10 ಲಕ್ಷಕ್ಕೂ ಮಿಕ್ಕಿ ಅಟೋಮ್ಯಾಟಿಕ್ ಕಾರುಗಳನ್ನು ಮಾರಿದ ಮಾರುತಿ ಸುಝುಕಿ, ಇವುಗಳಲ್ಲಿ ಶೇ.65 ರಷ್ಟು AMT ಗಳೇ..
ಮಾರುತಿ ಆಲ್ಟೊ ಕೆ10 ಗಾಗಿ rohit ಮೂಲಕ ಅಕ್ಟೋಬರ್ 19, 2023 02:37 pm ರಂದು ಪ್ರಕಟಿಸಲಾಗಿದೆ
- 36 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಸಂಸ್ಥೆಯು AMT ಗೇರ್ ಬಾಕ್ಸ್ ತಂತ್ರಜ್ಞಾನವನ್ನು 2014ರಲ್ಲಿ ಪರಿಚಯಿಸಿದ್ದು, ಟಾರ್ಕ್ ಕನ್ವರ್ಟರ್ ಪಾಲು ಇದರ 27 ಶೇಕಡಾವಾಗಿದೆ
ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್ (MSIL) ಸಂಸ್ಥೆಯು ಭಾರತದಲ್ಲಿ 10 ಲಕ್ಷ ಅಟೋಮ್ಯಾಟಿಕ್ ಕಾರುಗಳನ್ನು ಮಾರುವ ಮೂಲಕ ವಿಶೇಷ ಮೈಲುಗಲ್ಲನ್ನು ಸಾಧಿಸಿದೆ. ಅಟೋಮೋಟಿವ್ ಕ್ಷೇತ್ರದ ಪ್ರಮುಖ ಹೆಸರು ಎನಿಸಿರುವ ಮಾರುತಿ ಸುಝುಕಿ ಸಂಸ್ಥೆಯು ಎರಡು ಪೆಡಲ್ ಗಳ ಅಟೋಮ್ಯಾಟಿಕ್ ಕಾರುಗಳು ದೇಶದ ಎಲ್ಲಾ ಮೂಲೆಗಳಲ್ಲಿ ದೊರೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಸದ್ಯಕ್ಕೆ ಈ ಕಂಪನಿಯು ನಾಲ್ಕು ವಿಶಿಷ್ಟ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ವ್ಯವಸ್ಥೆಯನ್ನು ಒದಗಿಸುತ್ತಿದ್ದು, ವಿವಿಧ ಗ್ರಾಹಕರ ಅಗತ್ಯತೆಯನ್ನು ಈಡೇರಿಸುತ್ತಿದೆ.
ನವೀನ ತಂತ್ರಜ್ಞಾನ ಮತ್ತು ಗ್ರಾಹಕ ಒಳನೋಟ
ಈ ಕಂಪನಿಯು 2014 ರಲ್ಲಿ AMT (ಅಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್ ಮಿಶನ್) ಎಂದು ಪರಿಚಿತವಾಗಿರುವ ಅಟೋ ಗೇರ್ ಶಿಫ್ಟ್ (AGS) ತಂತ್ರಜ್ಞಾನವನ್ನು ಪರಿಚಯಿಸಿದ್ದು, ಅದರ ಸುಲಭಗಮ್ಯತೆ ಮತ್ತು ಕೈಗೆಟಕುವ ದರದ ಕಾರಣ ಶೀಘ್ರವಾಗಿ ಜನರ ನಡುವೆ ಚಿರಪರಿಚಿತವಾಯಿತು. ಸದ್ಯಕ್ಕೆ, ಆಲ್ಟೊ ಕಾರಿನಿಂದ ಹಿಡಿದು ಫ್ರಾಂಕ್ಸ್ ತನಕ, ಮಾರುತಿಯು ಮಾರಾಟ ಮಾಡುವ ಅಟೋಮ್ಯಾಟಿಕ್ ಕಾರುಗಳ ಪೈಕಿ 65 ಶೇಕಡಾದಷ್ಟು ಕಾರುಗಳು AGS ತಂತ್ರಜ್ಞಾನದೊಂದಿಗೆ ಬರುತ್ತವೆ. ಇದೇ ವೇಳೆ, ಒಟ್ಟು ಅಟೋಮ್ಯಾಟಿಕ್ ಮಾರಾಟದಲ್ಲಿ ಟಾರ್ಕ್ ಕನ್ವರ್ಟರ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ (AT) ಗಳ ಪಾಲು 27 ಶೇಕಡಾ ಆಗಿದ್ದರೆ, ಜಿಮ್ನಿ ಮತ್ತು ಸಿಯಾಜ್ ನಲ್ಲಿ 4 ಸ್ಪೀಡ್ ಅನ್ನು ನೀಡಲಾಗುತ್ತದೆ, ಹಾಗೂ ಬ್ರೆಜ್ಜಾ, ಎರ್ಟಿಗಾ, XL6 ಮತ್ತು ಗ್ರಾಂಡ್ ವಿಟಾರಾ ಕಾರುಗಳ ಪ್ಯಾಡಲ್ ಶಿಫ್ಟರ್ ಗಳ ಜೊತೆಗೆ 6 ಸ್ಪೀಡ್ ಅನ್ನು ಹೊಂದಿವೆ. ಸುಮಾರು 8 ಶೇಕಡಾದಷ್ಟು ಮಾರಾಟವು ಹೈಬ್ರೀಡ್ ಎಲೆಕ್ಟ್ರಾನಿಕ್ ಕಂಟಿನ್ಯುವಸ್ ವೇರಿಯೇಬಲ್ ಟ್ರಾನ್ಸ್ ಮಿಶನ್ (e-CVT) ನಿಂದ ಬಂದರೆ, ಗ್ರಾಂಡ್ ವಿಟಾರ ಮತ್ತು ಇನ್ವಿಕ್ಟೊ MPV ಮಾದರಿಗಳನ್ನು ಪೆಟ್ರೋಲ್-ಹೈಬ್ರೀಡ್ ವೇರಿಯಂಟ್ ಗಳಾಗಿ ಹೊರತರಲಾಗುತ್ತಿದೆ.
ಇದನ್ನು ಸಹ ಓದಿರಿ: ಈ ಅಕ್ಟೋಬರ್ ತಿಂಗಳಿನಲ್ಲಿ ಕೆಲವು ಮಾರುತಿ ಅರೆನಾ ಕಾರುಗಳಲ್ಲಿ ರೂ. 59,000 ದಷ್ಟು ಪ್ರಯೋಜನವನ್ನು ಪಡೆಯಿರಿ
ಗ್ರಾಹಕರ ಆದ್ಯತೆಗಳು
ಮಾರುತಿ ಸುಝುಕಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ, ಮಾರ್ಕೆಟಿಂಗ್ ಮತ್ತು ಸೇಲ್ಸ್, ಶಶಾಂಕ್ ಶ್ರೀವಾಸ್ತವ ಅವರು ಹೇಳಿರುವಂತೆ, ʻʻಮಾರುತಿ ಸುಝುಕಿಯಲ್ಲಿ ಅತ್ಯುತ್ತಮ ಚಾಲಕ ಅನುಭವವನ್ನು ನಮ್ಮ ಗ್ರಾಹಕರಿಗೆ ಒದಗಿಸಲು ನಾವು ಬದ್ಧರಾಗಿದ್ದೇವೆ. ಅನೇಕ ಆಯ್ಕೆಗಳನ್ನು ಒದಗಿಸುವ ಮೂಲಕ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ತಂತ್ರಜ್ಞಾನವನ್ನು ಎಲ್ಲರಿಗೂ ದೊರೆಯುವಂತೆ ಮಾಡುವ ಉದ್ದೇಶವನ್ನು ನಾವು ಹೊಂದಿದ್ದು, ಗ್ರಾಹಕರ ಧನಾತ್ಮಕ ಪ್ರತಿಕ್ರಿಯೆಯು ನಮಗೆ ತೃಪ್ತಿ ತಂದಿದೆ. ನಮ್ಮ ಅಟೋಮ್ಯಾಟಿಕ್ ಕಾರುಗಳ ಮಾರಾಟವು ಸ್ಥಿರವಾಗಿ ಏರುತ್ತಿದ್ದು, ಹಣಕಾಸು ವರ್ಷ 23-24ರಲ್ಲಿ ಒಂದು ಲಕ್ಷದಷ್ಟು ಅಟೋಮ್ಯಾಟಿಕ್ ವಾಹನಗಳ ಮಾರಾಟವನ್ನು ತಲುಪುವ ಹಂತದಲ್ಲಿದ್ದೇವೆ.”
ಮಾರುತಿಯ NEXA ವಾಹನಗಳ ಸಾಲು ಅಟೋಮ್ಯಾಟಿಕ್ ಕಾರುಗಳ ಮಾರಾಟದಲ್ಲಿ ಶೇಕಡಾ 58ರಷ್ಟು ಪಾಲನ್ನು ಹೊಂದಿದ್ದು, ಅರೇನಾ ಶ್ರೇಣಿಯು ಶೇಕಡಾ 42ರಷ್ಟು ಪಾಲನ್ನು ಗಳಿಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಸಹ ಓದಿರಿ: ಚಾಲಕರಹಿತ ಎಲೆಕ್ಟ್ರಿಕ್ ಶಟಲ್ ವಾಹನಗಳನ್ನು ಕ್ಯಾಂಪಸ್ ನಲ್ಲಿ ನಿಯೋಜಿಸಿದ TiHAN IIT ಹೈದರಾಬಾದ್
ಅಧಿಕ ಕೊಡುಗೆ ನೀಡಿದ ಪ್ರದೇಶಗಳು
ಭಾರತದ ವಿವಿಧ ಪ್ರದೇಶಗಳಲ್ಲಿ ಮಾರುತಿ ಸುಝುಕಿಯ ಅಟೋಮ್ಯಾಟಿಕ್ ಕಾರುಗಳ ಮಾರಾಟವು ಹೆಚ್ಚುತ್ತಿದ್ದು, ದೆಹಲಿ NCR, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಈ ಬೆಳವಣಿಗೆಗೆ ಕೊಡುಗೆಯನ್ನು ನೀಡುತ್ತಿರುವ ಪ್ರಮುಖ ರಾಜ್ಯಗಳಾಗಿವೆ. ಹೆಚ್ಚಿನ ಅನುಕೂಲವನ್ನು ಒದಗಿಸುತ್ತಿರುವುದರಿಂದ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಆಯ್ಕೆಯು ಹೆಚ್ಚಿನ ಬೆಲೆಯನ್ನು ಹೊಂದಿದ್ದರೂ, ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಸನ್ನಿವೇಶವು ಹದಗೆಡುತ್ತಿರುವುದರಿಂದ ಈ ಕಾರುಗಳ ಪ್ರಾಮುಖ್ಯತೆಯೂ ಹೆಚ್ಚುತ್ತಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಆಲ್ಟೊ K10 ಕಾರಿನ ಆನ್ ರೋಡ್ ಬೆಲೆ