• English
    • Login / Register

    ಮಹೀಂದ್ರಾ BE 6e ಮತ್ತು XEV 9eನ ಡೆಲಿವೆರಿಗಳು ಯಾವಾಗದಿಂದ ಪ್ರಾರಂಭವಾಗಲಿದೆ?

    ಮಹೀಂದ್ರ ಬಿಇ 6 ಗಾಗಿ rohit ಮೂಲಕ ನವೆಂಬರ್ 27, 2024 07:45 pm ರಂದು ಪ್ರಕಟಿಸಲಾಗಿದೆ

    • 57 Views
    • ಕಾಮೆಂಟ್‌ ಅನ್ನು ಬರೆಯಿರಿ

    ಎರಡು EVಗಳು 2025ರ ಜನವರಿ ಅಂತ್ಯದ ವೇಳೆಗೆ ಡೀಲರ್‌ಶಿಪ್‌ಗಳಿಗೆ ಆಗಮಿಸಲಿವೆ, ಗ್ರಾಹಕರಿಗೆ ಡೆಲಿವೆರಿಗಳು 2025ರ ಫೆಬ್ರವರಿ ಮತ್ತು ಮಾರ್ಚ್ ನಡುವೆ ಪ್ರಾರಂಭವಾಗಲಿದೆ

    Mahindra BE 6e and XEV 9e delivery timeline out

    ಭಾರತೀಯ ಜನಪ್ರೀಯ ಕಾರು ತಯಾರಕರಲ್ಲಿ ಒಂದಾಗಿರು ಮಹೀಂದ್ರಾದ ಹೊಸ EV ಗಳಾದ ಮಹೀಂದ್ರಾ BE 6e ಮತ್ತು ಮಹೀಂದ್ರಾ XEV 9eಯನ್ನು ಬಿಡುಗಡೆ ಮಾಡಲಾಗಿದೆ. ಹಾಗೆಯೇ ಇದರ ಪರಿಚಯಾತ್ಮಕ ಆರಂಭಿಕ ಬೆಲೆ ಕ್ರಮವಾಗಿ 18.90 ಲಕ್ಷ ರೂ. ಮತ್ತು 21.90 ಲಕ್ಷ ರೂ. (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಆಗಿದೆ. ಅನಾವರಣದ ಸಮಯದಲ್ಲಿ, ಕಾರು ತಯಾರಕರು ಪೂರ್ಣ ವೇರಿಯೆಂಟ್‌-ವಾರು ಬೆಲೆ ಬಹಿರಂಗಪಡಿಸುವಿಕೆ ಮತ್ತು ವಿತರಣಾ ಅವಧಿಗಳ ನಿರೀಕ್ಷಿತ ಟೈಮ್‌ಲೈನ್‌ಗಳ ಮೇಲೆ ಸ್ವಲ್ಪ ಬೆಳಕನ್ನು ಚೆಲ್ಲಿದ್ದು, ಅವುಗಳನ್ನು ವಿವರವಾಗಿ ಪರಿಶೀಲಿಸೋಣ.

    ಬಿಡುಗಡೆ ಮತ್ತು ಡೆಲಿವರಿ ಸಮಯಗಳು

    ಎರಡು ಹೊಸ ಇವಿಗಳು 2025ರ ಜನವರಿಯ ಅಂತ್ಯದ ವೇಳೆಗೆ ಡೀಲರ್‌ಶಿಪ್‌ಗಳನ್ನು ತಲುಪಲು ಪ್ರಾರಂಭಿಸುತ್ತವೆ ಎಂದು ಮಹೀಂದ್ರಾ ಹೇಳಿದೆ. ಆದ್ದರಿಂದ ಮುಂಬರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಕಾರು ತಯಾರಕರು ತಮ್ಮ ನಿರೀಕ್ಷಿತ ಪ್ರದರ್ಶನದ ಸಮಯದಲ್ಲಿ ಎರಡು EV ಗಳ ಸಂಪೂರ್ಣ ವೇರಿಯೆಂಟ್‌-ವಾರು ಬೆಲೆಗಳನ್ನು ಬಹಿರಂಗಪಡಿಸುತ್ತಾರೆ ಎಂದು ನಾವು ನಂಬುತ್ತೇವೆ.

    ಈ ಎರಡೂ ಕಾರುಗಳ ಗ್ರಾಹಕರ ವಿತರಣೆಯು 2025ರ ಫೆಬ್ರವರಿ ಅಥವಾ ಮಾರ್ಚ್‌ನಿಂದ ಪ್ರಾರಂಭವಾಗಲಿದೆ ಎಂದು ಮಹೀಂದ್ರಾ ಘೋಷಿಸಿದೆ.

    ಎರಡು ಹೊಸ ಮಹೀಂದ್ರಾ ಇವಿಗಳ ತ್ವರಿತ ಅವಲೋಕನ ಇಲ್ಲಿದೆ:

    ಎರಡು EVಗಳಿಗೆ ದೂರದೃಷ್ಟಿಯುಳ್ಳ ವಿನ್ಯಾಸ

    Mahindra XEV 9e front
    Mahindra BE 6e front

    ಎರಡೂ ಇವಿಗಳು ಸಂಪೂರ್ಣ ಎಲ್‌ಇಡಿ ಲೈಟಿಂಗ್‌ ಅನ್ನು ಒಳಗೊಂಡಿವೆ, XEV 9e ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ ಸ್ಟ್ರಿಪ್ ಅನ್ನು ಹೊಂದಿದೆ. ಆದರೆ BE 6e C- ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಪಡೆಯುತ್ತದೆ. XEV 9e ಲಂಬವಾಗಿ ಜೋಡಿಸಲಾದ ಡ್ಯುಯಲ್-ಪಾಡ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಹೊಂದಿದ್ದು, ಅವುಗಳನ್ನು BE 6e ನಲ್ಲಿ ಅಡ್ಡಲಾಗಿ ಇರಿಸಲಾಗಿದೆ.

    ಎರಡರ ನಡುವಿನ ಇತರ ವಿನ್ಯಾಸದ ಹೋಲಿಕೆಗಳಲ್ಲಿ 19-ಇಂಚಿನ ಏರೋಡೈನಾಮಿಕಲಿ ವಿನ್ಯಾಸಗೊಳಿಸಲಾದ ಅಲಾಯ್‌ ವೀಲ್‌ಗಳು (20-ಇಂಚಿನ ವೀಲ್‌ಗಳನ್ನು ಸಹ ಪಡೆಯುವ ಆಯ್ಕೆಯೊಂದಿಗೆ), ಮತ್ತು ಮುಂಭಾಗದಲ್ಲಿ ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಸೇರಿವೆ. ಎರಡೂ ಮೊಡೆಲ್‌ಗಳಲ್ಲಿ, ಹಿಂಭಾಗದ ಬಾಗಿಲಿನ ಹ್ಯಾಂಡಲ್‌ಗಳನ್ನು ಅವುಗಳ ಸಿ-ಪಿಲ್ಲರ್‌ಗಳ ಮೇಲೆ ಜೋಡಿಸಲ್ಪಟ್ಟಿವೆ. ಆಯಾ ಮೊಡೆಲ್‌ಗಳಲ್ಲಿನ 'XEV 9e' ಮತ್ತು 'BE 6e' ಮಾನಿಕರ್‌ಗಳು ಎರಡು ಹೊಸ ಮಹೀಂದ್ರಾ ಕಾರುಗಳ ಬಾಹ್ಯ ವಿನ್ಯಾಸದ ಹೈಲೈಟ್‌ಗಳನ್ನು ಪೂರ್ಣಗೊಳಿಸುತ್ತವೆ.

    ಕ್ಯಾಬಿನ್‌ ಹೇಗಿದೆ ?

    ಎರಡು EV ಗಳ ಕ್ಯಾಬಿನ್ ಮಧ್ಯದಲ್ಲಿ ಪ್ರಕಾಶಿತ ಲೋಗೋ (XEV 9e ನಲ್ಲಿ ಇನ್ಫಿನಿಟಿ ಲೋಗೋ ಮತ್ತು 6e ನಲ್ಲಿ 'BE' ಲೋಗೋ) ಜೊತೆಗೆ 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹಂಚಿಕೊಳ್ಳುತ್ತದೆ. BE 6e ನ ಕ್ಯಾಬಿನ್ ಗ್ರೇ ಬಣ್ಣದ ಸೀಟ್ ಕವರ್‌ ಅನ್ನು ಹೊಂದಿದ್ದರೆ, XEV 9e ಡ್ಯುಯಲ್‌-ಟೋನ್ ಥೀಮ್ ಅನ್ನು ಪಡೆಯುತ್ತದೆ.

    Mahindra XEV 9e interior
    Mahindra BE 6e interior

    ಆದರೆ ಎರಡು EV ಗಳಲ್ಲಿ ಎಲ್ಲ ಗಮನ ಸೆಳೆಯುವ ಅಂಶವೆಂದರೆ ಡಿಜಿಟಲ್ ಸ್ಕ್ರೀನ್‌ಗಳಿಗಾಗಿ ಅವುಗಳ ಸಂಯೋಜಿತ ಸೆಟಪ್. XEV 9e ಮೂರು 12.3-ಇಂಚಿನ ಡಿಸ್‌ಪ್ಲೇಗಳನ್ನು ಹೊಂದಿದ್ದರೆ (ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಪ್ಯಾಸೆಂಜರ್-ಸೈಡ್ ಯೂನಿಟ್ ಸೇರಿದಂತೆ), BE 6e ಸಹ-ಚಾಲಕನ ಸೈಡ್ ಡಿಸ್‌ಪ್ಲೇಯನ್ನು ಪಡೆಯುವುದಿಲ್ಲ. 

    ಇದನ್ನೂ ಓದಿ: ಯಾವುದೇ ಕವರ್‌ ಇಲ್ಲದೇ ಮೊದಲ ಬಾರಿಗೆ ರಸ್ತೆಯಲ್ಲಿ ಹೊಸ Honda Amaze ಪ್ರತ್ಯಕ್ಷ..!

    ಸಮೃದ್ಧವಾದ ಫೀಚರ್‌

    ಎರಡೂ EVಗಳು ಫೀಚರ್‌-ಸಮೃದ್ಧ ಕಾರುಗಳಾಗಿದ್ದು, ವೈರ್‌ಲೆಸ್ ಫೋನ್ ಚಾರ್ಜರ್, ಮಲ್ಟಿ-ಝೋನ್ AC, 1400 W 16-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಅರ್ಗುಮೆಂಟೆಡ್‌ ರಿಯಾಲಿಟಿ-ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇಯೊಂದಿಗೆ ಮಹೀಂದ್ರಾ ಎರಡನ್ನು ಸಜ್ಜುಗೊಳಿಸಿದೆ.

    ಜೋಡಿಯ ಸುರಕ್ಷತಾ ಪ್ಯಾಕೇಜ್ ಏಳು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಪಾರ್ಕ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಅವುಗಳು ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್‌, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಲೆವೆಲ್-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಪಡೆಯುತ್ತವೆ. 

    ಬ್ಯಾಟರಿ ಪ್ಯಾಕ್ ಮತ್ತು ಶ್ರೇಣಿ

    ಮಹೀಂದ್ರಾ BE 6e ಮತ್ತು XEV 9e ಅನ್ನು ಈ ಕೆಳಗಿನ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳೊಂದಿಗೆ ನೀಡುತ್ತಿದೆ:

    ವಿಶೇಷಣಗಳು

    ಮಹೀಂದ್ರಾ BE 6e

    ಮಹೀಂದ್ರಾ XEV 9e

    ಬ್ಯಾಟರಿ ಪ್ಯಾಕ್‌

    59 ಕಿ.ವ್ಯಾಟ್‌/ 79 ಕಿ.ವ್ಯಾಟ್‌

    59 ಕಿ.ವ್ಯಾಟ್‌/ 79 ಕಿ.ವ್ಯಾಟ್‌

    ಕ್ಲೈಮ್‌ ಮಾಡಿದ ರೇಂಜ್‌ (MIDC P1+P2)

    535 ಕಿ.ಮೀ./ 682 ಕಿ.ಮೀ.

    542 ಕಿ.ಮೀ./ 656 ಕಿ.ಮೀ.

    ಎಲೆಕ್ಟ್ರಿಕ್‌ ಮೋಟಾರ್‌ಗಳ ಸಂಖ್ಯೆ

    1

    1

    ಪವರ್‌

    231 ಪಿಎಸ್‌/ 286 ಪಿಎಸ್‌

    231 ಪಿಎಸ್‌/ 286 ಪಿಎಸ್‌

    ಟಾರ್ಕ್‌

    380 ಎನ್‌ಎಮ್‌

    380 ಎನ್‌ಎಮ್‌

    ಡ್ರೈವ್‌ಟ್ರೈನ್‌

    RWD*

    RWD*

    *RWD: ರಿಯರ್‌ ವೀಲ್‌ ಡ್ರೈವ್‌ 

    ಇವೆರಡೂ ರಿಯರ್-ವೀಲ್-ಡ್ರೈವ್ (RWD) ಸೆಟಪ್ ಅನ್ನು ಮಾತ್ರ ಪಡೆದರೂ, INGLO ಪ್ಲಾಟ್‌ಫಾರ್ಮ್ (ಅವುಗಳನ್ನು ಆಧರಿಸಿರುವ ) ಆಲ್-ವೀಲ್-ಡ್ರೈವ್ (AWD) ಆಯ್ಕೆಯನ್ನು ಸಹ ಬೆಂಬಲಿಸುತ್ತದೆ. ಇವುಗಳಲ್ಲಿ ರೇಂಜ್, ಎವೆರಿಡೇ ಮತ್ತು ರೇಸ್ ಎಂಬ ಮೂರು ಡ್ರೈವ್ ಮೋಡ್‌ಗಳಿವೆ.

    ಎರಡೂ ಇವಿಗಳು 175 ಕಿ.ವ್ಯಾಟ್‌ DC ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ, ಇದು ಕೇವಲ 20 ನಿಮಿಷಗಳಲ್ಲಿ 20 ಪ್ರತಿಶತದಿಂದ 80 ಪ್ರತಿಶತದವರೆಗೆ ಬ್ಯಾಟರಿ ಪ್ಯಾಕ್‌ಗಳನ್ನು ಚಾರ್ಜ್ ಮಾಡಬಹುದು. ಎರಡು ಮೊಡೆಲ್‌ಗಳಿಗೆ ಚಾರ್ಜ್ ಮಾಡಬಹುದಾದ ಆಧಾರದ ಮೇಲೆ 7.3 ಕಿ.ವ್ಯಾಟ್‌ ಮತ್ತು 11.2 ಕಿ.ವ್ಯಾಟ್‌ ಎರಡು ಚಾರ್ಜರ್ ಆಯ್ಕೆಗಳನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದು ಮಹೀಂದ್ರಾ ಹೇಳಿದೆ.

    ಬೆಲೆ ಮತ್ತು ಪ್ರತಿಸ್ಪರ್ಧಿಗಳು

    Mahindra XEV 9e rear
    Mahindra BE 6e rear

    ಮಹೀಂದ್ರಾ BE 6e ಬೆಲೆಯು 18.90 ಲಕ್ಷ ರೂ.ಗಳಿಂದ ಪ್ರಾರಂಭವಾಗಲಿದ್ದು, XEV 9e ಬೆಲೆಯು 21.90 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ (ಇವರೆಡು ಭಾರತದಾದ್ಯಂತದ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು). ಮಹೀಂದ್ರಾ XEV 9e ಮುಂಬರುವ ಟಾಟಾ ಹ್ಯಾರಿಯರ್ ಇವಿ ಮತ್ತು ಟಾಟಾ ಸಫಾರಿ ಇವಿಯೊಂದಿಗೆ ಸ್ಪರ್ಧಿಸುತ್ತದೆ, ಆದರೆ BE 6e ಟಾಟಾ ಕರ್ವ್‌ ಇವಿ, ಎಮ್‌ಜಿ ಜೆಡ್‌ಎಸ್‌ ಇವಿ, ಮತ್ತು ಮುಂಬರುವ ಮಾರುತಿ eVX ಮತ್ತು ಹುಂಡೈ ಕ್ರೆಟಾ ಇವಿಗೆ ಪ್ರತಿಸ್ಪರ್ಧಿಯಾಗಿದೆ. 

    ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

    ಇನ್ನಷ್ಟು ಓದಿ : ಮಹೀಂದ್ರಾ BE 6e ಆಟೋಮ್ಯಾಟಿಕ್‌

    was this article helpful ?

    Write your Comment on Mahindra ಬಿಇ 6

    1 ಕಾಮೆಂಟ್
    1
    O
    omparkash
    Nov 28, 2024, 2:24:26 PM

    Hii Apa ke kard

    Read More...
      ಪ್ರತ್ಯುತ್ತರ
      Write a Reply

      explore similar ಕಾರುಗಳು

      Similar cars to compare & consider

      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trending ಎಲೆಕ್ಟ್ರಿಕ್ ಕಾರುಗಳು

      • ಪಾಪ್ಯುಲರ್
      • ಉಪಕಮಿಂಗ್
      ×
      We need your ನಗರ to customize your experience