ಶೋರೂಂಗಳಲ್ಲಿ ಕಾಣಿಸಿಕೊಂಡ Nissan Magnite Facelift, ಸದ್ಯದಲ್ಲೇ ಟೆಸ್ಟ್ ಡ್ರೈವ್‌ಗೂ ಲಭ್ಯ
ನಿಸ್ಸಾನ್ ಮ್ಯಾಗ್ನೈಟ್ ಗಾಗಿ dipan ಮೂಲಕ ಅಕ್ಟೋಬರ್ 07, 2024 06:33 pm ರಂದು ಪ್ರಕಟಿಸಲಾಗಿದೆ
- 84 Views
- ಕಾಮೆಂಟ್ ಅನ್ನು ಬರೆಯಿರಿ
ಒಳಗೆ ಮತ್ತು ಹೊರಗೆ ಕೆಲವು ಸೂಕ್ಷ್ಮ ವಿನ್ಯಾಸ ಪರಿಷ್ಕರಣೆಗಳ ಜೊತೆಗೆ, ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ರಿಮೋಟ್ ಎಂಜಿನ್ ಪ್ರಾರಂಭ ಮತ್ತು 4-ಬಣ್ಣದ ಎಂಬಿಯೆಂಟ್ ಲೈಟಿಂಗ್‌ನಂತೆ ಕೆಲವು ಹೊಸ ಫೀಚರ್‌ಗಳನ್ನು ಪಡೆಯುತ್ತದೆ
ನಿಸ್ಸಾನ್ ಮ್ಯಾಗ್ನೈಟ್ 2020 ರಿಂದ ಭಾರತದಲ್ಲಿ ಮಾರಾಟದಲ್ಲಿದೆ ಮತ್ತು ಇದು ಇತ್ತೀಚೆಗೆ ಮಿಡ್‌ಲೈಫ್ ರಿಫ್ರೆಶ್ ರೂಪದಲ್ಲಿ ತನ್ನ ಮೊದಲ ಪ್ರಮುಖ ಆಪ್‌ಡೇಟ್ ಅನ್ನು ಪಡೆದುಕೊಂಡಿದೆ. ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ ವಿತರಣೆಗಳು ಪ್ರಾರಂಭವಾಗಲಿದೆ ಮತ್ತು ಫೇಸ್‌ಲಿಫ್ಟೆಡ್ ಮ್ಯಾಗ್ನೈಟ್ ಈಗ ಡೀಲರ್‌ಶಿಪ್‌ಗಳನ್ನು ತಲುಪಿದೆ. ನಾವು ಹೊಸ ಮ್ಯಾಗ್ನೈಟ್‌ನ ಕೆಲವು ಚಿತ್ರಗಳನ್ನು ಹೊಂದಿದ್ದೇವೆ ಮತ್ತು ಡಿಸ್‌ಪ್ಲೇ ಮೊಡೆಲ್‌ನಲ್ಲಿ ನೀವು ಗುರುತಿಸಬಹುದಾದ ಎಲ್ಲವೂ ಇಲ್ಲಿದೆ:
ನೋಡಿದ ಮೊಡೆಲ್‌ನ ವಿವರಗಳು
ಡಿಸ್‌ಪ್ಲೇಗಾಗಿ ಬಂದಿರುವ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಹಾಗೆಯೇ 16-ಇಂಚಿನ ಅಲಾಯ್ ವೀಲ್‌ಗಳು, 360-ಡಿಗ್ರಿ ಕ್ಯಾಮೆರಾ ಸೆಟಪ್ ಮತ್ತು ORVM ಗಳಲ್ಲಿ ಟರ್ನ್ ಇಂಡಿಕೇಟರ್‌ಗಳು, ಮತ್ತು ಹಿಂಭಾಗದ ವೈಪರ್ ಅನ್ನು ಸಹ ಗುರುತಿಸಬಹುದು.
ಒಳಭಾಗವು 8 ಇಂಚಿನ ಟಚ್‌ಸ್ಕ್ರೀನ್ ಮತ್ತು ಆಟೋ ಎಸಿಯೊಂದಿಗೆ ಆರೆಂಜ್ ಮತ್ತು ಕಪ್ಪು ಡ್ಯುಯಲ್-ಟೋನ್ ಕ್ಯಾಬಿನ್ ಅನ್ನು ಹೊಂದಿದೆ. ಡ್ಯಾಶ್‌ಬೋರ್ಡ್, ಸೀಟುಗಳು ಮತ್ತು ಬಾಗಿಲುಗಳಲ್ಲಿ ಸಾಫ್ಟ್-ಟಚ್ ಲೆಥೆರೆಟ್ ಮೆಟಿರಿಯಲ್‌ಗಳನ್ನು ಕಾಣಬಹುದು. ಪ್ರದರ್ಶಿತ ಮೊಡೆಲ್ ಟಾಪ್-ಎಂಡ್ ಟೆಕ್ನಾ ಪ್ಲಸ್ ವೇರಿಯೆಂಟ್ ಆಗಿದೆ ಎಂದು ಈ ವಿವರಗಳು ಸೂಚಿಸುತ್ತವೆ.
ಇದು 8 ಇಂಚಿನ ಟಚ್‌ಸ್ಕ್ರೀನ್, 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಸಿ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಫೀಚರ್‌ಗಳನ್ನು ಹೊಂದಿದೆ. 6-ಸ್ಪೀಕರ್ Arkamys-ಟ್ಯೂನ್ಡ್ ಆಡಿಯೊ ಸಿಸ್ಟಮ್, ಆಟೋ ಡಿಮ್ಮಿಂಗ್ IRVM (ಇನ್‌ಸೈಡ್ ರಿಯರ್‌ವ್ಯೂ ಮಿರರ್), 4-ಬಣ್ಣದ ಆಂಬಿಯೆಂಟ್ ಲೈಟಿಂಗ್, ಕೂಲ್ಡ್ ಗ್ಲೋವ್‌ಬಾಕ್ಸ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಸಹ ಸೇರಿಸಲಾಗಿದೆ.


ನಿಸ್ಸಾನ್ ಹೊಸ ಮ್ಯಾಗ್ನೈಟ್ ಅನ್ನು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಬ್ಲೈಂಡ್ ಸ್ಪಾಟ್ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಸುರಕ್ಷತಾ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಿದೆ. ಇದು ಹಿಲ್-ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳನ್ನು ಸಹ ಪಡೆಯುತ್ತದೆ.
ಇದನ್ನೂ ಓದಿ: Nissan Magnite ಫೇಸ್‌ಲಿಫ್ಟ್ ಬಿಡುಗಡೆ, 5.99 ಲಕ್ಷ ರೂ ಬೆಲೆ, 20 ಕಿ.ಮೀ ಮೈಲೇಜ್, ಮತ್ತಷ್ಟು..
ಪವರ್‌ಟ್ರೈನ್ ಆಯ್ಕೆಗಳು
ಫೇಸ್‌ಲಿಫ್ಟೆಡ್ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ:
ಎಂಜಿನ್ |
1-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ |
72 ಪಿಎಸ್ |
100 ಪಿಎಸ್ |
ಟಾರ್ಕ್ |
96 ಎನ್‌ಎಮ್ |
160 ಎನ್‌ಎಮ್ (ಮ್ಯಾನುಯಲ್), 152 ಎನ್‌ಎಮ್ (ಸಿವಿಟಿ) |
ಗೇರ್‌ಬಾಕ್ಸ್* |
5-ಸ್ಪೀಡ್ ಮ್ಯನುವಲ್/5-ಸ್ಪೀಡ್ ಎಎಮ್‌ಟಿ |
5-ಸ್ಪೀಡ್ ಮ್ಯನುವಲ್/ ಸಿವಿಟಿ |
*AMT = ಆಟೋಮೆಟೆಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್,
CVT = ಕಂಟಿನ್ಯೂವಸ್ಲಿ ವೇರಿಯಬಲ್ ಟ್ರಾನ್ಸ್ಮಿಷನ್
ಪ್ರತಿಸ್ಪರ್ಧಿಗಳು
ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಾದ ರೆನಾಲ್ಟ್ ಕಿಗರ್, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಮತ್ತು ಮಾರುತಿ ಬ್ರೆಜ್ಜಾದೊಂದಿಗೆ ಸ್ಪರ್ಧೆಯನ್ನು ಒಡ್ಡುತ್ತದೆ. ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನಂತಹ ಸಬ್-4ಎಮ್ ಕ್ರಾಸ್‌ಒವರ್‌ಗಳಿಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಬಹುದು.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ನಿಸ್ಸಾನ್ ಮ್ಯಾಗ್ನೈಟ್ ಎಎಮ್‌ಟಿ