Login or Register ಅತ್ಯುತ್ತಮ CarDekho experience ಗೆ
Login

ಪ್ರಾರಂಭವಾಯಿತು MG ಕಾಮೆಟ್ EVಯ ಉತ್ಪಾದನೆ

ಎಂಜಿ ಕಾಮೆಟ್ ಇವಿ ಗಾಗಿ tarun ಮೂಲಕ ಏಪ್ರಿಲ್ 15, 2023 06:28 am ರಂದು ಪ್ರಕಟಿಸಲಾಗಿದೆ

ಈ ಪುಟ್ಟ ನಗರವನ್ನು ಕೇಂದ್ರೀಕರಿಸಿರುವ ಈ EV 300 ಕಿಲೋಮಿಟೀರ್‌ ತನಕದ ರೇಂಜ್ ನೀಡುವ ನಿರೀಕ್ಷೆಯಿದೆ.

  • ಈ ಕಾಮೆಟ್ EVಯ ಮೊದಲನೇ ಯೂನಿಟ್ MG ಯ ಗುಜರಾತ್ ಘಟಕವು ಹೊರತಂದಿದೆ.
  • ಇದು 2-ಡೋರ್‌ನ ಕಾಂಪ್ಯಾಕ್ಟ್ ಇಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿದ್ದು ನಾಲ್ಕು ಜನರು ಕುಳಿತುಕೊಳ್ಳಬಹುದಾದ ಸಾಮರ್ಥ್ಯ ಹೊಂದಿದೆ.
  • ಇನ್ಫೋಟೇನ್‌ಮೆಂಟ್ ಮತ್ತು ಕ್ಲಸ್ಟರ್‌ನಲ್ಲಿ 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳ ಫೀಚರ್‌ಗಳು ಅಡಕಗೊಂಡಿವೆ; ಇದಲ್ಲದೇ ರಿಯರ್ ಕ್ಯಾಮರಾ ಮತ್ತು ESC ಅನ್ನೂ ಹೊಂದಿರುವ ನಿರೀಕ್ಷೆ ಇದೆ.
  • 300 ಕಿಲೋಮೀಟರ್ ತನಕದ ರೇಂಜ್‌ನ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನೂ ಹೊಂದಿರಬಹುದು.
  • ಬೆಲೆಗಳನ್ನು ರೂ ಲಕ್ಷದಿಂದ ರೂ 15 ಲಕ್ಷದ ತನಕ (ಎಕ್ಸ್-ಶೋರೂಂ) ನಿರೀಕ್ಷಿಸಬಹುದು

ಗುಜರಾತಿನಲ್ಲಿರುವ ತನ್ನ ಹಾಲೋಲ್ ಘಟಕದಲ್ಲಿ ಕಾಮೆಟ್ EVಯ ಸಾಮೂಹಿಕ ಉತ್ಪಾದನೆಯನ್ನು MG ಪ್ರಾರಂಭಿಸಿದೆ. ಈ ಕಾರುತಯಾರಕರ ಹೊಚ್ಚ ಹೊಸ ಮೈಕ್ರೋ ಇಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಏಪ್ರಿಲ್ 19ರಂದು ಪಾದಾರ್ಪಣೆಗೊಳ್ಳಲಿದೆ. ಇದರ ಪ್ರೀಮಿಯಂ ಇಂಟೀರಿಯರ್ ಅನ್ನು ತೋರಿಸುವ ಇದರ ಟೀಸರ್‌ಗಳು ಈಗಾಗಲೇ ಬಿಡುಗಡೆಗೊಂಡಿವೆ.

ಈ ಕಾಮೆಟ್ EVಯು ಕಾರುತಯಾರಕರ GSEV ಪ್ಲಾಟ್‌ಫಾರ್ಮ್ ಆಧಾರಿತವಾಗಿದ್ದು, MG ಸಹಬ್ರ್ಯಾಂಡ್‌ಗಳ ಇತರ ಜಾಗತಿಕ ಮಾಡೆಲ್‌ಗಳಿಗೂ ಆಧಾರವಾಗಿದೆ. ಇದೊಂದು ನೇರವಾದ ಹ್ಯಾಚ್‌ಬ್ಯಾಕ್ ಆಗಿದ್ದು ಸಣ್ಣ ವ್ಹೀಲ್‌ಗಳನ್ನು ಹೊಂದಿದ ಪುಟ್ಟ ಕಾರು (ಟಾಟಾ ನ್ಯಾನೋಗಿಂತಲೂ ಸಣ್ಣದಾಗಿದೆ) ಹಾಗೂ ಕೇವಲ ಎರಡು ಡೋರ್‌ಗಳು ಮತ್ತು ನಾಲ್ಕು ಆಸನಗಳನ್ನು ಹೊಂದಿದೆ.

ಇದನ್ನೂ ಓದಿ: ಇಲ್ಲಿವೆ Q2 2023ನಲ್ಲಿ ಪಾದಾರ್ಪಣೆಗೊಳ್ಳಬಹುದಾದ ಟಾಪ್ 10 ಕಾರುಗಳು

ಈ ಇಲೆಕ್ಟ್ರಿಕ್ ಹ್ಯಾಚ್‌ನ ಪ್ರೀಮಿಯಂ ಕ್ಯಾಬಿನ್‌ನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇಗಾಗಿ 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು ಇವೆ, ಇದಲ್ಲದೇ ಮ್ಯಾನುವಲ್ AC ಮತ್ತು ಸಂಪರ್ಕಿತ ಕಾರ್ ತಂತ್ರಜ್ಞಾನವನ್ನು ಹೊಂದಿದೆ. ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಅನ್ನು ಪಡೆದಿದೆ.

ಕಾಮೆಟ್ EVಯಂತೆಯೇ ಕಾಣುವ ಇಂಡೋನೇಷಿಯಾ-ಸ್ಪೆಕ್, ವೂಲಿಂಗ್ ಏರ್ EVಗೆ 17.3kWh ಮತ್ತು 26.7kWh ಬ್ಯಾಟರಿ ಪ್ಯಾಕ್‌ಗಳನ್ನು ನೀಡಲಾಗಿದ್ದು, ಇದು ಅನುಕ್ರಮವಾಗಿ 200 ಕಿಲೋಮೀಟರ್ ಮತ್ತು 300 ತನಕದ ರೇಂಜ್ ನೀಡುತ್ತದೆ. ಭಾರತದಲ್ಲಿ ಯಾವ ಬ್ಯಾಟರಿ ಪ್ಯಾಕ್ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಕಾಮೆಟ್ EV ಯಲ್ಲಿ 40PS ರಿಯರ್ ಮೌಂಟಡ್ ಮೋಟರ್ ಇರಲಿದೆ.

ಇದನ್ನೂ ಓದಿ: ಭಾರತದಲ್ಲಿ ಮುಂಬರುವ ಇಲೆಕ್ಟ್ರಿಕ್ ಕಾರುಗಳು

ಈ MG ಕಾಮೆಟ್ EV ಬೆಲೆಯನ್ನು ರೂ 10 ಲಕ್ಷದಿಂದ ರೂ 15 ಲಕ್ಷದ ತನಕದ (ಎಕ್ಸ್-ಶೋರೂಂ) ಶ್ರೇಣಿಯಲ್ಲಿ ನಿಗದಿಪಡಿಸಲಾಗಿದ್ದು, ಇದು ಸಿಟ್ರಾನ್ eC3 ಮತ್ತು ಟಾಟಾ ಟಿಯಾಗೋ EV ಯ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ಆದಾಗ್ಯೂ, ಇದು ತನ್ನ ಪ್ರತಿಸ್ಪರ್ಧಿಗಳಿಗಿಂತ ಸಣ್ಣ ಗಾತ್ರದ್ದಾಗಿರುತ್ತದೆ.

Share via

Write your Comment on M g ಕಾಮೆಟ್ ಇವಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ