Login or Register ಅತ್ಯುತ್ತಮ CarDekho experience ಗೆ
Login

MG ಬಹಿರಂಗಪಡಿಸಿದೆ ಕಾಮೆಟ್ EVಯ ಸಂಪೂರ್ಣ ಬೆಲೆ ಪಟ್ಟಿ

published on ಮೇ 08, 2023 10:18 pm by ansh for ಎಂಜಿ ಕಾಮೆಟ್ ಇವಿ

ನಗರದಲ್ಲಿ ಡ್ರೈವ್ ಮಾಡಲೆಂದೇ ನಿರ್ಮಿಸಲಾದ ಈ ಕಾಮೆಟ್ EV ಪ್ರಸ್ತುತ ದೇಶದಲ್ಲೇ ಅತ್ಯಂತ ಕೈಗೆಟುಕುವ ಬೆಲೆಯ ಇಲೆಕ್ಟ್ರಿಕ್ ಕಾರಾಗಿದೆ

  • ಈ ಕಾಮೆಟ್ EVಯ ಬೆಲೆ ರೂ 7.98 ಲಕ್ಷದಿಂದ (ಆರಂಭಿಕ, ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ
  • ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗಿದೆ: ಪೇಸ್, ಪ್ಲೇ ಮತ್ತು ಪ್ಲಶ್.
  • 230km ತನಕದ ರೇಂಜ್ ಅನ್ನು ಕ್ಲೈಮ್ ಮಾಡುವ 17.3kWh ಬ್ಯಾಟರಿಯೊಂದಿಗೆ ಬರುತ್ತದೆ.
  • ಮೇ 15ರಿಂದ ಬುಕಿಂಗ್‌ಗಳು ತೆರೆಯಲಿದ್ದು ಮೇ 22ರಿಂದ ಡೆಲಿವರಿಗಳು ಪ್ರಾರಂಭವಾಗಲಿದೆ.

ನಗರದಲ್ಲಿ ಡ್ರೈವ್ ಮಾಡುವ ಉದ್ದೇಶದಲ್ಲೇ ನಿರ್ಮಿಸಲಾದ ಇಲೆಕ್ಟ್ರಿಕ್ ಕಾರ್ MG ಕಾಮೆಟ್ EV ಅನ್ನು ಒಂದೇ ವೇರಿಯೆಂಟ್‌ನೊಂದಿಗೆ, ದೇಶದಲ್ಲೇ ಅತ್ಯಂತ ಕೈಗೆಟುಕುವ ಬೆಲೆಯೊಂದಿಗೆ ಕಳೆದ ತಿಂಗಳು ಮಾರುಕಟ್ಟೆ ಪ್ರವೇಶಿಸಿತ್ತು. ಆದಾಗ್ಯೂ ಈ ಕಾರುತಯಾರಕರು ಈಗ ಇನ್ನೆರಡು ಉತ್ತಮವಾಗಿ ಸಜ್ಜುಗೊಂಡ ವೇರಿಯೆಂಟ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ್ದಾರೆ. ಈ ವೇರಿಯೆಂಟ್‌ಗಳ ಬೆಲೆಗಳನ್ನು ಹೇಗೆ ನಿಗದಿಪಡಿಸಲಾಗಿದೆ ಎಂಬುದನ್ನು ನೋಡೋಣ.

ಬೆಲೆಗಳು

ವೇರಿಯೆಂಟ್

ಬೆಲೆ

ಪೇಸ್

ರೂ 7.98 ಲಕ್ಷ

ಪ್ಲೇ

ರೂ 9.28 ಲಕ್ಷ

ಪ್ಲಶ್

ರೂ 9.98 ಲಕ್ಷ

*ಎಲ್ಲಾ ಬೆಲೆಗಳೂ ಆರಂಭಿಕ ಎಕ್ಸ್-ಶೋರೂಂ ದೆಹಲಿ ಪ್ರಕಾರವಾಗಿದೆ

ಈ ಪ್ರಾಸ್ತಾವಿಕ ಬೆಲೆಗಳು ಮೊದಲ 5,000 ಬುಕಿಂಗ್‌ಗಳಿಗೆ ಲಭ್ಯ ಎಂದು MG ಹೇಳಿದೆ. ಬುಕಿಂಗ್‌ಗಳು ಮೇ 15ರಿಂದ ಪ್ರಾರಂಭಗೊಂಡರೆ, ಮುಂಗಡ-ನೋಂದಣಿಗಳು ಈಗಾಗಲೇ ತೆರೆದಿವೆ ಮತ್ತು ಡೆಲಿವರಿಗಳು ಮೇ 22 ರಂದು ಪ್ರಾರಂಭಗೊಳ್ಳಲಿವೆ ಹಾಗೂ ಹಂತಹಂತವಾಗಿ ಇದನ್ನು ಜಾರಿಗೊಳಿಸಲಾಗುತ್ತದೆ.

ಪವರ್‌ಟ್ರೇನ್

ಈ ಕಾಮೆಟ್ 42PS ಮತ್ತು 110Nm ಉತ್ಪಾದಿಸುವ 17.3kWh ಬ್ಯಾಟರಿ ಪ್ಯಾಕ್ ಬ್ಯಾಟರಿಯೊಂದಿಗೆ ಬರುತ್ತದೆ. ತನ್ನ ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ ಈ ಅಲ್ಟ್ರಾ-ಕಾಂಪ್ಯಾಕ್ಟ್ EV ರಿಯರ್-ವ್ಹೀಲ್-ಡ್ರೈವ್ ಸಿಸ್ಟಮ್‌ನೊಂದಿಗೆ ಬರುತ್ತದೆ ಮತ್ತು 230 km ರೇಂಜ್ ನೀಡುತ್ತದೆ.

ಫೀಚರ್‌ಗಳು ಮತ್ತು ಸುರಕ್ಷತೆ

ಇದು ಅತ್ಯಂತ ಪುಟ್ಟ ಕಾರಾಗಿದ್ದರೂ, ಫೀಚರ್‌ಗಳ ವಿಷಯಕ್ಕೆ ಬಂದಾಗ ಇದರಲ್ಲಿ ಯಾವುದೇ ಹೊಂದಾಣಿಕೆ ಇರುವುದಿಲ್ಲ, ಇದು ಡ್ಯುಯಲ್-ಇಂಟೆಗ್ರೇಟೆಡ್ 10.25-ಇಂಚು ಡಿಸ್‌ಪ್ಲೇಗಳು, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಸ್ಟೀರಿಂಗ್-ಮೌಂಟೆಡ್ ನಿಯಂತ್ರಣಗಳು, ಮ್ಯಾನುವಲ್ ಕ್ಲೈಮೇಟ್ ಕಂಟ್ರೋಲ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗಿನ ABS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ನಿಮ್ಮ ಅಭಿರುಚಿಗೆ ತಕ್ಕಂತೆ MG ಕಾಮೆಟ್ EV ಅನ್ನು ಕಸ್ಟಮೈಸ್ ಮಾಡುವುದು ಹೇಗೆ

ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಡಿಜಿಟಲ್ ಕೀ ಮುಂತಾದ ಫೀಚರ್‌ಗಳು ಟಾಪ್-ಸ್ಪೆಕ್ ವೇರಿಯೆಂಟ್‌ಗಳಿಗೆ ಸೀಮಿತ.

ಪ್ರತಿಸ್ಪರ್ಧಿಗಳು

ಈ 4-ಸೀಟು 2-ಡೋರ್‌ನ EV ಮಾರುಕಟ್ಟೆಯಲ್ಲಿ ರೂ 8.69 ಲಕ್ಷದಿಂದ ರೂ 11.99 ಲಕ್ಷದ ತನಕ ಬೆಲೆ (ಆರಂಭಿಕ ಎಕ್ಸ್-ಶೋರೂಂ) ನಿಗದಿಪಡಿಸಲಾದ ಟಾಟಾ ಟಿಯಾಗೋ EV, ಮತ್ತು ರೂ 11.50 ಲಕ್ಷ ಮತ್ತು ರೂ 12.76 ಲಕ್ಷ (ಆರಂಭಿಕ, ಎಕ್ಸ್-ಶೋರೂಂ) ನಡುವೆ ಬೆಲೆ ನಿಗದಿಪಡಿಸಲಾದ ಸಿಟ್ರಾನ್ eC3 ಯೊಂದಿಗೆ ಪೈಪೋಟಿಗೆ ಇಳಿದಿದೆ.

ಇನ್ನಷ್ಟು ಓದಿ : ಕಾಮೆಟ್ EV ಆಟೋಮ್ಯಾಟಿಕ್

a
ಅವರಿಂದ ಪ್ರಕಟಿಸಲಾಗಿದೆ

ansh

  • 20 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಎಂಜಿ Comet EV

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ