Maruti Baleno ರೀಗಲ್ ಎಡಿಷನ್ ಬಿಡುಗಡೆ, 60,200 ರೂ ಮೌಲ್ಯದ ಆಕ್ಸಸ್ಸರಿಗಳ ಸೇರ್ಪಡೆ
ಬಲೆನೊ ರೀಗಲ್ ಎಡಿಷನ್ ಅನ್ನು ಹ್ಯಾಚ್‌ಬ್ಯಾಕ್‌ನ ಎಲ್ಲಾ ವೇರಿಯೆಂಟ್‌ಗಳೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೀಮಿತ ಅವಧಿಗೆ ನೀಡಲಾಗುತ್ತಿದೆ
- ಸೀಮಿತ ಎಡಿಷನ್‌ನ ಪ್ಯಾಕೇಜ್‌ನ ಭಾಗವಾಗಿ ಆಡ್-ಆನ್ ಆಕ್ಸಸ್ಸರಿಗಳನ್ನು ಮಾತ್ರ ಪಡೆಯುತ್ತದೆ.
- ಪ್ರಮುಖ ಆಕ್ಸಸ್ಸರಿಗಳಲ್ಲಿ ಮುಂಭಾಗ ಮತ್ತು ಹಿಂಭಾಗದ ಲಿಪ್ ಸ್ಪಾಯ್ಲರ್‌ಗಳು, ಡ್ಯುಯಲ್-ಟೋನ್ ಸೀಟ್ ಕವರ್‌ಗಳು ಮತ್ತು ವ್ಯಾಕ್ಯೂಮ್ ಕ್ಲೀನರ್ ಸೇರಿವೆ.
- ಬಲೆನೊ 9-ಇಂಚಿನ ಟಚ್‌ಸ್ಕ್ರೀನ್, ಆಟೋ ಎಸಿ ಮತ್ತು ಸುರಕ್ಷತಾ ಸೂಟ್ ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
- ಎಂಜಿನ್ ಆಯ್ಕೆಗಳಲ್ಲಿ 1.2-ಲೀಟರ್ ಪೆಟ್ರೋಲ್ (90 ಪಿಎಸ್/113 ಎನ್‌ಎಮ್) ಮತ್ತು ಸಿಎನ್‌ಜಿ ವೆಂರಿಯೆಂಟ್ (77.5 ಪಿಎಸ್/98.5 ಎನ್‌ಎಮ್) ಸೇರಿವೆ.
- ಭಾರತದಾದ್ಯಂತ ಬಲೆನೊದ ಎಕ್ಸ್ ಶೋರೂಂ ಬೆಲೆಗಳು 6.66 ಲಕ್ಷ ರೂ.ನಿಂದ 9.83 ಲಕ್ಷ ರೂ. ವರೆಗೆ ಇದೆ.
ಮಾರುತಿ ಬಲೆನೊದ ರೀಗಲ್ ಎಡಿಷನ್ ಅನ್ನು ಹ್ಯಾಚ್‌ಬ್ಯಾಕ್‌ನ ಎಲ್ಲಾ ವೇರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ವೇರಿಯೆಂಟ್‌ಗಳಲ್ಲಿ 60,000 ರೂ.ಗಿಂತ ಹೆಚ್ಚು ಮೌಲ್ಯದ ಪೂರಕ ಆಕ್ಸಸ್ಸರಿಗಳನ್ನು ನೀಡುತ್ತದೆ. ಆದರೆ ಈ ಆಫರ್ ಅನ್ನು ಸೀಮಿತ ಅವಧಿಗೆ ಮಾತ್ರ ನೀಡಲಾಗುತ್ತಿದೆ. ಇದು ಮುಂಭಾಗದ ಲಿಪ್ ಸ್ಪಾಯ್ಲರ್, ವ್ಯಾಕ್ಯೂಮ್ ಕ್ಲೀನರ್ ಮತ್ತು ಸ್ಟೀರಿಂಗ್ ವೀಲ್ ಕವರ್‌ನಂತಹ ಎಕ್ಸ್‌ಟಿರಿಯರ್ ಮತ್ತು ಇಂಟಿರಿಯರ್ ಆಕ್ಸಸ್ಸರಿಗಳನ್ನು ಬಲೆನೊದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೇರಿಸುತ್ತದೆ. ಬಲೆನೊದ ಹೊಸ ರೀಗಲ್ ಎಡಿಷನ್‌ನೊಂದಿಗೆ ಲಭ್ಯವಿರುವ ಎಲ್ಲಾ ಆಕ್ಸಸ್ಸರಿಗಳನ್ನು ನಾವು ನೋಡೋಣ:
ಮಾರುತಿ ಬಲೆನೊ ರೀಗಲ್ ಎಡಿಷನ್: ಪೂರಕ ಆಕ್ಸಸ್ಸರಿಗಳು
ಆಕ್ಸಸ್ಸರಿಗಳ ಹೆಸರು |
ಸಿಗ್ಮಾ |
ಡೆಲ್ಟಾ |
ಝೆಟಾ |
ಆಲ್ಫಾ |
ಫ್ರಂಟ್ ಲಿಪ್ ಸ್ಪಾಯ್ಲರ್ |
✅ |
✅ |
✅ |
✅ |
ಹಿಂಭಾಗದ ಲಿಪ್ ಸ್ಪಾಯ್ಲರ್ |
✅ |
✅ |
✅ |
✅ |
ಡ್ಯುಯಲ್-ಟೋನ್ ಸೀಟ್ ಕವರ್ |
✅ |
✅ |
✅ |
✅ |
ಎಲ್ಲಾ ಹವಾಮಾನಕ್ಕಾಗುವ 3D ಮ್ಯಾಟ್ಸ್ |
✅ |
✅ |
✅ |
✅ |
ಬಾಡಿ ಸೈಡ್ ಮೋಲ್ಡಿಂಗ್ |
✅ |
✅ |
✅ |
✅ |
ಮಡ್ ಫ್ಲಾಪ್ಸ್ |
✅ |
✅ |
✅ |
✅ |
3D ಬೂಟ್ ಮ್ಯಾಟ್ |
✅ |
❌ |
✅ |
✅ |
ಕ್ರೋಮ್ ಮೇಲಿನ ಗ್ರಿಲ್ ಗಾರ್ನಿಶ್ |
✅ |
✅ |
✅ |
✅ |
ರಿಯರ್ ಗಾರ್ನಿಶ್ |
✅ |
✅ |
✅ |
✅ |
ಇಂಟಿರಿಯರ್ ಸ್ಟೈಲಿಂಗ್ ಕಿಟ್ |
✅ |
✅ |
✅ |
✅ |
ಕ್ರೋಮ್ ಹಿಂಭಾಗದ ಬಾಗಿಲಿನ ಗಾರ್ನಿಶ್ |
✅ |
✅ |
✅ |
✅ |
ವ್ಯಾಕ್ಯೂಮ್ ಕ್ಲೀನರ್ |
✅ |
✅ |
✅ |
✅ |
ಕ್ರೋಮ್ ಫಾಗ್ ಲ್ಯಾಂಪ್ ಗಾರ್ನಿಶ್ |
❌ |
❌ |
✅ |
✅ |
ಫಾಗ್ ಲ್ಯಾಂಪ್ |
❌ |
✅ |
(ಈಗಾಗಲೇ ಲಭ್ಯವಿದೆ) |
(ಈಗಾಗಲೇ ಲಭ್ಯವಿದೆ) |
ನೆಕ್ಸಾ ಬ್ರ್ಯಾಂಡಿಂಗ್‌ನೊಂದಿಗೆ ಕಪ್ಪು ಕುಶನ್ |
✅ |
✅ |
✅ |
✅ |
ಲೋಗೋ ಪ್ರೊಜೆಕ್ಟರ್ ಲ್ಯಾಂಪ್ |
❌ |
❌ |
✅ |
✅ |
ಬಾಡಿ ಕವರ್ |
✅ |
✅ |
✅ |
✅ |
ಡೋರ್ ವೈಸರ್ |
✅ |
✅ |
✅ |
✅ |
ಡೋರ್ ಸಿಲ್ ಗಾರ್ಡ್ |
✅ |
✅ |
✅ |
✅ |
ಸ್ಟೀರಿಂಗ್ ಕವರ್ |
✅ |
✅ |
✅ |
❌ |
ಎಲ್ಲಾ ಡೋರ್‌ಗಳಿಗೆ ವಿಂಡೋ ಕರ್ಟನ್ |
✅ |
❌ |
❌ |
✅ |
ಹಿಂದಿನ ಪಾರ್ಸೆಲ್ ಟ್ರೇ |
✅ |
❌ |
❌ |
❌ |
ಟೈರ್ ಇನ್‌ಫ್ಲೇಟರ್ (ಡಿಜಿಟಲ್ ಡಿಸ್‌ಪ್ಲೇಯೊಂದಿಗೆ) |
✅ |
❌ |
❌ |
❌ |
ಜೆಲ್ ಪರ್ಫ್ಯೂಮ್ |
✅ |
❌ |
❌ |
❌ |
ಮಿಡ್ ಕ್ರೋಮ್ ಗಾರ್ನಿಶ್ |
✅ |
✅ |
❌ |
❌ |
ಕ್ರೋಮ್ ಡೋರ್ ಹ್ಯಾಂಡಲ್ (1 ರಂಧ್ರದೊಂದಿಗೆ) |
✅ |
❌ |
❌ |
❌ |
ಒಟ್ಟು ವೆಚ್ಚ |
60,199 ರೂ. |
49,990 ರೂ |
50,428 ರೂ. |
45,829 ರೂ. |
ಇದನ್ನೂ ಓದಿ: Maruti Grand Vitara ಡೊಮಿನಿಯನ್ ಎಡಿಷನ್ ಬಿಡುಗಡೆ, ಹೆಚ್ಚುವರಿ ಆಕ್ಸಸ್ಸರಿಗಳ ಸೇರ್ಪಡೆ
ಮಾರುತಿ ಬಲೆನೊ: ಫೀಚರ್‌ಗಳು ಮತ್ತು ಸುರಕ್ಷತೆ
ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಫೀಚರ್‌ಗಳ ಸೆಟ್‌ಗೆ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದರ ಟಾಪ್ ಫೀಚರ್‌ಗಳಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 9-ಇಂಚಿನ ಟಚ್‌ಸ್ಕ್ರೀನ್, ಹೆಡ್ಸ್-ಅಪ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಹಿಂಭಾಗದ ದ್ವಾರಗಳೊಂದಿಗೆ ಆಟೋ ಎಸಿ ಸೇರಿವೆ.
ಸುರಕ್ಷತಾ ಫೀಚರ್‌ಗಳು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಇದು ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳನ್ನು ಹೊಂದಿದೆ.
ಪವರ್‌ಟ್ರೈನ್ ಆಯ್ಕೆಗಳು
ಮಾರುತಿ ಬಲೆನೊವನ್ನು ಪೆಟ್ರೋಲ್-ಚಾಲಿತ ಮತ್ತು ಸಿಎನ್‌ಜಿ-ಚಾಲಿತ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ |
1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್+ಸಿಎನ್‌ಜಿ |
ಪವರ್ |
90 ಪಿಎಸ್ |
77.5 ಪಿಎಸ್ |
ಟಾರ್ಕ್ |
113 ಎನ್‌ಎಮ್ |
98.5 ಎನ್‌ಎಮ್ |
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ AMT* |
5-ಸ್ಪೀಡ್ ಮ್ಯಾನುವಲ್ |
ಕ್ಲೈಮ್ ಮಾಡಲಾದ ಮೈಲೇಜ್ |
ಪ್ರತಿ ಲೀ.ಗೆ 22.35 ಕಿ.ಮೀ (ಮ್ಯಾನುವಲ್), ಪ್ರತಿ ಲೀ.ಗೆ 22.94 ಕಿ.ಮೀ (ಎಎಮ್‌ಟಿ) |
ಪ್ರತಿ ಕೆ.ಜಿ.ಗೆ 30.61 ಕಿ.ಮೀ. |
*AMT = ಆಟೋಮೆಟೆಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್
ಇದನ್ನೂ ಓದಿ: ಶೋರೂಂಗಳಲ್ಲಿ ಕಾಣಿಸಿಕೊಂಡ Nissan Magnite Facelift, ಸದ್ಯದಲ್ಲೇ ಟೆಸ್ಟ್ ಡ್ರೈವ್‌ಗೂ ಲಭ್ಯ
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಭಾರತದಾದ್ಯಂತ ಬಲೆನೊದ ಎಕ್ಸ್ ಶೋರೂಂ ಬೆಲೆಗಳು 6.66 ಲಕ್ಷ ರೂ.ನಿಂದ 9.83 ಲಕ್ಷ ರೂ. ವರೆಗೆ ಇದೆ. ಇದು ಇತರ ಹ್ಯಾಚ್‌ಬ್ಯಾಕ್‌ಗಳಾದ ಹ್ಯುಂಡೈ i20, ಟಾಟಾ ಆಲ್ಟ್ರೋಜ್, ಟೊಯೋಟಾ ಗ್ಲಾನ್ಜಾ ಮತ್ತು ಸಿಟ್ರೊಯೆನ್ C3 ಕ್ರಾಸ್-ಹ್ಯಾಚ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಬಲೆನೊ ಎಎಮ್‌ಟಿ