• English
  • Login / Register

Kia Syrosನ ಮತ್ತೊಂದು ಟೀಸರ್‌ ಔಟ್‌, ಈ ಬಾರಿ ಯಾವ ಅಂಶ ಬಹಿರಂಗ?

ಕಿಯಾ syros ಗಾಗಿ shreyash ಮೂಲಕ ಡಿಸೆಂಬರ್ 16, 2024 04:39 pm ರಂದು ಪ್ರಕಟಿಸಲಾಗಿದೆ

  • 64 Views
  • ಕಾಮೆಂಟ್‌ ಅನ್ನು ಬರೆಯಿರಿ

ಸಿರೋಸ್‌ ಬಾಕ್ಸ್ ಎಸ್‌ಯುವಿ ವಿನ್ಯಾಸವನ್ನು ಹೊಂದಿರುತ್ತದೆ ಮತ್ತು ಕಿಯಾ ಸೊನೆಟ್‌ ಮತ್ತು ಕಿಯಾ ಸೆಲ್ಟೋಸ್‌ನ ನಡುವೆ ಸ್ಥಾನ ಪಡೆಯುತ್ತದೆ

Kia Syros Teased Again, Silhouette Shown In Greater Detail

  • ಡಿಸೆಂಬರ್ 19 ರಂದು ಸಿರೋಸ್ ಭಾರತಕ್ಕೆ ಪಾದಾರ್ಪಣೆ ಮಾಡಲಿದೆ.

  • ಕಿಯಾವು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಮತ್ತು ಪನರೋಮಿಕ್‌ ಸನ್‌ರೂಫ್‌ನೊಂದಿಗೆ ಸಿರೋಸ್ ಅನ್ನು ನೀಡುತ್ತದೆ.

  • ಬೋರ್ಡ್‌ನಲ್ಲಿರುವ ಫೀಚರ್‌ಗಳು ಡ್ಯುಯಲ್-ಡಿಜಿಟಲ್ ಡಿಸ್‌ಪ್ಲೇಗಳು, ವೆಂಟಿಲೇಶನ್‌ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿರಬಹುದು.

  • ಕಿಯಾ ಸೋನೆಟ್‌ನಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯಬಹುದು.

  • ಬೆಲೆಗಳು 9 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಕಿಯಾ ಸಿರೋಸ್ ಭಾರತದಲ್ಲಿನ ಕೊರಿಯನ್ ವಾಹನ ತಯಾರಕ ಕಂಪೆನಿಯಾದ ಕಿಯಾದ ಸಂಪೂರ್ಣ-ಹೊಸ ಎಸ್‌ಯುವಿ ಆಗಿರುತ್ತದೆ, ಇದು ಕಿಯಾ ಸೋನೆಟ್ ಮತ್ತು ಕಿಯಾ ಸೆಲ್ಟೋಸ್ ನಡುವಿನ ಸ್ಥಾನವನ್ನು ತುಂಬುತ್ತದೆ. ಕಿಯಾ ಈಗಾಗಲೇ ಸಿರೋಸ್‌ನ ಹಲವು ಟೀಸರ್‌ ಅನ್ನು ಬಿಡುಗಡೆ ಮಾಡಿದ್ದು, ಅದರ ಹೆಸರು ತಿಳಿಸುವುದರೊಂದಿಗೆ ಅದರ ವಿನ್ಯಾಸದ ಹೈಲೈಟ್ಸ್‌ಗಳನ್ನು ಪ್ರದರ್ಶಿಸುತ್ತದೆ. ಈಗ, ಸಿರೋಸ್‌ನ ಮತ್ತೊಂದು ಟೀಸರ್‌ನ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ವಿನ್ಯಾಸದ ಕುರಿತ ಕೆಲವು ಹೊಸ ವಿವರಗಳನ್ನು ಬಹಿರಂಗಪಡಿಸಿದೆ.

ಟೀಸರ್‌ನಲ್ಲಿ ಏನಿದೆ?

ಸಿರೋಸ್‌ನ ಇತ್ತೀಚಿನ ಟೀಸರ್ ಈಗ ಅದರ ಬಾಕ್ಸ್ ಆಕಾರದ ಬಾಡಿಯನ್ನು ಅನ್ನು ಹೆಚ್ಚು ಸ್ಪಷ್ಟವಾಗಿ ತೋರಿಸುತ್ತದೆ. ಬದಿಯಲ್ಲಿ, ಇದು ಉಬ್ಬಿದ ವೀಲ್‌ ಆರ್ಚ್‌ಗಳನ್ನು ಮತ್ತು ಬಾಗಿಲುಗಳ ಮೇಲೆ ಪ್ರಮುಖವಾದ ಸಿಲ್ವರ್‌ ಕ್ಲಾಡಿಂಗ್‌ಅನ್ನು ಹೊಂದಿದೆ. ಸಿರೋಸ್‌ ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ ಎಂದು ಟೀಸರ್ ಬಹಿರಂಗಪಡಿಸುತ್ತದೆ. ಇಲ್ಲಿಯವರೆಗೆ, ಕಿಯಾ ಇಂಡಿಯಾ ತನ್ನ ಪ್ರೀಮಿಯಂ ಮತ್ತು ಆಲ್-ಎಲೆಕ್ಟ್ರಿಕ್ ಮೊಡೆಲ್‌ಗಳಾದ ಕಿಯಾ ಇವಿ6 ಮತ್ತು ಕಿಯಾ ಇವಿ9 ಗಳಲ್ಲಿ ಈ ಪಾಪ್-ಔಟ್ ಶೈಲಿಯ ಡೋರ್ ಹ್ಯಾಂಡಲ್‌ಗಳನ್ನು ಮಾತ್ರ ನೀಡುತ್ತಿತ್ತು. 

Kia Syros

ಇತ್ತೀಚಿನ ಟೀಸರ್‌ಗಳ ಆಧಾರದ ಮೇಲೆ, ಸಿರೋಸ್‌ ಲಂಬವಾಗಿ ಜೋಡಿಸಲಾದ 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು L- ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಸಹ ಪಡೆಯುತ್ತದೆ. ಇದು ಉದ್ದವಾದ ರೂಫ್‌ ರೇಲ್ಸ್‌ಗಳು, ದೊಡ್ಡ ವಿಂಡೋ ಪ್ಯಾನಲ್‌ಗಳು, ಫ್ಲಾಟ್ ರೂಫ್ ಮತ್ತು ಕಿಟಕಿ ಬೆಲ್ಟ್‌ಲೈನ್‌ನಲ್ಲಿ  ಸಿ-ಪಿಲ್ಲರ್ ಕಡೆಗೆ ಬೆಂಡ್‌ಅನ್ನು ಹೊಂದಿರುತ್ತದೆ.

ಇದನ್ನು ಸಹ ಓದಿ: ಇಯರ್‌ ಎಂಡ್‌ ಸೇಲ್‌: Maruti Nexa ಕಾರುಗಳ ಮೇಲೆ 2.65 ಲಕ್ಷ ರೂ.ವರೆಗೆ ಡಿಸ್ಕೌಂಟ್‌

ಕ್ಯಾಬಿನ್ ಮತ್ತು ನಿರೀಕ್ಷಿತ ಫೀಚರ್‌ಗಳು

Kia Syros big touchscreen

ಕಿಯಾ ಇನ್ನೂ ಸಿರೋಸ್‌ನ ಒಳಭಾಗವನ್ನು ಬಹಿರಂಗಪಡಿಸದಿದ್ದರೂ, ಇದು ಸೋನೆಟ್ ಮತ್ತು ಸೆಲ್ಟೋಸ್ ಎಸ್‌ಯುವಿಗಳೊಂದಿಗೆ ಹೋಲಿಕೆಯನ್ನು ಹೊಂದಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಸಿರೋಸ್‌ನ ಇತ್ತೀಚಿನ ಟೀಸರ್‌ಗಳಲ್ಲಿ ಇದು ಫೈಟರ್-ಜೆಟ್ ತರಹದ ಗೇರ್ ಲಿವರ್‌ಗಳನ್ನು ಮತ್ತು ದೊಡ್ಡ ಟಚ್‌ಸ್ಕ್ರೀನ್ ಮತ್ತು ಪನರೋಮಿಕ್‌ ಸನ್‌ರೂಫ್‌ನಂತಹ ಸೌಕರ್ಯಗಳನ್ನು ಪಡೆಯುತ್ತದೆ ಎಂದು ಬಹಿರಂಗಪಡಿಸಿದೆ. ಸಿರೋಸ್ ಡ್ಯುಯಲ್ ಡಿಸ್‌ಪ್ಲೇ ಸೆಟಪ್, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಪಡೆಯಬಹುದು.

ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, ರಿವರ್ಸಿಂಗ್ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಸೇರಿವೆ. ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ಗಳನ್ನು (ಎಡಿಎಎಸ್) ಸಿರೋಸ್ ಪಡೆಯುತ್ತದೆ.

ನಿರೀಕ್ಷಿತ ಪವರ್‌ಟ್ರೇನ್ ಆಯ್ಕೆಗಳು

ಇನ್ನೂ ಅಧಿಕೃತವಾಗಿ ದೃಢೀಕರಿಸದಿದ್ದರೂ, ನಾವು Syros ಸೋನೆಟ್‌ನಂತೆಯೇ ಅದೇ ಎಂಜಿನ್ ಆಯ್ಕೆಗಳನ್ನು ಪಡೆಯಬಹುದೆಂದು ನಿರೀಕ್ಷಿಸುತ್ತಿದ್ದೇವೆ, ಅದರ ತಾಂತ್ರಿಕ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.2-ಲೀಟರ್ N/A ಪೆಟ್ರೋಲ್

1-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್‌

83 ಪಿಎಸ್‌

120 ಪಿಎಸ್‌

116 ಪಿಎಸ್‌

ಟಾರ್ಕ್‌

115 ಎನ್‌ಎಮ್‌

172 ಎನ್‌ಎಮ್‌

250 ಎನ್‌ಎಮ್‌

ಗೇರ್‌ಬಾಕ್ಸ್‌

5-ಸ್ಪೀಡ್ ಮ್ಯಾನ್ಯುವಲ್‌

6-ಸ್ಪೀಡ್ iMT*, 7-ಸ್ಪೀಡ್ ಡಿಸಿಟಿ

6-ಸ್ಪೀಡ್ ಮ್ಯಾನ್ಯುವಲ್‌, 6-ಸ್ಪೀಡ್ iMT*, 6-ಸ್ಪೀಡ್ ಆಟೋಮ್ಯಾಟಿಕ್‌

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಕಿಯಾ ಸಿರೋಸ್ ಆರಂಭಿಕ ಬೆಲೆಯು ರೂ 9 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ, ಆದರೆ ಇದು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 3XO, ಮತ್ತು ಹ್ಯುಂಡೈ ವೆನ್ಯೂ ಮುಂತಾದ ಸಬ್‌ಕಾಂಪ್ಯಾಕ್ಟ್  ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಕಾರುಗಳ ಲೋಕದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ WhatsApp ಚಾನಲ್ ಅನ್ನು ಮಿಸ್‌ ಮಾಡದೇ ಫಾಲೋ ಮಾಡಿ

was this article helpful ?

Write your Comment on Kia syros

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience