ಬುಕ್ಕಿಂಗ್ ಪ್ರಾರಂಭವಾದ ಒಂದು ಗಂಟೆಯಲ್ಲಿ ಬರೋಬ್ಬರಿ 1.76 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದ Mahindra Thar Roxx
ಮಹೀಂದ್ರ ಥಾರ್ ರಾಕ್ಸ್ ಗಾಗಿ anonymous ಮೂಲಕ ಅಕ್ಟೋಬರ್ 03, 2024 07:44 pm ರಂದು ಪ್ರಕಟಿಸಲಾಗಿದೆ
- 101 Views
- ಕಾಮೆಂಟ್ ಅನ್ನು ಬರೆಯಿರಿ
ಅಕ್ಟೋಬರ್ 3 ರಂದು ಬೆಳಿಗ್ಗೆ 11 ಗಂಟೆಯಿಂದ ಅಧಿಕೃತ ಬುಕಿಂಗ್‌ಗಳು ಪ್ರಾರಂಭವಾಗಿದ್ದು, ಆದರೆ ಅನೇಕ ಡೀಲರ್‌ಶಿಪ್‌ಗಳು ಕಳೆದ ಕೆಲಸಮಯಗಳಿಂದ ಆಫ್‌ಲೈನ್ ಬುಕಿಂಗ್‌ಗಳನ್ನು ತೆಗೆದುಕೊಳ್ಳುತ್ತಿದ್ದವು
-
ಮಹೀಂದ್ರಾ ಥಾರ್ ರೋಕ್ಸ್ ಅನ್ನು 12.99 ಲಕ್ಷ ರೂ.ನಿಂದ 22.49 ಲಕ್ಷ ರೂ.ವರೆಗಿನ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ.
-
5-ಡೋರ್‌ನ ಆಫ್‌ರೋಡರ್ ತನ್ನ ಬುಕಿಂಗ್ ಪ್ರಾರಂಭವಾದ ಒಂದು ಗಂಟೆಯಲ್ಲಿ 1,76,218 ಬುಕಿಂಗ್‌ಗಳನ್ನು ಗಳಿಸಿದೆ, ಇದರಲ್ಲಿ ಡೀಲರ್‌ಶಿಪ್ ಮಟ್ಟದಲ್ಲಿ ಕೆಲ ಸಮಯಗಳಿಂದ ಪಡೆದ ಅನಧಿಕೃತ ಬುಕಿಂಗ್‌ಗಳು ಸೇರಿವೆ.
-
ಇದನ್ನು 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುತ್ತದೆ.
-
ನಾಲ್ಕು-ಚಕ್ರ ಡ್ರೈವ್‌ಟ್ರೇನ್ ಆಯ್ಕೆಯು ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಲಭ್ಯವಿದೆ.
ಮಹೀಂದ್ರಾವು ಇತ್ತೀಚೆಗೆ 5-ಬಾಗಿಲಿನ ಥಾರ್ ರೋಕ್ಸ್‌ನ ಬುಕಿಂಗ್ ಅನ್ನು ಪ್ರಾರಂಭಿಸಿದೆ ಮತ್ತು ಭಾರತದಲ್ಲಿ ತನ್ನ ಬುಕಿಂಗ್ ಪ್ರಾರಂಭವಾದ ಮೊದಲ ಗಂಟೆಯಲ್ಲಿ ಎಸ್‌ಯುವಿವು 1,76,218 ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ದೇಶಾದ್ಯಂತದ ಅನೇಕ ಡೀಲರ್‌ಶಿಪ್‌ಗಳು ಈಗಾಗಲೇ ಆಫ್-ರೋಡರ್‌ಗಾಗಿ ಕೆಲ ಸಮಯಗಳಿಂದ ಆಫ್‌ಲೈನ್ ಬುಕಿಂಗ್‌ಗಳನ್ನು ತೆಗೆದುಕೊಂಡಿತ್ತು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ದೊಡ್ಡದಾದ ಥಾರ್‌ನ ತ್ವರಿತ ಅವಲೋಕನ ಇಲ್ಲಿದೆ.
ಮಹೀಂದ್ರಾ ಥಾರ್ ರೋಕ್ಸ್‌ನ ಫೀಚರ್‌ಗಳು
ಫೀಚರ್‌ಗಳ ಪಟ್ಟಿಯಲ್ಲಿ, ಥಾರ್ ರೋಕ್ಸ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪನರೋಮಿಕ್ ಸನ್‌ರೂಫ್, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಕೀಲಿ ರಹಿತ ಪ್ರವೇಶ, ಕ್ರೂಸ್ ಕಂಟ್ರೋಲ್ ಮತ್ತು ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳನ್ನು ಹೊಂದಿದೆ.
ಸುರಕ್ಷತೆಯ ಪ್ಯಾಕೇಜ್‌ನಲ್ಲಿ, ಇದು ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), ಇಬಿಡಿ ಜೊತೆಗೆ ಎಬಿಎಸ್, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್-ಡಿಸೆಂಟ್ ಕಂಟ್ರೋಲ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಆಸಿಸ್ಟ್ ಮತ್ತು ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್ ನಂತಹ ಲೆವೆಲ್ 2 ADAS ಫೀಚರ್‌ಗಳನ್ನು ಪಡೆಯುತ್ತದೆ.
ಇದನ್ನೂ ಓದಿ: ಮಹೀಂದ್ರಾ Thar Roxx ಬೇಸ್ Vs ಟಾಪ್ ವೇರಿಯಂಟ್: ಫೋಟೋಗಳ ಮೂಲಕ ಪ್ರಮುಖ ವ್ಯತ್ಯಾಸಗಳ ವಿವರಗಳು
ಮಹೀಂದ್ರಾ ಥಾರ್ ರೋಕ್ಸ್‌ನ ಎಂಜಿನ್ ಆಯ್ಕೆಗಳು
ಥಾರ್ ರೋಕ್ಸ್‌ನ ವಿವರವಾದ ಪವರ್‌ಟ್ರೇನ್ ವಿಶೇಷಣಗಳ ಅಂಕಿ-ಆಂಶಗಳು ಇಲ್ಲಿದೆ
ಎಂಜಿನ್ |
2-ಲೀಟರ್ ಟರ್ಬೊ-ಪೆಟ್ರೋಲ್ |
2.2-litre diesel |
ಪವರ್ |
162 ಪಿಎಸ್ (ಮ್ಯಾನುವಲ್)/177 ಪಿಎಸ್ (ಆಟೋಮ್ಯಾಟಿಕ್) |
152 ಪಿಎಸ್ (ಮ್ಯಾನುವಲ್)/ 175 ಪಿಎಸ್ ವರೆಗೆ (ಆಟೋಮ್ಯಾಟಿಕ್) |
ಟಾರ್ಕ್ |
330 ಎನ್‌ಎಮ್ (ಮ್ಯಾನುವಲ್)/380 ಎನ್‌ಎಮ್ (ಆಟೋಮ್ಯಾಟಿಕ್) |
330 ಎನ್‌ಎಮ್ (ಮ್ಯಾನುವಲ್)/ 370 ಎನ್‌ಎಮ್ ವರೆಗೆ (ಆಟೋಮ್ಯಾಟಿಕ್) |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನುವಲ್/6-ಸ್ಪೀಡ್ ಆಟೋಮ್ಯಾಟಿಕ್ |
6-ಸ್ಪೀಡ್ ಮ್ಯಾನುವಲ್/6-ಸ್ಪೀಡ್ ಆಟೋಮ್ಯಾಟಿಕ್ |
ಡ್ರೈವ್ ಟ್ರೈನ್ |
ರಿಯರ್ ವೀಲ್ ಡ್ರೈವ್ |
ರಿಯರ್ ವೀಲ್ ಡ್ರೈವ್/ 4 ವೀಲ್ ಡ್ರೈವ್ |
ಮಹೀಂದ್ರಾ ಥಾರ್ ರೋಕ್ಸ್ ಬೆಲೆಗಳು
ಮಹೀಂದ್ರಾ ಥಾರ್ ರೋಕ್ಸ್‌ನ ಬೆಲೆಯು ಅದರ ಹಿಂದಿನ ಚಕ್ರ ಮತ್ತು ನಾಲ್ಕು ಚಕ್ರ ಡ್ರೈವ್ ವೇರಿಯೆಂಟ್‌ಗಳನ್ನು ಒಳಗೊಂಡಂತೆ 12.99 ಲಕ್ಷ ರೂ.ನಿಂದ 22.49 ಲಕ್ಷ ರೂ.ಗಳ (ಎಕ್ಸ್-ಶೋರೂಮ್) ನಡುವೆ ಇದೆ. ಇದು ಫೋರ್ಸ್ ಗೂರ್ಖಾ 5-ಡೋರ್‌ನೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ ಮತ್ತು ಮಾರುತಿ ಸುಜುಕಿ ಜಿಮ್ನಿಗೆ ದೊಡ್ಡ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಥಾರ್ ರೋಕ್ಸ್ ಡೀಸೆಲ್
0 out of 0 found this helpful