• English
  • Login / Register

ಸದ್ಯದಲ್ಲೇ ಬರಲಿದೆMG Comet EV ಬ್ಲಾಕ್‌ಸ್ಟಾರ್ಮ್ ವರ್ಷನ್, ಯಾವ ಯಾವ ಫೀಚರ್‌ಗಳನ್ನು ನಿರೀಕ್ಷಿಸಬಹುದು?

ಎಂಜಿ ಕಾಮೆಟ್ ಇವಿ ಗಾಗಿ shreyash ಮೂಲಕ ಫೆಬ್ರವಾರಿ 05, 2025 01:43 pm ರಂದು ಪ್ರಕಟಿಸಲಾಗಿದೆ

  • 72 Views
  • ಕಾಮೆಂಟ್‌ ಅನ್ನು ಬರೆಯಿರಿ

MG ಕಾಮೆಟ್ EVಯು, MG ಗ್ಲೋಸ್ಟರ್, MG ಹೆಕ್ಟರ್ ಮತ್ತು MG ಆಸ್ಟರ್ ನಂತರ, MG ಇಂಡಿಯಾದ ಲೈನ್‌ಅಪ್‌ನಲ್ಲಿ ಆಲ್ ಬ್ಲಾಕ್ ವರ್ಷನ್ ಅನ್ನು ಪಡೆಯುವ ನಾಲ್ಕನೇ ಮಾಡೆಲ್ ಆಗುವ ನಿರೀಕ್ಷೆಯಿದೆ

MG Comet EV

  •  ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ರೆಡ್ ಹೈಲೈಟ್‌ಗಳೊಂದಿಗೆ ಸ್ಟಾರಿ ಬ್ಲ್ಯಾಕ್ ಎಕ್ಸ್ಟಿರಿಯರ್ ಶೇಡ್‌ನಲ್ಲಿ ಬರುವ ನಿರೀಕ್ಷೆಯಿದೆ.

  •  ಇದು ಆಲ್ ಬ್ಲಾಕ್ ಒಳಭಾಗದೊಂದಿಗೆ ಬ್ಲಾಕ್ ಸೀಟುಗಳು ಮತ್ತು ಕೆಂಪು ಅಸೆಂಟ್‌ಗಳನ್ನು ಹೊಂದಿರಬಹುದು.

  •  ಇದು ಈಗಿರುವ ಕಾಮೆಟ್‌ನಲ್ಲಿರುವ ಅದೇ ವೈಶಿಷ್ಟ್ಯಗಳನ್ನು ಹೊಂದಿರಬಹುದು, ಇದರಲ್ಲಿ ಎರಡು 10.25-ಇಂಚಿನ ಸ್ಕ್ರೀನ್‌ಗಳು ಮತ್ತು ಮಾನ್ಯುಯಲ್ AC ಸೇರಿವೆ.

  •  ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು TPMS ಸೇರಿವೆ.

  •  ಇದು 230 ಕಿಮೀ ರೇಂಜ್ ನೀಡುವ 17.3 kWh ಬ್ಯಾಟರಿ ಪ್ಯಾಕ್ ಅನ್ನು ಬಳಸುವ ಸಾಧ್ಯತೆಯಿದೆ.

3-ಡೋರ್ ಸಣ್ಣ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿರುವ MG ಕಾಮೆಟ್ EV, ಮುಂಬರುವ ಬ್ಲ್ಯಾಕ್‌ಸ್ಟಾರ್ಮ್ ವರ್ಷನ್‌ನೊಂದಿಗೆ ಆಲ್ ಬ್ಲಾಕ್ ಕಾರುಗಳ ಕ್ಲಬ್‌ಗೆ ಸೇರುವ ನಿರೀಕ್ಷೆಯಿದೆ. ಕಾಮೆಟ್ ಇವಿ ಈ ವರ್ಷನ್ ಅನ್ನು ಹೊಂದಲಿರುವ ನಾಲ್ಕನೇ MG ಮಾಡೆಲ್ ಆಗುವ ನಿರೀಕ್ಷೆಯಿದೆ ಮತ್ತು ಇದನ್ನು ಪಡೆಯಲಿರುವ ಮೊದಲ ಆಲ್-ಎಲೆಕ್ಟ್ರಿಕ್ MG ಆಗಿರಬಹುದು. ಈಗಿರುವ ಬ್ಲ್ಯಾಕ್‌ಸ್ಟಾರ್ಮ್ ವರ್ಷನ್‌ಗಳಂತೆಯೇ, ಕಾಮೆಟ್ ಬ್ಲ್ಯಾಕ್‌ಸ್ಟಾರ್ಮ್ ಕೂಡ ಆಲ್ ಬ್ಲಾಕ್ ಕಲರ್‌ನ ಹೊರಭಾಗ ಮತ್ತು ಒಳಭಾಗವನ್ನು ಕೆಂಪು ಬಣ್ಣದ ಅಸೆಂಟ್‌ಗಳೊಂದಿಗೆ ಹೊಂದಿರುತ್ತದೆ. ಕಾಮೆಟ್ ಬ್ಲ್ಯಾಕ್‌ಸ್ಟಾರ್ಮ್‌ನಲ್ಲಿ ಯಾವ ಯಾವ ಫೀಚರ್‌ಗಳು ಇರಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ.

ಆಲ್-ಬ್ಲಾಕ್ ಹೊರಭಾಗ

ಹೆಕ್ಟರ್, ಆಸ್ಟರ್ ಮತ್ತು ಗ್ಲೋಸ್ಟರ್‌ನ ಬ್ಲಾಕ್‌ಸ್ಟಾರ್ಮ್ ಎಡಿಷನ್‌ಗಳಂತೆ, ಕಾಮೆಟ್ ಬ್ಲಾಕ್‌ಸ್ಟಾರ್ಮ್ ಆಲ್ ಬ್ಲಾಕ್ ಹೊರಭಾಗವನ್ನು ಹೊಂದಿದ್ದು, ORVM ಗಳು, ಗ್ರಿಲ್ ಮತ್ತು ವೀಲ್‌ಗಳಂತಹ ಬ್ಲಾಕ್ ಕಲರ್ ಫೀಚರ್‌ಗಳನ್ನು ಹೊಂದಿರುತ್ತದೆ. ಕಾಮೆಟ್ ಈಗಾಗಲೇ ಸ್ಟಾರಿ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ, ಆದರೆ ಬ್ಲ್ಯಾಕ್‌ಸ್ಟಾರ್ಮ್ ಆವೃತ್ತಿಯು ಬಂಪರ್, ವೀಲ್‌ಗಳು ಮತ್ತು ಟೈಲ್‌ಗೇಟ್‌ನಲ್ಲಿ ಕೆಂಪು ಹೈಲೈಟ್‌ಗಳೊಂದಿಗೆ ವಿಭಿನ್ನವಾಗಿ ಕಾಣುವ ನಿರೀಕ್ಷೆಯಿದೆ.

 ಕ್ಯಾಬಿನ್ ಅಪ್ಡೇಟ್‌ಗಳು

ನಾವು ಇನ್ನೂ MG ಕಾಮೆಟ್ EV ಯ ಒಳಭಾಗವನ್ನು ನೋಡಿಲ್ಲ. ಆದರೆ, ಆಸ್ಟರ್ ಮತ್ತು ಹೆಕ್ಟರ್‌ನ ಬ್ಲಾಕ್‌ಸ್ಟಾರ್ಮ್ ಎಡಿಷನ್‌ಗಳು ಆಲ್ ಬ್ಲಾಕ್ ಡ್ಯಾಶ್‌ಬೋರ್ಡ್ ಮತ್ತು ಕೆಂಪು ಅಸೆಂಟ್‌ಗಳು ಮತ್ತು ಹೊಲಿಗೆಯೊಂದಿಗೆ ಬ್ಲಾಕ್ ಲೆದರೆಟ್ ಸೀಟುಗಳನ್ನು ಹೊಂದಿವೆ. ಕಾಮೆಟ್ ಬ್ಲಾಕ್‌ಸ್ಟಾರ್ಮ್ ಇದೇ ರೀತಿಯ ವಿನ್ಯಾಸವನ್ನು ಪಡೆಯುವ ಸಾಧ್ಯತೆಯಿದೆ.

 ಕಾಮೆಟ್ ಬ್ಲಾಕ್‌ಸ್ಟಾರ್ಮ್‌ನಲ್ಲಿರುವ ಫೀಚರ್‌ಗಳು ಸಾಮಾನ್ಯ ಎಡಿಷನ್‌ನಂತೆಯೇ ಇರುತ್ತವೆ ಎಂದು ನಿರೀಕ್ಷಿಸಲಾಗಿದೆ. ಕಾಮೆಟ್ ಇವಿಯ ರೆಗ್ಯುಲರ್ ವರ್ಷನ್ 10.25-ಇಂಚಿನ ಟಚ್‌ಸ್ಕ್ರೀನ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಇದೇ ಸೈಜ್‌ನ ಡ್ರೈವರ್ ಡಿಸ್ಪ್ಲೇ ಮತ್ತು ಮ್ಯಾನುವಲ್ ಎಸಿ ಮುಂತಾದ ಫೀಚರ್‌ಗಳೊಂದಿಗೆ ಬರುತ್ತದೆ. ಇದರ ಸುರಕ್ಷತಾ ಸೂಟ್‌ನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿದೆ.

 ಯಾವುದೇ ಮೆಕ್ಯಾನಿಕಲ್ ಬದಲಾವಣೆಗಳಿಲ್ಲ

 ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ಸಾಮಾನ್ಯ ಮಾಡೆಲ್‌ನಲ್ಲಿರುವ ಅದೇ ಬ್ಯಾಟರಿ ಆಯ್ಕೆಗಳನ್ನು ಹೊಂದಿರುವ ಸಾಧ್ಯತೆಯಿದೆ. ವಿವರಗಳು ಇಲ್ಲಿವೆ:

 ಬ್ಯಾಟರಿ ಪ್ಯಾಕ್

17.3 kWh

 ಕ್ಲೇಮ್ ಮಾಡಿರುವ ರೇಂಜ್ (ARAI)

230 km

 ಪವರ್

42 PS

 ಟಾರ್ಕ್

110 Nm

ಬೆಲೆ ಮತ್ತು ಪ್ರತಿಸ್ಪರ್ಧಿಗಳು

MG ಕಾಮೆಟ್ EV ಬ್ಲಾಕ್‌ಸ್ಟಾರ್ಮ್ ಅದರ ರೆಗ್ಯುಲರ್ ಮಾಡೆಲ್‌ಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು. ಇದರ ರೆಗ್ಯುಲರ್ ಮಾಡೆಲ್ ಬೆಲೆಯು ರೂ. 7 ಲಕ್ಷದಿಂದ ರೂ. 9.65 ಲಕ್ಷಗಳವರೆಗೆ ಇರುತ್ತದೆ. MG ಕಾಮೆಟ್ EV ಅನ್ನು ಟಾಟಾ ಟಿಯಾಗೊ EV ಮತ್ತು ಸಿಟ್ರೊಯೆನ್ eC3 ಗಳಿಗೆ ಹೋಲಿಸಿದರೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿ ಪರಿಗಣಿಸಬಹುದು.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

was this article helpful ?

Write your Comment on M g ಕಾಮೆಟ್ ಇವಿ

explore ಇನ್ನಷ್ಟು on ಎಂಜಿ ಕಾಮೆಟ್ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಬಿವೈಡಿ sealion 7
    ಬಿವೈಡಿ sealion 7
    Rs.45 - 57 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience