• English
  • Login / Register

ಎಲ್ಲಾ ಕಾರುಗಳಲ್ಲಿ 6 ಏರ್‌ ಬ್ಯಾಗ್‌ ಗಳನ್ನು ನೀಡಲಿರುವ ಹ್ಯುಂಡೈ

ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗಾಗಿ shreyash ಮೂಲಕ ಅಕ್ಟೋಬರ್ 04, 2023 03:16 pm ರಂದು ಪ್ರಕಟಿಸಲಾಗಿದೆ

  • 75 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಲ್ಲಾ ಮಾದರಿಗಳಲ್ಲಿ ಪ್ರಮಾಣಿತ ವೈಶಿಷ್ಟ್ಯವಾಗಿ ಈ ಸೇವೆಯನ್ನು ಒದಗಿಸಲಿರುವ ಭಾರತದ ಮೊದಲ ಮಾಸ್‌ ಮಾರ್ಕೆಟ್‌ ಕಾರು ಸಂಸ್ಥೆಯಾಗಿ ಹ್ಯುಂಡೈ ಗುರುತಿಸಿಕೊಳ್ಳಲಿದೆ

Hyundai Now Offers 6 Airbags As Standard Across The Lineup 

  • ಈಗ ಎಲ್ಲಾ ಹ್ಯುಂಡೈ ಮಾದರಿಗಳು ಪ್ರಮಾಣಿತ 6 ಏರ್‌ ಬ್ಯಾಗ್‌ ಗಳೊಂದಿಗೆ ಬರಲಿವೆ.
  • ಈ ಘೋಷಣೆಯಿಂದಾಗಿ ಹ್ಯುಂಡೈ ಗ್ರಾಂಡ್ i10 ನಿಯೋಸ್, ಹ್ಯುಂಡೈ ಔರಾ, ಹ್ಯುಂಡೈ ವೆನ್ಯು ಮತ್ತು ವೆನ್ಯು N ಲೈನ್‌ ಇತ್ಯಾದಿ ಮಾದರಿಗಳಿಗೆ ಪ್ರಯೋಜನ ಉಂಟಾಗಲಿದೆ.
  • ಹೊಸ ಆರನೇ ತಲೆಮಾರಿನ ಹ್ಯುಂಡೈ ವೆರ್ನಾ ಕಾರು ಗ್ಲೋಬಲ್ NCAP ಕ್ರ್ಯಾಶ್‌ ಟೆಸ್ಟ್‌ ನಲ್ಲಿ 5-ಸ್ಟಾರ್‌ ಸುರಕ್ಷಾ ಶ್ರೇಯಾಂಕವನ್ನು ಪಡೆದಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಕಾರು ಸುರಕ್ಷಾ ಜಾಗೃತಿ ಮತ್ತು ಸದ್ಯದಲ್ಲೇ ಜಾರಿಗೆ ಬರಲಿರುವ ಸುರಕ್ಷಾ ನಿಯಮಾವಳಿಗಳ ನಡುವೆ, ಹ್ಯುಂಡೈ ಸಂಸ್ಥೆಯು ತನ್ನ ಎಲ್ಲಾ ಕಾರುಗಳಲ್ಲಿ ಆರು ಏರ್‌ ಬ್ಯಾಗ್‌ ಗಳನ್ನು ಪ್ರಮಾಣಿತ ವೈಶಿಷ್ಟ್ಯವಾಗಿ ಅಳವಡಿಸುವ ಮೂಲಕ ಸುರಕ್ಷಾ ಮಾನದಂಡವನ್ನು ವೃದ್ಧಿಸಲು ಪ್ರಮುಖ ಹೆಜ್ಜೆಯೊಂದನ್ನು ಇಟ್ಟಿದೆ. ‌ಭಾರತದಲ್ಲಿ ಈ ರೀತಿಯ ಕ್ರಮ ಕೈಗೊಂಡ ಮೊದಲ ಮಾಸ್‌ ಮಾರ್ಕೆಟ್‌ ಕಾರು ಸಂಸ್ಥೆ ಇದಾಗಿದೆ. 

ಹ್ಯುಂಡೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಬಿಡುಗಡೆಗೊಂಡ ಹ್ಯುಂಡೈ ಎಕ್ಸ್ಟರ್, ಹ್ಯುಂಡೈ i20 ಫೇಸ್‌ ಲಿಫ್ಟ್, ಮತ್ತು ಹ್ಯುಂಡೈ ವೆರ್ನಾ ಈಗಾಗಲೇ ಪ್ರಮಾಣಿತ ವೈಶಿಷ್ಟ್ಯವಾಗಿ 6 ಏರ್‌ ಬ್ಯಾಗ್‌ ಗಳನ್ನು ಹೊಂದಿವೆ. ಆದರೆ ಹ್ಯುಂಡೈ ಗ್ರಾಂಡ್‌ i10 ನಿಯೋಸ್‌, ಹ್ಯುಂಡೈ ಔರಾ ಮತ್ತು ಹ್ಯುಂಡೈ ವೆನ್ಯು ಇತ್ಯಾದಿ ಕಾರುಗಳು ಈ ಪ್ರಮಾಣಿತ ವೈಶಿಷ್ಟ್ಯವನ್ನು ಇನ್ನೂ ಹೊಂದಿಲ್ಲ. ಈ ಘೋಷಣೆಯ ಮೊದಲು ಪ್ರತಿ ಹ್ಯುಂಡೈ ಮಾದರಿಯು ಎಷ್ಟು ಏರ್‌ ಬ್ಯಾಗ್‌ ಗಳನ್ನು ಹೊಂದಿತ್ತು ಎಂಬುದನ್ನು ನೋಡೋಣ.

ಮಾದರಿಗಳು

ಏರ್‌ ಬ್ಯಾಗ್‌ ಗಳು

ಗ್ರಾಂಡ್ i10 ನಿಯೋಸ್

4

ಔರಾ

4

i20 ಮತ್ತು i20 N ಲೈನ್

6

ಎಕ್ಸ್ಟರ್

6

ವೆನ್ಯು

2

ವೆನ್ಯು N ಲೈನ್

4

ವೆರ್ನಾ

6

ಕ್ರೆಟಾ

6

ಅಲ್ಕಜಾರ್

6

ಟಕ್ಸನ್

6

ಅಯೋನಿಕ್ 5

6

ಕೊನಾ ಎಲೆಕ್ಟ್ರಿಕ್

6

ಕೋಷ್ಠಕದಲ್ಲಿ ತೋರಿಸಿದಂತೆ, ಹ್ಯುಂಡೈ ಗ್ರಾಂಡ್ i10 ನಿಯೋಸ್, ಹ್ಯುಂಡೈ ಔರಾ, ಹ್ಯುಂಡೈ ವೆನ್ಯು, ಮತ್ತು ವೆನ್ಯು N ಲೈನ್‌ ಮಾದರಿಗಳು ಪ್ರಮಾಣಿತ ವೈಶಿಷ್ಟ್ಯವಾಗಿ 6 ಏರ್‌ ಬ್ಯಾಗ್‌ ಗಳನ್ನು ಹೊಂದಿರಲಿಲ್ಲ. ಆದರೆ ಇನ್ನು ಮುಂದೆ ಈ ಎಲ್ಲಾ ನಾಲ್ಕು ಮಾದರಿಗಳು ಪ್ರಮಾಣಿತ 6 ಏರ್‌ ಬ್ಯಾಗ್‌ ಗಳನ್ನು ಹೊಂದಿರಲಿವೆ.

ಸಾಮಾನ್ಯ ಸುರಕ್ಷಾ ಗುಣಲಕ್ಷಣಗಳು

Hyundai Now Offers 6 Airbags As Standard Across The Lineup

ಈ ಏರ್‌ ಬ್ಯಾಗ್‌ ಗಳಲ್ಲದೆ, ಹ್ಯುಂಡೈ ಮಾದರಿಗಳು EBD ಜೊತೆಗೆ ABS, ಹಿಲ್‌ ಅಸಿಸ್ಟ್,‌ ಎಲೆಕ್ಟ್ರಿಕ್‌ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS), ಮತ್ತು ISOFIX ಚೈಲ್ಡ್‌ ಸೀಟ್‌ ಮೌಂಟ್‌ ಗಳು, ರಿಯರ್‌ ಪಾರ್ಕಿಂಗ್‌ ಅಥವಾ 360 ಡಿಗ್ರಿ ಕ್ಯಾಮರಾ ಇತ್ಯಾದಿಗಳನ್ನು ಹೊಂದಿರಲಿವೆ. ಎಕ್ಸ್ಟರ್, ವೆನ್ಯು N ಲೈನ್,‌ ಹಾಗೂ ಕ್ರೆಟಾ ಹಾಗೂ ಅಲ್ಕಜಾರ್‌ ಮಾದರಿಗಳ ವಿಶೇಷ ಅಡ್ವೆಂಚರ್‌ ಆವೃತ್ತಿಗಳು ಡ್ಯುವಲ್‌ ಕ್ಯಾಮರಾ ಡ್ಯಾಶ್‌ ಕ್ಯಾಮ್‌ ಅನ್ನು ಸಹ ಹೊಂದಿವೆ.

ವೆನ್ಯು ಮಾದರಿಯು ಇತ್ತೀಚೆಗೆ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಗಳನ್ನು ಪಡೆದುಕೊಂಡಿದ್ದರೆ, ಹ್ಯುಂಡೈ ವೆರ್ನಾ, ಹ್ಯುಂಡೈ ಟಕ್ಸನ್‌ ಮತ್ತು ಹ್ಯುಂಡೈ ಅಯಾನಿಕ್‌ 5 ಮಾದರಿಗಳು ಫಾರ್ವರ್ಡ್‌ ಕೊಲೀಶನ್‌ ವಾರ್ನಿಂಗ್‌, ಬ್ಲೈಂಡ್‌ ಸ್ಪಾಟ್‌ ಅಲರ್ಟ್‌, ಲೇನ್‌ ಕೀಪ್‌ ಅಸಿಸ್ಟ್‌, ಲೇನ್‌ ಡಿಪಾರ್ಚರ್‌ ವಾರ್ನಿಂಗ್‌ ಮತ್ತು ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಇತ್ಯಾದಿ ADAS ವೈಶಿಷ್ಟ್ಯಗಳನ್ನು ಹೊಂದಿವೆ.

ಇದನ್ನು ಸಹ ನೋಡಿರಿ: ಭಾರತದಲ್ಲಿ ADAS ಹೊಂದಿರುವ ಇನ್ನೂ 5 ಅಗ್ಗದ ಕಾರು ಮಾದರಿಗಳಿವು

ಹ್ಯುಂಡೈ ಮಡಿಲಿಗೆ ಮೊದಲ 5 ಸ್ಟಾರ್

ಹ್ಯುಂಡೈ ಸಂಸ್ಥೆಯು ಇತ್ತೀಚೆಗೆ ಗ್ಲೋಬಲ್ NCAP‌ ಯಲ್ಲಿ ಯಶಸ್ಸನ್ನು ದಾಖಲಿಸಿದ್ದು, ಹೊಸ ವೆರ್ನಾ ಮಾದರಿಯು, ಸುರಕ್ಷತಾ ಪರೀಕ್ಷೆಯಲ್ಲಿ ಸಂಪೂರ್ಣ 5-ಸ್ಟಾರ್‌ ರೇಟಿಂಗ್‌ ಪಡೆದ ಹ್ಯುಂಡೈ ಸಂಸ್ಥೆಯ ಮೊದಲ ಭಾರತ ನಿರ್ಮಿತ ಕಾರು ಎನಿಸಿದೆ.

ಭಾರತದಲ್ಲಿ ಎಲ್ಲಾ ಕಾರ್‌ ಬ್ರಾಂಡುಗಳು ತನ್ನ ಎಲ್ಲಾ ಮಾದರಿಗಳಲ್ಲಿ ಪ್ರಮಾಣಿತವಾಗಿ ಆರು ಏರ್‌ ಬ್ಯಾಗ್‌ ಗಳನ್ನು ಹೊಂದಿರಬೇಕೆಂದು ನೀವು ಅನಿಸುತ್ತೀರಾ? ನಿಮ್ಮ ಪ್ರತಿಕ್ರಿಯೆಯನ್ನು ಈ ಕೆಳಗೆ ಹಂಚಿಕೊಳ್ಳಿರಿ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯುಂಡೈ ಗ್ರಾಂಡ್ i10 ನಿಯೋಸ್ AMT

was this article helpful ?

Write your Comment on Hyundai Grand ಐ10 Nios

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience