Mahindra XUV 3XO ನ ಪೆಟ್ರೋಲ್ ಆವೃತ್ತಿಗೆ ಹೆಚ್ಚಿನ ಡಿಮ್ಯಾಂಡ್, ಒಟ್ಟು ಬುಕಿಂಗ್‌ನಲ್ಲಿ ಸುಮಾರು 70% ನಷ್ಟು ಇದರದ್ದೇ ಪ್ರಾಬಲ್ಯ..!
ಇದರ ಬುಕಿಂಗ್‌ಗಳು ಮೇ 15 ರಂದು ಪ್ರಾರಂಭವಾಯಿತು ಮತ್ತು ಈ ಎಸ್‌ಯುವಿಯು ಕೇವಲ ಒಂದು ಗಂಟೆಯೊಳಗೆ 50,000 ಆರ್ಡರ್‌ಗಳನ್ನು ಗಳಿಸಿತ್ತು.
- ಮಹೀಂದ್ರಾ 2024ರ ಏಪ್ರಿಲ್‌ನಲ್ಲಿ XUV 3XO (ಫೇಸ್‌ಲಿಫ್ಟೆಡ್ XUV300) ಅನ್ನು ಪರಿಚಯಿಸಿತು.
- ಇದು 1.2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಅವುಗಳ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಪಡೆಯುತ್ತದೆ.
- ಪೆಟ್ರೋಲ್ ಆವೃತ್ತಿಗಳು ಡೀಸೆಲ್ ಆವೃತ್ತಿಗಳಿಗಿಂತ ಸುಮಾರು 1.6 ಲಕ್ಷ ರೂ.ನಷ್ಟು ಕಡಿಮೆ ಬೆಲೆಯನ್ನು ಹೊಂದಿದೆ.
- ಭಾರತದಾದ್ಯಂತ ಮಹೀಂದ್ರಾದ ಈ ಎಸ್‌ಯುವಿಯ ಪರಿಚಯಾತ್ಮಕ ಬೆಲೆಗಳು 7.49 ಲಕ್ಷ ರೂ.ನಿಂದ 15.49 ಲಕ್ಷ ರೂ.ನ(ಎಕ್ಸ್ ಶೋರೂಂ) ರೇಂಜ್‌ನಲ್ಲಿದೆ.
2024ರ ಏಪ್ರಿಲ್ ಅಂತ್ಯದ ವೇಳೆಗೆ ನಾವು ಮಹೀಂದ್ರಾ XUV 3XO ಅನ್ನು XUV300 SUV ಯ ಫೇಸ್‌ಲಿಫ್ಟೆಡ್ ಆವೃತ್ತಿಯಾಗಿ ಪಡೆದುಕೊಂಡಿದ್ದೇವೆ. ಕಾರು ತಯಾರಕರು ಮೇ 15 ರಂದು ಈ ಹೊಸ ಎಸ್‌ಯುವಿಯ ಬುಕಿಂಗ್ ಅನ್ನು ಪ್ರಾರಂಭಿಸಿದ್ದರು ಮತ್ತು ಪ್ರಾರಂಭಿಸಿದ ಮೊದಲ ಗಂಟೆಯೊಳಗೆ 50,000 ಕ್ಕೂ ಮಿಕ್ಕಿ ಆರ್ಡರ್‌ಗಳನ್ನು ಪಡೆಯುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿತ್ತು. ಇತ್ತೀಚೆಗೆ ನಡೆದ ಹೂಡಿಕೆದಾರರ ಸಭೆಯಲ್ಲಿ, ಮಹೀಂದ್ರಾದ ಉನ್ನತ ಅಧಿಕಾರಿಗಳು ಹೊಸ ಎಸ್‌ಯುವಿಗಾಗಿ ಸ್ವೀಕರಿಸಿದ ಆರ್ಡರ್‌ಗಳ ಕುರಿತು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಪೆಟ್ರೋಲ್‌ಗೆ ಹೆಚ್ಚಿನ ಡಿಮ್ಯಾಂಡ್
ಸಾಮಾನ್ಯವಾಗಿ ಮಹೀಂದ್ರಾ ಎಸ್‌ಯುವಿಗಳಿಗೆ ಇರುವ ಬೇಡಿಕೆಗಳಿಗಿಂತ ವಿರುದ್ಧವಾಗಿ, ಎಕ್ಸ್‌ಯುವಿ 3XO ಪೆಟ್ರೋಲ್ ಆವೃತ್ತಿಗಳು ಇಲ್ಲಿಯವರೆಗೆ ಮಾಡಲಾದ ಒಟ್ಟು ಬುಕಿಂಗ್‌ಗಳಲ್ಲಿ ಸುಮಾರು 70 ಪ್ರತಿಶತದಷ್ಟು ಪಾಲನ್ನು ಹೊಂದಿವೆ ಎಂದು ಮಹೀಂದ್ರಾ ಪ್ರತಿನಿಧಿಗಳು ಹೇಳಿದ್ದಾರೆ. ಇದು ಸಂಪೂರ್ಣವಾಗಿ ಆಶ್ಚರ್ಯಕರವಲ್ಲದಿದ್ದರೂ, ಕಳೆದ ಕೆಲ ವರ್ಷಗಳಲ್ಲಿ XUV300 ನ ಮಾರಾಟದ ವಿಭಜನೆಯು ಎರಡು ಇಂಧನ ಪ್ರಕಾರಗಳ ನಡುವೆ ತುಲನಾತ್ಮಕವಾಗಿ ಸಮತೋಲಿತವಾಗಿದೆ. 2024 ಜನವರಿಯಲ್ಲಿ, ಪೆಟ್ರೋಲ್ ಆವೃತ್ತಿಗಳ ಮಾರಾಟದ ಪಾಲು 45 ಪ್ರತಿಶತದಷ್ಟು ಇತ್ತು, ಉಳಿದ 55 ಪ್ರತಿಶತವು ಎಸ್‌ಯುವಿಯ ಡೀಸೆಲ್ ಮತ್ತು EV (XUV400) ಆವೃತ್ತಿಗಳನ್ನು ಒಳಗೊಂಡಿತ್ತು.
ಪೆಟ್ರೋಲ್ ಆವೃತ್ತಿಗಳು ಹೆಚ್ಚಿನ ಬೇಡಿಕೆಯನ್ನು ಪಡೆಯುವುದಕ್ಕೆ ಇನ್ನೊಂದು ಕಾರಣವೆಂದರೆ ಅವುಗಳು ತಮ್ಮ ಡೀಸೆಲ್ ಪ್ರತಿರೂಪಗಳಿಗಿಂತ 1.6 ಲಕ್ಷ ರೂ.ಗಳಷ್ಟು ಕಡಿಮೆ ಬೆಲೆಯನ್ನು ಹೊಂದಿದೆ. ಥಾರ್, ಸ್ಕಾರ್ಪಿಯೋ N ಅಥವಾ XUV700 ನಂತಹ ದೊಡ್ಡದಾದ ಮತ್ತು ಹೆಚ್ಚಿನ ಬೆಲೆಯ ಮಹೀಂದ್ರಾ ಎಸ್‌ಯುವಿಗಳನ್ನು ಖರೀದಿಸಲು ಬಯಸುವವರಿಗೆ ಹೋಲಿಸಿದರೆ ಈ ಬೆಲೆ ಕಡಿತವು ಸಬ್-4ಎಮ್ ಎಸ್‌ಯುವಿ ಅನ್ನು ಖರೀದಿಸುವ ನಿರ್ಧಾರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ
ಪವರ್‌ಟ್ರೇನ್‌ಗಳ ಆಪ್‌ಡೇಟೆಡ್ ಸೆಟ್
ಫೇಸ್‌ಲಿಫ್ಟ್‌ನೊಂದಿಗೆ, ಮಹೀಂದ್ರಾ ತನ್ನ ಸಬ್-4ಎಮ್ ಎಸ್‌ಯುವಿಯನ್ನು ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳೊಂದಿಗೆ ನೀಡುವುದನ್ನು ಮುಂದುವರಿಸಿದೆ, ಆದರೆ ಇದರ ಪೆಟ್ರೋಲ್ ಎಂಜಿನ್‌ಗಳಲ್ಲಿ AMT ಆಟೋಮ್ಯಾಟಿಕ್‌ನ ಬದಲಿಗೆ 'ಸರಿಯಾದ' ಟಾರ್ಕ್ ಕನ್ವರ್ಟರ್ ಯುನಿಟ್‌ನೊಂದಿಗೆ ನೀಡುತ್ತಿದೆ. ಕೊಡುಗೆಯಲ್ಲಿರುವ ಎಂಜಿನ್-ಗೇರ್‌ಬಾಕ್ಸ್ ಕಾಂಬಿನೇಶನ್‌ನ ಕುರಿತ ಒಂದು ನೋಟ ಇಲ್ಲಿದೆ:
ಎಂಜಿನ್‌ಗಳು |
1.2-ಲೀಟರ್ ಟರ್ಬೊ-ಪೆಟ್ರೋಲ್ |
1.2-ಲೀಟರ್ TGDi ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
112 ಪಿಎಸ್ |
130 ಪಿಎಸ್ |
117 ಪಿಎಸ್ |
ಟಾರ್ಕ್ |
200 ಎನ್ಎಂ |
250 ಎನ್ಎಂ ವರೆಗೆ |
300 ಎನ್ಎಂ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನುಯಲ್, 6-ಸ್ಪೀಡ್ ಆಟೋಮ್ಯಾಟಿಕ್ |
6-ಸ್ಪೀಡ್ ಮ್ಯಾನುಯಲ್, 6-ಸ್ಪೀಡ್ ಆಟೋಮ್ಯಾಟಿಕ್ |
6-ಸ್ಪೀಡ್ ಮ್ಯಾನುಯಲ್, 6-ಸ್ಪೀಡ್ ಆಟೋಮ್ಯಾಟಿಕ್ |
ಕ್ಲೈಮ್ ಮಾಡಲಾದ ಮೈಲೇಜ್ |
ಪ್ರತಿ ಲೀ.ಗೆ 18.89 ಕಿ.ಮೀ, ಪ್ರತಿ ಲೀ.ಗೆ 17.96 ಕಿ.ಮೀ. |
ಪ್ರತಿ ಲೀ.ಗೆ 20.1 ಕಿ.ಮೀ., ಪ್ರತಿ ಲೀ.ಗೆ 18.2 ಕಿ.ಮೀ. |
ಪ್ರತಿ ಲೀ.ಗೆ 20.6 ಕಿ.ಮೀ., ಪ್ರತಿ ಲೀ.ಗೆ 21.2 ಕಿ.ಮೀ. |
ಟಾಪ್-ಸ್ಪೆಕ್ ಪೆಟ್ರೋಲ್-ಆಟೋಮ್ಯಾಟಿಕ್ ವೇರಿಯೆಂಟ್‌ಗಳು ಜಿಪ್, ಜ್ಯಾಪ್ ಮತ್ತು ಜೂಮ್ ಎಂಬ ಮೂರು ಡ್ರೈವ್ ಮೋಡ್‌ಗಳನ್ನು ಸಹ ಪಡೆಯುತ್ತವೆ. ಬಹುಶಃ ಸೆಗ್ಮೆಂಟ್‌ನ-ಲೀಡಿಂಗ್ ಪರ್ಫಾರ್ಮೆನ್ಸ್‌ನ ಕಾಂಬಿನೇಷನ್‌ನೊಂದಿಗೆ ಹೆಚ್ಚು ಸಂಸ್ಕರಿಸಿದ ಆಟೋಮ್ಯಾಟಿಕ್ ಪವರ್‌ಟ್ರೇನ್‌ನ ಆಯ್ಕೆಯು ಪೆಟ್ರೋಲ್-ಚಾಲಿತ 3XO ಆವೃತ್ತಿಗಳ ಜನಪ್ರಿಯತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.
ಇದನ್ನೂ ಓದಿ: Mahindra XUV 3XO ವಿಮರ್ಶೆ: ಫಸ್ಟ್ ಡ್ರೈವ್‌ನ ಅನುಭವ
ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
ಭಾರತದಾದ್ಯಂತ ಮಹೀಂದ್ರಾ XUV 3XO ನ ಪರಿಚಯಾತ್ಮಕ ಬೆಲೆಗಳು 7.49 ಲಕ್ಷ ರೂ.ನಿಂದ 15.49 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ವರೆಗೆ ಇರುತ್ತದೆ. ಇದು ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್ ಮತ್ತು ಮುಂಬರುವ ಸ್ಕೋಡಾ ಸಬ್-4m ಎಸ್‌ಯುವಿಗಳೊಂದಿಗೆ ಸ್ಪರ್ಧೆಯನ್ನು ಒಡ್ಡುತ್ತದೆ. ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್-4m ಕ್ರಾಸ್‌ಒವರ್‌ಗಳಿಗೂ ಮಹೀಂದ್ರಾ ಎಸ್‌ಯುವಿ ಪರ್ಯಾಯವಾಗಿದೆ.
ಇನ್ನಷ್ಟು ಓದಿ: ಎಕ್ಸ್‌ಯುವಿ 3XO ಎಎಮ್‌ಟಿ