Login or Register ಅತ್ಯುತ್ತಮ CarDekho experience ಗೆ
Login

Maruti Nexaದ ಜೂನ್ ಆಫರ್‌ಗಳು- ರೂ 74,000 ವರೆಗೆ ಬರೋಬ್ಬರಿ ರಿಯಾಯಿತಿ ಪಡೆಯುವ ಅವಕಾಶ

published on ಜೂನ್ 06, 2024 07:17 pm by yashika for ಮಾರುತಿ ಬಾಲೆನೋ

ವಿನಿಮಯ ಬೋನಸ್ ಬದಲಿಗೆ ಐಚ್ಛಿಕವಾಗಿ ಸ್ಕ್ರಾಪೇಜ್ ಬೋನಸ್ ಕೂಡ ಪಡೆಯಬಹುದು, ಇದು ಜಿಮ್ನಿ ಹೊರತುಪಡಿಸಿ ಎಲ್ಲಾ ಮಾಡೆಲ್ ಗಳಲ್ಲಿ ಲಭ್ಯವಿದೆ

ಮಾರುತಿ ತನ್ನ ನೆಕ್ಸಾ ಲೈನ್‌ಅಪ್‌ಗಾಗಿ (ಇನ್ವಿಕ್ಟೊ ಹೊರತುಪಡಿಸಿ) ಹೊಸ ಕೊಡುಗೆಗಳನ್ನು ಹೊರತಂದಿದೆ, ಇದು ಜೂನ್ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತದೆ. ಪ್ರತಿ ಬಾರಿಯ ಹಾಗೆ, ಹೊಸ ಕೊಡುಗೆಗಳು ನಗದು ರಿಯಾಯಿತಿಗಳು, ವಿನಿಮಯ ಬೋನಸ್‌ಗಳು ಮತ್ತು ಕಾರ್ಪೊರೇಟ್ ಕೊಡುಗೆಗಳು ಸೇರಿದಂತೆ ವಿವಿಧ ಪ್ರಯೋಜನಗಳನ್ನು ಒಳಗೊಂಡಿವೆ. ಜೂನ್ 30 ರವರೆಗೆ ಮಾನ್ಯವಾಗಿರುವ ಮಾಡೆಲ್-ವಾರು ಆಫರ್‌ಗಳ ತ್ವರಿತ ನೋಟ ಇಲ್ಲಿದೆ:

ಬಲೆನೋ

ಆಫರ್

ಮೊತ್ತ

ನಗದು ರಿಯಾಯಿತಿ

ರೂ. 40,000 ವರೆಗೆ

ವಿನಿಮಯ ಬೋನಸ್

ರೂ. 15000

ಕಾರ್ಪೊರೇಟ್ ರಿಯಾಯಿತಿ

ರೂ. 2000

ಒಟ್ಟು ಪ್ರಯೋಜನಗಳು

ರೂ. 57000

  • ಮೇಲೆ ತಿಳಿಸಿದ ಪ್ರಯೋಜನಗಳು ಮಾರುತಿ ಬಲೆನೊದ AMT ವೇರಿಯಂಟ್ ಗಳಲ್ಲಿ ಲಭ್ಯವಿದೆ.

  • ನೀವು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಹ್ಯಾಚ್‌ಬ್ಯಾಕ್ ಖರೀದಿಸಲು ಬಯಸಿದರೆ, ನಗದು ರಿಯಾಯಿತಿಯು ರೂ 35,000 ಕ್ಕೆ ಇಳಿಯುತ್ತದೆ, ಆದರೆ ಇತರ ಕೊಡುಗೆಗಳು ಬದಲಾಗದೆ ಹಾಗೆಯೇ ಉಳಿಯುತ್ತವೆ.

  • ನೀವು 15,000 ರೂಪಾಯಿಗಳ ವಿನಿಮಯ ಬೋನಸ್ ಬದಲಿಗೆ 20,000 ರೂಪಾಯಿಗಳ ಸ್ಕ್ರ್ಯಾಪೇಜ್ ಬೋನಸ್ ಅನ್ನು ಕೂಡ ಆಯ್ಕೆ ಮಾಡಬಹುದು.

  • ಇದರ CNG ವೇರಿಯಂಟ್ ಅನ್ನು ಖರೀದಿಸಲು ಬಯಸುವವರಿಗೆ, ಮಾರುತಿ 15,000 ರೂಪಾಯಿಗಳ ನಗದು ರಿಯಾಯಿತಿಯನ್ನು ನೀಡುತ್ತದೆ ಆದರೆ ಎಲ್ಲಾ ಇತರ ಪ್ರಯೋಜನಗಳು ಬದಲಾಗದೆ ಹಾಗೆಯೇ ಉಳಿಯುತ್ತದೆ.

  • ಬಲೆನೊ ಬೆಲೆಯು ರೂ. 6.66 ಲಕ್ಷದಿಂದ ರೂ. 9.88 ಲಕ್ಷದವರೆಗೆ ಇದೆ

ಫ್ರಾಂಕ್ಸ್

ಆಫರ್

ಮೊತ್ತ

ನಗದು ರಿಯಾಯಿತಿ

ರೂ. 15,000 ವರೆಗೆ

ವಿನಿಮಯ ಬೋನಸ್

ರೂ. 10000

ಕಾರ್ಪೊರೇಟ್ ರಿಯಾಯಿತಿ

ರೂ. 2000

ಒಟ್ಟು ಪ್ರಯೋಜನಗಳು

ರೂ. 27000

  • ನೀವು ಮಾರುತಿ ಫ್ರಾಂಕ್ಸ್ ಟರ್ಬೊ ವೇರಿಯಂಟ್ ಗಳನ್ನು ಆಯ್ಕೆ ಮಾಡಿಕೊಂಡರೆ, ಮೇಲೆ ತಿಳಿಸಿದ ನಗದು ರಿಯಾಯಿತಿಯ ಜೊತೆಗೆ ನೀವು ರೂ 43,000 ಮೌಲ್ಯದ ವೆಲಾಸಿಟಿ ಎಡಿಷನ್ ಆಕ್ಸೆಸರಿ ಕಿಟ್ ಅನ್ನು ಕೂಡ ಪಡೆಯುತ್ತೀರಿ

  • ನೀವು ಎಕ್ಸ್‌ಚೇಂಜ್ ಬೋನಸ್ ಬದಲಿಗೆ 15,000 ರೂಪಾಯಿಗಳ ಸ್ಕ್ರ್ಯಾಪೇಜ್ ಬೋನಸ್ ಅನ್ನು ಕೂಡ ಆಯ್ಕೆಮಾಡಿಕೊಳ್ಳಬಹುದು.

  • ಮಾರುತಿ ತನ್ನ ರೆಗ್ಯುಲರ್ ಪೆಟ್ರೋಲ್ ವೇರಿಯಂಟ್ ಗಳನ್ನು ರೂ 15,000 ನಗದು ರಿಯಾಯಿತಿಯೊಂದಿಗೆ ನೀಡುತ್ತಿದೆ. ಫ್ರಾಂಕ್ಸ್ CNG ಯೊಂದಿಗೆ ಯಾವುದೇ ನಗದು ರಿಯಾಯಿತಿಯನ್ನು ನೀಡಲಾಗುವುದಿಲ್ಲಆದರೆ ಟೇಬಲ್‌ನಲ್ಲಿ ಪಟ್ಟಿ ಮಾಡಲಾದ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ಬೋನಸ್ ಒಳಗೊಂಡಿರುತ್ತದೆ.

  • ಫ್ರಾಂಕ್ಸ್ ಬೆಲೆಯು ರೂ.7.51 ಲಕ್ಷದಿಂದ 13.04 ಲಕ್ಷದವರೆಗೆ ಇದೆ

ಗ್ರ್ಯಾಂಡ್ ವಿಟಾರಾ

ಆಫರ್

ಮೊತ್ತ

ನಗದು ರಿಯಾಯಿತಿ

ರೂ. 20,000 ವರೆಗೆ

ವಿನಿಮಯ ಬೋನಸ್

ರೂ. 50,000

ಕಾರ್ಪೊರೇಟ್ ರಿಯಾಯಿತಿ

ರೂ. 4,000

ಒಟ್ಟು ಪ್ರಯೋಜನಗಳು

ರೂ. 74,000

  • ಮೇಲೆ ತಿಳಿಸಿದ ಉಳಿತಾಯವು ಮಾರುತಿ ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್-ಹೈಬ್ರಿಡ್ ವೇರಿಯಂಟ್ ಗಳಿಗೆ ಅನ್ವಯಿಸುತ್ತದೆ, ಇದರ ಬೆಲೆ ರೂ 18.43 ಲಕ್ಷದಿಂದ ಪ್ರಾರಂಭವಾಗುತ್ತದೆ.

  • ಮಾರುತಿಯು SUVಯ ಸ್ಟ್ರಾಂಗ್-ಹೈಬ್ರಿಡ್ ವೇರಿಯಂಟ್ ಗಳನ್ನು ಅತಿ ಹೆಚ್ಚಿನ ಅಂದರೆ ರೂ. 55,000 ಐಚ್ಛಿಕ ಸ್ಕ್ರ್ಯಾಪೇಜ್ ಬೋನಸ್‌ನೊಂದಿಗೆ (ವಿನಿಮಯ ಬೋನಸ್‌ನ ಬದಲಿಗೆ) ನೀಡುತ್ತಿದೆ.

  • SUV ಯ ಟಾಪ್-ಸ್ಪೆಕ್ ಪೆಟ್ರೋಲ್ ಮಾತ್ರ ಇರುವ ಝೀಟಾ ಮತ್ತು ಆಲ್ಫಾ ವೇರಿಯಂಟ್ ಗಳನ್ನು (AWD ಇರುವ) ಆಯ್ಕೆ ಮಾಡುವವರಿಗೆ, ನಗದು ರಿಯಾಯಿತಿಯು ರೂ 10,000 ರಷ್ಟು ಹೆಚ್ಚಾಗುತ್ತದೆ ಆದರೆ ವಿನಿಮಯ ಮತ್ತು ಸ್ಕ್ರ್ಯಾಪೇಜ್ ಬೋನಸ್‌ಗಳು ರೂ 20,000 ರಷ್ಟು ಕಡಿಮೆಯಾಗುತ್ತವೆ.

  • ಮಿಡ್-ಸ್ಪೆಕ್ ಡೆಲ್ಟಾ ವೇರಿಯಂಟ್ ರೂ 20,000 ನಗದು ರಿಯಾಯಿತಿ, ರೂ 30,000 ವಿನಿಮಯ ಬೋನಸ್ ಮತ್ತು ರೂ 4,000 ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುತ್ತದೆ.

  • ಮಾರುತಿಯು SUV ಯ ಬೇಸ್-ಸ್ಪೆಕ್ ಸಿಗ್ಮಾ ವೇರಿಯಂಟ್ ಅನ್ನು ಕೇವಲ ರೂ. 10,000 ನಗದು ರಿಯಾಯಿತಿ, ರೂ. 20,000 ವಿನಿಮಯ ಬೋನಸ್ ಮತ್ತು ರೂ. 4,000 ಕಾರ್ಪೊರೇಟ್ ರಿಯಾಯಿತಿಯೊಂದಿಗೆ ನೀಡುತ್ತಿದೆ.

  • ಗ್ರ್ಯಾಂಡ್ ವಿಟಾರಾ ಬೆಲೆಯು ರೂ. 11 ಲಕ್ಷದಿಂದ 20.09 ಲಕ್ಷದವರೆಗೆ ಇದೆ.

ಜಿಮ್ನಿ

ಆಫರ್

ಮೊತ್ತ

ನಗದು ರಿಯಾಯಿತಿ

ರೂ. 50,000 ವರೆಗೆ

ಒಟ್ಟು ಪ್ರಯೋಜನಗಳು

ರೂ. 50,000

  • ಮಾರುತಿ ಜಿಮ್ನಿಯ ಎಲ್ಲಾ ವೇರಿಯಂಟ್ ಗಳನ್ನು ರೂ. 50,000 ವರೆಗಿನ ಪ್ರಯೋಜನಗಳೊಂದಿಗೆ ನೀಡಲಾಗುತ್ತಿದೆ.

  • ಮಾರುತಿ ಇದರೊಂದಿಗೆ ಯಾವುದೇ ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿ, ಸ್ಕ್ರ್ಯಾಪ್‌ಪೇಜ್ ಬೋನಸ್‌ ಅನ್ನು ನೀಡುತ್ತಿಲ್ಲ.

  • ಜಿಮ್ನಿಯ ಬೆಲೆಯು ರೂ.12.74 ಲಕ್ಷದಿಂದ ರೂ.14.95 ಲಕ್ಷದವರೆಗೆ ಇದೆ.

XL6

ಆಫರ್

ಮೊತ್ತ

ನಗದು ರಿಯಾಯಿತಿ

ರೂ. 20,000 ವರೆಗೆ

ಒಟ್ಟು ಪ್ರಯೋಜನಗಳು

ರೂ. 20,000

  • ಮಾರುತಿ XL6 ಅನ್ನು ಪೆಟ್ರೋಲ್ ವೇರಿಯಂಟ್ ಗಳೊಂದಿಗೆ 20,000 ರೂಪಾಯಿಗಳ ವಿನಿಮಯ ಬೋನಸ್‌ನೊಂದಿಗೆ ಮಾತ್ರ ನೀಡಲಾಗುತ್ತಿದೆ.

  • ವಿನಿಮಯ ಬೋನಸ್ ಬದಲಿಗೆ 25,000 ರೂಪಾಯಿಗಳ ಸ್ಕ್ರ್ಯಾಪೇಜ್ ಬೋನಸ್ ಅನ್ನು ಕೂಡ ನೀವು ಆಯ್ಕೆ ಮಾಡಿಕೊಳ್ಳಬಹುದು.

  • ಈ ಆಫರ್ ನಲ್ಲಿ XL6 CNG ಗೆ ಯಾವುದೇ ರಿಯಾಯಿತಿ ಇಲ್ಲ.

  • ಮಾರುತಿ ತನ್ನ XL6 ಬೆಲೆಯನ್ನು ರೂ. 11.61 ಲಕ್ಷದಿಂದ ಮತ್ತು 14.77 ಲಕ್ಷಗಳವರೆಗೆ ಇರಿಸಿದೆ

ಸಿಯಾಜ್

ಆಫರ್

ಮೊತ್ತ

ನಗದು ರಿಯಾಯಿತಿ

ರೂ. 20,000 ವರೆಗೆ

ವಿನಿಮಯ ಬೋನಸ್

ರೂ. 25,000

ಒಟ್ಟು ಪ್ರಯೋಜನಗಳು

ರೂ. 45,000

  • ನೀವು ಮಾರುತಿ ಸಿಯಾಜ್‌ನ ಎಲ್ಲಾ ವೇರಿಯಂಟ್ ಗಳಲ್ಲಿ ಮೇಲೆ ತಿಳಿಸಿದ ಉಳಿತಾಯವನ್ನು ಪಡೆಯಬಹುದು.

  • ಖರೀದಿದಾರರು 25,000 ರೂಪಾಯಿಗಳ ವಿನಿಮಯ ಬೋನಸ್ ಬದಲಿಗೆ 30,000 ರೂಪಾಯಿಗಳ ಐಚ್ಛಿಕ ಸ್ಕ್ರ್ಯಾಪೇಜ್ ಬೋನಸ್ ಅನ್ನು ಕೂಡ ಆಯ್ಕೆ ಮಾಡಬಹುದು.

  • ಮಾರುತಿ ತನ್ನ ಕಾಂಪ್ಯಾಕ್ಟ್ ಸೆಡಾನ್ ಬೆಲೆಯನ್ನು ರೂ. 9.40 ಲಕ್ಷ ಮತ್ತು 12.29 ಲಕ್ಷಗಳ ನಡುವೆ ಇರಿಸಿದೆ

ಇಗ್ನಿಸ್

ಆಫರ್

ಮೊತ್ತ

ನಗದು ರಿಯಾಯಿತಿ

ರೂ. 40,000 ವರೆಗೆ

ವಿನಿಮಯ ಬೋನಸ್

ರೂ. 15,000

ಕಾರ್ಪೊರೇಟ್ ರಿಯಾಯಿತಿ

ರೂ. 3,000

ಒಟ್ಟು ಪ್ರಯೋಜನಗಳು

ರೂ. 58,000

  • ಮೇಲೆ ತಿಳಿಸಲಾದ ಕೊಡುಗೆಗಳು ಮಾರುತಿ ಇಗ್ನಿಸ್‌ನ ಎಲ್ಲಾ AMT ವೇರಿಯಂಟ್ ಗಳ ಮೇಲೆ ಲಭ್ಯವಿದೆ.

  • MT ವೇರಿಯಂಟ್ ಗಳನ್ನು ಖರೀದಿಸಲು ನೋಡುತ್ತಿರುವ ಗ್ರಾಹಕರಿಗೆ, ಮಾರುತಿ ರೂ 35,000 ನಗದು ರಿಯಾಯಿತಿಯನ್ನು ನೀಡುತ್ತಿದೆ ಆದರೆ ಇತರ ರಿಯಾಯಿತಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ.

  • ನೀವು 15,000 ರೂಪಾಯಿಗಳ ವಿನಿಮಯ ಬೋನಸ್ ಅಥವಾ 20,000 ರೂಪಾಯಿಗಳ ಸ್ಕ್ರ್ಯಾಪೇಜ್ ಬೋನಸ್‌ ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.

  • ಮಾರುತಿಯು ಇಗ್ನಿಸ್‌ ಬೆಲೆಯು ರೂ. 5.84 ಲಕ್ಷದಿಂದ 8.11 ಲಕ್ಷದವರೆಗೆ ಇದೆ

ಗಮನಿಸಿ:

  • ಗ್ರಾಹಕರ ಅರ್ಹತೆಯ ಆಧಾರದ ಮೇಲೆ ಕಾರ್ಪೊರೇಟ್ ಕೊಡುಗೆಗಳು ಬದಲಾಗಬಹುದು

  • ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಪ್ರಯೋಜನಗಳು ಬದಲಾಗಬಹುದು, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಮಾರುತಿ ನೆಕ್ಸಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

  • ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ.

ಇನ್ನಷ್ಟು ಓದಿ: ಬಲೆನೊ AMT

y
ಅವರಿಂದ ಪ್ರಕಟಿಸಲಾಗಿದೆ

yashika

  • 36 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಬಾಲೆನೋ

Read Full News

explore similar ಕಾರುಗಳು

ಮಾರುತಿ ಗ್ರಾಂಡ್ ವಿಟರಾ

ಪೆಟ್ರೋಲ್21.11 ಕೆಎಂಪಿಎಲ್
ಸಿಎನ್‌ಜಿ26.6 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಫ್ರಾಂಕ್ಸ್‌

ಪೆಟ್ರೋಲ್21.79 ಕೆಎಂಪಿಎಲ್
ಸಿಎನ್‌ಜಿ28.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಎಕ್ಸ್‌ಎಲ್ 6

ಪೆಟ್ರೋಲ್20.97 ಕೆಎಂಪಿಎಲ್
ಸಿಎನ್‌ಜಿ26.32 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಬಾಲೆನೋ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ