Login or Register ಅತ್ಯುತ್ತಮ CarDekho experience ಗೆ
Login

Nissan Magnite Kuro ವಿಶೇಷ ಆವೃತ್ತಿ ಅನಾವರಣ, ಮ್ಯಾಗ್ನೈಟ್ ಆಟೋಮ್ಯಾಟಿಕ್ ಕೂಡ ಪ್ರದರ್ಶನ

published on ಅಕ್ಟೋಬರ್ 05, 2023 04:31 pm by anonymous for ನಿಸ್ಸಾನ್ ಮ್ಯಾಗ್ನೈಟ್

ICC ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಸಹಯೋಗದೊಂದಿಗಿನ ಭಾಗವಾಗಿ ನಿಸ್ಸಾನ್‌ನ ಈ ಮ್ಯಾಗ್ನೈಟ್ ಕ್ಯೂರೋ ಎಡಿಷನ್ ಅನ್ನು ನಿರ್ಮಿಸಿದೆ.

  • ಈ ಮ್ಯಾಗ್ನೈಟ್ ಕ್ಯೂರೋ ಒಳಗೆ ಮತ್ತು ಹೊರಗೆ ಆಲ್-ಬ್ಲ್ಯಾಕ್ ಥೀಮ್‌ನಲ್ಲಿ ಬರುತ್ತಿದೆ.
  • ಇದು ಬ್ಲ್ಯಾಕ್ ಗ್ರಿಲ್, ಅಲಾಯ್‌ಗಳು ಮತ್ತು ಡೋರ್ ಹ್ಯಾಂಡಲ್‌ಗಳು, ಕ್ಯೂರೋ ಬ್ಯಾಡ್ಜಿಂಗ್ ಮತ್ತು ರೆಡ್ ಬ್ರೇಕ್ ಕ್ಯಾಲಿಪರ್‌ಗಳನ್ನು ಪಡೆದಿದೆ.
  • ಈ SUV ಗೆ ನಿಸ್ಸಾನ್ AMT ಗೇರ್ ಬಾಕ್ಸ್ ಮತ್ತು 1-ಲೀಟರ್ N/A ಪೆಟ್ರೋಲ್ ಇಂಜಿನ್ ಅನ್ನು ನೀಡುತ್ತಿದೆ.
  • ಮ್ಯಾಗ್ನೈಟ್‌ನ 1-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್‌ಗೆ ನಿಸ್ಸಾನ್ ಈಗಾಗಲೇ CVT ಆಯ್ಕೆಯನ್ನು ನೀಡುತ್ತಿದೆ.
  • ಮ್ಯಾನುವಲ್ ವೇರಿಯೆಂಟ್‌ಗಳಿಗೆ ಹೋಲಿಸಿದರೆ, AMT ವೇರಿಯೆಂಟ್‌ಗಳು ರೂ 55,000ದಷ್ಟು ದುಬಾರಿಯಾಗಿದೆ.

ಭಾರತದಲ್ಲಿ ಕ್ಯೂರೋ ಆವೃತ್ತಿಯಲ್ಲಿ ಈಗಷ್ಟೇ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಪ್ರದರ್ಶಿಸಲಾಗಿದೆ. ಈ ಹೊಸ ಎಡಿಷನ್‌ನೊಂದಿಗೆ ಅದರ ಹೊಸ AMT ಆವೃತ್ತಿಯನ್ನೂ ಅನಾವರಣಗೊಳಿಸಲಾಗಿದೆ. ಮುಂಬರುವ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಕ್ಕಾಗಿ ನಿಸ್ಸಾನ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಸಹಯೋಗದಿಂದ ಕ್ಯೂರೋ ಎಡಿಷನ್ ನಿರ್ಮಿತವಾಗಿದೆ. ಅಕ್ಟೋಬರ್‌ನಲ್ಲಿ ಈ ಎರಡನ್ನೂ ಮಾರಾಟ ಮಾಡುವ ನಿರೀಕ್ಷೆ ಇದೆ.

ಈ SUVಯ ವಿಶೇಷ ಎಡಿಷನ್ ಸ್ಟೆಲ್ದಿ ಬ್ಲ್ಯಾಕ್ ಶೇಡ್‌, ಸಂಪೂರ್ಣ ಬ್ಲ್ಯಾಕ್ ಗ್ರಿಲ್, ಅಲಾಯ್‌ಗಳು ಮತ್ತು ಬ್ರೇಕ್ ಪಿಲ್ಲರ್‌ಗಳೊಂದಿಗೆ ಬರುತ್ತದೆ. ಅಲ್ಲದೇ ಫ್ರಂಟ್ ಫೆಂಡರ್‌ಗಳಲ್ಲಿ ಕ್ಯೂರೋ ಬ್ಯಾಡ್ಜಿಂಗ್ ಅನ್ನು ಹೊಂದಿದೆ.

ಒಳಗೂ ಕೂಡಾ ಸಂಪೂರ್ಣ ಬ್ಲ್ಯಾಕ್ ಡಿಸೈನ್ ಅನ್ನು ಹೊಂದಿದ್ದು, ಸೀಟ್ ಕವರ್‌ಗಳು, ಡೋರ್ ಹ್ಯಾಂಡಲ್‌ಗಳು, ಸ್ಟೀರಿಂಗ್ ವ್ಹೀಲ್ ಮತ್ತು ಎಸಿ ವೆಂಟ್‌ಗಳೂ ಇದನ್ನೇ ಹೊಂದಿವೆ.

ಈ ಕ್ಯೂರೋ ಎಡಿಷನ್ ಮ್ಯಾಗ್ನೈಟ್‌ನ ಟಾಪ್-ಎಂಡ್ ವೇರಿಯೆಂಟ್ ಆಧಾರಿತವಾಗಿದ್ದು,ಇದು 8-ಇಂಚು ಟಚ್‌ಸ್ಕೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, 360-ಡಿಗ್ರಿ ಕ್ಯಾಮರಾ ಮತ್ತು ಹಿಂಭಾಗದಲ್ಲಿ ಎಸಿ ವೆಂಟ್‌ಗಳನ್ನು ಹೊಂದಿದೆ.

ಇದನ್ನೂ ಪರಿಶೀಲಿಸಿ: ತನ್ನ ಲೈನ್ಅಪ್‌ನಾದ್ಯಂತ ಹ್ಯುಂಡೈ ಈಗ ಪ್ರಮಾಣಿತವಾಗಿ ನೀಡುತ್ತಿದೆ 6 ಏರ್‌ಬ್ಯಾಗ್‌ಗಳು

ಮ್ಯಾಗ್ನೈಟ್‌ ಕ್ಯೂರೋ ಎಡಿಷನ್‌ನ ಪವರ್‌ಟ್ರೇನ್ ಆಯ್ಕೆಗಳನ್ನು ನಿಸ್ಸಾನ್ ಬಹಿರಂಗಪಡಿಸಿಲ್ಲವಾದರೂ, ಕಂಪನಿಯು ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ನೀಡುವ ಸಂಭವ ಇದೆ. ಅಲ್ಲದೇ ಈ ಮ್ಯಾಗ್ನೈಟ್ SUVಯಲ್ಲಿ ಗೇರ್ ಬಾಕ್ಸ್ ಆಯ್ಕೆಯನ್ನು ಕೂಡಾ ನಿಸ್ಸಾನ್ ಬಹಿರಂಗಪಡಿಸಿದೆ.ಇದನ್ನು 1-ಲೀಟರ್ N.A. ಪೆಟ್ರೋಲ್ ಇಂಜಿನ್‌ನೊಂದಿಗೆ ಜೋಡಿಸಲಾಗಿದೆ. ನಿಸ್ಸಾನ್ ಈಗ ಮ್ಯಾಗ್ನೈಟ್ ಅನ್ನು ಎರಡು ಇಂಜಿನ್ ಆಯ್ಕೆಗಳಲ್ಲಿ ನೀಡುತ್ತಿದೆ, ಅವುಗಳೆಂದರೆ: 1-ಲೀಟರ್ N/A (72PS/96Nm) ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ AMT ಜೊತೆಗೆ ಜೋಡಿಸಲಾಗಿದೆ, ಮತ್ತು 1-ಲೀಟರ್ ಟರ್ಬೋ ಪೆಟ್ರೋಲ್ (100PS/160Nm) ಮ್ಯಾನುವಲ್ ಅಥವಾ CVT ಗೇರ್‌ಬಾಕ್ಸ್‌ಗಳ ಆಯ್ಕೆಯೊಂದಿಗೆ ಇದನ್ನು ನೀಡಲಾಗಿದೆ.

ಈ AMTಯ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ, ಮ್ಯಾನುವಲ್ ವೇರಿಯೆಂಟ್‌ಗೆ ಹೋಲಿಸಿದರೆ ಇದು ರೂ 55,000 ದಷ್ಟು ದುಬಾರಿಯಾಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮ್ಯಾಗ್ನೈಟ್ ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಾರುತಿ ಫ್ರಾಂಕ್ಸ್, ಹ್ಯುಂಡೈ ಎಕ್ಸ್‌ಟರ್, ಟಾಟಾ ಪಂಚ್, ಮಾರುತಿ ಸುಝುಕಿ ಬ್ರೆಝಾ, ಮಹೀಂದ್ರಾ XUV300, ಕಿಯಾ ಸೋನೆಟ್, ಮತ್ತು ರೆನಾಲ್ಟ್ ಕೈಗರ್‌ ಗೆ ಪೈಪೋಟಿ ನೀಡುತ್ತದೆ.

ಇನ್ನಷ್ಟು ಓದಿ : ನಿಸ್ಸಾನ್ ಮ್ಯಾಗ್ನೈಟ್‌ನ ಆನ್‌ರೋಡ್ ಬೆಲೆ

A
ಅವರಿಂದ ಪ್ರಕಟಿಸಲಾಗಿದೆ

Anonymous

  • 82 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ನಿಸ್ಸಾನ್ ಮ್ಯಾಗ್ನೈಟ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ