• English
  • Login / Register

ಒಂದು ಕ್ಯಾಲೆಂಡರ್ ವರ್ಷದಲ್ಲಿ 20 ಲಕ್ಷ ವಾಹನಗಳನ್ನು ಉತ್ಪಾದಿಸಿ ದಾಖಲೆ ಬರೆದ ಮಾರುತಿ

ಮಾರುತಿ ಎರ್ಟಿಗಾ ಗಾಗಿ shreyash ಮೂಲಕ ಡಿಸೆಂಬರ್ 17, 2024 09:49 pm ರಂದು ಪ್ರಕಟಿಸಲಾಗಿದೆ

  • 88 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಾರುತಿ ಎರ್ಟಿಗಾ ಹರ್ಯಾಣದ ಮಾನೇಸರ್ ಪ್ಲಾಂಟ್‌ನಿಂದ ಹೊರಬಂದ 20,00,000ನೇ ವಾಹನವಾಗಿದೆ

Maruti Achieves A Production Milestone Of 20 Lakh Vehicles In One Calendar Year

ಭಾರತದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಕೇವಲ ಒಂದು ಕ್ಯಾಲೆಂಡರ್ ವರ್ಷದ ಸಮಯದಲ್ಲಿ 20 ಲಕ್ಷ ವಾಹನಗಳ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿಸುವ ಮೂಲಕ ಹೊಸದೊಂದು ದಾಖಲೆಯನ್ನು ಬರೆದಿದೆ. ಮಾರುತಿ ಎರ್ಟಿಗಾವು ಹರಿಯಾಣದ ಮಾರುತಿಯ ಮಾನೇಸರ್ ಪ್ಲಾಂಟ್‌ನಿಂದ ಹೊರಬಂದ 2000000 ನೇ ವಾಹನವಾಗಿದೆ. ಮಾರುತಿಯು 2006ರ ಅಕ್ಟೋಬರ್‌ನಲ್ಲಿ ಈ ಪ್ಲಾಂಟ್‌ನಲ್ಲಿ ಕಾರುಗಳನ್ನು ತಯಾರಿಸಲು ಪ್ರಾರಂಭಿಸಿತು ಮತ್ತು ವಾಹನ ತಯಾರಕ ಕಂಪೆನಿಯೊಂದು ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಪ್ರಮುಖ ಹೆಗ್ಗುರುತನ್ನು ಸಾಧಿಸಿದೆ.

ಈ ಮೈಲಿಗಲ್ಲು ಬಗ್ಗೆ ಒಂದಿಷ್ಟು

Maruti Suzuki logo

2024ರಲ್ಲಿ ತಯಾರಾದ ಒಟ್ಟು 20 ಲಕ್ಷ ಕಾರುಗಳಲ್ಲಿ ಸುಮಾರು 60 ಪ್ರತಿಶತವನ್ನು ಹರಿಯಾಣದಲ್ಲಿ ಮತ್ತು ಉಳಿದ 40 ಪ್ರತಿಶತವನ್ನು ಗುಜರಾತ್‌ನಲ್ಲಿ ತಯಾರಿಸಲಾಗಿದೆ. ಮಾರುತಿ ಬಲೆನೊ, ಫ್ರಾಂಕ್ಸ್, ಎರ್ಟಿಗಾ, ವ್ಯಾಗನ್ ಆರ್ ಮತ್ತು ಬ್ರೆಜ್ಜಾ 2024 ರ ಕ್ಯಾಲೆಂಡರ್ ವರ್ಷದಲ್ಲಿ ತಯಾರದ ಟಾಪ್ 5 ಕಾರುಗಳಾಗಿವೆ.

ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ ಕುರಿತು ಮತನಾಡಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ಟೇಕುಚಿ, “2 ಮಿಲಿಯನ್ ಉತ್ಪಾದನಾ ಮೈಲಿಗಲ್ಲು ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ನಮ್ಮ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಸಾಧನೆಯು ನಮ್ಮ ಪೂರೈಕೆದಾರ ಮತ್ತು ಡೀಲರ್ ಪಾಲುದಾರರೊಂದಿಗೆ, ಆರ್ಥಿಕ ಬೆಳವಣಿಗೆಗೆ ಚಾಲನೆ, ರಾಷ್ಟ್ರ ನಿರ್ಮಾಣವನ್ನು ಬೆಂಬಲಿಸುವುದು ಮತ್ತು ಭಾರತದ ಆಟೋಮೊಬೈಲ್ ಉದ್ಯಮವನ್ನು ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಗ್ರಾಹಕರು, ಉದ್ಯೋಗಿಗಳು ಮತ್ತು ವೆಲ್ಯೂ ಚೈನ್‌ ಪಾರ್ಟ್‌ನರ್‌ರಿಗೆ ಅವರ ನಿರಂತರ ಬೆಂಬಲಕ್ಕಾಗಿ ಮತ್ತು ಈ ಐತಿಹಾಸಿಕ ಪ್ರಯಾಣದ ಅವಿಭಾಜ್ಯ ಅಂಗವಾಗಿರುವುದಕ್ಕಾಗಿ ನಾವು ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ."

 ಇದನ್ನೂ ಓದಿ: 2025ರ ಜನವರಿಯಿಂದ Hyundai ಕಾರುಗಳ ಬೆಲೆಯಲ್ಲಿ ಏರಿಕೆ

ಭಾರತದಲ್ಲಿ ಮಾರುತಿಯ ಉತ್ಪಾದನಾ ಘಟಕಗಳು

Maruti Wagon R

ಮಾರುತಿ ಪ್ರಸ್ತುತ ಭಾರತದಲ್ಲಿ ಮೂರು ಉತ್ಪಾದನಾ ಘಟಕಗಳನ್ನು ಹೊಂದಿದೆ, ಅವುಗಳಲ್ಲಿ ಎರಡು ಹರಿಯಾಣದಲ್ಲಿ (ಮನೇಸರ್ ಮತ್ತು ಗುರುಗ್ರಾಮ್) ಮತ್ತು ಒಂದು ಗುಜರಾತ್‌ನಲ್ಲಿ (ಹಂಸಲ್‌ಪುರ) ಇದೆ. ಹರ್ಯಾಣದಲ್ಲಿರುವ ಮನೇಸರ್ ಪ್ಲಾಂಟ್‌ 600 ಎಕರೆಗಳಷ್ಟು ವ್ಯಾಪಿಸಿದೆ ಮತ್ತು ಇದು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ವಾಹನಗಳನ್ನು ಉತ್ಪಾದಿಸುತ್ತದೆ. ಮನೇಸರ್ ಪ್ಲಾಂಟ್‌ನಲ್ಲಿ ತಯಾರಿಸಿದ ಕಾರುಗಳನ್ನು ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಏಷ್ಯಾದ ನೆರೆಯ ದೇಶಗಳ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ. ಪ್ರಸ್ತುತ, ಈ ಪ್ಲಾಂಟ್‌ಗಳು 23 ಲಕ್ಷ ವಾಹನಗಳಿಗಿಂತ ಹೆಚ್ಚಿನ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ.

ಮಾರುತಿಯು ಹರಿಯಾಣದ ಖಾರ್ಖೋಡಾದಲ್ಲಿ ಉತ್ಪಾದನಾ ಘಟಕವನ್ನು 2025ರಲ್ಲಿ ಸ್ಥಾಪಿಸಲಿದೆ. ಒಮ್ಮೆ ಉತ್ಪಾದನೆ ಪ್ರಾರಂಭವಾದರೆ, ಈ ಪ್ಲಾಂಟ್‌ ಯೋಜಿತ ವಾರ್ಷಿಕ 10 ಲಕ್ಷ ಕಾರುಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಮಾರುತಿ ತನ್ನ ಮುಂಬರುವ ಇವಿಗಳನ್ನು ಗುಜರಾತ್ ಪ್ಲಾಂಟ್‌ನಲ್ಲಿ ತಯಾರಿಸಲು ಪ್ರಾರಂಭಿಸಲಾಗುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. 

ಮಾರುತಿಯಿಂದ ಏನು ಹೊಸತು ಬರಲಿದೆ ?

Maruti Suzuki eVX

ಮಾರುತಿ ಪ್ರಸ್ತುತ ಭಾರತದಲ್ಲಿ 17 ಮಾಡೆಲ್‌ಗಳನ್ನು ಮಾರಾಟ ಮಾಡುತ್ತಿದೆ, 9 ತನ್ನ ಅರೆನಾ ಲೈನ್‌ಅಪ್ ಮೂಲಕ ಮತ್ತು 8 ತನ್ನ ನೆಕ್ಸಾ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡುತ್ತಿದೆ. 2031ರ ಹೊತ್ತಿಗೆ, ವಾಹನ ತಯಾರಕರು eVX ಎಸ್‌ಯುವಿಯ ಉತ್ಪಾದನಾ ಆವೃತ್ತಿಯೊಂದಿಗೆ ಪ್ರಾರಂಭವಾಗುವ ಇವಿಗಳನ್ನು ಒಳಗೊಂಡಂತೆ 18 ರಿಂದ 28 ಮೊಡೆಲ್‌ಗಳಿಗೆ ತನ್ನ ಭಾರತದ ಕಾರುಗಳನ್ನು ಪಟ್ಟಿಯನ್ನು ವಿಸ್ತರಿಸಲಿದೆ.  

ವಾಹನ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

ಇದರ ಬಗ್ಗೆ ಇನ್ನಷ್ಟು ಓದಲು : ಎರ್ಟಿಗಾ ಆನ್‌ ರೋಡ್‌ ಬೆಲೆ

was this article helpful ?

Write your Comment on Maruti ಎರ್ಟಿಗಾ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience