Login or Register ಅತ್ಯುತ್ತಮ CarDekho experience ಗೆ
Login

Kia Syrosನ ಕ್ಲೈಮ್‌ ಮಾಡಲಾದ ಮೈಲೇಜ್‌ ಅಂಕಿಅಂಶಗಳು ಬಹಿರಂಗ

ಕಿಯಾ ಸಿರೋಸ್‌ ಗಾಗಿ dipan ಮೂಲಕ ಜನವರಿ 27, 2025 05:20 pm ರಂದು ಪ್ರಕಟಿಸಲಾಗಿದೆ

ಸಿರೋಸ್‌ನಲ್ಲಿರುವ ಡೀಸೆಲ್-ಮ್ಯಾನುಯಲ್ ಕಾಂಬಿನೇಶನ್‌ ಇದರ ವೇರಿಯೆಂಟ್‌ ಪಟ್ಟಿಗಳಲ್ಲಿ ಅತ್ಯಂತ ಮಿತವ್ಯಯದ ಆಯ್ಕೆಯಾಗಿದೆ

  • ಸಿರೋಸ್‌ಅನ್ನು 1.5-ಲೀಟರ್ ಡೀಸೆಲ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

  • ಡೀಸೆಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

  • ಸಿರೋಸ್ ಡೀಸೆಲ್-ಮ್ಯಾನುವಲ್ ವೇರಿಯೆಂಟ್‌ನಲ್ಲಿ 20.75 ಕಿಮೀ ಮತ್ತು ಡೀಸೆಲ್-ಆಟೋಮ್ಯಾಟಿಕ್‌ ವೇರಿಯೆಂಟ್‌ನಲ್ಲಿ 17.65 ಕಿಮೀಯಷ್ಟು ಮೈಲೇಜ್ ನೀಡುತ್ತದೆ.

  • ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ಆಯ್ಕೆಯೊಂದಿಗೆ ಜೋಡಿಸಲಾಗಿದೆ.

  • ಟರ್ಬೊ-ಪೆಟ್ರೋಲ್ ಆಯ್ಕೆಯೊಂದಿಗೆ ಮ್ಯಾನ್ಯುವಲ್‌ 18.20 ಕಿ.ಮೀ ಮತ್ತು ಡಿಸಿಟಿ 17.68 ಕಿ.ಮೀ.ಯಷ್ಟು ಮೈಲೇಜ್‌ ನೀಡುತ್ತದೆ.

  • ಸಿರೋಸ್‌ನ ಬೆಲೆಗಳನ್ನು 2025ರ ಫೆಬ್ರವರಿ 1ರಂದು ಬಹಿರಂಗಪಡಿಸಲಾಗುವುದು.

ಫೆಬ್ರವರಿ 1ರಂದು ಬಿಡುಗಡೆಯಾಗುವ ಮುನ್ನವೇ ಕಿಯಾ ಸಿರೋಸ್ ಈಗಾಗಲೇ ಡೀಲರ್‌ಶಿಪ್‌ಗಳನ್ನು ತಲುಪಿದೆ. ಹಾಗೆಯೇ, ಕಾರು ತಯಾರಕರು ಈಗ ಸಬ್-4ಎಮ್‌ ಎಸ್‌ಯುವಿಯ ಪವರ್‌ಟ್ರೇನ್‌-ವಾರು ಇಂಧನ ದಕ್ಷತೆಯ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ. ವಿವರಗಳಿಗೆ ಹೋಗುವ ಮೊದಲು, ಸೈರೋಸ್ ನೀಡುವ ಪವರ್‌ಟ್ರೇನ್ ಆಯ್ಕೆಗಳನ್ನು ಗಮನಿಸೋಣ:

ಕಿಯಾ ಸಿರೋಸ್: ಪವರ್‌ಟ್ರೇನ್ ಆಯ್ಕೆಗಳು

ಕಿಯಾ ಸಿರೋಸ್‌ಅನ್ನು ಕಿಯಾ ಸೋನೆಟ್‌ನಲ್ಲಿ ನೀಡಲಾಗುವ 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್‌ ಪೆಟ್ರೋಲ್‌ ಎಂಜಿನ್‌ ಆಯ್ಕೆಯೊಂದಿಗೆ ಲಭ್ಯವಿದೆ, ಇವುಗಳ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.5-ಲೀಟರ್ ಡೀಸೆಲ್

1-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

116 ಪಿಎಸ್‌

120 ಪಿಎಸ್‌

ಟಾರ್ಕ್‌

250 ಎನ್‌ಎಮ್‌

172 ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್ ಮ್ಯಾನ್ಯುವಲ್‌ / 6-ಸ್ಪೀಡ್ AT*

6-ಸ್ಪೀಡ್ ಮ್ಯಾನ್ಯುವಲ್‌ / 7-ಸ್ಪೀಡ್ DCT^

*AT = ಟಾರ್ಕ್‌ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

^DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ಈಗ ಕಿಯಾ ಸಬ್-4ಮೀ ಎಸ್‌ಯುವಿಯಾದ ಸಿರೋಸ್‌ನ ಪವರ್‌ಟ್ರೇನ್‌ವಾರು ಇಂಧನ-ದಕ್ಷತೆಯ ಅಂಕಿಅಂಶಗಳನ್ನು ನೋಡೋಣ.

ಕಿಯಾ ಸಿರೋಸ್: ಕ್ಲೈಮ್‌ ಮಾಡಿದ ಮೇಲೇಜ್‌

1.5-ಲೀಟರ್ ಡೀಸೆಲ್

1-ಲೀಟರ್ ಟರ್ಬೊ-ಪೆಟ್ರೋಲ್

ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌

ಪ್ರತಿ ಲೀ.ಗೆ 20.75 ಕಿ.ಮೀ.

ಪ್ರತಿ ಲೀ.ಗೆ 18.20 ಕಿ.ಮೀ.

ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

ಪ್ರತಿ ಲೀ.ಗೆ 17.65 ಕಿ.ಮೀ. (AT)

ಪ್ರತಿ ಲೀ.ಗೆ 17.68 ಕಿ.ಮೀ. (DCT)

  • ಸಿರೋಸ್ ವೇರಿಯೆಂಟ್‌ಗಳಲ್ಲಿ ಡೀಸೆಲ್-ಮ್ಯಾನುಯಲ್ ಕಾಂಬಿನೇಷನ್‌ ಅತ್ಯಂತ ಮಿತವ್ಯಯದ ಆಯ್ಕೆಯಾಗಿದ್ದು, ಪ್ರತಿ ಲೀಟರ್‌ಗೆ 20.75 ಕಿಮೀ ಮೈಲೇಜ್ ನೀಡುತ್ತದೆ ಎಂದು ಕೋಷ್ಟಕವು ಸೂಚಿಸುತ್ತದೆ.

  • ಇಂಧನ ದಕ್ಷತೆಯ ವಿಷಯದಲ್ಲಿ ಟರ್ಬೊ-ಪೆಟ್ರೋಲ್-ಮ್ಯಾನುಯಲ್ ಆಯ್ಕೆಯು ಎರಡನೇ ಅತ್ಯುತ್ತಮವಾಗಿದ್ದು, ಇದು ಪ್ರತಿ ಲೀ.ಗೆ 18.20 ಕಿ.ಮೀ.ಯಷ್ಟು ಮೈಲೇಜ್‌ ಅನ್ನು ನೀಡುತ್ತದೆ.

  • ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆ ಹೊಂದಿರುವ ಎರಡೂ ಎಂಜಿನ್ ಆಯ್ಕೆಗಳ ಇಂಧನ ದಕ್ಷತೆಯ ಆಯ್ಕೆಗಳು ಬಹುತೇಕ ಒಂದೇ ಆಗಿರುತ್ತವೆ.

ಇದನ್ನೂ ಓದಿ: ಕಿಯಾ Sonet, Seltos ಮತ್ತು Carens ಗೆ ಹೊಸ ವೇರಿಯೆಂಟ್‌ಗಳ ಸೇರ್ಪಡೆ ಹಾಗೂ ಬೆಲೆಗಳಲ್ಲಿ ಹೆಚ್ಚಳ

ಕಿಯಾ ಸಿರೋಸ್: ಒಂದು ಅವಲೋಕನ

ಕಿಯಾ ಸಿರೋಸ್ ಕೊರಿಯಾದ ಕಾರು ತಯಾರಕರ ಮಾರುಕಟ್ಟೆಯಲ್ಲಿನ ಹೆಚ್ಚು ಪ್ರೀಮಿಯಂ ಸಬ್ -4ಎಮ್‌ ಎಸ್‌ಯುವಿಯಾಗಿದ್ದು, ಇದು ಪಿಕ್ಸೆಲ್ ಆಕಾರದ ಹೆಡ್‌ಲೈಟ್‌ಗಳು, ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳೊಂದಿಗೆ ಬಾಕ್ಸಿ ವಿನ್ಯಾಸದೊಂದಿಗೆ ಬರುತ್ತದೆ.

ಒಳಭಾಗದಲ್ಲಿ, ಇದು ಡ್ಯುಯಲ್-ಟೋನ್ ಕ್ಯಾಬಿನ್‌ನೊಂದಿಗೆ ಬರುತ್ತದೆ, ಆದರೆ ಆಯ್ಕೆ ಮಾಡಿದ ವೇರಿಯೆಂಟ್‌ ಮೇಲೆ ಥೀಮ್ ಅವಲಂಬಿಸಿರುತ್ತದೆ. ಇದು ಡ್ಯುಯಲ್ 12.3-ಇಂಚಿನ ಸ್ಕ್ರೀನ್‌ಗಳು (ಒಂದು ಟಚ್‌ಸ್ಕ್ರೀನ್‌ಗೆ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗೆ), AC ಕಂಟ್ರೋಲ್‌ಗಳಿಗಾಗಿ 5-ಇಂಚಿನ ಟಚ್-ಸಕ್ರಿಯಗೊಳಿಸಿದ ಸ್ಕ್ರೀನ್‌, ಪನೋರಮಿಕ್ ಸನ್‌ರೂಫ್ ಮತ್ತು ಚಾಲಿತ ಮುಂಭಾಗದ ಸೀಟುಗಳಂತಹ ಪ್ರೀಮಿಯಂ ಫೀಚರ್‌ಗಳನ್ನು ಪಡೆಯುತ್ತದೆ. ಇದಲ್ಲದೆ, ಹಿಂಭಾಗದ ಸೀಟುಗಳು ಒರಗುವ ಮತ್ತು ಜಾರುವ ಫಂಕ್ಷನ್‌ ಅನ್ನು ಸಹ ಪಡೆಯುತ್ತವೆ, ಇದು ಈ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.

ಸುರಕ್ಷತೆಯ ವಿಷಯದಲ್ಲಿ, ಕಿಯಾ ಸೈರೋಸ್ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಮುಂಭಾಗ, ಹಿಂಭಾಗ ಮತ್ತು ಪಕ್ಕದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ಬರುತ್ತದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್ ಸೇರಿದ ಫೀಚರ್‌ಗಳೊಂದಿಗೆ ಲೆವೆಲ್ 2 ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಸೂಟ್ ಅನ್ನು ಒಳಗೊಂಡಿದೆ.

ಕಿಯಾ ಸಿರೋಸ್: ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಕಿಯಾ ಸಿರೋಸ್ ಬೆಲೆಗಳು 9.70 ಲಕ್ಷ ರೂ.ಗಳಿಂದ 16.50 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ. ಇದು ಸಬ್-4ಎಮ್‌ ಎಸ್‌ಯುವಿಗಳು ಮತ್ತು ಕಾಂಪ್ಯಾಕ್ಟ್ ಎಸ್‌ಯುವಿಗಳಾದ ಕಿಯಾ ಸೋನೆಟ್, ಮಾರುತಿ ಬ್ರೆಝಾ, ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಟಾಟಾ ನೆಕ್ಸನ್, ಮಹೀಂದ್ರಾ ಎಕ್ಸ್‌ಯುವಿ 3XO, ಮತ್ತು ಕಿಯಾ ಸೆಲ್ಟೋಸ್‌ನಂತಹ ಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Kia ಸಿರೋಸ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ