Login or Register ಅತ್ಯುತ್ತಮ CarDekho experience ಗೆ
Login

Kia Syros ಭಾರತದಲ್ಲಿ ಬಿಡುಗಡೆ, ಬೆಲೆಗಳು 9 ಲಕ್ಷ ರೂ.ಗಳಿಂದ ಪ್ರಾರಂಭ

ಕಿಯಾ ಸಿರೋಸ್‌ ಗಾಗಿ anonymous ಮೂಲಕ ಫೆಬ್ರವಾರಿ 01, 2025 02:51 pm ರಂದು ಪ್ರಕಟಿಸಲಾಗಿದೆ

ಸಿರೋಸ್ ನಮ್ಮ ಮಾರುಕಟ್ಟೆಯಲ್ಲಿ ಕಿಯಾದ ಎರಡನೇ ಸಬ್-4ಎಮ್‌ ಎಸ್‌ಯುವಿಯಾಗಿದ್ದು, ವಿಶಿಷ್ಟವಾದ ಬಾಕ್ಸಿ ವಿನ್ಯಾಸ ಹೊಂದಿರುವ ಅಪ್‌ಮಾರ್ಕೆಟ್ ಕ್ಯಾಬಿನ್‌ನೊಂದಿಗೆ ಚಾಲಿತ ವೆಂಟಿಲೇಟೆಡ್ ಸೀಟುಗಳಂತಹ ತಂತ್ರಜ್ಞಾನ ಮತ್ತು ಲೆವೆಲ್-2 ADAS ಅನ್ನು ಒಳಗೊಂಡಿದೆ

  • ಸಿರೋಸ್ ಕಿಯಾದ ಹೊಸ ಎಸ್‌ಯುವಿ ಆಗಿದ್ದು, ಭಾರತದಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ನಡುವೆ ಸ್ಥಾನ ಪಡೆಯಲಿದೆ.

  • ಉನ್ನತ ಸೌಲಭ್ಯಗಳಲ್ಲಿ12.3-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು, ಪನೋರಮಿಕ್ ಸನ್‌ರೂಫ್ ಮತ್ತು ಲೆವೆಲ್-2 ADAS ಸೇರಿವೆ.

  • ಇದನ್ನು ಆರು ವಿಶಾಲ ವೇರಿಯೆಂಟ್‌ಗಳಲ್ಲಿ ಮತ್ತು ಮ್ಯಾನ್ಯುವಲ್‌ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಆಯ್ಕೆಗಳೊಂದಿಗೆ ಎರಡು ಎಂಜಿನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ.

  • ಬೆಲೆಗಳು 9 ಲಕ್ಷ ರೂ.ಗಳಿಂದ 17.80 ಲಕ್ಷ ರೂ.ಗಳವರೆಗೆ ಇರುತ್ತವೆ (ಪರಿಚಯಾತ್ಮಕ, ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ).

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಮೊದಲ ಬಾರಿಗೆ ಸಾರ್ವಜನಿಕರಿಗೆ ಪ್ರದರ್ಶಿಸಲಾದ ನಂತರ, ಕಿಯಾ ಸಿರೋಸ್ ಅಂತಿಮವಾಗಿ ಭಾರತದಲ್ಲಿ ಮಾರಾಟಕ್ಕೆ ಬಂದಿದೆ, ಇದರ ಬೆಲೆ 9 ಲಕ್ಷ ರೂ.ನಿಂದ 17.80 ಲಕ್ಷ ರೂ.ವರೆಗೆ (ಪರಿಚಯಾತ್ಮಕ ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ) ಇದೆ. ಸಿರೋಸ್‌ಗಾಗಿ ಬುಕಿಂಗ್‌ಗಳು ಈಗಾಗಲೇ ನಡೆಯುತ್ತಿದ್ದು, ಫೆಬ್ರವರಿ ಮಧ್ಯದಿಂದ ಡೆಲಿವೆರಿಗಳು ಪ್ರಾರಂಭವಾಗಲಿವೆ. ಇದನ್ನು ಆರು ವಿಶಾಲ ವೇರಿಯೆಂಟ್‌ಗಳಲ್ಲಿ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಕಿಯಾ ಸಿರೋಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಕಿಯಾ ಸಿರೋಸ್ ವೇರಿಯೆಂಟ್‌ಗಳ ಬೆಲೆಗಳು

ವೇರಿಯೆಂಟ್‌

6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ 1-ಲೀಟರ್ ಟರ್ಬೊ-ಪೆಟ್ರೋಲ್

7-ಸ್ಪೀಡ್ ಡಿಸಿಟಿಯೊಂದಿಗೆ 1-ಲೀಟರ್ ಟರ್ಬೊ-ಪೆಟ್ರೋಲ್

6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ 1.5-ಲೀಟರ್ ಡೀಸೆಲ್

6-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ 1.5-ಲೀಟರ್ ಡೀಸೆಲ್

ಹೆಚ್‌ಟಿಕೆ

9 ಲಕ್ಷ ರೂ.

-

-

-

ಹೆಚ್‌ಟಿಕೆ (ಒ)

10 ಲಕ್ಷ ರೂ.

-

11 ಲಕ್ಷ ರೂ.

-

ಹೆಚ್‌ಟಿಕೆ ಪ್ಲಸ್‌

11.50 ಲಕ್ಷ ರೂ.

12.80 ಲಕ್ಷ ರೂ.

12.50 ಲಕ್ಷ ರೂ.

-

ಹೆಚ್‌ಟಿಎಕ್ಸ್‌

13.30 ಲಕ್ಷ ರೂ.

14.60 ಲಕ್ಷ ರೂ.

14.30 ಲಕ್ಷ ರೂ.

-

ಹೆಚ್‌ಟಿಎಕ್ಸ್‌ ಪ್ಲಸ್‌

-

16 ಲಕ್ಷ ರೂ.

-

17 ಲಕ್ಷ ರೂ.

ಹೆಚ್‌ಟಿಎಕ್ಸ್‌ ಪ್ಲಸ್‌ (ಒ)

-

16.80 ಲಕ್ಷ ರೂ.

-

17.80 ಲಕ್ಷ ರೂ.

ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ

ಕಿಯಾ ಸಿರೋಸ್ ವಿನ್ಯಾಸ

ಇದು ಕಿಯಾ ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಇವಿ9 ನಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆದುಕೊಂಡಿದ್ದು, ಉಬ್ಬಿದ ನಿಲುವು ಮತ್ತು ಆಧುನಿಕ ಶೈಲಿಯನ್ನು ಹೊಂದಿದೆ. ಇದರ ಮುಂಭಾಗದ ಪ್ರೊಫೈಲ್ ನಯವಾದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಲಂಬವಾಗಿ ಜೋಡಿಸಲಾದ 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳಿಂದ ಹೈಲೈಟ್ ಆಗಿದೆ, ಎರಡೂ ಬಂಪರ್ ಪಕ್ಕದಲ್ಲಿ ಇರಿಸಲ್ಪಟ್ಟಿವೆ.

ಸೈರೋಸ್ ಬಾಕ್ಸಿ ಸೈಡ್ ಪ್ರೊಫೈಲ್ ಅನ್ನು ಹೊಂದಿದ್ದು, 17-ಇಂಚಿನ ಅಲಾಯ್ ವೀಲ್‌ಗಳ ಮೇಲೆ ಸವಾರಿ ಮಾಡುತ್ತದೆ, ಆದರೆ ದಪ್ಪವಾದ ಬಾಡಿ ಕ್ಲಾಡಿಂಗ್ ಮತ್ತು ಚೌಕಾಕಾರದ ವೀಲ್ ಆರ್ಚ್‌ಗಳಿಂದ ಅದರ ರಗಡ್‌ನೆಸ್‌ ಇನ್ನಷ್ಟು ಹೆಚ್ಚುತ್ತದೆ. ಹಿಂಭಾಗದಲ್ಲಿ, ಇದು L-ಆಕಾರದ ಎಲ್‌ಇಡಿ ಲೈಟ್‌ಗಳನ್ನು ಹೊಂದಿದೆ, ಆದರೆ ರೂಫ್‌ನ ಮೇಲೆ ಜೋಡಿಸಲಾದ ಸ್ಪಾಯ್ಲರ್ ಸ್ಪೋರ್ಟಿ ಟಚ್‌ ಅನ್ನು ನೀಡುತ್ತದೆ.

ಕಿಯಾ ಸಿರೋಸ್ ಇಂಟೀರಿಯರ್

ಒಳಭಾಗದಲ್ಲಿ, ಸಿರೋಸ್ ಲೆದರೆಟ್ ಸೀಟ್ ಕವರ್‌ನೊಂದಿಗೆ ದುಬಾರಿ ಕ್ಯಾಬಿನ್ ವಿನ್ಯಾಸ, ವಿವಿಧ ವೇರಿಯೆಂಟ್‌ಗಳಲ್ಲಿ ಬದಲಾಗುವ ಡ್ಯುಯಲ್-ಟೋನ್ ಥೀಮ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ: ಭಾರತದಲ್ಲಿಯೇ ತಯಾರಾದ 5-ಡೋರ್‌ ಮಾರುತಿ ಸುಜುಕಿ Jimny Nomade ಜಪಾನ್‌ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ?

ಕಿಯಾ ಸಿರೋಸ್‌ ಫೀಚರ್‌ಗಳು

ಫೀಚರ್‌ಗಳ ವಿಷಯದಲ್ಲಿ, ಸಿರೋಸ್ 12.3-ಇಂಚಿನ ಎರಡು ಡಿಸ್‌ಪ್ಲೇಗಳು (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಇನ್ಸ್‌ಟ್ರುಮೆಂಟೇಶನ್‌ಗಾಗಿ), ಪನೋರಮಿಕ್ ಸನ್‌ರೂಫ್ ಮತ್ತು ಮುಂಭಾಗ ಮತ್ತು ಹಿಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ ಫಂಕ್ಷನ್‌ನಿಂದ ಅಲಂಕರಿಸಲ್ಪಟ್ಟಿದೆ. ಇದು ಕ್ಲೈಮೇಟ್‌ ಕಂಟ್ರೋಲ್‌ಗಳಿಗಾಗಿ 5 ಇಂಚಿನ ಸ್ಕ್ರೀನ್‌, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 64-ಬಣ್ಣದ ಆಂಬಿಯೆಂಟ್‌ ಲೈಟಿಂಗ್‌ ಅನ್ನು ಸಹ ಪಡೆಯುತ್ತದೆ. ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಮುಂಭಾಗ, ಬದಿ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಕೆಲವು ಸುಧಾರಿತ ಚಾಲಕ ಸಹಾಯ ಸಿಸ್ಟಮ್‌ಗಳು (ADAS) ನೋಡಿಕೊಳ್ಳುತ್ತವೆ.

ಕಿಯಾ ಸಿರೋಸ್ ಪವರ್‌ಟ್ರೇನ್

ಕಿಯಾವು ಸೋನೆಟ್‌ನಂತೆಯೇ ಸಿರೋಸ್‌ಗೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಒದಗಿಸಿದ್ದು, ಅವುಗಳ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ಸ್ಪೆಶಿಫಿಕೇಶನ್‌

1-ಲೀಟರ್‌ ಟರ್ಬೋ ಪೆಟ್ರೋಲ್‌

1.5-ಲೀಟರ್‌ ಡೀಸೆಲ್‌

ಪವರ್‌

120 ಪಿಎಸ್‌

116 ಪಿಎಸ್‌

ಟಾರ್ಕ್‌

172 ಎನ್‌ಎಮ್‌

250 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನ್ಯುವಲ್‌, 7-ಸ್ಪೀಡ್ ಡಿಸಿಟಿ

6-ಸ್ಪೀಡ್ ಮ್ಯಾನ್ಯುವಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

ಕಿಯಾ ಸಿರೋಸ್ ಪ್ರತಿಸ್ಪರ್ಧಿಗಳು

ಇದು ಸ್ಕೋಡಾ ಕೈಲಾಕ್, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 3XO, ಮತ್ತು ಟಾಟಾ ನೆಕ್ಸಾನ್‌ನಂತಹ ಇತರ ಸಬ್-4ಎಮ್‌ ಎಸ್‌ಯುವಿಗಳೊಂದಿಗೆ ಸ್ಪರ್ಧಿಸಲಿದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Kia ಸಿರೋಸ್‌

M
malavath rajesh kumar
Feb 3, 2025, 9:03:41 PM

Top model price

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ