• English
  • Login / Register

Mahindra XUV 3XOನ ಈ 10 ಫೀಚರ್‌ಗಳನ್ನು ಪಡೆಯಲಿರುವ Mahindra Thar Roxx

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ samarth ಮೂಲಕ ಜುಲೈ 26, 2024 08:32 pm ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್‌ನಿಂದ 360-ಡಿಗ್ರಿ ಕ್ಯಾಮೆರಾದವರೆಗೆ, ಪಟ್ಟಿಯು ಅನೇಕ ಸೌಕರ್ಯ ಮತ್ತು ಅನುಕೂಲತೆಯ ಫಿಚರ್‌ಗಳು ಮತ್ತು ನಿರ್ಣಾಯಕ ಸುರಕ್ಷತಾ ತಂತ್ರಜ್ಞಾನವನ್ನು ಒಳಗೊಂಡಿದೆ

10 Features Mahindra Thar Roxx Can Get Over XUV 3XO

 ಮಹೀಂದ್ರಾ ಥಾರ್ ರೋಕ್ಸ್ (ಥಾರ್ 5-ಡೋರ್) ಭಾರತೀಯ ಕಾರು ತಯಾರಕ ಕಂಪೆನಿಯ ಹೆಚ್ಚು ನಿರೀಕ್ಷಿತ ಎಸ್‌ಯುವಿಗಳಲ್ಲಿ ಒಂದಾಗಿದೆ, ಇದು 3-ಡೋರ್ ಥಾರ್‌ಗಿಂತ ಹೆಚ್ಚು ಪ್ರಾಯೋಗಿಕವಾಗಿರುವುದಲ್ಲದೆ, ಹೆಚ್ಚಿನ ಫಿಚರ್‌ಗಳನ್ನು ಹೊಂದಿರಲಿದೆ. ಕೆಲ ತಿಂಗಳಿನ ಹಿಂದೆ ಬಿಡುಗಡೆಯಾಗಿರುವ ಎಕ್ಸ್‌ಯುವಿ 3XO ವು ಹೊಂದಿರುವ ಫೀಚರ್‌ಗಳ ಪಟ್ಟಿಯನ್ನು ಗಮನಿಸುವಾಗ, ಮಹೀಂದ್ರಾವು ಇದರ ಕೆಲವು ಫೀಚರ್‌ಗಳನ್ನು ಅದರ ದೊಡ್ಡ ಎಸ್‌ಯುವಿಯಾದ ಥಾರ್‌ ರೂಕ್ಸ್‌ಗೂ ವರ್ಗಾಯಿಸಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಫೀಚರ್‌ಗಳಿಂದ ಲೋಡ್‌ ಆಗಿರುವ ಸಬ್-4ಎಮ್‌ ಎಸ್‌ಯುವಿಯಾದ ಮಹೀಂದ್ರಾ XUV 3XO ನಿಂದ ಥಾರ್‌ ಎರವಲು ಪಡೆಯಬಹುದಾದ ಟಾಪ್ 10 ಫೀಚರ್‌ಗಳು ಇಲ್ಲಿವೆ:

ಪ್ಯಾನರೋಮಿಕ್‌ ಸನ್‌ರೂಫ್‌

Mahindra Thar 5-door sunroof

ಮಹೀಂದ್ರಾ ಎಕ್ಸ್‌ಯುವಿ 3XO ಅನ್ನು ಬಿಡುಗಡೆ ಮಾಡಿದಾಗ ಹೆಚ್ಚು ಟ್ರೆಂಡ್‌ ಅನ್ನು ಸೃಷ್ಟಿಸಿದ ಪ್ರಮುಖ ಫೀಚರ್‌ ಎಂದರೆ ಈ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಪ್ಯಾನರೋಮಿಕ್‌ ಸನ್‌ರೂಫ್. ಇಂದು ಭಾರತೀಯ ಕಾರು ಖರೀದಿದಾರರಲ್ಲಿ ಹೆಚ್ಚು ಬೇಡಿಕೆಯಿರುವ ಫೀಚರ್‌ ಆಗಿರುವುದರಿಂದ, ಇದು ವಿಸ್ತೃತ ಥಾರ್‌ನಲ್ಲಿ ಇರಬಹುದು ಎನ್ನುವ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ, ಹಾಗೆಯೇ ಅದರ ಇತ್ತೀಚಿನ ಸ್ಪೈ ಶಾಟ್‌ಗಳಲ್ಲಿ ಕಂಡುಬಂದಿದೆ.

ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು

ಪಾರ್ಕಿಂಗ್ ಮಾಡುವಾಗ, ವಿಶೇಷವಾಗಿ ದಟ್ಟಣೆಯ ಸ್ಥಳಗಳಲ್ಲಿ ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಅತ್ಯಂತ ಉಪಯುಕ್ತವಾದ ಸುರಕ್ಷತಾ ಫೀಚರ್‌ಗಳಲ್ಲಿ ಒಂದಾಗಿದೆ. ಮುಂಬರುವ ಥಾರ್ ರೋಕ್ಸ್ ಸಹ ಎಕ್ಸ್‌ಯುವಿ 3 ಎಕ್ಸ್‌ಒನ ಟಾಪ್-ಎಂಡ್ ಆವೃತ್ತಿಗಳಲ್ಲಿ ಕಂಡುಬರುವಂತಹ ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿರುವ ಸಾಧ್ಯತೆ ದಟ್ಟವಾಗಿದೆ. 

360-ಡಿಗ್ರಿ ಕ್ಯಾಮೆರಾ

ಮತ್ತೊಂದು ಗಮನಾರ್ಹ ಸುರಕ್ಷತಾ ವೈಶಿಷ್ಟ್ಯವೆಂದರೆ 360-ಡಿಗ್ರಿ ಕ್ಯಾಮೆರಾ, ಇದು ಚಾಲಕನಿಗೆ ಕಾರ್ ಮತ್ತು ಅದರ ತಕ್ಷಣದ ಸುತ್ತಮುತ್ತಲಿನ ಎಲ್ಲಾ-ಸುತ್ತಿನ ನೋಟವನ್ನು ಒದಗಿಸುತ್ತದೆ. ಇದು ವಿಶೇಷವಾಗಿ ದಟ್ಟಣೆಯ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವಾಗ ಅಥವಾ ಭಾರೀ ದಟ್ಟಣೆಯಲ್ಲಿ ಪ್ರಯಾಣಿಸುವಾಗ ಕಾಣದ ಸ್ಥಳಗಳನ್ನು ಕಾಣಲು ಸಹಾಯ ಮಾಡುತ್ತದೆ. ಥಾರ್ ರೋಕ್ಸ್‌ನ ಪರೀಕ್ಷಾ ಆವೃತ್ತಿಯನ್ನು ಗಮನಿಸುವ ಸಮಯದಲ್ಲಿ ಈ ಫೀಚರ್‌ ಅನ್ನು ಹಲವಾರು ಬಾರಿ ಗುರುತಿಸಲಾಗಿದೆ ಮತ್ತು ಮಹೀಂದ್ರಾದಿಂದ ನೀಡುತ್ತಿರುವ ಚಿಕ್ಕ ಎಸ್‌ಯುವಿ ಕಾರು ಆದ ಎಕ್ಸ್‌ಯುವಿ 3XOನಲ್ಲಿ ಇದು ಈಗಾಗಲೇ ಇದೆ.

ಡ್ಯುಯಲ್-ಝೋನ್ ಎಸಿ

Mahindra Dual Zone Climate Control

ಎಕ್ಸ್‌ಯುವಿ 3XOನ ಕ್ಯಾಬಿನ್‌ನಲ್ಲಿರುವ ಉಪಯುಕ್ತ ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯವೆಂದರೆ ಡ್ಯುಯಲ್-ಜೋನ್ ಕ್ಲೈಮೇಟ್‌ ಕಂಟ್ರೋಲ್‌, ಇದು ಮುಂಭಾಗದ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ತಾಪಮಾನವನ್ನು ಸರಿಹೊಂದಿಸಲು ಅನುವು ಮಾಡಿಕೊಡುತ್ತದೆ. ಮಹೀಂದ್ರಾ ಇದನ್ನು ಸಬ್-4ಎಮ್‌ ಎಸ್‌ಯುವಿಯಿಂದ ಥಾರ್‌ ರೋಕ್ಸ್‌ಗೂ ರವಾನಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್

Mahindra XUV 3XO Touchscreen

ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗೆ ಸಂಬಂಧಿಸಿದಂತೆ, ಮಹೀಂದ್ರಾ ತನ್ನ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಲಭ್ಯವಿರುವ ಅದೇ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಥಾರ್ ರೋಕ್ಸ್‌ಗೆ ಒದಗಿಸುವ ನಿರೀಕ್ಷೆಯಿದೆ. ಇದು ಥಾರ್ 3-ಡೋರ್ ಮೊಡೆಲ್‌ನಿಂದ ದೊಡ್ಡ ಅಪ್‌ಗ್ರೇಡ್ ಆಗಿರುತ್ತದೆ, ಇದು 7-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ ಅನ್ನು ಹೊಂದಿದೆ, ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುತ್ತದೆ.

ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

Mahindra XUV400 driver's display

ಥಾರ್ ರೋಕ್ಸ್ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯೊಂದಿಗೆ ಆಗಮಿಸುವ ನಿರೀಕ್ಷೆಯಿದೆ. ಸ್ಕ್ರೀನ್‌ನ ಗಾತ್ರವು ಎಕ್ಸ್‌ಯುವಿ 3XOನಲ್ಲಿ ಈಗಾಗಲೇ ಲಭ್ಯವಿರುವ 10.25 ಇಂಚುಗಳಷ್ಟು ಆಗಿರಬಹುದು.

ಎಲ್ಲಾ ಡಿಸ್ಕ್ ಬ್ರೇಕ್‌ಗಳು

ಥಾರ್ ರೋಕ್ಸ್ ಎಲ್ಲಾ-ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ, ಇದರೊಂದಿಗೆ ಅದರ ಸುರಕ್ಷತಾ ಸೂಟ್‌ಗೆ ಇನ್ನಷ್ಟು ಬಲಬರಬಹುದು. ಆದರೆ ಇದರ ಸ್ಟ್ಯಾಂಡರ್ಡ್ 3-ಡೋರ್ ಥಾರ್‌ಗೆ ಹೋಲಿಸಿದರೆ ಮುಂಭಾಗದ ಚಕ್ರಗಳಲ್ಲಿ ಮಾತ್ರ ಡಿಸ್ಕ್ ಬ್ರೇಕ್‌ಗಳನ್ನು ಪಡೆಯುತ್ತದೆ. ಮಹೀಂದ್ರಾದ ಇತ್ತೀಚಿನ ಮಾದರಿಯಾದ ಎಕ್ಸ್‌ಯುವಿ 3 ಎಕ್ಸ್‌ಒವು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಪ್ರಮಾಣಿತವಾಗಿ ನೀಡುತ್ತದೆ, ಇದನ್ನು ಮಹೀಂದ್ರಾವು ಥಾರ್ ರೋಕ್ಸ್‌ಗೆ ಅಳವಡಿಸಿಕೊಳ್ಳಬಹುದು.

ADAS

Mahindra Thar 5-door cabin spied

ಎಕ್ಸ್‌ಯುವಿ 3 ಎಕ್ಸ್‌ಒನಲ್ಲಿ ಕಂಡುಬರುವ ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS), ಥಾರ್ 5-ಡೋರ್ ಆವೃತ್ತಿಯಲ್ಲಿಯು ನೀಡಬಹುದಾದ ಫೀಚರ್‌ಗಳಲ್ಲಿ ಒಂದಾಗಿದೆ. ಥಾರ್ ರೋಕ್ಸ್‌ನಲ್ಲಿ ನಿರೀಕ್ಷಿತ ಕೆಲವು ಪ್ರಮುಖ ADAS ಫಿಚರ್‌ಗಳೆಂದರೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಡಿಕ್ಕಿಯ ವಾರ್ನಿಂಗ್‌, ಮತ್ತು ಲೇನ್ ಚೇಂಜ್ ಅಸಿಸ್ಟ್.

ವೈರ್‌ಲೆಸ್ ಫೋನ್ ಚಾರ್ಜರ್

Mahindra XUV700 wireless phone charging pad

ಪ್ರಯಾಣಿಕರ ಅನುಕೂಲಕ್ಕಾಗಿ, ಮಹೀಂದ್ರಾ ತನ್ನ ಮುಂಬರುವ ಆಫ್-ರೋಡರ್‌ನಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ನೀಡಬಹುದು, ಇದು ಈಗಾಗಲೇ ಎಕ್ಸ್‌ಯುವಿ 3 ಎಕ್ಸ್‌ಒನಲ್ಲಿ ಲಭ್ಯವಿದೆ. 

6 ಏರ್‌ಬ್ಯಾಗ್‌ಗಳು

ಥಾರ್ 5-ಡೋರ್ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್‌ ಆಗಿ ಪಡೆಯುವ ಸಾಧ್ಯತೆಯಿದೆ, ಇದನ್ನು ಎಕ್ಸ್‌ಯುವಿ 3 ಎಕ್ಸ್‌ಒನಿಂದ ಎರವಲು ಪಡೆಯುವ ನಿರೀಕ್ಷೆಯಿದೆ.  ಇದಕ್ಕೆ ತದ್ವಿರುದ್ಧವಾಗಿ, ಪ್ರಸ್ತುತ 3-ಡೋರ್‌ನ ಥಾರ್ ಮುಂಭಾಗದಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಮಾತ್ರ ಪ್ರಮಾಣಿತವಾಗಿ ನೀಡುತ್ತದೆ.

ಟಿಪಿಎಮ್‌ಎಸ್‌

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಫೀಚರ್‌ ಪ್ರಸ್ತುತ ಥಾರ್ 3-ಡೋರ್‌ ಮೊಡೆಲ್‌ ಮತ್ತು ಎಕ್ಸ್‌ಯುವಿ 3 ಎಕ್ಸ್‌ಒನಲ್ಲಿ ಲಭ್ಯವಿದ್ದು, ಇದು ಮುಂಬರುವ ಥಾರ್ ರೋಕ್ಸ್‌ನಲ್ಲಿಯೂ ಲಭ್ಯವಾಗುವ ನಿರೀಕ್ಷೆಯಿದೆ.

ಇವುಗಳು ಮಹೀಂದ್ರಾ ಎಕ್ಸ್‌ಯುವಿ 3XO ನಿಂದ ಥಾರ್ ರೋಕ್ಸ್ ಪಡೆಯಬಹುದೆಂದು ನಾವು ನಿರೀಕ್ಷಿಸುವ ಕೆಲವು ಪ್ರಮುಖ ವೈಶಿಷ್ಟ್ಯಗಳು. ಎರಡು ಎಸ್‌ಯುವಿ ಕಾರುಗಳ ನಡುವೆ ಬೇರೆ ಏನು ಸಾಮಾನ್ಯವಾಗಿರಬಹುದು ಎಂದು ನೀವು ಯೋಚಿಸುತ್ತೀರಿ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಥಾರ್ ರೋಕ್ಸ್ ಕುರಿತ ಎಲ್ಲಾ ಇತ್ತೀಚಿನ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಮಹೀಂದ್ರಾ ಥಾರ್ ಆಟೋಮ್ಯಾಟಿಕ್

was this article helpful ?

Write your Comment on Mahindra ಥಾರ್‌ ROXX

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience