• English
  • Login / Register

ಫೆಬ್ರವರಿಯಲ್ಲಿ ನಿಗದಿಯಾಗಿರುವ ಬಿಡುಗಡೆಗೂ ಮುನ್ನವೇ Kia Syrosನ ಪ್ರದರ್ಶನ

ಕಿಯಾ syros ಗಾಗಿ shreyash ಮೂಲಕ ಜನವರಿ 19, 2025 04:54 pm ರಂದು ಪ್ರಕಟಿಸಲಾಗಿದೆ

  • 12 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಿಯಾ ಸಿರೋಸ್ ಸಾಂಪ್ರದಾಯಿಕ ಬಾಕ್ಸಿ ಎಸ್‌ಯುವಿ ವಿನ್ಯಾಸವನ್ನು ಹೊಂದಿದ್ದು, ಕಿಯಾ ಇವಿ9ನಿಂದ ಸ್ಪಷ್ಟ ಸ್ಫೂರ್ತಿ ಪಡೆದಿದೆ ಮತ್ತು ಸಾಕಷ್ಟು ದುಬಾರಿ ಫೀಚರ್‌ಗಳನ್ನು ಹೊಂದಿದೆ

Kia Syros Showcased At Auto Expo 2025 Ahead Of Launch In February

  • ಕಿಯಾ ಸಿರೋಸ್‌ಗಾಗಿ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿದ್ದು, ಇದಕ್ಕಾಗಿ 25,000 ರೂ.ಗಳನ್ನು ನೀಡಿ ಕಾಯ್ದಿರಿಸಬಹುದು.

  • ಫೆಬ್ರವರಿ ಮಧ್ಯಭಾಗದಲ್ಲಿ ಡೆಲಿವೆರಿಗಳು ಪ್ರಾರಂಭವಾಗುವ ಮೊದಲು 2025ರ ಫೆಬ್ರವರಿ 1ರಂದು ಬೆಲೆಗಳನ್ನು ಘೋಷಿಸಲಾಗುವುದು.

  • 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು, L-ಆಕಾರದ ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಹೊರಭಾಗದ ಹೈಲೈಟ್‌ಗಳಲ್ಲಿ ಸೇರಿವೆ.

  • 12.3-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ಮುಂಭಾಗ ಮತ್ತು ಹಿಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್‌ ಸೌಲಭ್ಯಗಳೊಂದಿಗೆ ಬರುತ್ತದೆ.

  • ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ADAS ಸೇರಿವೆ.

  • 1-ಲೀಟರ್ ಟರ್ಬೊ-ಪೆಟ್ರೋಲ್ ಅಥವಾ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಬಳಸುತ್ತದೆ.

  • 9.70 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಬೆಲೆಗಳನ್ನು ನಿಗದಿಯಾಗಿದೆ.

ಕಿಯಾದ  ಭಾರತೀಯ ಮೊಡೆಲ್‌ಗಳಲ್ಲಿನ ಸಂಪೂರ್ಣ ಹೊಸ ಸಬ್-4ಎಮ್‌ ಎಸ್‌ಯುವಿಯಾದ ಕಿಯಾ ಸಿರೋಸ್‌, ಇದು ಈಗಾಗಲೇ ಲಭ್ಯವಿರುವ ಕಿಯಾ ಸೋನೆಟ್ ಮತ್ತು ಕಿಯಾ ಸೆಲ್ಟೋಸ್ ನಡುವೆ ಸ್ಥಾನ ಪಡೆದಿದೆ. ಸಿರೋಸ್‌ಗಾಗಿ ಬುಕಿಂಗ್‌ಗಳು ಈಗಾಗಲೇ ನಡೆಯುತ್ತಿದ್ದು, ಅದರ ಬೆಲೆಗಳನ್ನು 2025ರ ಫೆಬ್ರವರಿಯಲ್ಲಿ ಘೋಷಿಸಲಾಗುವುದು. ಬಿಡುಗಡೆಗೂ ಮುನ್ನ, ಕಿಯಾ ಈಗ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಮೊದಲ ಬಾರಿಗೆ ಸಿರೋಸ್ ಅನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದೆ. ಸಿರೋಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

EV9-ಪ್ರೇರಿತ ವಿನ್ಯಾಸ

Kia Syros

ಕಿಯಾ ಸಿರೋಸ್‌ ಕಿಯಾ EV9 ನಿಂದ ಪ್ರೇರಿತವಾದ ಸಾಕಷ್ಟು ವಿನ್ಯಾಸ ಅಂಶಗಳನ್ನು ಹೊಂದಿರುವ ಎತ್ತರದ ಎಸ್‌ಯುವಿ ಬಾಡಿಶೈಲಿಯನ್ನು ಹೊಂದಿದೆ. ಎಕ್ಸ್‌ಟೀರಿಯರ್‌ನ ಹೈಲೈಟ್‌ಗಳಲ್ಲಿ ಲಂಬವಾಗಿ ಜೋಡಿಸಲಾದ 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಮುಂಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳು ಸೇರಿವೆ. ಸೈಡ್‌ನಿಂದ , ಇದು ದೊಡ್ಡ ಕಿಟಕಿ ಫಲಕಗಳು, ಸಿ-ಪಿಲ್ಲರ್ ಬಳಿ ಕಿಂಕ್ಡ್ ಬೆಲ್ಟ್‌ಲೈನ್ ಮತ್ತು 17-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿರುವ ಚೌಕಾಕಾರದ ವೀಲ್‌ ಆರ್ಚ್‌ಗಳನ್ನು ಪಡೆಯುತ್ತದೆ. ಸಿರೋಸ್, ಕಿಯಾ ಇಂಡಿಯಾದ ಮೊಡೆಲ್‌ಗಳಲ್ಲಿ ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳೊಂದಿಗೆ ಬರುವ ಮೊದಲ ICE (ಇಂಧನ ಚಾಲಿತ ಎಂಜಿನ್‌) ಮೊಡೆಲ್‌ ಆಗಿದೆ. ಹಿಂಭಾಗದಲ್ಲಿ, ಸಿರೋಸ್ ನಯವಾದ ಎಲ್‌-ಆಕಾರದ ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು ಫ್ಲಾಟ್ ಟೈಲ್‌ಗೇಟ್ ಅನ್ನು ಪಡೆಯುತ್ತದೆ.

ಕ್ಯಾಬಿನ್ ಮತ್ತು ಫಿಚರ್‌ಗಳು

ಇದು ಲೆಥೆರೆಟ್ ಸೀಟುಗಳೊಂದಿಗೆ ಡ್ಯುಯಲ್-ಟೋನ್ ಕಪ್ಪು ಮತ್ತು ಬೂದು ಬಣ್ಣದ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ. ಕಿಯಾ ಇದಕ್ಕೆ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಸಹ ಒದಗಿಸಿದೆ. ಫೀಚರ್‌ಗಳ ಪಟ್ಟಿಯಲ್ಲಿ, ಇದು 12.3-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), ಕ್ಲೈಮೇಟ್‌ ಕಂಟ್ರೋಲ್‌ಗಾಗಿ ಡ್ಯುಯಲ್ ಡಿಸ್‌ಪ್ಲೇಗಳ ನಡುವೆ ಸಂಯೋಜಿಸಲಾದ 5-ಇಂಚಿನ ಸ್ಕ್ರೀನ್‌, ಆಟೋ ಎಸಿ, 4-ವೇ ಚಾಲಿತ ಡ್ರೈವರ್ ಸೀಟ್ ಅನ್ನು ಹೊಂದಿದೆ. ಇದು 64-ಬಣ್ಣದ ಆಂಬಿಯೆಂಟ್ ಲೈಟಿಂಗ್,  ಮುಂಭಾಗ ಮತ್ತು ಹಿಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌, ಒಂದು ಟಚ್ ಅಪ್/ಡೌನ್ ಪವರ್ ವಿಂಡೋಗಳು, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಮತ್ತು 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಲೆವೆಲ್ 2 ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ನೋಡಿಕೊಳ್ಳುತ್ತವೆ. ಇದರ ಸುರಕ್ಷತಾ ಕಿಟ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಡ್ಯಾಶ್‌ಕ್ಯಾಮ್ ಮತ್ತು ಆಟೋ ಹೋಲ್ಡ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಕೂಡ ಸೇರಿವೆ.

ಪವರ್‌ಟ್ರೇನ್ ಆಯ್ಕೆಗಳು

ಕಿಯಾ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಸಿರೋಸ್ ಅನ್ನು ನೀಡುತ್ತಿದೆ. ಇದರ ವಿಶೇಷಣಗಳು ಈ ಕೆಳಗಿನಂತಿವೆ:

Kia Syros 1-litre turbo-petrol engine

ಎಂಜಿನ್‌

1-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್‌

120 ಪಿಎಸ್‌

116 ಪಿಎಸ್‌

ಟಾರ್ಕ್‌

172 ಎನ್‌ಎಮ್‌

250 ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್ ಮ್ಯಾನ್ಯುವಲ್‌, 7-ಸ್ಪೀಡ್ ಡಿಸಿಟಿ

6-ಸ್ಪೀಡ್ ಮ್ಯಾನ್ಯುವಲ್‌, 6-ಸ್ಪೀಡ್ ಎಟಿ

ಡಿಸಿಟಿ - ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

ಎಟಿ - ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

ಸೋನೆಟ್ ಮತ್ತು ಸೆಲ್ಟೋಸ್‌ಗಿಂತ ಭಿನ್ನವಾಗಿ, ಕಿಯಾ ಸೈರೋಸ್ 1.2-ಲೀಟರ್ ಅಥವಾ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ಪಡೆಯುವುದಿಲ್ಲ.

ನಿರೀಕ್ಷಿತ ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

 ಕಿಯಾ ಸಿರೋಸ್‌ನ ಬೆಲೆ 9.70 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ, ಆದರೆ ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 3XO, ಮತ್ತು ಹ್ಯುಂಡೈ ವೆನ್ಯೂಗಳಂತಹ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಆಟೋಮೋಟಿವ್ ಜಗತ್ತಿನಿಂದ ಕ್ಷಣಕ್ಷಣದ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Kia syros

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience