Mahindraದಿಂದ ತನ್ನ ಮೊದಲ Thar ರೋಕ್ಸ್‌ನ ಹರಾಜು: ರಿಜಿಸ್ಟ್ರೇಷನ್ ಈಗಾಗಲೇ ಓಪನ್ ಆಗಿದೆ!
ಮಹೀಂದ್ರ ಥಾರ್ ರಾಕ್ಸ್ ಗಾಗಿ shreyash ಮೂಲಕ ಸೆಪ್ಟೆಂಬರ್ 12, 2024 09:49 pm ರಂದು ಪ್ರಕಟಿಸಲಾಗಿದೆ
- 66 Views
- ಕಾಮೆಂಟ್ ಅನ್ನು ಬರೆಯಿರಿ
ಮೊದಲ ಥಾರ್ ರೋಕ್ಸ್ ಅನ್ನು ಮಾರಾಟ ಮಾಡಿ ಬಂದ ಹಣವನ್ನು ವಿಜೇತರು ಆಯ್ಕೆ ಮಾಡುವ ನಾಲ್ಕು ಲಾಭರಹಿತ ಸಂಸ್ಥೆಗಳಲ್ಲಿ ಒಂದಕ್ಕೆ ದಾನ ಮಾಡಲಾಗುತ್ತದೆ
-
ಹರಾಜು ಪ್ರಕ್ರಿಯೆಯು ಸೆಪ್ಟೆಂಬರ್ 15 ಮತ್ತು ಸೆಪ್ಟೆಂಬರ್ 16 ರ ನಡುವೆ ನಡೆಯಲಿದೆ.
-
ಮಾರಾಟವಾಗುವ ಮೊದಲ ಥಾರ್ ರೋಕ್ಸ್ ವಿಶೇಷ VIN ಸಂಖ್ಯೆ 0001 ಅನ್ನು ಹೊಂದಿರುತ್ತದೆ.
-
ಇದು ಆನಂದ್ ಮಹೀಂದ್ರಾ ಅವರ ಸಹಿಯನ್ನು ಒಳಗೊಂಡ ಬ್ಯಾಡ್ಜ್ ಅನ್ನು ಕೂಡ ಹೊಂದಿರುತ್ತದೆ.
-
ಥಾರ್ ರೋಕ್ಸ್ ನ ಟಾಪ್-ಸ್ಪೆಕ್ AX7L ಡೀಸೆಲ್ ಆಟೋಮ್ಯಾಟಿಕ್ 4WD ವೇರಿಯಂಟ್ ಗಾಗಿ ಬಿಡ್ಡಿಂಗ್ ಮಾಡಲಾಗುತ್ತದೆ.
-
2020 ರಲ್ಲಿ, ಥಾರ್‌ನ 3-ಡೋರ್ ವರ್ಷನ್ ಅನ್ನು ರೂ. 1.11 ಕೋಟಿಗೆ ಹರಾಜು ಮಾಡಲಾಗಿತ್ತು.
ಇತಿಹಾಸವು ಮರುಕಳಿಸುತ್ತಿದೆ, ಏಕೆಂದರೆ VIN 0001 ನಂಬರ್ ಹೊಂದಿರುವ ಮೊದಲ ಮಹೀಂದ್ರಾ ಥಾರ್ ರೋಕ್ಸ್ ಅನ್ನು 2020 ರಲ್ಲಿ ಮೊದಲ 3-ಡೋರ್ ಮಾಡೆಲ್ ಹರಾಜು ಮಾಡಿದಂತೆ ಮಾಡಲಾಗುತ್ತದೆ. ಮಹೀಂದ್ರಾ ಈ ಹರಾಜಿಗಾಗಿ ಆನ್‌ಲೈನ್ ಸೈನ್-ಅಪ್‌ಗಳನ್ನು ಪ್ರಾರಂಭಿಸಿದೆ ಮತ್ತು ಸಂಗ್ರಹಿಸಿದ ಹಣವನ್ನು ವಿಜೇತರು ಆಯ್ಕೆ ಮಾಡಿದ ಚಾರಿಟಿಗೆ ನೀಡಲಾಗುತ್ತದೆ. ಬಿಡ್ಡಿಂಗ್ ಆನ್‌ಲೈನ್‌ನಲ್ಲಿ ಸೆಪ್ಟೆಂಬರ್ 15, 2024 ರಂದು ಸಂಜೆ 5 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಸಂಜೆ 7 ಗಂಟೆಗೆ ಕೊನೆಗೊಳ್ಳುತ್ತದೆ.
ವಿಜೇತರು ಈ ಕೆಳಗೆ ನೀಡಿರುವ ನಾಲ್ಕು ಲಾಭರಹಿತ ಸಂಸ್ಥೆಗಳಲ್ಲಿ ಒಂದಕ್ಕೆ ದಾನ ಮಾಡಬಹುದು:
-
ನಾಂದಿ ಫೌಂಡೇಶನ್ (ಬಾಲಕಿಯರು ಮತ್ತು ಮಹಿಳೆಯರ ಸಬಲೀಕರಣ),
-
BAIF ಡೆವಲಪ್ಮೆಂಟ್ ರಿಸರ್ಚ್ ಫೌಂಡೇಶನ್ (ಜಲಾನಯನ ಮತ್ತು ಗ್ರಾಮೀಣ ಜೀವನೋಪಾಯ ಅಭಿವೃದ್ಧಿ),
-
ವಾಟರ್ ಶೆಡ್ ಆರ್ಗನೈಸೇಶನ್ ಟ್ರಸ್ಟ್ (ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ ಮತ್ತು ಕೃಷಿ), ಅಥವಾ
-
ಯುನೈಟೆಡ್ ವೇ ಮುಂಬೈ (ರಸ್ತೆ ಸುರಕ್ಷತೆಯನ್ನು ಪ್ರೋತ್ಸಾಹಿಸುತ್ತದೆ).
2020 ರಲ್ಲಿ, ಮಹೀಂದ್ರಾ ಮೊದಲ 3-ಡೋರ್ ಥಾರ್ ಅನ್ನು ಹರಾಜಿನಲ್ಲಿ ರೂ.1.11 ಕೋಟಿಗೆ ಮಾರಾಟ ಮಾಡಿತ್ತು. ಕೋವಿಡ್ ಪರಿಹಾರ ಕಾರ್ಯಗಳಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಸಹಾಯ ಮಾಡಲು ಈ ಹಣವನ್ನು ನೀಡಲಾಗಿದೆ. ನವದೆಹಲಿಯ ಆಕಾಶ್ ಮಿಂಡಾ ಎಂಬ ವ್ಯಕ್ತಿಯು 3-ಡೋರ್ ಥಾರ್ ಬಿಡ್ ಅನ್ನು ಗೆದ್ದಿದ್ದರು.
ಇದನ್ನು ಕೂಡ ಓದಿ: ಮಾರುತಿ ಜಿಮ್ನಿಗೆ ಹೋಲಿಸಿದರೆ 5 ಡೋರ್ ಮಹೀಂದ್ರ ಥಾರ್ ರೋಕ್ಸ್ ನೀಡುವ 10 ಫೀಚರ್ ಗಳ ಪಟ್ಟಿ ಇಲ್ಲಿದೆ
VIN 0001 ಥಾರ್ ರೋಕ್ಸ್ ಕುರಿತು ಇನ್ನಷ್ಟು ವಿವರಗಳು
ಮಹೀಂದ್ರಾ ಥಾರ್ ರೋಕ್ಸ್‌ನ ಟಾಪ್-ಸ್ಪೆಕ್ AX7 L ಡೀಸೆಲ್ ಆಟೋಮ್ಯಾಟಿಕ್ 4WD ವೇರಿಯಂಟ್ ಅನ್ನು ಹರಾಜು ಮಾಡಲಾಗುವುದು ಮತ್ತು ವಿಜೇತರು ಲಭ್ಯವಿರುವ ಎಲ್ಲಾ ಏಳು ಬಣ್ಣಗಳಾದ ಡೀಪ್ ಫಾರೆಸ್ಟ್, ಎವರೆಸ್ಟ್ ವೈಟ್, ಟ್ಯಾಂಗೋ ರೆಡ್, ಬ್ಯಾಟಲ್‌ಶಿಪ್ ಗ್ರೇ, ನೆಬ್ಯುಲಾ ಬ್ಲೂ, ಬರ್ನ್ಟ್ ಸಿಯೆನ್ನಾ, ಅಥವಾ ಸ್ಟೆಲ್ತ್ ಬ್ಲ್ಯಾಕ್ ನಿಂದ ಆಯ್ಕೆ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಮೊದಲ ಥಾರ್ ರೋಕ್ಸ್ 'VIN 0001' ಜೊತೆಗೆ ಆನಂದ್ ಮಹೀಂದ್ರಾ ಅವರ ಸಹಿಯಿರುವ ಬ್ಯಾಡ್ಜ್ ಅನ್ನು ಕೂಡ ಹೊಂದಿದೆ.
ಈ ದೊಡ್ಡ ಗಾತ್ರದ ಥಾರ್‌ನ ಟಾಪ್-ಸ್ಪೆಕ್ ವರ್ಷನ್ ಡ್ಯುಯಲ್ 10.25-ಇಂಚಿನ ಸ್ಕ್ರೀನ್ ಗಳು (ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ಆಟೋ AC, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 6-ವೇ ಪವರ್ಡ್ ಡ್ರೈವರ್ ಸೀಟ್ ಮತ್ತು ಪನರೋಮಿಕ್ ಸನ್‌ರೂಫ್‌ನಂತಹ ಫೀಚರ್ ಗಳನ್ನು ಪಡೆಯುತ್ತದೆ. ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಫೀಚರ್ ಗಳು ಒಳಗೊಂಡಿದೆ.
ಹರಾಜಿಗೆ ಸಿದ್ಧವಾಗಿರುವ ಮಾಡೆಲ್ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ ಮತ್ತು ಅದರ ವಿವರವಾದ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ನೀಡಲಾಗಿದೆ:
ಸ್ಪೆಸಿಫಿಕೇಷನ್ |
ಮಹೀಂದ್ರ ಥಾರ್ ರೋಕ್ಸ್ |
ಇಂಜಿನ್ |
2.2-ಲೀಟರ್ ಡೀಸೆಲ್ |
ಪವರ್ |
175 PS |
ಟಾರ್ಕ್ |
370 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ AT* |
ಡ್ರೈವ್ ಪ್ರಕಾರ |
4WD |
*AT - ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಇದನ್ನು ಕೂಡ ಓದಿ: ಈಗ ರಾಷ್ಟ್ರೀಯ ಮತ್ತು ಎಕ್ಸ್‌ಪ್ರೆಸ್ ಹೆದ್ದಾರಿಗಳಲ್ಲಿ ಯಾವುದೇ ಟೋಲ್ ಪಾವತಿ ಮಾಡದೇ ನಿಮ್ಮ ವಾಹನದಲ್ಲಿ ಓಡಾಡಬಹುದು, ಆದರೆ ಸೀಮಿತ ದೂರಕ್ಕೆ ಮಾತ್ರ
ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರ ಥಾರ್ ರೋಕ್ಸ್ ಬೆಲೆಯು ರೂ. 12.99 ಲಕ್ಷದಿಂದ ರೂ. 20.49 ಲಕ್ಷದವರೆಗೆ (ಪರಿಚಯಾತ್ಮಕ, ಎಕ್ಸ್ ಶೋ ರೂಂ ಪ್ಯಾನ್ ಇಂಡಿಯಾ) ಇದೆ. ಥಾರ್ ರೋಕ್ಸ್‌ನ 4WD ವೇರಿಯಂಟ್ ಗಳ ಬೆಲೆಗಳನ್ನು ಮಹೀಂದ್ರಾ ಇನ್ನೂ ಬಹಿರಂಗಪಡಿಸಿಲ್ಲ. ಇದು ಫೋರ್ಸ್ ಗೂರ್ಖಾ 5-ಡೋರ್ ಮತ್ತು ಮಾರುತಿ ಜಿಮ್ನಿಗೆ ಪ್ರತಿಸ್ಪರ್ಧಿಯಾಗಿದೆ.
ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಮಹೀಂದ್ರ ಥಾರ್ ರೋಕ್ಸ್ ಆನ್ ರೋಡ್ ಬೆಲೆ