• English
  • Login / Register

ಬಿಡುಗಡೆಯಾದ ಕೆಲವೇ ದಿನಗಳಲ್ಲಿ Mahindra BE 6eನ ಹೆಸರು ಬದಲಾವಣೆ, ಏನಿದು ಹೊಸ ವಿವಾದ ?

ಮಹೀಂದ್ರ be 6 ಗಾಗಿ rohit ಮೂಲಕ ಡಿಸೆಂಬರ್ 09, 2024 07:39 pm ರಂದು ಪ್ರಕಟಿಸಲಾಗಿದೆ

  • 47 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಹೀಂದ್ರಾ, ನ್ಯಾಯಾಲಯದಲ್ಲಿ ಬ್ರಾಂಡ್ ಹಕ್ಕುಗಳಿಗಾಗಿ ಹೋರಾಡುತ್ತಿರುವಾಗ, BE 6e ಅನ್ನು BE 6 ಗೆ ಮರುನಾಮಕರಣ ಮಾಡಲು ನಿರ್ಧರಿಸಿದೆ ಮತ್ತು BE 6e ಹೆಸರನ್ನು ಪಡೆದುಕೊಳ್ಳಲು ಇಂಡಿಗೋ ಸ್ಪರ್ಧೆಯನ್ನು ಮುಂದುವರಿಸುತ್ತದೆ

Mahindra BE 6e name changed to BE 6

2024ರ ನವೆಂಬರ್‌ನಲ್ಲಿ ಬಿಡುಗಡೆಯಾದ ತನ್ನ 'BE 6e' ಎಲೆಕ್ಟ್ರಿಕ್ ಎಸ್‌ಯುವಿಗಾಗಿ '6E' ಹೆಸರನ್ನು ಬಳಸಿದ್ದರಿಂದ ಇಂಡಿಗೋ ಮಹೀಂದ್ರಾ ವಿರುದ್ಧ ಹೇಗೆ ಮೊಕದ್ದಮೆ ಹೂಡಿದೆ ಎಂಬುದನ್ನು ನಾವು ಇತ್ತೀಚೆಗೆ ಸುದ್ದಿ ಮಾಡಿದ್ದೇವು. ಇಂಡಿಗೋ ಮಾಡಿದ ದೂರುಗಳ ಕುರಿತು ಭಾರತದ ಜನಪ್ರೀಯ ಕಾರು ತಯಾರಕ ಕಂಪೆನಿಯಾದ ಮಹೀಂದ್ರಾ ಈಗಾಗಲೇ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಆದರೆ ಮಹೀಂದ್ರಾವು ತನ್ನ ಇವಿಯನ್ನು 'BE 6e' ನಿಂದ 'BE 6' ಗೆ ಮರುನಾಮಕರಣ ಮಾಡಲು ನಿರ್ಧರಿಸಿದೆ ಎಂಬ ಅಂಶವು ಈಗ ಬೆಳಕಿಗೆ ಬಂದಿದೆ. 

ಎಸ್‌ಯುವಿ ತಯಾರಕರು ಮಹೀಂದ್ರಾ BE 6e ಹೆಸರನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಏರ್‌ಲೈನ್‌ನ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. 

ಮಹೀಂದ್ರಾದಿಂದ ಹೊಸ ಹೇಳಿಕೆ

ತನ್ನ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳ ಪಟ್ಟಿಯ ಭಾಗವಾಗಿ "BE 6e" ಗಾಗಿ ಕ್ಲಾಸ್‌ 12 ನ(ವಾಹನಗಳು) ಅಡಿಯಲ್ಲಿ ಟ್ರೇಡ್‌ಮಾರ್ಕ್ ನೋಂದಣಿಗಾಗಿ ಅರ್ಜಿ ಸಲ್ಲಿಸಿರುವುದಾಗಿ ಕಾರು ತಯಾರಕರು ಹೇಳಿದ್ದಾರೆ. "BE" ಮಾರ್ಕ್ ಅನ್ನು ಈಗಾಗಲೇ ಕ್ಲಾಸ್‌ 12 ನಲ್ಲಿ ಮಹೀಂದ್ರಾದಲ್ಲಿ ನೋಂದಾಯಿಸಲಾಗಿದೆ ಮತ್ತು ಇದು BE 6e ಅನ್ನು ಆಧಾರವಾಗಿರುವ ಮಹೀಂದ್ರಾದ "ಬೊರ್ನ್‌ ಎಲೆಕ್ಟ್ರಿಕ್" ಪ್ಲಾಟ್‌ಫಾರ್ಮ್ ಅನ್ನು ಪ್ರತಿನಿಧಿಸುತ್ತದೆ. ಇಂಡಿಗೋ ಏರ್‌ಲೈನ್ಸ್‌ನ ಮಾತೃಸಂಸ್ಥೆಯಾದ ಇಂಟರ್‌ಗ್ಲೋಬ್ ಏವಿಯೇಷನ್ ​​ಲಿಮಿಟೆಡ್, ಇತ್ತೀಚೆಗೆ BE ಟ್ಯಾಗ್‌ನ ನಂತರ 6e ಹೆಸರನ್ನು ಬಳಸಿಕೊಂಡಿರುವ ಮಹೀಂದ್ರಾದ ನಡೆಯ ವಿರುದ್ಧ ಕಳವಳ ವ್ಯಕ್ತಪಡಿಸಿತ್ತು.  ಇದಕ್ಕೆ ಪ್ರತಿಯಾಗಿ ಕಾರು ತಯಾರಕರು, ಅದರ ಹೆಸರು "BE 6e" ಆಗಿದ್ದು, ಇಂಡಿಗೋದ ವಿಮಾನಗಳಿಗೆ ಬಳಸಲಾಗುವ "6E" ಕೋಡ್‌ನಂತೆ ಪ್ರತ್ಯೇಕವಾಗಿಲ್ಲ ಎಂದಿದ್ದಾರೆ. 

ಮಹೀಂದ್ರಾ ನೀಡಿರುವ ಸ್ಪಷ್ಟನೆ ಹೇಳಿಕೆಯಲ್ಲಿ, "ಸಾಮಾನ್ಯವಾಗಿ ಇದು ಇಂಡಿಗೋದ "6E" ಯಿಂದ ಭಿನ್ನವಾಗಿದೆ ಎಂದು ನಾವು ನಂಬುತ್ತೇವೆ, ಅದು ಏರ್‌ಲೈನ್‌ ​​ಅನ್ನು ಪ್ರತಿನಿಧಿಸುತ್ತದೆ, ಹಾಗಾಗಿ ಇದರ ಮದ್ಯೆ ಯಾವುದೇ ರೀತಿಯ ಆಸ್ಪದವಿರುವುದಿಲ್ಲ. ವಿಶಿಷ್ಟವಾದ ಶೈಲಿಯು ಅದರ ವಿಶಿಷ್ಟತೆಯನ್ನು ಮತ್ತಷ್ಟು ಒತ್ತಿಹೇಳುತ್ತದೆ. ನಮ್ಮ ನೋಂದಣಿ ಅಪ್ಲಿಕೇಶನ್ ಸಂಪೂರ್ಣವಾಗಿ ವಿಭಿನ್ನ ಉದ್ಯಮ ವಲಯ ಮತ್ತು ಉತ್ಪನ್ನಕ್ಕಾಗಿ ಮತ್ತು ಆದ್ದರಿಂದ ಯಾವುದೇ ಸಂಘರ್ಷವನ್ನು ಕಾಣುವುದಿಲ್ಲ. ಭಾರತದ ಎರಡು ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ವಿಚಲಿತಗೊಳಿಸುವ ಮತ್ತು ಅನಗತ್ಯವಾದ ಸಂಘರ್ಷದಲ್ಲಿ ತೊಡಗಿಸಿಕೊಳ್ಳುವುದು ಅಸಹಜವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ, ವಾಸ್ತವವಾಗಿ ನಾವು ಪರಸ್ಪರರ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಬೆಂಬಲಿಸಬೇಕು."

Mahindra BE 6

ಅದಕ್ಕೆ ಮತ್ತಷ್ಟು ಸೇರಿಸಿತ್ತಾ, “ನಾವು ಪರಸ್ಪರರ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಬೆಂಬಲಿಸುತ್ತಿರುವಾಗ ಎರಡು ದೊಡ್ಡ, ಭಾರತೀಯ ಬಹುರಾಷ್ಟ್ರೀಯ ಕಂಪನಿಗಳು ವಿಚಲಿತಗೊಳಿಸುವ ಮತ್ತು ಅನಗತ್ಯವಾದ ಸಂಘರ್ಷದಲ್ಲಿ ತೊಡಗಿಸಿಕೊಳ್ಳುವುದು ಅಸಹಜವಾಗಿದೆ. ಆದ್ದರಿಂದ ನಾವು ನಮ್ಮ ಉತ್ಪನ್ನವನ್ನು "BE 6e" ಎಂದು ಬ್ರಾಂಡ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇವೆ. ಆದರೂ, IndiGoದ ದೂರು ಆಧಾರರಹಿತವಾಗಿದೆ ಎಂದು ನಾವು ನಂಬುತ್ತೇವೆ ಮತ್ತು ಸವಾಲು ಮಾಡದಿದ್ದರೆ, ನಮ್ಮ ಗುರುತು ವಿಶಿಷ್ಟ ಮತ್ತು ವಿಭಿನ್ನವಾಗಿದ್ದರೂ ಸಂಖ್ಯೆಯಾಗಿರುವ 2-ಅಕ್ಷರಗಳ ಗುರುತುಗಳನ್ನು ಏಕಸ್ವಾಮ್ಯಗೊಳಿಸುವ ಅನಾರೋಗ್ಯಕರ ಪೂರ್ವನಿದರ್ಶನವನ್ನು ಹೊಂದಿಸುತ್ತದೆ. ಇದು ಕೈಗಾರಿಕೆಗಳು ಮತ್ತು ವಲಯಗಳಾದ್ಯಂತ ಎಲ್ಲಾ ಕಂಪನಿಗಳಿಗೆ ಅಗಾಧವಾಗಿ ನಿರ್ಬಂಧಿಸುತ್ತದೆ. ಹೀಗಾಗಿ ನಾವು ಇದನ್ನು ನ್ಯಾಯಾಲಯದಲ್ಲಿ ಬಲವಾಗಿ ಪ್ರತಿಭಟಿಸುವುದನ್ನು ಮುಂದುವರಿಸುತ್ತೇವೆ ಮತ್ತು BE 6e ಬ್ರ್ಯಾಂಡ್ ಹೆಸರಿನ ನಮ್ಮ ಹಕ್ಕನ್ನು ಕಾಯ್ದಿರಿಸುತ್ತೇವೆ."

ಮಹೀಂದ್ರಾ ಸದ್ಯಕ್ಕೆ BE 6e ಅನ್ನು BE 6 ಎಂದು ಮರುನಾಮಕರಣ ಮಾಡಿದ್ದು, ಆದರೆ BE 6e ಟ್ರೇಡ್‌ಮಾರ್ಕ್ ಅನ್ನು ಭದ್ರಪಡಿಸಿಕೊಳ್ಳಲು ಇಂಡಿಗೋದೊಂದಿಗೆ ಸ್ಪರ್ಧಿಸುವುದಾಗಿ ಹೇಳಿದೆ. ಇದರ ಕುರಿತ ಹೆಚ್ಚಿನ ವಿವರಗಳು ಬೆಳಕಿಗೆ ಬಂದ ನಂತರ ನಾವು ನಿಮಗೆ ಆಪ್‌ಡೇಟ್‌ ಮಾಡುತ್ತೇವೆ. 

ಇದನ್ನೂ ಸಹ ಓದಿ: ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಯಾವ ಕಾರು ಬ್ರ್ಯಾಂಡ್‌ಗಳು ಬರಲಿವೆ ? ಇಲ್ಲಿದೆ ಮಾಹಿತಿ..

ಮಹೀಂದ್ರ ಬಿಇ 6: ಸಂಪೂರ್ಣ ಚಿತ್ರಣ

BE 6 ತನ್ನ ಹೊಸ EV-ನಿರ್ದಿಷ್ಟ 'BE' ಸಬ್‌-ಬ್ರಾಂಡ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಮಹೀಂದ್ರಾದ ಮೊದಲ ಆಲ್-ಎಲೆಕ್ಟ್ರಿಕ್ ವಾಹನವಾಗಿದೆ. ಇದು ನಮ್ಮ ಮಾರುಕಟ್ಟೆಯಲ್ಲಿನ ಮುಖ್ಯವಾಹಿನಿಯ ಎಲೆಕ್ಟ್ರಿಕ್ ಕಾರುಗಳಿಂದ ಎದ್ದು ಕಾಣಲು ವ್ಯಾಪಕವಾದ ಫೀಚರ್‌ಗಳೊಂದಿಗೆ ಭವಿಷ್ಯದ-ಕಾಣುವ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ.

Mahindra BE 6 dual digital displays

ಇದು ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು, ಡ್ಯುಯಲ್-ಝೋನ್ ಎಸಿ ಮತ್ತು ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್‌ಗಳಂತಹ ಬಹಳಷ್ಟು ಪ್ರೀಮಿಯಂ ಫೀಚರ್‌ಗಳನ್ನು ಪ್ಯಾಕ್ ಮಾಡುತ್ತದೆ. ಇದು ವರ್ಧಿತ ರಿಯಾಲಿಟಿ-ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇ, ಏಳು ಏರ್‌ಬ್ಯಾಗ್‌ಗಳು ಮತ್ತು ಲೆವೆಲ್-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಪಡೆಯುತ್ತದೆ.

 ಮಹೀಂದ್ರಾ BE 6 ಅನ್ನು ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ನೀಡುತ್ತಿದೆ, ಅವುಗಳೆಂದರೆ 59 ಕಿ.ವ್ಯಾಟ್‌ ಮತ್ತು ಇನ್ನೊಂದು 79 ಕಿ.ವ್ಯಾಟ್‌ ಯುನಿಟ್. ಇದು ಎರಡು ವಿಭಿನ್ನ ಕಾನ್ಫಿಗರೇಶನ್‌ಗಳಲ್ಲಿ ಸಿಂಗಲ್-ಮೋಟಾರ್, ರಿಯರ್-ವೀಲ್ ಡ್ರೈವ್ (RWD) ಸೆಟಪ್ ಅನ್ನು ಪಡೆಯುತ್ತದೆ: ಚಿಕ್ಕ ಬ್ಯಾಟರಿಯೊಂದಿಗೆ 231 ಪಿಎಸ್‌ ಮೋಟಾರ್ ಮತ್ತು ದೊಡ್ಡ ಬ್ಯಾಟರಿಯೊಂದಿಗೆ 286 ಪಿಎಸ್‌. 59 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ MIDC (ಭಾಗ I+II) ಕ್ಲೈಮ್‌ ಮಾಡಲಾದ 535 ಕಿಮೀ ರೇಂಜ್‌ ಅನ್ನು ಹೊಂದಿದ್ದು, ಮತ್ತೊಂದು ಬ್ಯಾಟರಿ 682 ಕಿಮೀ.ಯಷ್ಟು ರೇಂಜ್‌ ಅನ್ನು ಹೊಂದಿದೆ. 

ಸಂಬಂಧಿತ: Mahindra ಕಾರಿನಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿರುವ 10 ಫೀಚರ್‌ಗಳ ವಿವರಗಳು ಇಲ್ಲಿವೆ

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Mahindra BE 6

ಮಹೀಂದ್ರಾ BE 6e ನ ಎಂಟ್ರಿ-ಲೆವೆಲ್‌ ಒನ್ ವೇರಿಯೆಂಟ್‌ನ ಬೆಲೆ 18.90 ಲಕ್ಷ ರೂ.ನಿಂದ( ಭಾರತದಾದ್ಯಂತ ಪರಿಚಯಾತ್ಮಕ ಎಕ್ಸ್-ಶೋ ರೂಂ ಬೆಲೆಗಳು) ಪ್ರಾರಂಭವಾಗಲಿದೆ. BE 6eಯು ಟಾಟಾ ಕರ್ವ್‌ ಇವಿ, ಎಮ್‌ಜಿ ಜೆಡ್‌ಎಸ್‌ ಇವಿ, ಮತ್ತು ಮುಂಬರುವ ಮಾರುತಿ eVX ಮತ್ತು ಹುಂಡೈ ಕ್ರೆಟಾ ಇವಿಗೆ ಪ್ರತಿಸ್ಪರ್ಧಿಯಾಗಿದೆ. 

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಮಹೀಂದ್ರಾ BE 6e ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra BE 6

Read Full News

explore ಇನ್ನಷ್ಟು on ಮಹೀಂದ್ರ be 6

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience