• English
  • Login / Register

2023ರ ಏಪ್ರಿಲ್'ನಲ್ಲಿ ಮಹೀಂದ್ರಾದ ಡಿಸೇಲ್ ವೇರಿಯೆಂಟ್‌ಗಳಿಗೆ ಅಗಾಧ ಆದ್ಯತೆ

ಮಹೀಂದ್ರ ಥಾರ್‌ ಗಾಗಿ ansh ಮೂಲಕ ಮೇ 16, 2023 02:00 pm ರಂದು ಪ್ರಕಟಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಲ್ಲಾ ನಾಲ್ಕು ಎಸ್‌ಯುವಿಗಳು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದರೆ, ಡಿಸೇಲ್ ಎಂಜಿನ್ ಅಗ್ರ ಆಯ್ಕೆಯಾಗಿ ಉಳಿದಿದೆ 

Overwhelming Preference For Diesel Variants Among Mahindra Customers In April 2023

ಮಹೀಂದ್ರಾ, ತನ್ನ ಗಟ್ಟಿಮುಟ್ಟಾದ ನಿರ್ಮಾಣ ಮತ್ತು ಶಕ್ತಿಯುತ ಎಸ್‌ಯುವಿಗಳಿಗೆ ಯಾವಾಗಲೂ ಹೆಸರುವಾಸಿಯಾಗಿರುವ ಬ್ರ್ಯಾಂಡ್ ಆಗಿದ್ದು, ಅದರ ಅತ್ಯಂತ ಜನಪ್ರಿಯ ಮಾಡೆಲ್‌ಗಳೊಂದಿಗೆ ಶಕ್ತಿಯುತ ಟರ್ಬೋ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಆಯ್ಕೆಯನ್ನು ಸಹ ಇದು ನೀಡುತ್ತದೆ. ಆದರೆ ಗ್ರಾಹಕರು ಯಾವ ಎಂಜಿನ್‌ಗೆ ಆದ್ಯತೆ ನೀಡುತ್ತಾರೆ? ಏಪ್ರಿಲ್ 2023 ರಲ್ಲಿ ಥಾರ್, XUV300, ಸ್ಕಾರ್ಪಿಯೋ(s) ಮತ್ತು XUV700 ನ ಕಾರು ತಯಾರಕರ ವಿವರವಾದ ಮಾರಾಟದ ಮಾಹಿತಿಯನ್ನು ನೋಡೋಣ.

ಥಾರ್

Mahindra Thar

ಪವರ್‌ಟ್ರೇನ್

ಏಪ್ರಿಲ್ 2022

ಏಪ್ರಿಲ್ 2023

ಡಿಸೇಲ್

2,294

4,298

ಪೆಟ್ರೋಲ್

858

1,004

ಜನಪ್ರಿಯ ಮಹೀಂದ್ರಾ ಕಾರುಗಳ ಬಗ್ಗೆ ಮಾತನಾಡುತ್ತಿರುವಾಗ ಮಹೀಂದ್ರಾ ಥಾರ್ ಬಗ್ಗೆ ಉಲ್ಲೇಖಿಸದಿರಲು ಹೇಗೆ ಸಾಧ್ಯ. ತಮ್ಮ ಟಾರ್ಕಿಯರ್ ಡಿಸೇಲ್ ಪರ್ಯಾಯಗಳಿಗೆ ಹೋಲಿಸಿದರೆ ಈ ಆಫ್-ರೋಡರ್‌ನ ಪೆಟ್ರೋಲ್ ಚಾಲಿತ ವೇರಿಯೆಂಟ್‌ಗಳು ಅಷ್ಟೊಂದು ಜನಪ್ರಿಯವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಥಾರ್‌ನ ಡಿಸೇಲ್ ವೇರಿಯೆಂಟ್‌ಗಳ ಬೇಡಿಕೆಯು ಸುಮಾರು ದ್ವಿಗುಣಗೊಂಡಿದೆ ಮತ್ತು ಪೆಟ್ರೋಲ್ ವೇರಿಯೆಂಟ್‌ಗಳಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಹೊಸ 1.5-ಲೀಟರ್ ಡಿಸೇಲ್ ಎಂಜಿನ್ ಆಯ್ಕೆಯೊಂದಿಗೆ ಹೆಚ್ಚು ಕೈಗೆಟಕುವ ಥಾರ್‌ನ ಹೊಸ  RWD ವೇರಿಯೆಂಟ್‌ಗಳ ಪರಿಚಯವು ಈ ಬೆಳವಣಿಗೆಯು ಕಾರಣವಾಗಿದೆ ಎಂದು ಹೇಳಬಹುದು.

ಪವರ್‌ಟ್ರೇನ್

ಏಪ್ರಿಲ್ 2022

ಏಪ್ರಿಲ್ 2023

ಡಿಸೇಲ್

72.78%

81.06%

ಪೆಟ್ರೋಲ್

27.22%

18.94%

 ಒಂದು ವರ್ಷದ ಅವಧಿಯಲ್ಲಿ, ಲೈಫ್‌ಸ್ಟೈಲ್ ಎಸ್‌ಯುವಿಯ ಪೆಟ್ರೋಲ್ ವೇರಿಯೆಂಟ್‌ಗಳು ತಮ್ಮ ಮಾರಾಟದಲ್ಲಿ 8 ಪ್ರತಿಶತ ಕುಸಿತವನ್ನು ಕಂಡಿವೆ. ಎರಡೂ ಪವರ್‌ಟ್ರೇನ್‌ಗಳನ್ನು ಒಟ್ಟು ಸೇರಿಸಿ, ಇದರ ಒಟ್ಟು ಮಾರಾಟಗಳು ಹೆಚ್ಚಾಗಿದ್ದು, ಡಿಸೇಲ್ ವೇರಿಯೆಂಟ್‌ಗಳು ಏಪ್ರಿಲ್ 2023 ರಲ್ಲಿ 80 ಪ್ರತಿಶತದಷ್ಟು ಮಾರಾಟ ಸಾಧಿಸಿದೆ.

 

 

ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್

Mahindra Scorpio N and Scorpio Classic

ಪವರ್‌ಟ್ರೇನ್

ಏಪ್ರಿಲ್ 2022

ಏಪ್ರಿಲ್ 2023

ಡಿಸೇಲ್

2,712

9,125

ಪೆಟ್ರೋಲ್

0

442

 ಕಳೆದ ವರ್ಷ ಈ ಬಾರಿ, ಮಹೀಂದ್ರಾ ಹಿಂದಿನ-ತಲೆಮಾರಿನ ಸ್ಕಾರ್ಪಿಯೋವನ್ನು ಮಾರಾಟದಲ್ಲಿ ಹೊಂದಿತ್ತು ಹಾಗೂ ಇದು ಕೇವಲ ಡಿಸೇಲ್ ಪವರ್‌ಟ್ರೇನ್ ಅನ್ನು ಒಳಗೊಂಡಿತ್ತು. ಈ ಎಸ್‌ಯುವಿ ಈಗ ಎರಡು ಫಾರ್ಮ್‌ಗಳಲ್ಲಿ ಬರುತ್ತಿದೆ: ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಸ್ಕಾರ್ಪಿಯೋ ಎನ್, ಎರಡನೆಯದು ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆದಾಗ್ಯೂ, ಈ ನೇಮ್‌ಪ್ಲೇಟ್‌ಗೆ ಹೆಚ್ಚಿನ ಸಂಖ್ಯೆಯ ಮಾರಾಟವು ಡಿಸೇಲ್ ವೆರಿಯೆಂಟ್‌ಗಳಿಂದ ಬಂದಿದೆ.

ಇದನ್ನೂ ಓದಿ:  ರಾಡರ್-ಆಧಾರಿತ ADAS ಜೊತೆಗೆ ಸುರಕ್ಷತೆಗೊಂಡ ಮಹೀಂದ್ರಾ ಸ್ಕಾರ್ಪಿಯೋ ಎನ್

ಪವರ್‌ಟ್ರೇನ್

ಏಪ್ರಿಲ್ 2022

ಏಪ್ರಿಲ್ 2023

ಡಿಸೇಲ್

100%

95.38%

ಪೆಟ್ರೋಲ್

0%

4.62%

 ಇಲ್ಲಿನ ಸಂಖ್ಯೆಯು ಸೂಚಿಸುವಂತೆ, ಸ್ಕಾರ್ಪಿಯೋದ ಪೆಟ್ರೋಲ್ ವೇರಿಯೆಂಟ್‌ಗಳು ಕಂಡುಬರುವುದು ಅಪರೂಪವಾಗಿದೆ. ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಸ್ಕಾರ್ಪಿಯೋ ಎನ್‌ನ ಡಿಸೇಲ್ ವೇರಿಯೆಂಟ್‌ಗಳು ಏಪ್ರಿಲ್ 2023 ರಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಮಾರಾಟವನ್ನು ಪಡೆದುಕೊಂಡವು.

 

XUV700

Mahindra XUV700

ಪವರ್‌ಟ್ರೇನ್

ಏಪ್ರಿಲ್ 2022

ಏಪ್ರಿಲ್ 2023

ಡಿಸೇಲ್

2,839

3,286

ಪೆಟ್ರೋಲ್

1,655

1,471

 XUV700ನ ಒಟ್ಟೂ ಮಾರಾಟದಿಂದ ವರ್ಷದಿಂದ ವರ್ಷಕ್ಕೆ ಸುಮಾರು 5 ಪ್ರತಿಶತದಷ್ಟು ಹೆಚ್ಚಾಗಿದೆ. ಡಿಸೇಲ್ ವೇರಿಯೆಂಟ್‌ಗಳ ಮಾರಾಟವು ಹೆಚ್ಚಾಗಿ ಮತ್ತು ಪೆಟ್ರೋಲ್ ವೇರಿಯೆಂಟ್‌ಗಳು ಕಡಿಮೆಯಾಗಿರುವುದನ್ನು ನಾವು ಇಲ್ಲಿ ನೋಡಬಹುದು.

ಪವರ್‌ಟ್ರೇನ್

ಏಪ್ರಿಲ್ 2022

ಏಪ್ರಿಲ್ 2023

ಡಿಸೇಲ್

63.17%

69.07%

ಪೆಟ್ರೋಲ್

36.83%

30.93%

ಈ ಎಸ್‌ಯುವಿಯ ಪೆಟ್ರೋಲ್ ವೇರಿಯೆಂಟ್‌ಗಳು ಪ್ರಸ್ತುತ ಮಾರಾಟದ ಸುಮಾರು 30 ಪ್ರತಿಶತದಷ್ಟನ್ನು ಹೊಂದಿವೆ.

 

XUV300

Mahindra XUV300

ಪವರ್‌ಟ್ರೇನ್

ಏಪ್ರಿಲ್ 2022

ಏಪ್ರಿಲ್ 2023

ಡಿಸೇಲ್

2,035

2,894

ಪೆಟ್ರೋಲ್

1,874

2,168

 ಈ ಪಟ್ಟಿಯಲ್ಲಿರುವ ಪ್ರತಿಯೊಂದು ಮಾಡೆಲ್‌ಗಿಂತ ಭಿನ್ನವಾಗಿ, ಈ XUV300 ಪೆಟ್ರೋಲ್ ಮತ್ತು ಡಿಸೇಲ್ ಎರಡೂ ವೇರಿಯೆಂಟ್‌ಗಳಿಗೆ ಹೆಚ್ಚು ಸಮನಾದ ಬೇಡಿಕೆಯನ್ನು ಹೊಂದಿವೆ. ಆದಾಗ್ಯೂ, ಡಿಸೇಲ್ ವೇರಿಯೆಂಟ್‌ಗಳು ಹೆಚ್ಚು ಮಾರಾಟವನ್ನು ಕಂಡಿರುವುದರಿಂದ ಏಪ್ರಿಲ್ 2022 ಕ್ಕಿಂತ ಏಪ್ರಿಲ್ 2023 ರಲ್ಲಿ ಇದರ ನಡುವಿನ ಅಂತರವು ಸ್ಪಷ್ಟವಾಗಿ ಗೋಚರವಾಗುತ್ತದೆ.

ಪವರ್‌ಟ್ರೇನ್

ಏಪ್ರಿಲ್ 2022

ಏಪ್ರಿಲ್ 2023

ಡಿಸೇಲ್

52.05%

57.17%

ಪೆಟ್ರೋಲ್

47.95%

42.83%

 ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಜಾಗದಲ್ಲಿ, ಈ XUV300 ಡಿಸೇಲ್ ಆಯ್ಕೆಯನ್ನು ನೀಡುವ ಕೆಲವು ಎಸ್‌ಯುವಿಗಳಲ್ಲಿ ಒಂದಾಗಿದ್ದು. ಇದು ಅದರ ಮಾರಾಟದ ಅರ್ಧಕ್ಕಿಂತ ಹೆಚ್ಚು ಮಾರಾಟದ ಪಾಲನ್ನು ಹೊಂದಿದೆ.

 ಇದನ್ನೂ ಓದಿ: ಶೀಘ್ರದಲ್ಲಿ ಪುನರಾಗಮನವಾಗಲೆಂದು ಬಯಸುವ 7 ಜನಪ್ರಿಯ ಕಾರುಗಳು

ಮೇಲೆ ಉಲ್ಲೇಖಿಸಲಾದ ಮಾರಾಟ ಡೇಟಾದಿಂದ ಗಮನಿಸಿದಂತೆ, ಮಹೀಂದ್ರಾ ಗ್ರಾಹಕರು ತಾವು ಯಾವುದೇ ಮಾಡೆಲ್‌ ಅನ್ನು ಖರೀದಿಸುತ್ತಿದ್ದರೂ ಡಿಸೇಲ್ ವೇರಿಯೆಂಟ್‌ಗೆ ಬಲವಾದ ಆದ್ಯತೆಯನ್ನು ನೀಡುತ್ತಾರೆ ಎಂದು ಖಚಿತವಾಗಿ ಹೇಳಬಹುದು. ಆದರೆ ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನೀವು ಯಾವ ಪವರ್‌ಟ್ರೇನ್‌ಗೆ ಆದ್ಯತೆ ನೀಡುತ್ತಿರಿ ಎಂಬುದನ್ನು ತಿಳಿಸಿ.

ಇನ್ನಷ್ಟು ಇಲ್ಲಿ ಓದಿ : ಥಾರ್ ಡಿಸೇಲ್

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಥಾರ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience