ಆನ್‌ಲೈನ್‌ನಲ್ಲಿ ಕಂಡುಬಂದ ನವೀಕೃತ ಕಿಯಾ ಸೆಲ್ಟೋಸ್ ಮಿಡ್-ಸ್ಪೆಕ್ ವೇರಿಯೆಂಟ್‌ಗಳ ಹೊಸ ವಿವರಗಳು
ಕಿಯಾ ಸೆಲ್ಟೋಸ್ ಗಾಗಿ rohit ಮೂಲಕ ಜುಲೈ 03, 2023 05:32 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಈ HTK ಮತ್ತು HTK+ ವೇರಿಯೆಂಟ್‌ಗಳು ಹೊಸ ಎಸ್‌ಯುವಿಯ ಪ್ರಮುಖ ಫೀಚರ್‌ಗಳನ್ನು ನೀಡುವುದಿಲ್ಲವಾದರೂ ಹೆಚ್ಚು ಪರಿಷ್ಕರಿಸಿದ ಕ್ಯಾಬಿನ್ ವಿನ್ಯಾಸವನ್ನು ಹೊಂದಿದೆ
ಕಿಯಾ ಜುಲೈ 4 ರಂದು ನವೀಕೃತ ಸೆಲ್ಟೋಸ್ ಅನ್ನು ಅನಾವರಣಗೊಳಿಸಲಿದೆ.
-
ಹೊಸ ಸ್ಪೈ ಶಾಟ್‌ಗಳು HTK ಮತ್ತು HTK+ ವೇರಿಯೆಂಟ್‌ಗಳು 8-ಇಂಚಿನ ಟಚ್‌ಸ್ಕ್ರೀನ್ ಮತ್ತು ಡಿಜಿಟೈಸ್ಡ್ ಡ್ರೈವರ್ ಡಿಸ್‌ಪ್ಲೇಯನ್ನು ಹೊಂದಿರುತ್ತವೆ ಎಂಬುದನ್ನು ತೋರಿಸುತ್ತವೆ.
-
HTK ಯ ಎಕ್ಸ್‌ಟೀರಿಯರ್ ಹೈಲೈಟ್‌ಗಳೆಂದರೆ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಹ್ಯಾಲೊಜೆನ್ ಫಾಗ್ ಲ್ಯಾಂಪ್‌ಗಳು.
-
ಕಿಯಾ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಆಯ್ಕೆಗಳೊಂದಿಗೆ ನವೀಕೃತ ಸಲ್ಟೋಸ್ ಅನ್ನು ನೀಡುತ್ತಿದೆ.
-
ಇದರ ಬೆಲೆಯು ರೂ.10 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುವ ಸಾಧ್ಯತೆಯಿದೆ.
ಈ ನವೀಕೃತ ಕಿಯಾ ಸೆಲ್ಟೋಸ್ ಜುಲೈ 4 ರಂದು ತನ್ನ ಚೊಚ್ಚಲ ಬಿಡುಗಡೆಗೂ ಮೊದಲು ಟೀಸರ್ ಬಿಡುಗಡೆಯನ್ನು ಕಂಡಿದೆ. ಇದು ಟಾಪ್-ಸ್ಪೆಕ್ ಕ್ಯಾಬಿನ್‌ನಲ್ಲಿ ನಮಗೆ ಉತ್ತಮವಾದ ನೋಟವನ್ನು ನೀಡಿದರೆ, ನವೀಕೃತ ಎಸ್‌ಯುವಿಯ ಮಿಡ್-ಸ್ಪೆಕ್ HTK ಮತ್ತು HTK+ ವೇರಿಯೆಂಟ್‌ಗಳು ತಾಜಾ ವಿವರಗಳನ್ನು ಬಹಿರಂಗಪಡಿಸಲು ಇದರ ಕುರಿತು ಸ್ಪೈ ಮಾಡಲಾಗಿದೆ.
ಪರಿಷ್ಕೃತ ಕ್ಯಾಬಿನ್ ನವೀಕರಣಗಳು
ಇತ್ತೀಚಿನ ಸ್ಪೈ ಶಾಟ್ ಚಿತ್ರಗಳನ್ನು ನೋಡಿದಂತೆ, HTK ಮತ್ತು HTK+ ಎರಡೂ ವೇರಿಯೆಂಟ್‌ಗಳು ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು (HTK+ ಕ್ರೂಸ್ ಕಂಟ್ರೋಲ್ ಮತ್ತು MID ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ), ಫ್ಯಾಬ್ರಿಕ್ ಮೇಲ್ಗವಸು, ಚಿಕ್ಕ 8-ಇಂಚಿನ ಟಚ್‌ಸ್ಕ್ರೀನ್, ಮತ್ತು ಕಿಯಾ ಸೋನೆಟ್‌ನಲ್ಲಿ ಕಂಡುಬರುವಂತೆ ಡಿಜಿಟೈಸ್ಡ್ ಡ್ರೈವರ್ ಡಿಸ್‌ಪ್ಲೇಯಂತಹ ಕೆಲವು ಸಾಮಾನ್ಯ ಫೀಚರ್‌ಗಳನ್ನು ಹೊಂದಿದೆ. HTK ವೇರಿಯೆಂಟ್ ಮ್ಯಾನ್ಯುವಲ್ ಎಸಿಯನ್ನು ಹೊಂದಿದ್ದರೆ, ಎರಡನೆಯದು ಆಟೋ ಕ್ಲೈಮೆಟ್ ಕಂಟ್ರೋಲ್ ಅನ್ನು ಹೊಂದಿದೆ. ಇವೆರಡ ನಡುವಿನ ಮತ್ತೊಂದು ಸಂಭಾವ್ಯ ವ್ಯತ್ಯಾಸವೆಂದರೆ HTK+ ವೇರಿಯೆಂಟ್ ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಅನ್ನು ಹೊಂದಿದೆ.
ಇದನ್ನೂ ಓದಿ: ಜಾರಬೇಡಿ: ಈ ಮಳೆಗಾಲದಲ್ಲಿ ನೀವು ಮಾಡಬಾರದ ಸಾಮಾನ್ಯ ಕಾರು ರಕ್ಷಣಾ ತಪ್ಪುಗಳು
ಎಕ್ಸ್‌ಟೀರಿಯರ್ ಬದಲಾವಣೆಗಳು
ಒಂದು ಸ್ಪೈ ಶಾಟ್‌ನಲ್ಲಿ, ನಾವು HTK ವೇರಿಯೆಂಟ್‌ನ ಪರಿಷ್ಕೃತ ಮುಂಭಾಗವನ್ನು ಸಹ ಕಾಣಬಹುದು. ಈ ಎಸ್‌ಯುವಿಯ HTK ಟ್ರಿಮ್ ದೊಡ್ಡ ಗ್ರಿಲ್ ಅನ್ನು ಪಡೆಯುತ್ತಿದ್ದು ಇದು ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳಿಂದ ಸುತ್ತುವರೆದಿದೆ. ಕೆಳಭಾಗದಲ್ಲಿ, ಇದು ಹೈಯರ್-ಸ್ಪೆಕ್ ವೇರಿಯೆಂಟ್‌ಗಳಲ್ಲಿ ಕಂಡುಬರುವಂತೆ ಎಲ್‌ಇಡಿ ಯೂನಿಟ್‌ಗಳ ಬದಲಿಗೆ ಸಿಲ್ವರ್ ಸ್ಕಿಡ್ ಪ್ಲೇಟ್ ಮತ್ತು ಹ್ಯಾಲೋಜೆನ್ ಫಾಗ್ ಲ್ಯಾಂಪ್‌ಗಳನ್ನು ಪಡೆಯುತ್ತದೆ.
ಪವರ್‌ಟ್ರೇನ್ ಆಯ್ಕೆಗಳು
ನವೀಕೃತ ಸೆಲ್ಟೋಸ್ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳನ್ನು ಪಡೆಯುತ್ತದೆ. ಅವುಗಳ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಈ ಕೆಳಗೆ ಅವುಗಳ ವಿವರಗಳನ್ನು ನೀಡಲಾಗಿದೆ:
ವಿಶೇಷಣಗಳು |
1.5-ಲೀಟರ್ N.A. ಪೆಟ್ರೋಲ್ |
1.5-ಲೀಟರ್ ಟರ್ಬೋ-ಪೆಟ್ರೋಲ್ |
1.5-ಲೀಟರ್ ಡಿಸೇಲ್ |
ಪವರ್ |
115PS |
160PS |
116PS |
ಟಾರ್ಕ್ |
144Nm |
253Nm |
250Nm |
ಟ್ರಾನ್ಸ್‌ಮಿಶನ್ |
6-ಸ್ಪೀಡ್ MT/ CVT |
6-ಸ್ಪೀಡ್ iMT/ 7-ಸ್ಪೀಡ್ DCT |
6-ಸ್ಪೀಡ್ iMT/ 6-ಸ್ಪೀಡ್ AT |
ಇದನ್ನೂ ಓದಿ: ಕಾರೆನ್ಸ್‌ನ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ನಲ್ಲಿನ ಸಂಭಾವ್ಯ ದೋಷದ ನಂತರ ಹಿಂಪಡೆಯುವಿಕೆಯನ್ನು ಪ್ರಕಟಿಸಿದ ಕಿಯಾ
ಇದು ಯಾವಾಗ ಲಭ್ಯವಿದೆ?
ಕಿಯಾ ನವೀಕೃತ ಸೆಲ್ಟೋಸ್‌ನ ಅನಾವರಣದ ನಂತರ ಇದರ ಬೆಲೆಯನ್ನು ಘೋಷಿಸುವ ನಿರೀಕ್ಷೆಯಿದ್ದು, ಬೆಲೆಯು ರೂ. 10 ಲಕ್ಷದಿಂದ (ಎಕ್ಸ್-ಶೋರೂಮ್) ಆರಂಭವಾಗುವ ಸಾಧ್ಯತೆಯಿದೆ. ಇದು ಹ್ಯುಂಡೈ ಕ್ರೆಟಾ, ಫೋಕ್ಸ್‌ವ್ಯಾಗನ್ ಟೈಗನ್, ಟೊಯೋಟಾ ಹೈರೈಡರ್, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ, ಮತ್ತು ಎಂಜಿ ಆಸ್ಟರ್‌ಗಳಿಗೆ ಮಾತ್ರವಲ್ಲದೇ ಮುಂಬರುವ ಹೋಂಡಾ ಎಲಿವೇಟ್ ಮತ್ತು ಸಿಟ್ರಾನ್ C3 ಏರ್‌ಕ್ರಾಸ್‌ಗೂ ಸಹ ಪ್ರತಿಸ್ಪರ್ಧೆಯನ್ನು ನೀಡುತ್ತದೆ.
ಇನ್ನಷ್ಟು ಇಲ್ಲಿ ಓದಿ : ಸೆಲ್ಟೋಸ್ ಡಿಸೇಲ್
0 out of 0 found this helpful