• English
  • Login / Register

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಸ್ವಿಫ್ಟ್‌ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ ಮಾರುತಿ ಆಲ್ಟೊ ಕೆ10

ಮಾರುತಿ ಆಲ್ಟೊ ಕೆ10 ಗಾಗಿ ansh ಮೂಲಕ ಏಪ್ರಿಲ್ 05, 2023 09:57 pm ರಂದು ಪ್ರಕಟಿಸಲಾಗಿದೆ

  • 15 Views
  • ಕಾಮೆಂಟ್‌ ಅನ್ನು ಬರೆಯಿರಿ

ಆಲ್ಟೊ ಕೆ10 ಕ್ರ್ಯಾಶ್ ಟೆಸ್ಟ್‌ನಲ್ಲಿ 2-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ ಮತ್ತು ಅದರ ಬಾಡಿಶೆಲ್ ಇಂಟೆಗ್ರಿಟಿಯು ಸ್ವಿಫ್ಟ್, ಇಗ್ನಿಸ್ ಮತ್ತು ಎಸ್-ಪ್ರೆಸ್ಸೊಗಿಂತ ಸ್ಥಿರವಾಗಿದೆ ಎಂದು ಹೇಳಲಾಗಿದೆ.

Maruti Alto Crash Tested

  • ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ವಯಸ್ಕರ ರಕ್ಷಣೆಗೆ ಸಂಬಂಧಿಸಿದಂತೆ ಎರಡು ಸ್ಟಾರ್‌ಗಳನ್ನು ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಶೂನ್ಯ ಸ್ಟಾರ್‌ಗಳನ್ನು ಗಳಿಸಿದೆ.
  •  ಇದು ವಯಸ್ಕರ ರಕ್ಷಣೆಗೆ ಸಂಬಂಧಿಸಿದಂತೆ 34 ಕ್ಕೆ 21.67 ಅಂಕಗಳನ್ನು ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ 49 ಕ್ಕೆ 3.52 ಅಂಕಗಳನ್ನು ಪಡೆದುಕೊಂಡಿದೆ.
  •  ಇದರ ಪ್ರಮಾಣಿತ ಸುರಕ್ಷತಾ ಕಿಟ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಯೊಂದಿಗೆ ಎಬಿಎಸ್, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್‌ಗಳು ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.
  •  ಆಲ್ಟೊ ಕೆ10 ಬೆಲೆ 3.99 ಲಕ್ಷ ರೂ.ದಿಂದ 5.95 ಲಕ್ಷ ರೂ.ವರೆಗೆ ಇದೆ (ಎಕ್ಸ್ ಶೋರೂಂ).

 #SaferCarsForIndia ಅಭಿಯಾನದ ಅಡಿಯಲ್ಲಿ, ಗ್ಲೋಬಲ್ ಎನ್‌ಸಿಎಪಿ ಭಾರತದಲ್ಲಿ ಮಾರಾಟವಾದ ಕೆಲವು ಹೊಸ ಮಾಡೆಲ್‌ಗಳ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ ಮತ್ತು ಅವುಗಳಲ್ಲಿ ಆಲ್ಟೊ K10 ಸೇರಿದೆ. ಹ್ಯಾಚ್‌ಬ್ಯಾಕ್‌ನ ಒಟ್ಟಾರೆ ಸುರಕ್ಷತಾ ರೇಟಿಂಗ್‌ ತುಂಬಾ ವಿಶೇಷವಾಗಿರದಿದ್ದರೂ, ಕಳೆದ ವರ್ಷ ಪರೀಕ್ಷಿಸಲಾದ ಸ್ವಿಫ್ಟ್, ಎಸ್-ಪ್ರೆಸ್ಸೋ ಮತ್ತು ಇಗ್ನಿಸ್‌ನಂತಹ ಅದರ ದೊಡ್ಡ ಸ್ಟೇಬಲ್‌ಮೇಟ್‌ಗಳು ಮತ್ತು ಆಲ್ಟೊ K10 ಜೊತೆಗೆ ಪರೀಕ್ಷಿಸಲ್ಪಟ್ಟ ವ್ಯಾಗನ್ ಆರ್‌ಗಿಂತ ರೇಟಿಂಗ್‌ ಆಶ್ಚರ್ಯಕರವಾಗಿ ಉತ್ತಮವಾಗಿವೆ.

 ಇದನ್ನೂ ಓದಿ: ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದ ಮಹೀಂದ್ರಾ ಸ್ಕಾರ್ಪಿಯೋ ಎನ್   

 ಈ ಟೆಸ್ಟ್‌ಗಳಲ್ಲಿ ಭಾರತದ ಅಗ್ಗದ ಕಾರು ಹೇಗೆ ಕಾರ್ಯನಿರ್ವಹಿಸಿತು ಎಂಬುದನ್ನು ತಿಳಿದುಕೊಳ್ಳೋಣ:

 ವಯಸ್ಕ ಪ್ರಯಾಣಿಕರ ರಕ್ಷಣೆ

Maruti Alto K10 Crash Test

 ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ 34 ಕ್ಕೆ 21.67 ಅಂಕಗಳೊಂದಿಗೆ ವಯಸ್ಕ ಪ್ರಯಾಣಿಕರ ರಕ್ಷಣಾ ರೇಟಿಂಗ್ ಆಗಿ ಎರಡು-ಸ್ಟಾರ್  ಅನ್ನು ಪಡೆದುಕೊಂಡಿದೆ. 

ಫ್ರಂಟ್ ಇಂಪ್ಯಾಕ್ಟ್

Maruti Alto K10 Crash Test: Front Impact

 ಫ್ರಂಟ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ, ಡ್ರೈವರ್ ಮತ್ತು ಸಹ-ಪ್ರಯಾಣಿಕ ಇಬ್ಬರೂ ತಮ್ಮ ತಲೆ ಮತ್ತು ಕುತ್ತಿಗೆಯ "ಉತ್ತಮ" ರಕ್ಷಣೆಯನ್ನು ಮತ್ತು ಅವರ ಎದೆಯ ಭಾಗಕ್ಕೆ " ಕನಿಷ್ಠ " ರಕ್ಷಣೆಯನ್ನು ಪಡೆದಿದ್ದರು. ಡ್ರೈವರ್‌ನ ಬಲ ತೊಡೆ ಮತ್ತು ಮೊಣಕಾಲು "ದುರ್ಬಲ" ರಕ್ಷಣೆಯನ್ನು ಪಡೆದುಕೊಂಡಿತ್ತು ಮತ್ತು ಬಲ ಮೊಳಕಾಲುಗಳ ರಕ್ಷಣೆಯನ್ನು "ಕನಿಷ್ಠ" ಎಂದು ರೇಟ್ ಮಾಡಲಾಗಿದೆ. ಡ್ರೈವರ್‌ನ ಎಡ ತೊಡೆ, ಮೊಣಕಾಲು ಮತ್ತು ಮೊಳಕಾಲುಗಳ ರಕ್ಷಣೆಯೂ ಕೂಡ " ಕನಿಷ್ಠ " ಆಗಿದೆ.

 ಸಹ-ಪ್ರಯಾಣಿಕರ ತೊಡೆಗಳು ಮತ್ತು ಮೊಣಕಾಲುಗಳು "ಕನಿಷ್ಠ " ರಕ್ಷಣೆಯನ್ನು ಪಡೆದುಕೊಂಡಿದ್ದರೂ, ಸಹ-ಪ್ರಯಾಣಿಕರು ಟಿಬಿಯಾಸ್‌ನಿಂದ ಪಡೆದ ರಕ್ಷಣೆಯನ್ನು " ತೃಪ್ತಿಕರ " ಎಂದು ರೇಟ್ ಮಾಡಲಾಗಿದೆ.

ಸೈಡ್ ಇಂಪ್ಯಾಕ್ಟ್

Maruti Alto Crash Tested: Side Impact

ಸೈಡ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ, ಡ್ರೈವರ್‌ನ ತಲೆ ಮತ್ತು ಸೊಂಟವು "ಉತ್ತಮ" ರಕ್ಷಣೆಯನ್ನು ಹೊಂದಿತ್ತು. ಎದೆಯ ರಕ್ಷಣೆಯನ್ನು "ದುರ್ಬಲ" ಎಂದು ರೇಟ್ ಮಾಡಲಾಗಿದೆ ಮತ್ತು ಹೊಟ್ಟೆಯ ಮೇಲಿನ ರಕ್ಷಣೆ ' ತೃಪ್ತಿಕರ ' ಆಗಿತ್ತು. ಆಲ್ಟೊ ಕೆ 10 ನಲ್ಲಿ ಕರ್ಟನ್ ಮತ್ತು ಸೈಡ್ ಏರ್‌ಬ್ಯಾಗ್‌ಗಳ ಕೊರತೆಯಿಂದಾಗಿ, ಸೈಡ್ ಪೋಲ್ ಇಂಪ್ಯಾಕ್ಟ್ ಟೆಸ್ಟ್ ಅನ್ನು ನಡೆಸಲಾಗಿಲ್ಲ.

ಬಾಡಿಶೆಲ್ ಇಂಟೆಗ್ರಿಟಿ

 ಈ ಇಂಪ್ಯಾಕ್ಟ್‌ಗಳ ನಂತರ ಆಲ್ಟೊ ಕೆ10 ನ ಬಾಡಿಶೆಲ್ ಇಂಟೆಗ್ರಿಟಿಯನ್ನು ಸ್ಥಿರ ಎಂದು ರೇಟ್ ಮಾಡಲಾಗಿದೆ, ಅಂದರೆ ಇದು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ವೇಗ 64kmph ಗಿಂತ ಹೆಚ್ಚಿನ ಲೋಡ್ ಅನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಪ್ರಯಾಣಿಕ ಮಕ್ಕಳ ರಕ್ಷಣೆ

Maruti Alto Crash Tested: Child Occupant Protection

 ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ, ಆಲ್ಟೊ ಕೆ10 49 ಕ್ಕೆ 3.52 ಅಂಕಗಳೊಂದಿಗೆ ಶೂನ್ಯ ಸ್ಟಾರ್‌ಗಳನ್ನು ಪಡೆದುಕೊಂಡಿದೆ.

 ಇದನ್ನೂ ಓದಿ: ಅತ್ಯಂತ ಅಗ್ಗದ ಕಾರು ಮಾರುತಿ ಸುಜುಕಿ ಸ್ಥಗಿತಗೊಂಡಿದೆ

18 ತಿಂಗಳ ಮಗುವಿಗೆ, ವಯಸ್ಕ ಸೀಟ್‌ಬೆಲ್ಟ್ ಅನ್ನು ಬಳಸಿಕೊಂಡು ಎದುರಿಗೆ ಮುಖಮಾಡಿ ಕುಳ್ಳಿರಿಸಿ ಚೈಲ್ಡ್ ರಿಸ್ಟ್ರೈನ್ ಸಿಸ್ಟಮ್ (ಸಿಆರ್‌ಎಸ್) ಅನ್ನು ಇನ್‌ಸ್ಟಾಲ್ ಮಾಡಲಾಯಿತು, ಅದರಿಂದ ತಲೆಗೆ "ಉತ್ತಮ" ರಕ್ಷಣೆ ಮತ್ತು ಎದೆಗೆ "ದುರ್ಬಲ" ರಕ್ಷಣೆಯನ್ನು ದೊರೆಯಿತು. ಮೂರು ವರ್ಷ ವಯಸ್ಸಿನ ಮಗುವಿಗೆ, ವಯಸ್ಕ ಸೀಟ್‌ಬೆಲ್ಟ್ ಅನ್ನು ಬಳಸಿಕೊಂಡು ಎದುರಿಗೆ ಮುಖಮಾಡಿ ಕುಳ್ಳಿರಿಸಿ  ಚೈಲ್ಡ್ ರಿಸ್ಟ್ರೈನ್ ಸಿಸ್ಟಮ್ (ಸಿಆರ್‌ಎಸ್) ಅನ್ನು ಇನ್‌ಸ್ಟಾಲ್ ಮಾಡಲಾಯಿತು. ಈ ಸಂದರ್ಭದಲ್ಲಿ, ತಲೆಯು ಇಂಪ್ಯಾಕ್ಟ್‌ಗೆ ಒಳಗಾಗಿ ಗಾಯಗೊಳ್ಳುವ ಹೆಚ್ಚಿನ ಅಪಾಯವನ್ನು ಎದುರಿಸಿತು.

ಆಲ್ಟೊ ಕೆ10 ನಲ್ಲಿ ಐಎಸ್‌ಒಎಫ್‌ಐಎಕ್ಸ್ ಚೈಲ್ಡ್-ಸೀಟ್ ಆಂಕರ್‌ಗಳನ್ನು ಮಾರುತಿ ನೀಡದ ಕಾರಣ ಮಕ್ಕಳ ರಕ್ಷಣೆಗಾಗಿ ಸೈಡ್ ಇಂಪ್ಯಾಕ್ಟ್ ಟೆಸ್ಟ್‌ಗಳನ್ನು ನಡೆಸಲಾಗಿಲ್ಲ.

ಸುರಕ್ಷತಾ ವೈಶಿಷ್ಟ್ಯಗಳು

Maruti Alto K10

ಆಲ್ಟೊ ಕೆ10 ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್‌ಗಳು ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಹ್ಯಾಚ್‌ಬ್ಯಾಕ್‌ನ ಉನ್ನತ ವೇರಿಯಂಟ್‌ಗಳು ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್, ಸೆಂಟ್ರಲ್ ಡೋರ್ ಲಾಕ್ ಮತ್ತು ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್‌ನಂತಹ ವೈಶಿಷ್ಟ್ಯಗಳನ್ನು ಸಹ ಪಡೆದುಕೊಳ್ಳುತ್ತವೆ. 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Maruti Alto K10 Side

 ಆಲ್ಟೊ ಕೆ10 ಬೆಲೆ 3.99 ಲಕ್ಷ ರೂ.ದಿಂದ 5.95 ಲಕ್ಷ ರೂ.ವರೆಗೆ ಬೆಲೆಯನ್ನು ಹೊಂದಿದೆ (ಎಕ್ಸ್ ಶೋರೂಂ) ಮತ್ತು ರೆನಾಲ್ಟ್ ಕ್ವಿಡ್‌ಗೆ ಪ್ರತಿಸ್ಪರ್ಧಿಯಾಗಿದೆ, ಆದರೆ, ಅದರ ಬೆಲೆಯನ್ನು ಗಮನಿಸಿದರೆ, ಇದನ್ನು ಮಾರುತಿ ಎಸ್-ಪ್ರೆಸ್ಸೊಗೆ ಪರ್ಯಾಯವಾಗಿ ಪರಿಗಣಿಸಬಹುದು.

ಇನ್ನಷ್ಟು ಓದಿ : ಆಲ್ಟೊ ಕೆ10 ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಆಲ್ಟೊ ಕೆ10

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • Kia Syros
    Kia Syros
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮಾರಚ್‌, 2025
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವ, 2025
  • ಎಂಜಿ 3
    ಎಂಜಿ 3
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ಲೆಕ್ಸಸ್ lbx
    ಲೆಕ್ಸಸ್ lbx
    Rs.45 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಡಿಸಂಬರ್, 2024
  • ನಿಸ್ಸಾನ್ ಲೀಫ್
    ನಿಸ್ಸಾನ್ ಲೀಫ್
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
×
We need your ನಗರ to customize your experience