Login or Register ಅತ್ಯುತ್ತಮ CarDekho experience ಗೆ
Login

ಏರ್ EV ಭಾರತಕ್ಕೆ ಬರೋದು ಪಕ್ಕಾ, ಆದರೆ ಕಾಮೆಟ್ EV ಎಂಬ ಹೊಸ ಹೆಸರಿನೊಂದಿಗೆ ಎಂದ ಎಂಜಿ

published on ಮಾರ್ಚ್‌ 03, 2023 07:29 pm by ansh for ಎಂಜಿ ಕಾಮೆಟ್ ಇವಿ

ಹೊಸ ಕಾಮೆಟ್ ‘ಸ್ಮಾರ್ಟ್’ EV ಎರಡು-ಡೋರ್‌ನ ಅಲ್ಟ್ರಾ-ಕಾಂಪ್ಯಾಕ್ಟ್ ಕೊಡುಗೆಯಾಗಿದ್ದು, ಸುಸಜ್ಜಿತವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

  • ಕಾಮೆಟ್ EV ಎಂಬುದು 1934 ರ ಬ್ರಿಟಿಷ್ ವಿಮಾನದ ಹೆಸರಾಗಿದೆ.
  • ಇದು ಏರ್ EV ನಂತೆಯೇ ಬಹು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರುವ ಸಾಧ್ಯತೆಯಿದೆ.
  • ದೊಡ್ಡ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಅವಳಿ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಹೊಂದಿರುತ್ತದೆಂದು ನಿರೀಕ್ಷಿಸಲಾಗಿದೆ.
  • ಎಂಜಿ ಇದರ ಬೆಲೆಯನ್ನು ರೂ. 9 ಲಕ್ಷದಿಂದ (ಎಕ್ಸ್‌-ಶೋರೂಮ್) ಮೇಲಕ್ಕೆ ನಿಗದಿಪಡಿಸಬಹುದು.

ಎಂಜಿ ಮೋಟಾರ್ಸ್ ಸ್ವಲ್ಪ ಸಮಯದ ಹಿಂದೆ ಭಾರತಕ್ಕೆ ಹೊಸ ಆರಂಭಿಕ ಹಂತದ EV ಅನ್ನು ತರುವುದಾಗಿ ಘೋಷಿಸಿತ್ತು. ಮತ್ತು ಈಗ ಉತ್ಪನ್ನದ ಬಿಡುಗಡೆಗೆ ಮುಂಚಿತವಾಗಿ ಅದರ ಹೆಸರನ್ನು ಕಾಮೆಟ್ EV ಎಂದು ಅಧಿಕೃತವಾಗಿ ದೃಢಪಡಿಸಿದೆ. ಎಂಜಿಯಿಂದ ‘ಸ್ಮಾರ್ಟ್’ EV ಎಂದು ವರ್ಣಿಸಲ್ಪಟ್ಟ ಎಲೆಕ್ಟ್ರಿಕ್ ಕಾರು ವಾಸ್ತವವಾಗಿ ಏರ್ EV ಯ ಮರುನಾಮಕರಣಗೊಂಡ ಆವೃತ್ತಿಯಾಗಿದ್ದು ಇದನ್ನು ಮೂಲತಃ ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಲು ಯೋಜಿಸಲಾಗಿತ್ತು. ಈ ಎಲೆಕ್ಟ್ರಿಕ್ ಕಾರ್‌ನ ಇಂಡಿಯಾ-ಸ್ಪೆಕ್ ಮಾನಿಕರ್ ಅದೇ ಹೆಸರಿನ ಬ್ರಿಟಿಷ್ ವಿಮಾನದಿಂದ ಸ್ಪೂರ್ತಿ ಪಡೆದಿದೆ.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್

ಕಾಮೆಟ್ EVಯು ಎಂಜಿ ಏರ್ EV ಯ ಮರುನಾಮಕರಣಗೊಂಡ ಆವೃತ್ತಿಯಂತೆ ಕಂಡುಬಂದಿರುವುದರಿಂದ ಅದರ ಸ್ಪೆಸಿಫಿಕೇಷನ್‌ಗಳು ಸಹ ಅದೇ ರೀತಿಯಾಗಿರಬಹುದು. ಅಂತಾರಾಷ್ಟ್ರೀಯವಾಗಿ, ಈ ಏರ್ EV ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬರುತ್ತದೆ: 17.3kWh ಮತ್ತು 26.7kWh, ಎರಡೂ ರಿಯರ್-ವ್ಹೀಲ್-ಡ್ರೈವ್-ಸೆಟಪ್‌ನಲ್ಲಿ 40PS ಎಲೆಕ್ಟ್ರಿಕ್ ಮೋಟಾರ್‌ಗೆ ಜೊತೆಯಾಗಿವೆ. ಚಿಕ್ಕ ಬ್ಯಾಟರಿ ಪ್ಯಾಕ್ 200km ರೇಂಜ್ ಅನ್ನು ಕ್ಲೈಮ್ ಮಾಡಿದರೆ ದೊಡ್ಡ ಬ್ಯಾಟರಿ ಪ್ಯಾಕ್ 300km ಅನ್ನು ಕ್ಲೈಮ್ ಮಾಡುತ್ತದೆ.

ಫೀಚರ್‌ಗಳು ಮತ್ತು ಸುರಕ್ಷತೆ

ಏರ್ EV ಅನ್ನೂ ಒಳಗೊಂಡು ಎಂಜಿಯ ಇತರ ಕಾರುಗಳಂತೆಯೇ, ಈ ಕಾಮೆಟ್ EV ಸಹ ತಂತ್ರಜ್ಞಾನಭರಿತವಾಗಿರುವ ನಿರೀಕ್ಷೆಯಿದೆ. ಇದು ದೊಡ್ಡ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸಂಪರ್ಕಿತ ಕಾರ್ ಟೆಕ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳನ್ನು ಹೊಂದಿರುವ ಸಾಧ್ಯತೆಯಿದೆ. ಪ್ರಯಾಣಿಕರ ಸುರಕ್ಷತೆಗಾಗಿ, ಈ ಕಾಮೆಟ್ EV ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ರಿಯರ್‌ವ್ಯೂ ಕಾಮರಾವನ್ನು ಸಹ ಒಳಗೊಂಡಿರಬಹುದು.

ಇದನ್ನೂ ನೋಡಿ: 15 ಚಿತ್ರಗಳಲ್ಲಿ ಎಂಜಿ ಏರ್ EV ಮಾಹಿತಿ

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಈ ಕಾಮೆಟ್ EV ಈ ವರ್ಷದ ಕೊನೆಯಲ್ಲಿ ರೂ. 9 ಲಕ್ಷ (ಎಕ್ಸ್-ಶೋರೂಮ್) ನಿರೀಕ್ಷಿತ ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಬರಬಹುದು. ಈ ಬೆಲೆಯೊಂದಿಗೆ ಇದು ದೇಶದ ಅತ್ಯಂತ ಕೈಗೆಟಕುವ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಬಹುದು. ಕಾಮೆಟ್ EV ಟಾಟಾ ಟಿಯಾಗೊ EV ಮತ್ತು ಸಿಟ್ರಾನ್ eC3 ಗಳಿಗೆ ಪ್ರತಿಸ್ಪರ್ಧಿಯಾಗಿದೆ.

a
ಅವರಿಂದ ಪ್ರಕಟಿಸಲಾಗಿದೆ

ansh

  • 13 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಎಂಜಿ Comet EV

N
nitin oza
Mar 2, 2023, 4:43:12 PM

No one will b interested to purchase this vehicle at this Prise.Its costly n limited seats and not status oriented.

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.24 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ