಗಮ ಸನ್‌ರೂಫ್ ಫೀಚರ್‌ಗಳನ್ನು ಹೊರತುಪಡಿಸಿ ಇದು ಸಂಯೋಜಿತ ಡ್ಯುಯಲ್ 10.25 ಇಂಚಿನ ಡಿಸ್‌ಪ್ಲೇಗಳು, ಮುಂಭಾಗದ ಹೀಟೆಡ್ ಸೀಟುಗಳು ಮತ್ತು ಆರು ಏರ್‌ಬ್ಯಾಗ್‌ಗಳನ್ನು ಪಡೆಯಬಹುದು.
-
ಇದು ಪಾದಾರ್ಪಣೆಗೊಂಡ ಸ್ವಲ್ಪ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.
-
ರೂ.10.5 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ನಿಗದಿಪಡಿಸುವ ಸಾಧ್ಯತೆಯಿದೆ.
ದೇಶದಲ್ಲಿಯೇ ಅತಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದಾಗಿರುವ, ಈ ಕಿಯಾ ಸೆಲ್ಟೋಸ್ ನವೀಕರಣಗೊಂಡಿದ್ದು, ಇತ್ತೀಚೆಗೆ ಸ್ವಲ್ಪ ಸಮಯದಿಂದ ನಾವು ಅದರ ಆಗಮನಕ್ಕಾಗಿ ಕಾಯುತ್ತಿದ್ದೇವೆ. ಈಗ, ನವೀಕೃತ ಕಿಯಾ ಸೆಲ್ಟೋಸ್ ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಮತ್ತು ಜುಲೈ 4 ರಂದು ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ ಎಂಬುದನ್ನು ನಾವು ದೃಢೀಕರಿಸುತ್ತಿದ್ದೇವೆ.
ನವೀಕೃತ ವಿನ್ಯಾಸ
ಈ ನವೀಕರಣದೊಂದಿಗೆ, ಈ ಸೆಲ್ಟೋಸ್ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್‌ನೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಡಿಆರ್‌ಎಲ್‌ಗಳ ಸ್ಲೀಕರ್ ಸೆಟ್ ಅನ್ನು ಪಡೆಯುತ್ತದೆ. ಕೆಲವು ಡೋರ್ ಕ್ಲಾಡಿಂಗ್ ಅನ್ನು ಹೊರತುಪಡಿಸಿದರೆ ಇದರ ಪಾರ್ಶ್ವ ವಿನ್ಯಾಸವು ಹೆಚ್ಚಾಗಿ ಬದಲಾವಣೆಯನ್ನು ಹೊಂದಿಲ್ಲ. ಹಿಂಭಾಗದಲ್ಲಿ, ಈ ಕಾಂಪ್ಯಾಕ್ಟ್ ಎಸ್‌ಯುವಿಯ ಟೈಲ್ ಲ್ಯಾಂಪ್ ಸೆಟಪ್ ಅನ್ನು ಸ್ವಲ್ಪ ತಿರುಚಿದಂತೆ ಮಾಡಲಾಗಿದ್ದು, ಮಧ್ಯದಲ್ಲಿ ಸಂಪರ್ಕಿತ ಅಂಶವನ್ನು ಪಡೆಯುತ್ತದೆ. ಸ್ವಲ್ಪ ಗಟ್ಟಿಮುಟ್ಟಾದ ನೋಟಕ್ಕಾಗಿ ಬೂಟ್ ತಿರುಚಲಾದ ವಿನ್ಯಾಸವನ್ನು ಪಡೆದರೆ ಹಿಂಭಾಗದ ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ.
ನವೀಕೃತ ಪವರ್‌ಟ್ರೇನ್
6-ಸ್ಪೀಡ್ ಮ್ಯಾನ್ಯುವಲ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಮತ್ತು 1.5-ಲೀಟರ್ ಡಿಸೇಲ್ ಎಂಜಿನ್ ಆಯ್ಕೆಯೊಂದಿಗೆ 1.5 ಲೀಟರ್ ಪೆಟ್ರೋಲ್ ಎಂಜಿನ್ (115PS/144Nm) ಪಡೆಯುವ ಕೈಬಿಡಲಾದ ಮಾದರಿಯ ಎಂಜಿನ್ ಆಯ್ಕೆಯನ್ನು ನವೀಕೃತ ಸೆಲ್ಟೋಸ್ ಪಡೆಯಬಹುದಾಗಿದ್ದು 6-ಸ್ಪೀಡ್ iMT ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ ಜೋಡಿಸಲಾಗಿದೆ ಎಂದು ನಾವು ನಿರೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಯಾವುದೇ ಮುಚ್ಚುಮರೆಯಿಲ್ಲದೇ ಕಂಡುಬಂದ ನವೀಕೃತ ಸೆಲ್ಟೋಸ್; ನಾವು ನೋಡಬಹುದಾದ 5 ವಿಷಯಗಳು
ಹಳೆಯ 140PS 1.4-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್, ಈಗಾಗಲೇ ಮಾರಾಟದಲ್ಲಿಲ್ಲ, 1.5-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ (160PS/253Nm) ಅನ್ನು ಕಿಯಾ ಕ್ಯಾರೆನ್ಸ್ ಮತ್ತು ಹೊಸ ಹ್ಯುಂಡೈ ವರ್ನಾದಲ್ಲಿ ನಾವು ಕಾಣಬಹುದು.
ಫೀಚರ್‌ಗಳು ಮತ್ತು ಸುರಕ್ಷತೆ
ಅದರ ಪರೀಕ್ಷಾರ್ಥ ಕಾರು ನಮಗೆ ಕಂಡುಬಂದ ಪ್ರಕಾರ, ನವೀಕೃತ ಸೆಲ್ಟೋಸ್ ವಿಹಂಗಮ ಸನ್‌ರೂಪ್ ಫೀಚರ್‌ನೊಂದಿಗೆ ಬರುತ್ತದೆ ಮಾತ್ರವಲ್ಲದೇ ಇದು ಲೇನ್ ಕೀಪ್ ಅಸಿಸ್ಟ್, ಮುಂಭಾಗದ ಘರ್ಷಣೆ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸ್ವಾಯತ್ತ ತುರ್ತು ಬ್ರೇಕಿಂಗ್‌ನಂತಹ ADAS ಫೀಚರ್‌ಗಳನ್ನು ಸಹ ಒಳಗೊಂಡಿರುತ್ತದೆ. ಈ ಎರಡೂ ಫೀಚರ್‌ಗಳನ್ನು ಅದರ ಪ್ರತಿಸ್ಪರ್ಧಿ ಕಾರುಗಳು ನೀಡುತ್ತಿವೆ.
ಇದನ್ನೂ ಓದಿ: ಕಿಯಾ ಸೆಲ್ಟೋಸ್‌ನ 5 ಲಕ್ಷಕ್ಕೂ ಹೆಚ್ಚಿನ ಯೂನಿಟ್ ಮಾರಾಟ
ಸಂಯೋಜಿತ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು (ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ಮತ್ತು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟಿಂಗ್ ಸಿಸ್ಟಮ್ (TPMS), ಮತ್ತು ಹಿಲ್ ಅಸಿಸ್ಟ್‌ನಂತಹ ಜಾಗತಿಕವಾಗಿ ಲಭ್ಯವಿರುವ ಫೀಚರ್‌ಗಳೊಂದಿಗೆ ನವೀಕೃತ ಸೆಲ್ಟೋಸ್‌ನಲ್ಲಿರುವ ಮರುವಿನ್ಯಾಸಗೊಳಿಸಲಾದ ಕ್ಯಾಬಿನ್ ಅನ್ನು ಸಹ ಇದು ಪಡೆಯಬಹುದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಅದೇ ತಿಂಗಳಲ್ಲಿ ತನ್ನ ಬೆಲೆಗಳನ್ನು ಘೋಷಿಸಬಹುದು ಮತ್ತು ಅದರ ಆರಂಭಿಕ ಬೆಲೆಯು ರೂ 10.5 ಲಕ್ಷ (ಎಕ್ಸ್-ಶೋರೂಮ್) ಇರಬಹುದೆಂದು ನಾವು ಭಾವಿಸಿದ್ದೇವೆ. ಈ ನವೀಕೃತ ಸೆಲ್ಟೋಸ್ ಹ್ಯುಂಡೈ ಕ್ರೆಟಾ, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್ ಮತ್ತು ಎಂಜಿ ಆಸ್ಟರ್‌ನೊಂದಿಗೆ ತನ್ನ ಸ್ಪರ್ಧೆಯನ್ನು ಮುಂದುವರಿಸುತ್ತದೆ.
ಇದನ್ನೂ ಓದಿ : ಸೆಲ್ಟೋಸ್ ಡಿಸೇಲ್