• English
  • Login / Register

MG ಬಹಿರಂಗಪಡಿಸಿದೆ ಕಾಮೆಟ್ EVಯ ಸಂಪೂರ್ಣ ಬೆಲೆ ಪಟ್ಟಿ

ಎಂಜಿ ಕಾಮೆಟ್ ಇವಿ ಗಾಗಿ ansh ಮೂಲಕ ಮೇ 08, 2023 10:18 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ನಗರದಲ್ಲಿ ಡ್ರೈವ್ ಮಾಡಲೆಂದೇ ನಿರ್ಮಿಸಲಾದ ಈ ಕಾಮೆಟ್ EV ಪ್ರಸ್ತುತ ದೇಶದಲ್ಲೇ ಅತ್ಯಂತ ಕೈಗೆಟುಕುವ ಬೆಲೆಯ ಇಲೆಕ್ಟ್ರಿಕ್ ಕಾರಾಗಿದೆ

MG Comet EV

  • ಈ ಕಾಮೆಟ್ EVಯ ಬೆಲೆ ರೂ 7.98 ಲಕ್ಷದಿಂದ (ಆರಂಭಿಕ, ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ
  •  ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗಿದೆ: ಪೇಸ್, ಪ್ಲೇ ಮತ್ತು ಪ್ಲಶ್.
  •  230km ತನಕದ ರೇಂಜ್ ಅನ್ನು ಕ್ಲೈಮ್ ಮಾಡುವ 17.3kWh ಬ್ಯಾಟರಿಯೊಂದಿಗೆ ಬರುತ್ತದೆ.
  •  ಮೇ 15ರಿಂದ ಬುಕಿಂಗ್‌ಗಳು ತೆರೆಯಲಿದ್ದು ಮೇ 22ರಿಂದ ಡೆಲಿವರಿಗಳು ಪ್ರಾರಂಭವಾಗಲಿದೆ.

 ನಗರದಲ್ಲಿ ಡ್ರೈವ್ ಮಾಡುವ ಉದ್ದೇಶದಲ್ಲೇ ನಿರ್ಮಿಸಲಾದ ಇಲೆಕ್ಟ್ರಿಕ್ ಕಾರ್ MG ಕಾಮೆಟ್ EV ಅನ್ನು ಒಂದೇ ವೇರಿಯೆಂಟ್‌ನೊಂದಿಗೆ, ದೇಶದಲ್ಲೇ ಅತ್ಯಂತ ಕೈಗೆಟುಕುವ ಬೆಲೆಯೊಂದಿಗೆ ಕಳೆದ ತಿಂಗಳು ಮಾರುಕಟ್ಟೆ ಪ್ರವೇಶಿಸಿತ್ತು. ಆದಾಗ್ಯೂ ಈ ಕಾರುತಯಾರಕರು ಈಗ ಇನ್ನೆರಡು ಉತ್ತಮವಾಗಿ ಸಜ್ಜುಗೊಂಡ ವೇರಿಯೆಂಟ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ್ದಾರೆ. ಈ ವೇರಿಯೆಂಟ್‌ಗಳ ಬೆಲೆಗಳನ್ನು ಹೇಗೆ ನಿಗದಿಪಡಿಸಲಾಗಿದೆ ಎಂಬುದನ್ನು ನೋಡೋಣ.

 ಬೆಲೆಗಳು

MG Comet EV Front

 

ವೇರಿಯೆಂಟ್

ಬೆಲೆ 

ಪೇಸ್

ರೂ 7.98 ಲಕ್ಷ

ಪ್ಲೇ

ರೂ 9.28 ಲಕ್ಷ

ಪ್ಲಶ್

ರೂ 9.98 ಲಕ್ಷ

*ಎಲ್ಲಾ ಬೆಲೆಗಳೂ ಆರಂಭಿಕ ಎಕ್ಸ್-ಶೋರೂಂ ದೆಹಲಿ ಪ್ರಕಾರವಾಗಿದೆ

 ಈ ಪ್ರಾಸ್ತಾವಿಕ ಬೆಲೆಗಳು ಮೊದಲ 5,000 ಬುಕಿಂಗ್‌ಗಳಿಗೆ ಲಭ್ಯ ಎಂದು MG ಹೇಳಿದೆ. ಬುಕಿಂಗ್‌ಗಳು ಮೇ 15ರಿಂದ ಪ್ರಾರಂಭಗೊಂಡರೆ, ಮುಂಗಡ-ನೋಂದಣಿಗಳು ಈಗಾಗಲೇ ತೆರೆದಿವೆ ಮತ್ತು ಡೆಲಿವರಿಗಳು ಮೇ 22 ರಂದು ಪ್ರಾರಂಭಗೊಳ್ಳಲಿವೆ ಹಾಗೂ ಹಂತಹಂತವಾಗಿ ಇದನ್ನು ಜಾರಿಗೊಳಿಸಲಾಗುತ್ತದೆ.

 ಪವರ್‌ಟ್ರೇನ್

MG Comet EV

 ಈ ಕಾಮೆಟ್ 42PS ಮತ್ತು 110Nm ಉತ್ಪಾದಿಸುವ 17.3kWh ಬ್ಯಾಟರಿ ಪ್ಯಾಕ್ ಬ್ಯಾಟರಿಯೊಂದಿಗೆ ಬರುತ್ತದೆ. ತನ್ನ ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ ಈ ಅಲ್ಟ್ರಾ-ಕಾಂಪ್ಯಾಕ್ಟ್ EV ರಿಯರ್-ವ್ಹೀಲ್-ಡ್ರೈವ್ ಸಿಸ್ಟಮ್‌ನೊಂದಿಗೆ ಬರುತ್ತದೆ ಮತ್ತು 230 km ರೇಂಜ್ ನೀಡುತ್ತದೆ.

 ಫೀಚರ್‌ಗಳು ಮತ್ತು ಸುರಕ್ಷತೆ

MG Comet EV Cabin

 ಇದು ಅತ್ಯಂತ ಪುಟ್ಟ ಕಾರಾಗಿದ್ದರೂ, ಫೀಚರ್‌ಗಳ ವಿಷಯಕ್ಕೆ ಬಂದಾಗ ಇದರಲ್ಲಿ ಯಾವುದೇ ಹೊಂದಾಣಿಕೆ ಇರುವುದಿಲ್ಲ, ಇದು ಡ್ಯುಯಲ್-ಇಂಟೆಗ್ರೇಟೆಡ್ 10.25-ಇಂಚು ಡಿಸ್‌ಪ್ಲೇಗಳು, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಸ್ಟೀರಿಂಗ್-ಮೌಂಟೆಡ್ ನಿಯಂತ್ರಣಗಳು, ಮ್ಯಾನುವಲ್ ಕ್ಲೈಮೇಟ್ ಕಂಟ್ರೋಲ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗಿನ ABS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿದೆ.

 ಇದನ್ನೂ ಓದಿ:  ನಿಮ್ಮ ಅಭಿರುಚಿಗೆ ತಕ್ಕಂತೆ MG ಕಾಮೆಟ್ EV ಅನ್ನು ಕಸ್ಟಮೈಸ್ ಮಾಡುವುದು ಹೇಗೆ 

 ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಡಿಜಿಟಲ್ ಕೀ ಮುಂತಾದ ಫೀಚರ್‌ಗಳು ಟಾಪ್-ಸ್ಪೆಕ್ ವೇರಿಯೆಂಟ್‌ಗಳಿಗೆ ಸೀಮಿತ.

 ಪ್ರತಿಸ್ಪರ್ಧಿಗಳು

MG Comet EV

 ಈ 4-ಸೀಟು 2-ಡೋರ್‌ನ EV ಮಾರುಕಟ್ಟೆಯಲ್ಲಿ ರೂ 8.69 ಲಕ್ಷದಿಂದ ರೂ 11.99 ಲಕ್ಷದ ತನಕ ಬೆಲೆ (ಆರಂಭಿಕ ಎಕ್ಸ್-ಶೋರೂಂ) ನಿಗದಿಪಡಿಸಲಾದ ಟಾಟಾ ಟಿಯಾಗೋ EV, ಮತ್ತು ರೂ 11.50 ಲಕ್ಷ ಮತ್ತು ರೂ 12.76 ಲಕ್ಷ (ಆರಂಭಿಕ, ಎಕ್ಸ್-ಶೋರೂಂ) ನಡುವೆ ಬೆಲೆ ನಿಗದಿಪಡಿಸಲಾದ ಸಿಟ್ರಾನ್ eC3 ಯೊಂದಿಗೆ ಪೈಪೋಟಿಗೆ ಇಳಿದಿದೆ.

ಇನ್ನಷ್ಟು ಓದಿ : ಕಾಮೆಟ್ EV ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on M ಜಿ ಕಾಮೆಟ್ ಇವಿ

Read Full News

explore ಇನ್ನಷ್ಟು on ಎಂಜಿ ಕಾಮೆಟ್ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience