XUV 3XO ಎಂದು ಬದಲಾದ ಮಹೀಂದ್ರಾ XUV300 ಫೇಸ್‌ಲಿಫ್ಟ್, ಮೊದಲ ಟೀಸರ್ ಔಟ್

published on ಏಪ್ರಿಲ್ 08, 2024 10:28 pm by rohit for ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ

 • 184 Views
 • ಕಾಮೆಂಟ್‌ ಅನ್ನು ಬರೆಯಿರಿ

ಫೇಸ್‌ಲಿಫ್ಟೆಡ್ XUV300 ಅನ್ನು ಈಗ XUV 3XO ಎಂದು ಕರೆಯಲಾಗುತ್ತದೆ, ಇದು ಏಪ್ರಿಲ್ 29 ರಂದು ತನ್ನ ಮೊದಲ ಬಾರಿಗೆ ಅನಾವರಣಗೊಳ್ಳಲಿದೆ

2024 Mahindra XUV300 (now called the XUV 3XO) teased for the first time

 • 2019 ರಲ್ಲಿ SUV ಬಿಡುಗಡೆಯಾದ ನಂತರ ಇದು ಅದಕ್ಕಾಗುವ ಮೊದಲ ಪ್ರಮುಖ ಆಪ್‌ಡೇಟ್‌ ಆಗಿದೆ.
 • ಹೊಸ ಟೀಸರ್ ಅದರ ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳು, ಪರಿಷ್ಕೃತ ಹೆಡ್‌ಲೈಟ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಗ್ರಿಲ್ ಅನ್ನು ತೋರಿಸುತ್ತದೆ.
 • ಕ್ಯಾಬಿನ್ ಅಪ್‌ಡೇಟ್‌ಗಳು ತಾಜಾ ಅಪ್‌ಹೋಲ್‌ಸ್ಟರಿ ಮತ್ತು ಮರುಹೊಂದಿಸಲಾದ ಡ್ಯಾಶ್‌ಬೋರ್ಡ್ ಲೇಔಟ್ ಅನ್ನು ಒಳಗೊಂಡಿದೆ.
 • ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆರು ಏರ್‌ಬ್ಯಾಗ್‌ಗಳು ಮತ್ತು ಪ್ರಾಯಶಃ ADAS ನಂತಹ ಹೊಸ ವೈಶಿಷ್ಟ್ಯಗಳನ್ನು ಪಡೆಯುವ ಸಾಧ್ಯತೆಯಿದೆ.
 • ಮೊದಲ ಬಾರಿಗೆ ಅನಾವರಣಗೊಂಡ ನಂತರ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ, ಎಕ್ಸ್ ಶೋರೂಂ ಬೆಲೆಗಳು 9 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು.

ಹಲವಾರು ಬಾರಿ ಪರೀಕ್ಷೆಯ ವೇಳೆಯಲ್ಲಿ ರಹಸ್ಯವಾಗಿ ಸೆರೆ ಹಿಡಿಯಲ್ಪಟ್ಟ ನಂತರ, ಫೇಸ್‌ಲಿಫ್ಟೆಡ್ ಮಹೀಂದ್ರಾ ಎಕ್ಸ್‌ಯುವಿ300 ಅಂತಿಮವಾಗಿ ಏಪ್ರಿಲ್ 29 ರಂದು ಮೊದಲ ಬಾರಿಗೆ ಅನಾವರಣಗೊಳ್ಳಲಿದೆ. ಪ್ರಕಟಣೆಯು ಮೊದಲ ಅಧಿಕೃತ ಟೀಸರ್ ಜೊತೆಗೆ ಕೆಲವು ಹೊಸ ವಿನ್ಯಾಸದ ವಿವರಗಳನ್ನು ಬಹಿರಂಗಪಡಿಸಿತು. ಆಶ್ಚರ್ಯಕರ ಸಂಗತಿಯೆಂದರೆ, ಮಹೀಂದ್ರಾ ಈಗ ಹಳೆಯ 'XUV300' ನಾಮಫಲಕವನ್ನು ಬಳಸುವ ಬದಲು XUV 3XO ಎಂದು ಮರುನಾಮಕರಣ ಮಾಡಿದೆ. 

ಟೀಸರ್ ಏನನ್ನು ಬಹಿರಂಗಪಡಿಸುತ್ತದೆ?

ಕಿರು ವೀಡಿಯೊ ನಮಗೆ ಎಸ್‌ಯುವಿಯ ಹೊಸ ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಎತ್ತರದ ಬಂಪರ್‌ನ ಒಂದು ನೋಟವನ್ನು ನೀಡುತ್ತದೆ. ಮಹೀಂದ್ರಾ ಹೊಸ ಲೈಟಿಂಗ್ ಸೆಟಪ್ ಅನ್ನು ಸರಿಹೊಂದಿಸಲು ಟೈಲ್‌ಗೇಟ್ ಅನ್ನು ನವೀಕರಿಸಿದೆ ಮತ್ತು ಇದು ಮಹೀಂದ್ರಾದ "ಟ್ವಿನ್ ಪೀಕ್ಸ್" ಲೋಗೋ ಜೊತೆಗೆ ತಾಜಾ "XUV 3XO" ಮಾನಿಕರ್ ಅನ್ನು ಒಳಗೊಂಡಿದೆ.

Mahindra XUV 3XO headlight

ಟೀಸರ್‌ನಲ್ಲಿ, ನವೀಕರಿಸಿದ ಹೆಡ್‌ಲೈಟ್ ಕ್ಲಸ್ಟರ್‌ಗಳಿಂದ ಸುತ್ತುವರೆದಿರುವ ಗ್ರಿಲ್‌ನಲ್ಲಿ ಕ್ರೋಮ್-ಫಿನಿಶ್‌ ಅಗಿರುವ  ತ್ರಿಕೋನ ಅಲಂಕರಣಗಳನ್ನು ಒಳಗೊಂಡಿರುವ ತಾಜಾ ಫೆಸಿಯಾವನ್ನು (ಎದುರಿನ ಬಂಪರ್‌) ಸಹ ನಾವು ಗಮನಿಸಬಹುದು. XUV 3XO ಫಾಂಗ್-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಫಾಗ್‌ ಲ್ಯಾಂಪ್‌ಗಳು ಮತ್ತು ರಿಫ್ರೆಶ್ ಮಾಡಿದ ಅಲಾಯ್‌ ವೀಲ್‌ ವಿನ್ಯಾಸವನ್ನು ಪಡೆಯಲು ನಿರ್ಧರಿಸಿದೆ.

ಇಂಟಿರೀಯರ್‌ನಲ್ಲಾದ ಆಪ್‌ಡೇಟ್‌ಗಳು

ನವೀಕರಿಸಿದ ಕ್ಯಾಬಿನ್ ಅನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗಿಲ್ಲವಾದರೂ, ಟೀಸರ್ ನಮಗೆ ಪರಿಷ್ಕೃತ ಸೀಟ್ ಅಪ್ಹೋಲ್ಸ್‌ಟರಿ ಮತ್ತು ಹೊಸ ಟಚ್‌ಸ್ಕ್ರೀನ್ ಯುನಿಟ್‌ನ ಸ್ನೀಕ್ ಪೀಕ್ ಅನ್ನು ನೀಡುತ್ತದೆ. ಹಿಂದಿನ ರಹಸ್ಯ ಫೋಟೋಗಳು ಈಗಾಗಲೇ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಲೇಔಟ್ ಮತ್ತು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್‌ಗಾಗಿ ನವೀಕರಿಸಿದ ಪ್ಯಾನೆಲ್‌ನ ಸುಳಿವು ನೀಡಿವೆ.

Mahindra XUV400 EV cabin

ಎಕ್ಸ್‌ಯುವಿ400 ಕ್ಯಾಬಿನ್

ಹೊಸ ವೈಶಿಷ್ಟ್ಯಗಳ ವಿಷಯದಲ್ಲಿ, XUV 3XOಯು XUV400 ತರಹದ ಡ್ಯುಯಲ್ 10.25-ಇಂಚಿನ ಡಿಜಿಟಲ್ ಡಿಸ್‌ಪ್ಲೇಗಳೊಂದಿಗೆ (ಒಂದು ಇನ್ಸ್ಟ್ರುಮೆಂಟೇಶನ್ ಮತ್ತು ಇನ್ನೊಂದು ಇನ್ಫೋಟೈನ್ಮೆಂಟ್‌ಗಾಗಿ), ವಯರ್‌ಲೆಸ್‌ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ಗಳೊಂದಿಗೆ ಬರುತ್ತದೆ. ಮಹೀಂದ್ರಾ ಇದನ್ನು ಈ ಸೆಗ್ಮೆಂಟ್‌ನ ಮೊದಲ ಪನೋರಮಿಕ್ ಸನ್‌ರೂಫ್‌ನೊಂದಿಗೆ ಸಜ್ಜುಗೊಳಿಸಬಹುದು. ಫೇಸ್‌ಲಿಫ್ಟೆಡ್ XUV300 ನ ಸುರಕ್ಷತಾ ಜಾಲವು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ ಮತ್ತು ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿರುವ ಸಾಧ್ಯತೆಯಿದೆ.

ಇದನ್ನೂ ಓದಿ: 2024ರ ಮಾರ್ಚ್‌ನಲ್ಲಿ ಬಿಡುಗಡೆಯಾದ ಮತ್ತು ಅನಾವರಣಗೊಂಡ ಎಲ್ಲಾ ಹೊಸ ಕಾರುಗಳು

ಪವರ್‌ಟ್ರೇನ್‌ಗಳ ನಿರೀಕ್ಷಿತ ಸೆಟ್

ಫೇಸ್‌ಲಿಫ್ಟ್‌ಗಿಂತ ಹಿಂದಿನ XUV300 ನಂತೆ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ XUV 3XO ಅನ್ನು ಮಹೀಂದ್ರಾ ನೀಡಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ:

ವಿವರಗಳು

1.2-ಲೀಟರ್ ಟರ್ಬೊ-ಪೆಟ್ರೋಲ್

1.2-ಲೀಟರ್ ಟರ್ಬೊ-ಪೆಟ್ರೋಲ್ (TGDi)

1.5-ಲೀಟರ್ ಡೀಸೆಲ್

ಪವರ್‌

110 ಪಿಎಸ್

130 ಪಿಎಸ್

117 ಪಿಎಸ್

ಟಾರ್ಕ್

200 ಎನ್ಎಂ

250 ಎನ್ಎಂ ವರೆಗೆ

300 ಎನ್ಎಂ

ಟ್ರಾನ್ಸ್‌ಮಿಷನ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಎಎಮ್‌ಟಿ

6-ಸ್ಪೀಡ್ ಮ್ಯಾನುಯಲ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಎಎಮ್‌ಟಿ

ಆಟೋಮ್ಯಾಟಿಕ್ ಆಯ್ಕೆಗಾಗಿ ಮಹೀಂದ್ರಾ ಪ್ರಸ್ತುತ AMT ಅನ್ನು ಟಾರ್ಕ್ ಕನ್ವರ್ಟರ್‌ ಯುನಿಟ್‌ನೊಂದಿಗೆ ಬದಲಾಯಿಸಬಹುದು ಎಂದು ನಾವು ಭಾವಿಸುತ್ತೇವೆ.

ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

Mahindra XUV 3XO LED taillights

ಮಹೀಂದ್ರಾ ಎಕ್ಸ್‌ಯುವಿ 3XO ಏಪ್ರಿಲ್ 29 ರಂದು ಬಿಡುಗಡೆಗೊಂಡ ಸ್ವಲ್ಪ ಸಮಯದ ನಂತರ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ, ಇದರ ಎಕ್ಸ್ ಶೋರೂಂ ಬೆಲೆಗಳು 9 ಲಕ್ಷ ರೂ.ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಟಾಟಾ ನೆಕ್ಸನ್, ರೆನಾಲ್ಟ್ ಕೈಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಹಾಗೆಯೇ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಎರಡು ಸಬ್‌-4ಮೀ ಕ್ರಾಸ್‌ಒವರ್‌ಗಳೊಂದಿಗೆ ತನ್ನ ಪೈಪೋಟಿಯನ್ನು ಮುಂದುವರೆಸುತ್ತದೆ. 

ಇನ್ನಷ್ಟು ಓದಿ  : ಮಹೀಂದ್ರಾ XUV300 ಎಎಮ್‌ಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ XUV 3XO

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

 • ಟ್ರೆಂಡಿಂಗ್ ಸುದ್ದಿ
 • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience