Login or Register ಅತ್ಯುತ್ತಮ CarDekho experience ಗೆ
Login

ಈ 10 ಚಿತ್ರಗಳಲ್ಲಿ Mahindra BE 6e ನ ಸಂಪೂರ್ಣ ಚಿತ್ರಣ

ಮಹೀಂದ್ರ ಬಿಇ 6 ಗಾಗಿ dipan ಮೂಲಕ ನವೆಂಬರ್ 27, 2024 09:07 pm ರಂದು ಪ್ರಕಟಿಸಲಾಗಿದೆ

ಚಿಕ್ಕದಾದ 59 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ಮಹೀಂದ್ರಾ BE 6eನ ಬೆಲೆಗಳು 18.90 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ (ಇವುಗಳು ಭಾರತದಾದ್ಯಂತದ ಪರಿಚಯಾತ್ಮಕ ಎಕ್ಸ್-ಶೋರೂಮ್ ಬೆಲೆಗಳಾಗಿವೆ)

ಹಲವು ಸಮಯಗಳ ಕಾಯುವಿಕೆಯ ನಂತರ, ಮಹೀಂದ್ರಾ ತನ್ನ ಎರಡು ಹೊಸ EV ಗಳಾದ BE 6e ಮತ್ತು XEV 9e ಯನ್ನು ಅನಾವರಣಗೊಳಿಸಿದೆ. ಇವುಗಳಲ್ಲಿ, ಮಹೀಂದ್ರ BE 6e ಕಾರು ತಯಾರಕರ ಎಲೆಕ್ಟ್ರಿಕ್‌ ಕಾರುಗಳಿಗಾಗಿಯೇ ಹೊಸದಾಗಿ ಸ್ಥಾಪಿಸಲಾದ 'BE' ಸಬ್‌-ಬ್ರಾಂಡ್‌ನ ಮೊದಲ ಉತ್ಪನ್ನವಾಗಿದೆ. ಅದರ ಒಳಗೆ ಮತ್ತು ಹೊರಗಿನ ಆಕ್ರಮಣಕಾರಿ ವಿನ್ಯಾಸದಿಂದಾಗಿ, BE 6e ಇತರ EVಗಳ ಗುಂಪಿನಿಂದ ಎದ್ದು ಕಾಣುತ್ತದೆ. 10 ಚಿತ್ರಗಳ ಸಹಾಯದಿಂದ BE 6e ಅನ್ನು ವಿವರವಾಗಿ ತಿಳಿಯೋಣ:

ಮುಂಭಾಗ

ಮಹೀಂದ್ರಾ BE 6e ಬೋಲ್ಡ್ ಕಟ್ ಮತ್ತು ಕ್ರೀಸ್‌ಗಳೊಂದಿಗೆ ಶಾರ್ಪ್‌ ಮತ್ತು ಆಕ್ರಮಣಕಾರಿಯಾದ ಮುಂಭಾಗದ ವಿನ್ಯಾಸವನ್ನು ಹೊಂದಿದೆ. ಬಾನೆಟ್ ಗಾಳಿಯ ಸೇವನೆಗಾಗಿ ಕ್ರಿಯಾತ್ಮಕ ಸ್ಕೂಪ್ ಅನ್ನು ಹೊಂದಿದೆ ಮತ್ತು ಪ್ರಕಾಶಿತ 'BE' ಲೋಗೋವನ್ನು ಹೊಂದಿದೆ. ಇದು C- ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳಿಂದ ಸುತ್ತುವರೆದಿರುವ ಅಡ್ಡಲಾಗಿ ಜೋಡಿಸಲಾದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಹೊಂದಿದೆ. EVಗಳಿಗೆ ವಿಶಿಷ್ಟವಾದಂತೆ ಗ್ರಿಲ್ ಅನ್ನು ಖಾಲಿ ಮಾಡಲಾಗಿದೆ.

ಬಂಪರ್ ಕಪ್ಪು ಬಣ್ಣದ್ದಾಗಿದೆ, ಹೆಡ್‌ಲೈಟ್‌ಗಳು ಮತ್ತು ಡಿಆರ್‌ಎಲ್‌ಗಳ ನಡುವಿನ ವಿಭಾಗವನ್ನು ಬಾಡಿ ಕಲರ್‌ನಲ್ಲಿ ನೀಡಲಾಗಿದೆ. ಸಿಲ್ವರ್ ಸ್ಕಿಡ್ ಪ್ಲೇಟ್, ಮುಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಎಲ್‌ಇಡಿ ಫಾಗ್ ಲ್ಯಾಂಪ್‌ಗಳು ಮುಂಭಾಗದ ವಿನ್ಯಾಸವನ್ನು ಸಂಪೂರ್ಣಗೊಳಿಸುತ್ತವೆ.

ಸೈಡ್‌ನಿಂದ

ಮಹೀಂದ್ರಾ BE 6e ಯ ಆಕ್ರಮಣಕಾರಿ ಲೈನ್‌ಗಳು ಅದರ ಪ್ರೊಫೈಲ್‌ನ ಉದ್ದಕ್ಕೂ ಮುಂದುವರಿಯುತ್ತವೆ, ವೀಲ್‌ ಆರ್ಚ್‌ಗಳ ಮೇಲೆ ಹೊಳಪು ಕಪ್ಪು ಹೊದಿಕೆಯಿಂದ ಮತ್ತು ಎಸ್‌ಯುವಿಯ ಉದ್ದಕ್ಕೂ ಸಾಗುವ ಮೂಲಕ ಹೈಲೈಟ್ ಮಾಡಲಾಗಿದೆ. ಕೋನೀಯ ಅಂಚುಗಳೊಂದಿಗೆ ಈ ಹೊದಿಕೆಯು ಹಿಂಭಾಗದ ಬಾಗಿಲಿನ ಕೆಳಭಾಗದಲ್ಲಿ 'INGLO' ಬ್ಯಾಡ್ಜ್ ಅನ್ನು ಹೊಂದಿದೆ.

ಇದು ಮುಂಭಾಗದ ಬಾಗಿಲುಗಳಿಗೆ ಫ್ಲಶ್-ಫಿಟ್ಟಿಂಗ್ ಹ್ಯಾಂಡಲ್‌ಗಳನ್ನು ಪಡೆಯುತ್ತದೆ, ಆದರೆ ಹಿಂಭಾಗದ ಡೋರ್ ಹ್ಯಾಂಡಲ್‌ಗಳನ್ನು ಸಿ-ಪಿಲ್ಲರ್‌ಗೆ ಸಂಯೋಜಿಸಲಾಗಿದೆ. ಇದು A- ಮತ್ತು B-ಪಿಲ್ಲರ್‌ಗಳು ಮತ್ತು ಹೊರಗಿನ ರಿಯರ್‌ವ್ಯೂ ಮಿರರ್‌ಗಳ ಮೇಲೆ ಕಪ್ಪು ಫಿನಿಶಿಂಗ್‌ನೊಂದಿಗೆ ವ್ಯತಿರಿಕ್ತ ಅಂಶಗಳನ್ನು ಪಡೆಯುತ್ತದೆ. ಈ ಎಸ್‌ಯುವಿಯು 19-ಇಂಚಿನ ಏರೋಡೈನಾಮಿಕಲಿ ವಿನ್ಯಾಸಗೊಳಿಸಲಾದ ಅಲಾಯ್‌ ವೀಲ್‌ಗಳಲ್ಲಿ ಸವಾರಿ ಮಾಡುತ್ತದೆ, ಆದರೆ ಮಹೀಂದ್ರಾ ಇದನ್ನು 20-ಇಂಚಿನ ವೀಲ್‌ಗಳೊಂದಿಗೆ ಐಚ್ಛಿಕ ಹೆಚ್ಚುವರಿಯಾಗಿ ನೀಡುತ್ತಿದೆ.

ಹಿಂಭಾಗ

ಮಹೀಂದ್ರಾ BE 6e ಮುಂಭಾಗದ ಎಲ್‌ಇಡಿ ಡಿಆರ್‌ಎಲ್‌ಗಳಂತೆ C- ಆಕಾರದ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ. ಟೈಲ್‌ಗೇಟ್ ಮಹೀಂದ್ರಾದ EV ಗಳಿಗೆ ಎಕ್ಸ್‌ಕ್ಲೂಸಿವ್‌ ಆಗಿರುವ 'ಇನ್ಫಿನೈಟ್ ಪಾಸಿಬಿಲಿಟೀಸ್' ಲೋಗೋವನ್ನು ಹೊಂದಿದೆ. ಬೂಟ್ ಬೂಟ್‌ಲಿಪ್ ಸ್ಪಾಯ್ಲರ್‌ನೊಂದಿಗೆ ಚಾಚಿಕೊಂಡಿರುವ ವಿನ್ಯಾಸವನ್ನು ಹೊಂದಿದೆ ಮತ್ತು ಇನ್ನೊಂದು ಸ್ಪಾಯ್ಲರ್ ಅನ್ನು ಹಿಂಭಾಗದ ವಿಂಡ್‌ಶೀಲ್ಡ್‌ನ ಮೇಲೆ ಇರಿಸಲಾಗುತ್ತದೆ.

ಕಪ್ಪು ಹಿಂಭಾಗದ ಬಂಪರ್ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ ಮತ್ತು ಸಂಯೋಜಿತ ರಿಫ್ಲೆಕ್ಟರ್‌ಗಳೊಂದಿಗೆ ಎರಡು ಸಿಲ್ವರ್ ಸ್ಕಿಡ್ ಪ್ಲೇಟ್‌ಗಳನ್ನು ಒಳಗೊಂಡಿದೆ.

Also See: ಭಾರತದಲ್ಲಿ 1 ಲಕ್ಷ ಮಾರಾಟದ ಮೈಲುಗಲ್ಲನ್ನು ದಾಟಿದ Toyota Innova Hycross

ಬೂಟ್ ಸ್ಪೇಸ್ ಮತ್ತು ಫ್ರಂಕ್

ಮಹೀಂದ್ರಾ BE 6e 455-ಲೀಟರ್ ಬೂಟ್ ಸ್ಪೇಸ್ ಅನ್ನು ನೀಡುತ್ತದೆ. ಇದು ಬಾನೆಟ್ ಅಡಿಯಲ್ಲಿ 45-ಲೀಟರ್ ಸ್ಟೋರೇಜ್‌ ಬಾಕ್ಸ್‌ ಅನ್ನು ಹೊಂದಿದೆ, ಇದನ್ನು ಸಾಮಾನ್ಯವಾಗಿ ಫ್ರಂಕ್ (ಮುಂಭಾಗದ ಟ್ರಂಕ್‌) ಎಂದು ಕರೆಯಲಾಗುತ್ತದೆ.

ಇಂಟೀರಿಯರ್‌

ಮಹೀಂದ್ರಾ BE 6e ನ ಒಳಭಾಗವು ಡ್ಯುಯಲ್-ಟೋನ್ ಥೀಮ್ ಅನ್ನು ಪಡೆಯುತ್ತದೆ. ಇದು 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದ್ದು, ಪ್ರಕಾಶಿತ 'BE' ಲೋಗೋದಿಂದ ಅಲಂಕರಿಸಲ್ಪಟ್ಟಿದೆ. ಸ್ಟೀರಿಂಗ್‌ನ ಹಿಂದೆ ಡ್ಯಾಶ್‌ಬೋರ್ಡ್‌ಗಿಂತ ಮೇಲೆ ಇರುವ ಎರಡು ಸ್ಕ್ರೀನ್‌ಗಳನ್ನು ಒಂದೇ ಗ್ಲಾಸ್‌ ಪ್ಯಾನಲ್‌ನ ಅಡಿಯಲ್ಲಿ ಇರಿಸಲ್ಪಟ್ಟಿವೆ, ಆರ್ಗುಮೆಂಟೆಡ್‌ ರಿಯಾಲಿಟಿ (AR) ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇಯಿಂದ ಪೂರಕವಾಗಿದೆ.

ಮಹೀಂದ್ರಾ BE 6e ಡ್ಯಾಶ್‌ಬೋರ್ಡ್‌ನಿಂದ ಸೆಂಟರ್ ಕನ್ಸೋಲ್‌ಗೆ ವಿಸ್ತರಿಸುವ ಬಾಗಿದ ಟ್ರಿಮ್ ಅನ್ನು ಹೊಂದಿದೆ, ಇದು ಕಾಕ್‌ಪಿಟ್ ತರಹದ ಅನುಭವವನ್ನು ನೀಡುತ್ತದೆ. ಈ ಹೊಳಪು-ಕಪ್ಪು ಕನ್ಸೋಲ್ ಚಾಲಕನ AC ವೆಂಟ್‌ಗಳನ್ನು ಹೊಂದಿದೆ ಮತ್ತು ಕ್ಯಾಬಿನ್ ಅನ್ನು ಎರಡು ವಿಭಾಗಗಳಾಗಿ ವಿಭಜಿಸುತ್ತದೆ.

ಮಹೀಂದ್ರಾ BE 6e ಸೀಟ್‌ಗಳು ಎಲ್ಲಾ ಪ್ರಯಾಣಿಕರಿಗೆ ಸರಿಹೊಂದಿಸಬಹುದಾದ ಹೆಡ್‌ರೆಸ್ಟ್‌ಗಳೊಂದಿಗೆ ಫ್ಯಾಬ್ರಿಕ್ ಮತ್ತು ಲೆಥೆರೆಟ್ ಕವರ್‌ಗಳ ಮಿಶ್ರಣವನ್ನು ಒಳಗೊಂಡಿವೆ. ಕ್ಯಾಬಿನ್‌ನ ಥೀಮ್‌ನಲ್ಲಿ ಬಾಗಿಲುಗಳನ್ನು ಫಿನಿಶ್‌ ಮಾಡಲಾಗಿದೆ ಮತ್ತು ಒಳಗಿನ ಬಾಗಿಲಿನ ಹ್ಯಾಂಡಲ್‌ಗಳನ್ನು ಫ್ಯಾಬ್ರಿಕ್ ಪುಲ್-ಟೈಪ್ ಟ್ಯಾಬ್‌ಗಳಾಗಿ ಅನನ್ಯವಾಗಿ ವಿನ್ಯಾಸಗೊಳಿಸಲಾಗಿದೆ.

ಮಹೀಂದ್ರಾ BE 6e ಡ್ಯುಯಲ್-ಜೋನ್ ಎಸಿ, ಬಣ್ಣದ ಲೈಟಿಂಗ್‌ನೊಂದಿಗೆ ಪನರೋಮಿಕ್‌ ಗ್ಲಾಸ್‌ರೂಫ್‌ ಮತ್ತು 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್‌ನಂತಹ ಫೀಚರ್‌ಗಳೊಂದಿಗೆ ಬರುತ್ತದೆ. ಸುರಕ್ಷತೆಗಾಗಿ, ಇದು 7 ಏರ್‌ಬ್ಯಾಗ್‌ಗಳನ್ನು (6 ಸ್ಟ್ಯಾಂಡರ್ಡ್‌ ಆಗಿ), ಪಾರ್ಕ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ADAS ಅನ್ನು ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಡ್ರೈವರ್ ಡ್ರೆಸಿನೆಸ್ ಡಿಟೆಕ್ಷನ್‌ನಂತಹ ಫೀಚರ್‌ಗಳೊಂದಿಗೆ ನೀಡುತ್ತದೆ.

ಇದನ್ನೂ ಓದಿ ಮಹೀಂದ್ರಾ BE 6e ಮತ್ತು XEV 9eನ ಡೆಲಿವೆರಿಗಳು ಯಾವಾಗದಿಂದ ಪ್ರಾರಂಭವಾಗಲಿದೆ?

ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್

ಮಹೀಂದ್ರಾ BE 6e ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು ಮತ್ತು ಹಿಂಭಾಗದ ಚಕ್ರ-ಡ್ರೈವ್ (RWD) ಸಂರಚನೆಯೊಂದಿಗೆ ಬರುತ್ತದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಬ್ಯಾಟರಿ ಪ್ಯಾಕ್‌

59 ಕಿ.ವ್ಯಾಟ್‌

79 ಕಿ.ವ್ಯಾಟ್‌

ಎಲೆಕ್ಟ್ರಿಕ್‌ ಮೋಟಾರ್‌ಗಳ ಸಂಖ್ಯೆ

1

1

ಪವರ್‌

231 ಪಿಎಸ್‌

286 ಪಿಎಸ್‌

ಟಾರ್ಕ್‌

380 ಎನ್‌ಎಮ್‌

380 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌(MIDC ಪಾರ್ಟ್‌ 1+2)

535 ಕಿ.ಮೀ

682 ಕಿ.ಮೀ.

ಡ್ರೈವ್‌ಟ್ರೈನ್‌

ರಿಯರ್‌ ವೀಲ್‌ ಡ್ರೈವ್‌

ರಿಯರ್‌ ವೀಲ್‌ ಡ್ರೈವ್‌

ಮಹೀಂದ್ರಾ ಬಿಇ 6e ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ದೊಡ್ಡ ಬ್ಯಾಟರಿ ಪ್ಯಾಕ್ 175 ಕಿ.ವ್ಯಾಟ್‌ ಡಿಸಿ ಫಾಸ್ಟ್‌ ಚಾರ್ಜಿಂಗ್ ಮತ್ತು 59 ಕಿ.ವ್ಯಾಟ್‌ ಬ್ಯಾಟರಿ 140 ಕಿ.ವ್ಯಾಟ್‌ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಎರಡೂ 20 ನಿಮಿಷಗಳಲ್ಲಿ 20-80 ಪ್ರತಿಶತದಷ್ಟು ಆಯಾ ಬ್ಯಾಟರಿಗಳನ್ನು ಚಾರ್ಜ್ ಮಾಡಬಹುದು. ಮಹೀಂದ್ರಾ BE 6e ಯಲ್ಲಿ 7.3 ಕಿ.ವ್ಯಾಟ್‌ ಮತ್ತು 11.2 ಕಿ.ವ್ಯಾಟ್‌ ಎರಡು ಎಸಿ ಚಾರ್ಜರ್ ಆಯ್ಕೆಗಳನ್ನು ಸಹ ನೀಡುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

59 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವ ಮಹೀಂದ್ರಾ BE 6e ನ ಎಂಟ್ರಿ-ಲೆವೆಲ್‌ ಒನ್ ವೇರಿಯೆಂಟ್‌ನ ಬೆಲೆ 18.90 ಲಕ್ಷ ರೂ.ನಿಂದ(ಭಾರತದಾದ್ಯಂತ ಪರಿಚಯಾತ್ಮಕ ಎಕ್ಸ್-ಶೋ ರೂಂ ಬೆಲೆಗಳು) ಪ್ರಾರಂಭವಾಗಲಿದೆ. ಇತರ ವೇರಿಯೆಂಟ್‌ನ ಬೆಲೆಗಳನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ನಲ್ಲಿ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

BE 6eಯು ಟಾಟಾ ಕರ್ವ್‌ ಇವಿ, ಎಮ್‌ಜಿ ಜೆಡ್‌ಎಸ್‌ ಇವಿ, ಮತ್ತು ಮುಂಬರುವ ಮಾರುತಿ eVX ಮತ್ತು ಹುಂಡೈ ಕ್ರೆಟಾ ಇವಿಗೆ ಪ್ರತಿಸ್ಪರ್ಧಿಯಾಗಿದೆ.

ಮಹೀಂದ್ರಾ BE 6e ಕುರಿತು ನಿಮ್ಮ ಅಭಿಪ್ರಾಯವೇನು? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಮಹೀಂದ್ರಾ BE 6e ಆಟೋಮ್ಯಾಟಿಕ್‌

Share via

Write your Comment on Mahindra ಬಿಇ 6

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ