Login or Register ಅತ್ಯುತ್ತಮ CarDekho experience ಗೆ
Login

2024 ರ ಬಿಡುಗಡೆಗೆ ಮೊದಲು ಪ್ರೊಡಕ್ಷನ್‌ ರೆಡಿ ಟೇಲ್‌ ಲೈಟುಗಳೊಂದಿಗೆ ಕಾಣಿಸಿಕೊಂಡ Mahindra Thar 5-door

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ rohit ಮೂಲಕ ಸೆಪ್ಟೆಂಬರ್ 14, 2023 03:57 pm ರಂದು ಪ್ರಕಟಿಸಲಾಗಿದೆ

ಈ ಪರೀಕ್ಷಾರ್ಥ ವಾಹನವನ್ನು ಸಾಕಷ್ಟು ಮರೆಮಾಚಲಾಗಿದ್ದರೂ, ಸಾಕಷ್ಟು ಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿರುವ LED ಟೇಲ್‌ ಲೈಟ್‌ ವ್ಯವಸ್ಥೆಯು ಮಾತ್ರ ಕಾಣಸಿಕ್ಕಿದೆ

  • ಮಹೀಂದ್ರಾ ಸಂಸ್ಥೆಯು ಥಾರ್ 5-ಡೋರ್‌ ಅನ್ನು 2024 ರಲ್ಲಿ ಬಿಡುಗಡೆಗೊಳಿಸಲಿದೆ.
  • ಹೊಸ ಸ್ಪೈ ಶಾಟ್‌ ಗಳು ಟೇಲ್‌ ಲೈಟ್‌ ವ್ಯವಸ್ಥೆಯಲ್ಲಿ ನವಿರಾದ ಲೈಟಿಂಗ್‌ ಅಂಶಗಳನ್ನು ತೋರಿಸುತ್ತವೆ.
  • ಹೊರಾಂಗಣದಲ್ಲಿ ಮಾಡಲಾಗುವ ಇತರ ಬದಲಾವಣೆಗಳೆಂದರೆ, ಹೊಸ ಗ್ರಿಲ್‌ ವಿನ್ಯಾಸ ಮತ್ತು ಸರ್ಕ್ಯುಲರ್‌ ಪ್ರಾಜೆಕ್ಟರ್‌ ಹೆಡ್‌ ಲೈಟುಗಳು.
  • ಇದರ ಕ್ಯಾಬಿನ್‌ ಮಾತ್ರ ಹೊಸ ಥೀಮ್‌ ಮತ್ತು ದೊಡ್ಡದಾದ ಟಚ್‌ ಸ್ಕ್ರೀನ್‌ ಜೊತೆಗೆ ಬರಲಿದೆ.
  • ಡ್ಯುವಲ್‌ ಝೋನ್‌ ಎಸಿ, ಆರು ಏರ್‌ ಬ್ಯಾಗುಗಳು ಮತ್ತು ಕ್ರೂಸ್‌ ಕಂಟ್ರೋಲ್‌ ಜೊತೆಗೆ ಹೊರಬರುವ ನಿರೀಕ್ಷೆ ಇದೆ.
  • 3-ಡೋರ್‌ ಥಾರ್‌ ವಾಹನದಲ್ಲಿರುವ ಅದೇ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನುಗಳೊಂದಿಗೆ ರಸ್ತೆಗಿಳಿಯಲಿದೆ; RWD ಮತ್ತು 4WD ಆಯ್ಕೆಗಳೆರಡೂ ದೊರೆಯಲಿವೆ.
  • ಇದು ಸುಮಾರು ರೂ. 15 ಲಕ್ಷಕ್ಕಿಂತ (ಎಕ್ಸ್‌ - ಶೋರೂಂ) ಹೆಚ್ಚಿನ ಬೆಲೆಯಲ್ಲಿ ದೊರೆಯುವ ಸಾಧ್ಯತೆ ಇದೆ.

ಇನ್ನೊಂದು ಸ್ಪೈ ಶಾಟ್‌ ವಿಶೇಷ ವರದಿಯಲ್ಲಿ, ಇನ್ನೂ ಪರೀಕ್ಷಾರ್ಥ ಹಂತದಲ್ಲಿರುವ ಮಹೀಂದ್ರಾ ಥಾರ್ 5-ಡೋರ್ ‌ವಾಹನದ ಕೆಲವು ಚಿತ್ರಗಳನ್ನು ನಾವಿಲ್ಲಿ ಪ್ರಸ್ತುತಪಡಿಸಲಿದ್ದೇವೆ. ಇತ್ತೀಚೆಗೆ ಕಾಣಸಿಕ್ಕಿರುವ ಈ ಚಿತ್ರಗಳಲ್ಲಿ ದೀರ್ಘ ವೀಲ್‌ ಬೇಸ್‌ ಹೊಂದಿರುವ ಹಾಗೂ ಸಾಕಷ್ಟು ಮರೆಮಾಚಿರುವ ಈ ಥಾರ್‌ ವಾಹನವನ್ನು ಕಾಣಬಹುದು.ಆದರೆ ಉತ್ಪಾದನೆಗೆ ಸಿದ್ಧವಾಗಿರುವ ಈ ವಾಹನದ ಒಂದಷ್ಟು ವಿವರಗಳು ಲಭ್ಯ.

ವಿನ್ಯಾಸದಲ್ಲಿ ಗಮನಿಸಬಹುದಾದ ಬದಲಾವಣೆಗಳು

ಲಭ್ಯವಿರುವ ಸ್ಪೈ ಶಾಟ್‌ ಗಳ ಪ್ರಕಾರ ಈ 5-ಡೋರ್‌ ಥಾರ್‌ ವಾಹನವು ಅಲೋಯ್‌ ವೀಲ್‌ ಗಳು ಮತ್ತು LED ಟೇಲ್‌ ಲೈಟುಗಳು ಇತ್ಯಾದಿಗಳನ್ನು ಹೊಂದಿದೆ. ಹಿಂಭಾಗದ ಲೈಟಿಂಗ್‌ ವ್ಯವಸ್ಥೆಯ ಕುರಿತು ಹೇಳುವುದಾದರೆ, 3-ಡೋರ್‌ ಮಾದರಿಗೆ ಹೋಲಿಸಿದರೆ, ಒಳಗಡೆಗೆ ಇದು ನುಣುಪಾದ LED ಅಂಶಗಳನ್ನು ಪಡೆಯಲಿದೆ. ಅಲ್ಲದೆ ಬ್ರೇಕ್‌ ಲೈಟ್‌ ನೋಟವನ್ನು ಬದಲಾಯಿಸಲಾಗಿದೆ.

ಇತ್ತೀಚೆಗೆ ಕಾಣಿಸಿಕೊಂಡ ಈ ಪರೀಕ್ಷಾರ್ಥ ವಾಹನವು, ಥಾರ್‌ 5-ಡೋರ್‌ ಕಾರಿನ ಇನ್ನಷ್ಟು ಹೊಸ ವಿನ್ಯಾಸಗಳ ಕುರಿತು ಸುಳಿವು ನೀಡಿದ್ದು ಇದರಲ್ಲಿ ಸದೃಢ 6-ಸ್ಲಾಟ್‌ ಗ್ರಿಲ್, ವೃತ್ತಾಕಾರದ ಪ್ರಾಜೆಕ್ಟರ್‌ ಹೆಡ್‌ ಲೈಟುಗಳು (ಬಹುಶಃ LED ಘಟಕಗಳು) ಇತ್ಯಾದಿಗಳು ಒಳಗೊಂಡಿವೆ. ಅಲ್ಲದೆ ಫಿಕ್ಸ್ಡ್‌ ಮೆಟಲ್‌ ಟಾಪ್‌ ಕುರಿತು ಸಹ ಮಾಹಿತಿ ದೊರೆತಿದೆ.

ಒಳಗಡೆ ಮಾಡಿರುವ ಬದಲಾವಣೆಗಳು

ಹೊಸ ಮಹೀಂದ್ರಾ ಥಾರ್‌ ವಾಹನವು ತನ್ನ ಸಣ್ಣದಾದ ಆವೃತ್ತಿಗಿಂತಲೂ ಭಿನ್ನವಾದ ಕ್ಯಾಬಿನ್‌ ಥೀಮ್‌ ಅನ್ನು ಹೊಂದಿರಲಿದೆ ಹಾಗೂ ದೊಡ್ಡದಾದ ಟಚ್‌ ಸ್ಕ್ರೀನ್‌ ಜೊತೆಗೆ ಬರಲಿದೆ. ಈ 5-ಡೋರ್ SUV‌ ಯು ಸನ್‌ ರೂಫ್‌ ಜೊತೆಗೆ ಡ್ಯುವಲ್‌ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಕೀಲಿಕೈ ಇಲ್ಲದೆಯೇ ಪ್ರವೇಶ, ಸ್ಟೀಯರಿಂಗ್‌ ಮೌಂಟೆಡ್‌ ಕಂಟ್ರೋಲ್‌ ಗಳು ಮತ್ತು ಕ್ರೂಸ್‌ ಕಂಟ್ರೋಲ್‌ ಜೊತೆಗೆ ಬರಲಿದೆ.

ಸುರಕ್ಷತೆಯ ದೃಷ್ಟಿಯಿಂದ 5-ಡೋರ್‌ ಥಾರ್‌ ವಾಹನವು ಆರು ಏರ್‌ ಬ್ಯಾಗುಗಳು, ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್ (ESC),‌ ಮತ್ತು ರಿವರ್ಸಿಂಗ್‌ ಕ್ಯಾಮರಾವನ್ನು ಹೊಂದಿರಲಿದೆ.

ಇದನ್ನು ಸಹ ಓದಿರಿ: ಪರೀಕ್ಷೆ ವೇಳೆ ಮತ್ತೆ ಕಣ್ಣಿಗೆ ಬಿದ್ದ XUV300 ಫೇಸ್‌ ಲಿಫ್ಟ್‌, ಈ ಬಾರಿ ದೊಡ್ಡದಾದ ಟಚ್‌ ಸ್ಕ್ರೀನ್‌ ಜೊತೆಗೆ...

ಎಂಜಿನ್‌ ಹೇಗಿರಲಿದೆ?

ತನ್ನ ಸಣ್ಣ ವೀಲ್‌ ಬೇಸ್‌ ಆವೃತ್ತಿಯಂತೆಯೇ, 5 ಬಾಗಿಲುಗಳ ಈ ಥಾರ್‌ ವಾಹನವು 2 ಲೀಟರ್‌ ಗಳ ಟರ್ಬೋ ಪೆಟ್ರೋಲ್‌ ಮತ್ತು 2.2 ಲೀಟರುಗಳ ಡೀಸೆಲ್‌ ಎಂಜಿನ್‌ ಗಳೊಂದಿಗೆ ಬರಲಿದ್ದು, ಅಧಿಕ ಸ್ಟೇಟ್‌ ಆಫ್‌ ಟ್ಯೂನ್‌ ಹೊಂದಿರಲಿದೆ. ಥಾರ್ 5-ಡೋರ್‌ ಕಾರಿನ ಎರಡೂ ಪವರ್‌ ಟ್ರೇನ್‌ ಆಯ್ಕೆಗಳು 6-ಸ್ಪೀಡ್‌ ಮ್ಯಾನುವಲ್‌ ಮತ್ತು ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಬರಲಿವೆ. 3-ಡೋರ್‌ ಮಾದರಿಯಲ್ಲಿ ನೋಡಿರುವಂತೆ, ದೀರ್ಘ ವೀಲ್‌ ಬೇಸ್‌ ಹೊಂದಿರುವ ಈ SUV ಯು ರಿಯರ್‌ ವೀಲ್‌ ಮತ್ತು 4-ವೀಲ್‌ ಡ್ರೈವ್‌ ಟ್ರೇನ್ (4WD) ಆಯ್ಕೆಗಳನ್ನು ಹೊಂದಿರಲಿದೆ.

ಬೆಲೆ ಮತ್ತು ಸ್ಪರ್ಧೆ

ನಮ್ಮ ಪ್ರಕಾರ ಮಹೀಂದ್ರಾದ 5-ಡೋರ್‌ ಥಾರ್‌ ಕಾರಿನ ಬೆಲೆಯು ರೂ. 15 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ. ಕಾಂಪ್ಯಾಕ್ಟ್ SUV‌ ಗಳಿಗೆ ಹೋಲಿದರೆ ಒರಟಾದ ರಸ್ತೆಗಳಿಗೆ ಹೇಳಿ ಮಾಡಿಸಿದ ವಾಹನ ಇದಾಗಿದ್ದು, ಮಾರುತಿ ಜಿಮ್ನಿ ಮತ್ತು ಫೋರ್ಸ್‌ ಗೂರ್ಖ 5-ಡೋರ್‌ ಮಾದರಿಗಳ ಬದಲಿಗೆ ಹೆಚ್ಚು ಪ್ರೀಮಿಯಂ ಆಯ್ಕೆ ಎನಿಸಲಿದೆ.

ಸಂಬಂಧಿತ: ವೀಕ್ಷಿಸಿ: ವಿನ್ಯಾಸ ಮುಖ್ಯಸ್ಥ ಪ್ರತಾಪ್‌ ಬೋಸ್‌ ವಿವರಿಸಿದಂತೆ ಮಹೀಂದ್ರಾ ಥಾರ್‌ EV ಕಾನ್ಸೆಪ್ಟ್

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಥಾರ್‌ ಅಟೋಮ್ಯಾಟಿಕ್

Share via

Write your Comment on Mahindra ಥಾರ್‌ ROXX

S
sandeep
Sep 14, 2023, 5:57:00 PM

Thar 3 door me jo kmi thi wo sb isme dur ho jayegi m to lonch hote hi book kru ha….

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.42 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ