Login or Register ಅತ್ಯುತ್ತಮ CarDekho experience ಗೆ
Login

ಬಹುನಿರೀಕ್ಷಿತ Kia Syrosನ ಅನಾವರಣ, 2025ರ ಜನವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ

ಡಿಸೆಂಬರ್ 19, 2024 04:52 pm ರಂದು shreyash ಮೂಲಕ ಪ್ರಕಟಿಸಲಾಗಿದೆ
97 Views

ಕಿಯಾ ಇಂಡಿಯಾದ ಎಸ್‌ಯುವಿ ಕಾರಗಳ ಪಟ್ಟಿಯಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ನಡುವೆ ಸಿರೋಸ್ ಸ್ಥಾನವನ್ನು ಪಡೆಯುತ್ತದೆ, ಮುಂಭಾಗ ಮತ್ತು ಹಿಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು, ದೊಡ್ಡ ಸ್ಕ್ರೀನ್‌ಗಳು ಮತ್ತು ಹೆಚ್ಚಿನವುಗಳಂತಹ ಹೆಚ್ಚುವರಿ ಫೀಚರ್‌ಗಳನ್ನು ನೀಡುತ್ತದೆ

  • ಇದು HTK, HTK (O), HTK Plus, HTX, HTX ಪ್ಲಸ್, ಮತ್ತು HTX ಪ್ಲಸ್ (O) ಎಂಬ ಆರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

  • Kia ಇವಿ9 ನಿಂದ ಸ್ಫೂರ್ತಿ ಪಡೆದ ಬಾಕ್ಸ್ ಎಸ್‌ಯುವಿ ವಿನ್ಯಾಸವನ್ನು ಹೊಂದಿದೆ.

  • ಹೊರಭಾಗದ ಹೈಲೈಟ್‌ಗಳು 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು,L- ಆಕಾರದ ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿವೆ.

  • ಒಳಭಾಗದಲ್ಲಿ, ಇದು ಡ್ಯುಯಲ್-ಟೋನ್ ಕಪ್ಪು ಮತ್ತು ಬೂದು ಕ್ಯಾಬಿನ್ ಥೀಮ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ.

  • 12.3-ಇಂಚಿನ ಡ್ಯುಯಲ್ ಪರದೆಗಳು, ಪನರೋಮಿಕ್‌ ಸನ್‌ರೂಫ್ ಮತ್ತು ಮುಂಭಾಗ ಮತ್ತು ಹಿಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್‌ಗಳಂತಹ ಸೌಕರ್ಯಗಳನ್ನು ಹೊಂದಿದೆ.

  • ಇದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಎಡಿಎಎಸ್ ಅನ್ನು ಒಳಗೊಂಡಿದೆ.

  • 1-ಲೀಟರ್ ಟರ್ಬೊ-ಪೆಟ್ರೋಲ್ ಅಥವಾ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

  • 9 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಬೆಲೆ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಹಲವು ಟೀಸರ್‌ಗಳ ನಂತರ ಕಿಯಾ ಸಿರೋಸ್‌ ಅಂತಿಮವಾಗಿ ಭಾರತದಲ್ಲಿ ಅನಾವರಣಗೊಂಡಿದೆ. ಅದರ ಬಾಕ್ಸ್ ಎಸ್‌ಯುವಿ ವಿನ್ಯಾಸದೊಂದಿಗೆ, ಇದು ಕಿಯಾದ ಎಸ್‌ಯುವಿ ಕಾರುಗಳ ಪಟ್ಟಿಯಲ್ಲಿ ಕಿಯಾ ಸೋನೆಟ್ ಮತ್ತು ಕಿಯಾ ಸೆಲ್ಟೋಸ್ ನಡುವೆ ಸ್ಥಾನವನ್ನು ಹೊಂದಿದೆ. ಅಸ್ತಿತ್ವದಲ್ಲಿರುವ ಕಿಯಾ ಎಸ್‌ಯುವಿಗಳೊಂದಿಗೆ ಅಥವಾ ಸಬ್‌-4 ಮೀಟರ್ ಸೆಗ್ಮೆಂಟ್‌ನಲ್ಲಿ ಮಾಡೆಲ್‌ಗಳಲ್ಲಿ ನೀಡಲಾಗುತ್ತಿರುವ ಇನ್ನೂ ಕೆಲವು ಪ್ರೀಮಿಯಂ ಫೀಚರ್‌ಗಳೊಂದಿಗೆ ಸಿರೋಸ್‌ ಅನ್ನು ಕಿಯಾ ಸಜ್ಜುಗೊಳಿಸಿದೆ. ಆದರೂ, ಇದು ಸೋನೆಟ್‌ನಿಂದ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್ ಆಯ್ಕೆಗಳನ್ನು ಎರವಲು ಪಡೆಯುತ್ತದೆ.

ಸಿರೋಸ್‌ ಅನ್ನು HTK, HTK (ಒಪ್ಶನಲ್‌), HTK ಪ್ಲಸ್, HTX, HTX ಪ್ಲಸ್, ಮತ್ತು HTX ಪ್ಲಸ್ (ಒಪ್ಶನಲ್‌) ಆರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ. ಕಿಯಾವಿ 2025ರ ಜನವರಿ 3ರಿಂದ ಸಿರೋಸ್‌ ಎಸ್‌ಯುವಿಗಾಗಿ ಆರ್ಡರ್‌ಗಳನ್ನು ತೆರೆಯಲು ಪ್ರಾರಂಭಿಸಲಿದೆ, ಅದರ ಬೆಲೆಗಳನ್ನು ಮುಂದಿನ ತಿಂಗಳು ಘೋಷಿಸುವ ನಿರೀಕ್ಷೆಯಿದೆ. 2025ರ ಫೆಬ್ರವರಿಯಿಂದ ಸಿರೋಸ್‌ನ ಡೆಲಿವೆರಿಗಳು ಪ್ರಾರಂಭವಾಗಲಿವೆ.

ಸಿರೋಸ್‌ ಏನನ್ನು ನೀಡುತ್ತದೆ ಎಂಬುದನ್ನು ವಿವರವಾಗಿ ನೋಡೋಣ.

ಡಿಸೈನ್‌

ಕಿಯಾ ಸಿರೋಸ್ ಸಾಂಪ್ರದಾಯಿಕ ಬಾಕ್ಸಿ ಎಸ್‌ಯುವಿ ವಿನ್ಯಾಸವನ್ನು ಹೊಂದಿದೆ, ಕಿಯಾ ಇವಿ9ನಿಂದ ಸ್ಪಷ್ಟ ಸ್ಫೂರ್ತಿ ಹೊಂದಿದೆ. ಮುಂಭಾಗದಲ್ಲಿ, ಇದು ಲಂಬವಾಗಿ ಜೋಡಿಸಲಾದ 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. ಬದಿಗಳಲ್ಲಿ, ಇದು ದೊಡ್ಡ ವಿಂಡೋ ಪ್ಯಾನಲ್‌ಗಳು, ಸಿ-ಪಿಲ್ಲರ್ ಬಳಿ ಕಿಂಕ್ಡ್ ಬೆಲ್ಟ್‌ಲೈನ್ ಮತ್ತು 17-ಇಂಚಿನ ಅಲಾಯ್‌ ವೀಲ್‌ಗಳನ್ನು ಹೊಂದಿರುವ ಸ್ಕ್ವೇರ್-ಆಫ್ ವೀಲ್ ಆರ್ಚ್‌ಗಳನ್ನು ಪಡೆಯುತ್ತದೆ. ಇದು ಪ್ರಮುಖ ಶಾಲ್ಡರ್‌ ಲೈನ್‌ ಮತ್ತು ಫ್ಲಶ್ ಮಾದರಿಯ ಡೋರ್‌ ಹ್ಯಾಂಡಲ್‌ಗಳನ್ನು ಹೊಂದಿದೆ. ಸಿರೋಸ್ ಕಿಯಾ ಇಂಡಿಯಾದ ಲೈನ್‌ಆಪ್‌ನಲ್ಲಿ ಈ ಡೋರ್ ಹ್ಯಾಂಡಲ್‌ಗಳೊಂದಿಗೆ ಬರುವ ಮೊದಲ ICE (ಆಂತರಿಕ ದಹನಕಾರಿ ಎಂಜಿನ್) ಮೊಡೆಲ್‌ ಆಗಿದೆ. ಮತ್ತೊಂದು ವಿಶಿಷ್ಟ ವಿನ್ಯಾಸದ ಅಂಶವೆಂದರೆ ಬಾಡಿ ಬಣ್ಣದ ಬಿ-ಪಿಲ್ಲರ್ ಡೋರ್ ಪಿಲ್ಲರ್‌ಗಳ ಉಪಸ್ಥಿತಿ. ಹಿಂಭಾಗದಲ್ಲಿ, ಸಿರೋಸ್ ನಯವಾದ L-ಆಕಾರದ ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು ಫ್ಲಾಟ್ ಟೈಲ್‌ಗೇಟ್ ಅನ್ನು ಪಡೆಯುತ್ತದೆ.

ಕ್ಯಾಬಿನ್‌ ಮತ್ತು ಫೀಚರ್‌ಗಳು

ಒಳಗೆ ಗಮನಿಸುವಾಗ, ಸಿರೋಸ್‌ನ ಡ್ಯಾಶ್‌ಬೋರ್ಡ್ ವಿನ್ಯಾಸವು Kia EV9 ನಿಂದ ಪ್ರೇರಿತವಾಗಿದೆ. ಇದು ಲೆಥೆರೆಟ್ ಸೀಟ್‌ಗಳ ಜೊತೆಗೆ ಡ್ಯುಯಲ್-ಟೋನ್ ಕಪ್ಪು ಮತ್ತು ಬೂದು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ. ಕಿಯಾ ಇದಕ್ಕೆ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಸಹ ಒದಗಿಸಿದೆ.

ಫೀಚರ್‌ಗಳ ವಿಷಯದಲ್ಲಿ, ಇದು 12.3-ಇಂಚಿನ ಡ್ಯುಯಲ್ ಸ್ಕ್ರೀನ್‌ (ಒಂದು ಇನ್ಫೋಟೈನ್‌ಮೆಂಟ್‌ಗೆ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), 5-ಇಂಚಿನ ಇಂಚಿನ ಹವಾಮಾನ ಕಂಟ್ರೋಲ್‌ ಅನ್ನು ಡ್ಯುಯಲ್ ಡಿಸ್‌ಪ್ಲೇಗಳ ನಡುವೆ ಸಂಯೋಜಿಸಲಾಗಿದೆ, 4-ವೇ ಚಾಲಿತ ಡ್ರೈವರ್ ಸೀಟ್ ಮತ್ತು ಡ್ಯುಯಲ್-ಝೋನ್‌ ಎಸಿಗಳನ್ನು ಹೊಂದಿದೆ. ಇದು 64-ಬಣ್ಣದ ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಮತ್ತು ರಿಯರ್ ಸೀಟ್‌ಗಳು, ರಿಮೋಟ್ ವಿಂಡೋ ಅಪ್/ಡೌನ್ ಪವರ್ ವಿಂಡೋಗಳು, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಮತ್ತು 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ಸಿರೋಸ್‌ನಲ್ಲಿರುವ ಸುರಕ್ಷತಾ ಫೀಚರ್‌ಗಳು 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ. ಇದರ ಸುರಕ್ಷತಾ ಕಿಟ್ ಡ್ಯುಯಲ್ ಕ್ಯಾಮೆರಾ ಡ್ಯಾಶ್‌ಕ್ಯಾಮ್ ಮತ್ತು ಆಟೋ ಹೋಲ್ಡ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಒಳಗೊಂಡಿದೆ.

ಪವರ್‌ಟ್ರೇನ್‌ ಆಯ್ಕೆಗಳು

ಕಿಯಾ ಸಿರೋಸ್ ಅನ್ನು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ನೀಡುತ್ತಿದೆ. ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1-ಲೀಟರ್‌ ಟರ್ಬೋ ಪೆಟ್ರೋಲ್‌

1.5-ಲೀಟರ್‌ ಡೀಸೆಲ್‌

ಪವರ್‌

120 ಪಿಎಸ್‌

116 ಪಿಎಸ್‌

ಟಾರ್ಕ್‌

172 ಎನ್‌ಎಮ್‌

250 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನ್ಯುವಲ್‌, 7-ಸ್ಪೀಡ್ ಡಿಸಿಟಿ

6-ಸ್ಪೀಡ್ ಮ್ಯಾನ್ಯುವಲ್‌, 6-ಸ್ಪೀಡ್ AT

ಡಿಸಿಟಿ - ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

AT - ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್

ಸೋನೆಟ್ ಮತ್ತು ಸೆಲ್ಟೋಸ್‌ನಲ್ಲಿ ಲಭ್ಯವಿರುವ 1.2-ಲೀಟರ್ ಅಥವಾ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ಕಿಯಾ ಸಿರೋಸ್‌ ಪಡೆಯುವುದಿಲ್ಲ.

ಪವರ್‌ಟ್ರೇನ್ ಆಯ್ಕೆಗಳು ವೇರಿಯೆಂಟ್‌ಗಳಲ್ಲಿ ಹೇಗೆ ಲಭ್ಯವಿರಲಿದೆ ಎಂಬುದು ಇಲ್ಲಿದೆ:

ವೇರಿಯೆಂಟ್‌ಗಳು

1–ಲೀಟರ್ ಟರ್ಬೊ ಪೆಟ್ರೋಲ್ ಮ್ಯಾನುವಲ್‌

1–ಲೀಟರ್ ಟರ್ಬೊ ಪೆಟ್ರೋಲ್ ಡಿಸಿಟಿ

1.5-ಲೀಟರ್ ಡೀಸೆಲ್‌ ಮ್ಯಾನ್ಯುವಲ್‌

1.5-ಲೀಟರ್ ಆಟೋಮ್ಯಾಟಿಕ್‌

ಎಚ್‌ಟಿಕೆ

ಎಚ್‌ಟಿಕೆ (ಒಪ್ಶನಲ್‌)

ಎಚ್‌ಟಿಕೆ ಪ್ಲಸ್

ಎಚ್‌ಟಿಎಕ್ಸ್

ಎಚ್‌ಟಿಎಕ್ಸ್ ಪ್ಲಸ್

ಎಚ್‌ಟಿಎಕ್ಸ್ ಪ್ಲಸ್ (ಒಪ್ಶನಲ್‌)

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಕಿಯಾ ಸಿರೋಸ್ ಆರಂಭಿಕ ಬೆಲೆಯು ರೂ 9 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ, ಆದರೆ ಇದು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 3XO, ಮತ್ತು ಹ್ಯುಂಡೈ ವೆನ್ಯೂ ಮುಂತಾದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ವಾಹನ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Kia ಸಿರೋಸ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.7.89 - 14.40 ಲಕ್ಷ*
ಫೇಸ್ ಲಿಫ್ಟ್
Rs.46.89 - 48.69 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10 - 19.52 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ