Login or Register ಅತ್ಯುತ್ತಮ CarDekho experience ಗೆ
Login

ಡೆಲಿವರಿಗೆ ಬಾಕಿಯಿದೆ ಮಾರುತಿ ಫ್ರಾಂಕ್ಸ್‌ನ ಬರೋಬ್ಬರಿ 22,000 ಯೂನಿಟ್‌ಗಳು

ಮಾರುತಿ ಫ್ರಾಂಕ್ಸ್‌ ಗಾಗಿ rohit ಮೂಲಕ ಆಗಸ್ಟ್‌ 04, 2023 06:53 am ರಂದು ಪ್ರಕಟಿಸಲಾಗಿದೆ

ಮಾರುತಿಯ ಎಲ್ಲಾ ಕಾರುಗಳ ಒಟ್ಟಾರೆ 3.55 ಲಕ್ಷ ಯುನಿಟ್‌ ಗಳು ಡೆಲಿವರಿ ಬಾಕಿ ಇದ್ದು, ಅದರಲ್ಲಿ ಮಾರುತಿ ಫ್ರಾಂಕ್ಸ್‌ನ ಪಾಲು 22000 ಯೂನಿಟ್‌ಗಳಾಗಿವೆ

  • ಮಾರುತಿ ಬಲೆನೊ ಆಧಾರಿತ ಫ್ರಾಂಕ್ಸ್ ಅನ್ನು 2023 ರಲ್ಲಿ ಬಿಡುಗಡೆಗೊಳಿಸಲಾಯಿತು.

  • ಕಾರು ತಯಾರಕರು ಪ್ರತಿ ತಿಂಗಳು ಈ ಫ್ರಾಂಕ್ಸ್‌ನ ಸರಾಸರಿ 9000 ಯೂನಿಟ್‌ಗಳನ್ನು ಉತ್ಪಾದಿಸುತ್ತಾರೆ

  • ಫ್ರಾಂಕ್ಸ್ 1.2-ಲೀಟರ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ಗಳೊಂದಿಗೆ ಸಿಎನ್‌ಜಿ ಆಯ್ಕೆಯನ್ನು ಸಹ ಪಡೆಯುತ್ತದೆ.

  • 9-ಇಂಚಿನ ಟಚ್‌ಸ್ಕ್ರೀನ್, ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮರಾವನ್ನು ಪಡೆಯುತ್ತದೆ.

  • ಇದರ ಬೆಲೆಯು ರೂ. 7.46 ಲಕ್ಷದಿಂದ ರೂ. 13.14 ಲಕ್ಷದವರೆಗೆ ಇದೆ (ಎಕ್ಸ್-ಶೋರೂಮ್ ದೆಹಲಿ).

ಏಪ್ರಿಲ್ 2023 ರ ಆರಂಭದಲ್ಲಿ, ನಾವು ಮಾರುತಿ ಫ್ರಾಂಕ್ಸ್ ರೂಪದಲ್ಲಿ ಒಂದು ಹೊಸ ಕ್ರಾಸ್‌ಓವರ್ ಎಸ್‌ಯುವಿಯನ್ನು ಪಡೆದೆವು. ಇದು ಮಾರುತಿ ಬಲೆನೊ-ಆಧಾರಿತ ವಿನ್ಯಾಸವನ್ನು ಹೊಂದಿದ್ದರೂ, ಇದರ ಮುಂಭಾಗವು ಗ್ರ್ಯಾಂಡ್ ವಿಟಾರಾವನ್ನು ಹೋಲುತ್ತಿತ್ತು. ಕಾರು ತಯಾರಕರು ಅದರ ಇತ್ತೀಚಿನ ತ್ರೈಮಾಸಿಕ ಫಲಿತಾಂಶ ಘೋಷಣಾ ಸಭೆಯಲ್ಲಿ, ಸಬ್-4m ಕ್ರಾಸ್ಓವರ್‌ನ ಸರಾಸರಿ ಉತ್ಪಾದನಾ ಸಂಖ್ಯೆ ಮತ್ತು ಬಾಕಿಯುಳಿದಿರುವ ಆರ್ಡರ್‌ಗಳನ್ನು ಬಹಿರಂಗಪಡಿಸಿದ್ದು, ಅದರ ಒಟ್ಟಾರೆ ಆರ್ಡರ್ ಬ್ಯಾಕ್‌ಲಾಗ್ ಬಗ್ಗೆ ನಮಗೊಂದು ಕಲ್ಪನೆಯನ್ನು ನೀಡುತ್ತದೆ.

ಫ್ರಾಂಕ್ಸ್ ವಿವರಗಳು ಮತ್ತು ಬಾಕಿಯಿರುವ ಆರ್ಡರ್‌ಗಳು

ಮಾರುತಿ ಪ್ರತಿ ತಿಂಗಳು ಸರಾಸರಿ 9000 ಫ್ರಾಂಕ್ಸ್ ಯೂನಿಟ್‌ಗಳನ್ನು ಉತ್ಪಾದಿಸುತ್ತದೆ. ಸರಿಸುಮಾರು 22,000 ಯೂನಿಟ್‌ ಫ್ರಾಂಕ್ಸ್‌ ಅನ್ನು ಇನ್ನೂ ಡೆಲಿವರಿ ನೀಡಬೇಕಾಗಿದೆ ಎಂದು ಕಾರು ತಯಾರಕರು ಅಪ್‌ಡೇಟ್ ನೀಡಿದ್ದಾರೆ. ತನ್ನ ಎಲ್ಲಾ ಮಾಡೆಲ್‌ಗಳು ಸೇರಿ ಒಟ್ಟಾರೆ ಸುಮಾರು 3.55 ಲಕ್ಷ ಆರ್ಡರ್‌ಗಳು ಬಾಕಿ ಉಳಿದಿವೆ ಎಂದು ಮಾರುತಿ ಬಹಿರಂಗಪಡಿಸಿದೆ.

ಮಾರುತಿ ಫ್ರಾಂಕ್ಸ್: ಸಾರಾಂಶ

ಮಾರುತಿ ಫ್ರಾಂಕ್ಸ್ ಎರಡು ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿದೆ: ಒಂದು, 90PS ಮತ್ತು 113Nm ಉತ್ಪಾದಿಸುವ 1.2-ಲೀಟರ್ ನೈಸರ್ಗಿಕ ಆ್ಯಸ್ಪಿರೇಟೆಡ್ ಯೂನಿಟ್, ಮತ್ತೊಂದು ಮೈಲ್ಡ್-ಹೈಬ್ರಿಡ್ ಟೆಕ್‌ನೊಂದಿಗಿನ 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ (100PS/148Nm). ಮೊದಲನೆಯದು 5-ಸ್ಪೀಡ್ MT ಮತ್ತು AMT ಆಯ್ಕೆಗಳು ಮತ್ತು ಎರಡನೆಯದು 5-ಸ್ಪೀಡ್ MT ಮತ್ತು 6-ಸ್ಪೀಡ್ AT ಆಯ್ಕೆಗಳು.

ಮಾರುತಿಯು ಫ್ರಾಂಕ್ಸ್ ಅನ್ನು 1.2-ಲೀಟರ್ ಯೂನಿಟ್‌ನಲ್ಲಿ ಐಚ್ಛಿಕ CNG ಕಿಟ್‌ನೊಂದಿಗೆ ನೀಡುತ್ತದೆ, ಮತ್ತು ಇದು 77.5PS ಮತ್ತು 98.5Nm ಉತ್ಪಾದಿಸುತ್ತದೆ ಹಾಗೂ ಕೇವಲ ಮ್ಯಾನ್ಯುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಈ ಕ್ರಾಸ್ಓವರ್ ಎಸ್‌ಯುವಿ ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ 9-ಇಂಚಿನ ಟಚ್‌ಸ್ಕ್ರೀನ್, ಆಟೋ ಕ್ಲೈಮೆಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್‌ಪ್ಲೇ, ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮಾರವನ್ನು ಹೊಂದಿದೆ.

ಇದನ್ನೂ ಓದಿ: "ಟೊಯೋಟಾ ಫ್ರಾಂಕ್ಸ್", 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ!

ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

ಮಾರುತಿ ತನ್ನ ಫ್ರಾಂಕ್ಸ್‌ನ ಬೆಲೆಯನ್ನು ರೂ.7.46 ಲಕ್ಷದಿಂದ ರೂ. 13.14 ಲಕ್ಷಗಳ ನಡುವೆ ನಿಗದಿಪಡಿಸುತ್ತಿದೆ (ಎಕ್ಸ್-ಶೋರೂಮ್ ದೆಹಲಿ). ಇದು ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿರದಿದ್ದರೂ, ಸಿಟ್ರಾನ್ C3 ಮತ್ತು ಹ್ಯುಂಡೈ ಎಕ್ಸ್‌ಟರ್‌ಗೆ ಸ್ಪರ್ಧೆಯೊಡ್ಡುತ್ತದೆ. ಇದು ಹ್ಯುಂಡೈ ವೆನ್ಯು, ಮಾರುತಿ ಬ್ರೆಝಾ, ಕಿಯಾ ಸೊನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ XUV300, ರೆನಾಲ್ಟ್ ಕೈಗರ್ ಮತ್ತು ನಿಸಾನ್ ಮ್ಯಾಗ್ನೈಟ್‌ನಂತಹ ಸಬ್-4m ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಇದನ್ನೂ ಓದಿ: Tata Nexon: ಸಿದ್ದವಾದ ಹೆಡ್ ಲೈಟ್ ನೊಂದಿಗೆ ಮೊದಲ ಬಾರಿಗೆ ಸುಧಾರಿತ ಆವೃತ್ತಿ ಪ್ರತ್ಯಕ್ಷ

ಇನ್ನಷ್ಟು ಇಲ್ಲಿ ಓದಿ : ಫ್ರಾಂಕ್ಸ್ ಆಟೋಮ್ಯಾಟಿಕ್

Share via

Write your Comment on Maruti ಫ್ರಾಂಕ್ಸ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ಫೇಸ್ ಲಿಫ್ಟ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ