ಉತ್ಪಾದನೆಯಲ್ಲಿ 30 ಲಕ್ಷ ಕಾರುಗಳ ಮೈಲಿಗಲ್ಲು ದಾಟಿದ Maruti Dzire
ಮಾರುತಿ ಡಿಜೈರ್ ಗಾಗಿ dipan ಮೂಲಕ ಡಿಸೆಂಬರ್ 30, 2024 08:25 pm ರಂದು ಪ್ರಕಟಿಸಲಾಗಿದೆ
- 43 Views
- ಕಾಮೆಂಟ್ ಅನ್ನು ಬರೆಯಿರಿ
ಆಲ್ಟೊ, ಸ್ವಿಫ್ಟ್ ಮತ್ತು ವ್ಯಾಗನ್ ಆರ್ ಅನ್ನು ಸೇರಿದಂತೆ ಈ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದ ಮಾರುತಿಯ ನಾಲ್ಕನೇ ಮೊಡೆಲ್ ಡಿಜೈರ್ ಆಗಿದೆ
2024ರಲ್ಲಿ ತನ್ನ ಮನೇಸರ್ ಉತ್ಪಾದನಾ ಪ್ಲಾಂಟ್‌ನಲ್ಲಿ 20 ಲಕ್ಷ ಕಾರುಗಳ ಉತ್ಪಾದನಾ ಮೈಲಿಗಲ್ಲನ್ನು ದಾಟಿದೆ ಎಂದು ಮಾರುತಿ ಇತ್ತೀಚೆಗೆ ಘೋಷಿಸಿತ್ತು. ಈಗ, ಮಾರುತಿ ಡಿಜೈರ್ 2008ರ ಮಾರ್ಚ್‌ನಲ್ಲಿ ಪ್ರಾರಂಭವಾದಾಗಿನಿಂದ 30 ಲಕ್ಷ ಯುನಿಟ್‌ಗಳ ಉತ್ಪಾದನಾ ಮೈಲಿಗಲ್ಲನ್ನು ದಾಟುವ ಮೂಲಕ ಕಾರು ತಯಾರಕರು ಹೊಸ ದಾಖಲೆಯೊಂದನ್ನು ಬರೆದಿದೆ. ಜನಪ್ರಿಯ ಸಬ್‌ಕಾಂಪ್ಯಾಕ್ಟ್ ಸೆಡಾನ್ ಈ ಮೈಲಿಗಲ್ಲನ್ನು ತಲುಪಲು ಎಷ್ಟು ಸಮಯ ತೆಗೆದುಕೊಂಡಿತು ಎಂಬುದರ ವಿವರವಾದ ಮಾಹಿತಿ ಇಲ್ಲಿದೆ.
ತಿಂಗಳು ಮತ್ತು ವರ್ಷ |
ಮೈಲುಗಲ್ಲಿನ ಸಾಧನೆ |
ಏಪ್ರಿಲ್ 2015 |
10 ಲಕ್ಷ |
ಜೂನ್ 2019 |
20 ಲಕ್ಷ |
ಡಿಸೆಂಬರ್ 2024 |
30 ಲಕ್ಷ |
ಬಿಡುಗಡೆಯಾದ ನಂತರ ಮೊದಲ ಪ್ರಮುಖ 10 ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ತಲುಪಲು ಡಿಜೈರ್ 7 ವರ್ಷಗಳನ್ನು ತೆಗೆದುಕೊಂಡಿದೆ ಎಂದು ಟೇಬಲ್ ತೋರಿಸುತ್ತದೆ. ಅದರ ನಂತರ, 4 ವರ್ಷಗಳಲ್ಲಿ ಇನ್ನೂ 10 ಲಕ್ಷ ಕಾರುಗಳನ್ನು ಉತ್ಪಾದಿಸಲಾಯಿತು ಮತ್ತು ಕಾರು ತಯಾರಕರು ಮುಂದಿನ 5 ವರ್ಷಗಳಲ್ಲಿ ಮುಂದಿನ 10 ಲಕ್ಷ ಡಿಜೈರ್ ಮೊಡೆಲ್‌ಗಳನ್ನು ತಲುಪಿದರು. ಇದರರ್ಥ 30 ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ತಲುಪಲು ಕಾರು ತಯಾರಕರು ಒಟ್ಟು 16 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಆರ್ಥಿಕ ವರ್ಷ 2023-24 ರಲ್ಲಿ ಮಾರುತಿ ಸುಜುಕಿಯಿಂದ ಡಿಜೈರ್ ಎರಡನೇ ಅತಿ ಹೆಚ್ಚು ರಫ್ತು ಮಾಡಲಾದ ಮೊಡೆಲ್ ಆಗಿದೆ.
ಗಮನಾರ್ಹವಾಗಿ, ಮಾರುತಿ ಆಲ್ಟೊ, ಸ್ವಿಫ್ಟ್ ಮತ್ತು ವ್ಯಾಗನ್ ಆರ್ ಈಗಾಗಲೇ ತಮ್ಮ 30 ಲಕ್ಷ ಉತ್ಪಾದನಾ ಮೈಲಿಗಲ್ಲುಗಳನ್ನು ದಾಟಿವೆ. ಮಾರುತಿಯು 2024ರ ಏಪ್ರಿಲ್ ವೇಳೆಗೆ 3 ಕೋಟಿಗೂ ಹೆಚ್ಚು ಕಾರುಗಳ ಉತ್ಪಾದನೆಯ ಮೈಲಿಗಲ್ಲನ್ನು ದಾಟಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಪ್ರಥಮ ಬಾರಿಗೆ Maruti e Vitaraದ ಉತ್ಪಾದನಾ ಆವೃತ್ತಿಯ ಟೀಸರ್ ಔಟ್
ಮಾರುತಿ ಡಿಜೈರ್: ಒಂದು ಅವಲೋಕನ
ಮೊದಲೇ ಹೇಳಿದಂತೆ, ಮಾರುತಿ ಡಿಜೈರ್ ಅನ್ನು 2008ರ ಮಾರ್ಚ್‌ನಲ್ಲಿ ಪರಿಚಯಿಸಲಾಯಿತು ಮತ್ತು ಇದುವರೆಗೆ ನಾಲ್ಕು ಜನರೇಶನ್‌ನ ಆಪ್‌ಡೇಟ್‌ಗಳನ್ನು ಕಂಡಿದೆ. ಸಬ್‌ಕಾಂಪ್ಯಾಕ್ಟ್ ಸೆಡಾನ್ ಪ್ರಸ್ತುತ ಅದರ ನಾಲ್ಕನೇ ಜನರೇಶನ್‌ನ ಅವತಾರದಲ್ಲಿದೆ ಮತ್ತು ಅದರ ಪ್ಲಾಟ್‌ಫಾರ್ಮ್ ಮತ್ತು ಪವರ್‌ಟ್ರೇನ್ ಅನ್ನು ಮಾರುತಿ ಸ್ವಿಫ್ಟ್‌ನೊಂದಿಗೆ ಹಂಚಿಕೊಳ್ಳುವುದನ್ನು ಮುಂದುವರೆಸಿದೆ, ಆದರೆ ಈಗ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ಗಿಂತ ವಿಭಿನ್ನ ವಿನ್ಯಾಸವನ್ನು ಪಡೆಯುತ್ತದೆ.
ಇದು 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 82 ಪಿಎಸ್ ಮತ್ತು 112 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟೆಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ (ಎಎಮ್‌ಟಿ) ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಸಿಎನ್‌ಜಿ ಆಯ್ಕೆಯನ್ನು ಸಹ ಹೊಂದಿದ್ದು (70 ಪಿಎಸ್/102 ಎನ್‌ಎಮ್), ಕೇವಲ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.
ಫೀಚರ್‌ಗಳ ವಿಷಯದಲ್ಲಿ, ಇದು ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ಸಿಂಗಲ್-ಪೇನ್ ಸನ್‌ರೂಫ್, 9-ಇಂಚಿನ ಟಚ್‌ಸ್ಕ್ರೀನ್, ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ AC ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನೊಂದಿಗೆ ಬರುತ್ತದೆ. ಇದರ ಸುರಕ್ಷತಾ ಸೂಟ್ 5-ಸ್ಟಾರ್ ಗ್ಲೋಬಲ್ NCAP ಕ್ರ್ಯಾಶ್ ರೇಟಿಂಗ್ ಅನ್ನು ಪಡೆದಿದ್ದು, ಮತ್ತು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ) ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಇತರ ಫೀಚರ್‌ಗಳೊಂದಿಗೆ ಬರುತ್ತದೆ.
ಮಾರುತಿ ಡಿಜೈರ್: ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಾರುತಿ ಡಿಜೈರ್‌ನ ಬೆಲೆ 6.79 ಲಕ್ಷ ರೂ.ನಿಂದ 10.14 ಲಕ್ಷ ರೂ.ವರೆಗೆ(ಪರಿಚಯಾತ್ಮಕ ಎಕ್ಸ್ ಶೋ ರೂಂ, ಪ್ಯಾನ್-ಇಂಡಿಯಾ) ಇರಲಿದೆ. ಇದು ಹೊಸ ಹೋಂಡಾ ಅಮೇಜ್, ಹ್ಯುಂಡೈ ಔರಾ ಮತ್ತು ಟಾಟಾ ಟಿಗೋರ್‌ನಂತಹ ಇತರ ಸಬ್-4m ಸೆಡಾನ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ