Maruti Grand Vitara ಡೊಮಿನಿಯನ್ ಎಡಿಷನ್ ಬಿಡುಗಡೆ, ಹೆಚ್ಚುವರಿ ಆಕ್ಸಸ್ಸರಿಗಳ ಸೇರ್ಪಡೆ
ಮಾರುತಿ ಗ್ರಾಂಡ್ ವಿಟರಾ ಗಾಗಿ dipan ಮೂಲಕ ಅಕ್ಟೋಬರ್ 08, 2024 06:35 pm ರಂದು ಪ್ರಕಟಿಸಲಾಗಿದೆ
- 133 Views
- ಕಾಮೆಂಟ್ ಅನ್ನು ಬರೆಯಿರಿ
ಡೊಮಿನಿಯನ್ ಎಡಿಷನ್ ಗ್ರ್ಯಾಂಡ್ ವಿಟಾರಾದ ಡೆಲ್ಟಾ, ಝೀಟಾ ಮತ್ತು ಆಲ್ಫಾ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ
- ಮಾರುತಿ ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಎಡಿಷನ್ ಇಂಟಿರಿಯರ್ ಮತ್ತು ಎಕ್ಸ್‌ಟಿರಿಯರ್ ಆಕ್ಸಸ್ಸರಿಗಳನ್ನು ವೇರಿಯೆಂಟ್‌ಗಳಿಗೆ ನೀಡುತ್ತದೆ.
- ಇದು ಸೈಡ್ ಸ್ಟೆಪ್, ಡೋರ್ ವೈಸರ್ ಮತ್ತು ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್‌ನಂತಹ ಎಕ್ಸ್‌ಟಿರಿಯರ್ ಆಕ್ಸಸ್ಸರಿಗಳನ್ನು ಹೊಂದಿದೆ.
- ಇಂಟಿರಿಯರ್ ಆಕ್ಸಸ್ಸರಿಗಳು 3D ಮ್ಯಾಟ್‌ಗಳು, ಸೀಟ್ ಕವರ್‌ಗಳು ಮತ್ತು ಡ್ಯಾಶ್‌ಬೋರ್ಡ್ ಟ್ರಿಮ್ ಅನ್ನು ಒಳಗೊಂಡಿವೆ.
- ಡೊಮಿನಿಯನ್ ಎಡಿಷನ್ 2024ರ ಅಕ್ಟೋಬರ್ ಅಂತ್ಯದವರೆಗೆ ಕೊಡುಗೆಯಲ್ಲಿರುತ್ತದೆ.
ಹಬ್ಬದ ಸೀಸನ್‌ಗಾಗಿ ಮಾರುತಿ ಗ್ರ್ಯಾಂಡ್ ವಿಟಾರಾ ಹೊಸ ಡೊಮಿನಿಯನ್ ಎಡಿಷನ್ ಅನ್ನು ಪಡೆದುಕೊಂಡಿದೆ. ಈ ಲಿಮಿಟೆಡ್-ರನ್ ಎಡಿಷನ್ ಇಂಟಿರಿಯರ್ ಮತ್ತು ಎಕ್ಸ್‌ಟಿರಿಯರ್ ಎರಡಕ್ಕೂ ಆಕ್ಸಸ್ಸರಿಗಳ ರೇಂಜ್ ಅನ್ನು ಸೇರಿಸುತ್ತದೆ ಮತ್ತು ಆಲ್ಫಾ, ಝೀಟಾ ಮತ್ತು ಡೆಲ್ಟಾ ವೇರಿಯೆಂಟ್‌ಗಳೊಂದಿಗೆ ಲಭ್ಯವಿದೆ. ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಎಡಿಷನ್ ಇದರ ರೆಗುಲರ್ ವೇರಿಯೆಂಟ್‌ಗಿಂತ ಸುಮಾರು 52,699 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ. ಆಕ್ಸಸ್ಸರಿಗಳನ್ನು ವಿವರವಾಗಿ ನೋಡೋಣ:
ಮಾರುತಿ ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಎಡಿಷನ್: ಆಕ್ಸಸ್ಸರಿಗಳು
ಆಕ್ಸಸ್ಸರಿಗಳು |
ಡೆಲ್ಟಾ |
ಝೀಟಾ |
ಆಲ್ಫಾ |
ಕ್ರೋಮ್ ಫ್ರಂಟ್ ಬಂಪರ್ ಲಿಪ್ |
✅ |
✅ |
✅ |
ಮುಂಭಾಗದ ಸ್ಕಿಡ್ ಪ್ಲೇಟ್ |
✅ |
✅ |
✅ |
ಕಪ್ಪು ಮತ್ತು ಕ್ರೋಮ್ ಹಿಂಭಾಗದ ಸ್ಕಿಡ್ ಪ್ಲೇಟ್ |
✅ |
✅ |
✅ |
ಬಾಡಿ ಕವರ್ |
✅ |
✅ |
✅ |
ಕಾರ್ ಕೇರ್ ಕಿಟ್ |
✅ |
✅ |
✅ |
ಡೋರ್ ವೈಸರ್ |
✅ |
✅ |
✅ |
ಕಪ್ಪು ORVM ಗಾರ್ನಿಶ್ |
✅ |
✅ |
✅ |
ಕಪ್ಪು ಹೆಡ್‌ಲೈಟ್ ಗಾರ್ನಿಶ್ |
✅ |
✅ |
✅ |
ಕ್ರೋಮ್ ಸೈಡ್ ಮೋಲ್ಡಿಂಗ್ |
✅ |
✅ |
✅ |
ಕಪ್ಪು ಕ್ರೋಮ್ ಟೈಲ್ ಲೈಟ್ ಗಾರ್ನಿಶ್ |
✅ |
✅ |
✅ |
ಎಲ್ಲಾ ವೆದರ್‌ಗಾಗುವ 3D ಮ್ಯಾಟ್ಸ್ |
✅ |
✅ |
✅ |
ಡ್ಯಾಶ್‌ಬೋರ್ಡ್‌ನಲ್ಲಿ ವುಡ್ ಗಾರ್ನಿಶ್ |
✅ |
✅ |
✅ |
ನೆಕ್ಸಾ' ಬ್ರ್ಯಾಂಡಿಂಗ್‌ನೊಂದಿಗೆ ಕುಶನ್ |
✅ |
✅ |
✅ |
ಡೋರ್ ಸಿಲ್ ಗಾರ್ಡ್ |
✅ |
✅ |
✅ |
ಬೂಟ್ ಲೋಡ್ ಲಿಪ್ ಪ್ರೊಟೆಕ್ಟಿವ್ ಸಿಲ್ |
✅ |
✅ |
✅ |
3D ಬೂಟ್ ಮ್ಯಾಟ್ |
✅ |
✅ |
✅ |
ಸೈಡ್ ಸ್ಟೆಪ್ |
✅ |
❌ |
❌ |
ಕಂದು ಬಣ್ಣದ ಸೀಟ್ ಕವರ್ |
❌ |
✅ |
❌ |
ಡ್ಯುಯಲ್-ಟೋನ್ ಸೀಟ್ ಕವರ್ |
✅ |
❌ |
❌ |
ಒಟ್ಟು ಬೆಲೆ |
48,599 ರೂ. |
49,999 ರೂ. |
52,699 ರೂ. |
ಡೊಮಿನಿಯನ್ ಎಡಿಷನ್ ಸೈಡ್ ಸ್ಟೆಪ್, ಡೋರ್ ವೈಸರ್‌ಗಳು ಮತ್ತು ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳಂತಹ ಎಕ್ಸ್‌ಟಿರಿಯರ್ ಆಕ್ಸಸ್ಸರಿಗಳನ್ನು ಮತ್ತು 3D ಮ್ಯಾಟ್ಸ್, ಸೀಟ್ ಕವರ್‌ಗಳು ಮತ್ತು ಕುಶನ್‌ಗಳಂತಹ ಇಂಟಿರಿಯರ್ ಆಕ್ಸಸ್ಸರಿಗಳನ್ನು ಸೇರಿಸುತ್ತದೆ. ಗಮನಿಸಿ, ಈ ಆಕ್ಸಸ್ಸರಿಗಳನ್ನು ಒಂದೊಂದಾಗಿಯೂ ಖರೀದಿಸಬಹುದು.
ಇದನ್ನೂ ಓದಿ: ಬುಕ್ಕಿಂಗ್ ಪ್ರಾರಂಭವಾದ ಒಂದು ಗಂಟೆಯಲ್ಲಿ ಬರೋಬ್ಬರಿ 1.76 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದ Mahindra Thar Roxx
ಫೀಚರ್‌ಗಳು & ಸುರಕ್ಷತೆ
ಫೀಚರ್‌ಗಳ ವಿಷಯದಲ್ಲಿ, ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ವೈರ್‌ಲೆಸ್ ಆಗಿ ಸಪೋರ್ಟ್ ಮಾಡುವ 9-ಇಂಚಿನ ಟಚ್‌ಸ್ಕ್ರೀನ್, 6-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಪಡೆಯುತ್ತದೆ. ಸುರಕ್ಷತಾ ಪ್ಯಾಕೇಜ್ ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಒಳಗೊಂಡಿದೆ.
ಪವರ್‌ಟ್ರೈನ್ ಆಯ್ಕೆಗಳು
ಮಾರುತಿ ಗ್ರ್ಯಾಂಡ್ ವಿಟಾರಾವು ಮೈಲ್ಡ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ನಡುವೆ ಆಯ್ಕೆಯನ್ನು ಪಡೆಯುತ್ತದೆ, ಅದರ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.5-ಲೀಟರ್ ಮೈಲ್ಡ್ ಹೈಬ್ರಿಡ್ |
1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ |
1.5-ಲೀಟರ್ ಪೆಟ್ರೋಲ್-ಸಿಎನ್‌ಜಿ |
ಪವರ್ |
103 ಪಿಎಸ್ |
116 ಪಿಎಸ್ (ಸಂಯೋಜಿತ) |
88 ಪಿಎಸ್ |
ಟಾರ್ಕ್ |
137ಎನ್‌ಎಮ್ |
122 ಎನ್‌ಎಮ್ |
121.5 ಎನ್‌ಎಮ್ |
ಗೇರ್‌ಬಾಕ್ಸ್ |
5-ಸ್ಪೀಡ್ ಮ್ಯಾನುವಲ್ / 6-ಸ್ಪೀಡ್ ಆಟೋಮ್ಯಾಟಿಕ್ |
ಇ-ಸಿವಿಟಿ (ಸಿಂಗಲ್-ಸ್ಪೀಡ್ ಗೇರ್‌ಬಾಕ್ಸ್) |
5-ಸ್ಪೀಡ್ ಮ್ಯಾನುವಲ್ |
ಡ್ರೈವ್‌ಟ್ರೈನ್ |
ಫ್ರಂಟ್ ವೀಲ್ ಡ್ರೈವ್, ಆಲ್-ವೀಲ್ ಡ್ರೈವ್(ಮ್ಯಾನುವಲ್‌ನೊಂದಿಗೆ ಮಾತ್ರ) |
ಫ್ರಂಟ್ ವೀಲ್ ಡ್ರೈವ್ |
ಫ್ರಂಟ್ ವೀಲ್ ಡ್ರೈವ್ |
ಇದನ್ನೂ ಓದಿ: ಈ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಪಟ್ಟಿ..
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಭಾರತದಾದ್ಯಂತ ಮಾರುತಿ ಗ್ರ್ಯಾಂಡ್ ವಿಟಾರಾದ ಎಕ್ಸ್ ಶೋರೂಂ ಬೆಲೆಗಳು 10.99 ಲಕ್ಷ ರೂ.ನಿಂದ 20.99 ಲಕ್ಷ ರೂ.ವರೆಗೆ ಇದೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟೊಯೊಟಾ ಹೈರ್ಡರ್, ಸ್ಕೋಡಾ ಕುಶಾಕ್ ಮತ್ತು ವೋಕ್ಸ್‌ವಾಗನ್ ಟೈಗುನ್‌ನಂತಹ ಇತರ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದನ್ನು ಟಾಟಾ ಕರ್ವ್ ಮತ್ತು ಸಿಟ್ರೊಯೆನ್ ಬಸಾಲ್ಟ್‌ಗೆ ಒಂದು ಸೊಗಸಾದ ಎಸ್‌ಯುವಿ-ಕೂಪ್ ಪರ್ಯಾವೆಂದು ಪರಿಗಣಿಸಬಹುದು.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಮಾರುತಿ ಗ್ರ್ಯಾಂಡ್ ವಿಟಾರಾ ಅನ್‌ರೋಡ್ ಬೆಲೆ