ಈ ಜನವರಿಯಲ್ಲಿ ರೆನಾಲ್ಟ್ ಕಾರುಗಳ ಮೇಲೆ ರೂ.65,000 ವರೆಗಿನ ಲಾಭಗಳನ್ನು ಪಡೆಯಿರಿ
ರೆನಾಲ್ಟ್ ಕ್ವಿಡ್ ಗಾಗಿ shreyash ಮೂಲಕ ಜನವರಿ 10, 2024 02:55 pm ರಂದು ಮಾರ್ಪಡಿಸಲಾಗಿದ ೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಕೊಡುಗೆಗಳಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್, ಲಾಯಲ್ಟಿ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯಂತಹ ಲಾಭಗಳು ಒಳಗೊಂಡಿವೆ.
-
ರೆನಾಲ್ಟ್ ಕಿಗರ್ ಗೆ ಗರಿಷ್ಠ ರೂ.65,000 ಗಳವರೆಗೆ ಪ್ರಯೋಜನಗಳನ್ನು ಪಡೆಯಬಹುದು.
-
ರೆನಾಲ್ಟ್ ಕ್ವಿಡ್ ಮತ್ತು ರೆನಾಲ್ಟ್ ಟ್ರೈಬರ್ನಲ್ಲಿ ಗ್ರಾಹಕರು ರೂ.62,000 ವರೆಗೆ ಉಳಿತಾಯವನ್ನು ಪಡೆಯಬಹುದು.
-
ಎಲ್ಲಾ ಕೊಡುಗೆಗಳು ಜನವರಿ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.
ನೀವು ಕಳೆದ ತಿಂಗಳಿನಲ್ಲಿ ರೆನಾಲ್ಟ್ ಕಾರನ್ನು ಖರೀದಿಸಲು ಯೋಚನೆ ಮಾಡಿದ್ದೀರಿ ಆದರೆ ವರ್ಷಾಂತ್ಯದ ಕೊಡುಗೆಗಳನ್ನು ಪಡೆದುಕೊಳ್ಳಲು ವಿಫಲವಾಗಿದ್ದರೆ, ಅದೃಷ್ಟದ ಬಾಗಿಲು ನಿಮಗಾಗಿ ತೆರೆದಿದೆ! ರೆನಾಲ್ಟ್ ಈಗ ತನ್ನ ಎಲ್ಲಾ ಮೂರು ಮಾಡೆಲ್ ಗಳಿಗೆ ಅಂದರೆ ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ಮತ್ತು ರೆನಾಲ್ಟ್ ಕಿಗರ್ ಗೆ ಜನವರಿ ಆಫರ್ಗಳನ್ನು ಹೊರತಂದಿದೆ,. ಕಿಗರ್ ಈ ತಿಂಗಳು ಅತ್ಯಂತ ಹೆಚ್ಚು ಲಾಭವನ್ನು ನೀಡಲಿದೆ. ಬನ್ನಿ, ಮಾಡೆಲ್-ವಾರು ಆಫರ್ ವಿವರಗಳನ್ನು ನೋಡೋಣ:
ರೆನಾಲ್ಟ್ ಕ್ವಿಡ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ.20,000 ವರೆಗೆ |
ವಿನಿಮಯ ಬೋನಸ್ |
ರೂ.20,000 ವರೆಗೆ |
ಲಾಯಲ್ಟಿ ಬೋನಸ್ |
ರೂ.10,000 ವರೆಗೆ |
ಕಾರ್ಪೊರೇಟ್ ರಿಯಾಯಿತಿ |
ರೂ.12,000 ವರೆಗೆ |
ಗರಿಷ್ಠ ಲಾಭಗಳು |
ರೂ.62,000 ವರೆಗೆ |
-
ಬೇಸ್-ಸ್ಪೆಕ್ RXE ವೇರಿಯಂಟ್ ಅನ್ನು ಹೊರತುಪಡಿಸಿ, ಮೇಲೆ ತಿಳಿಸಲಾದ ಕೊಡುಗೆಗಳು ರೆನಾಲ್ಟ್ ಕ್ವಿಡ್ನ ಎಲ್ಲಾ ವೇರಿಯಂಟ್ ಗಳಿಗೆ ಅನ್ವಯಿಸುತ್ತವೆ.
-
ಹ್ಯಾಚ್ಬ್ಯಾಕ್ನ ಅರ್ಬನ್ ನೈಟ್ ಎಡಿಷನ್ ನಲ್ಲಿ ಲಾಯಲ್ಟಿ ಮತ್ತು ಎಕ್ಸ್ಚೇಂಜ್ ಬೋನಸ್ಗಳ ಲಾಭವನ್ನು ಪಡೆಯಬಹುದು.
-
RXE ವೇರಿಯಂಟ್ ಗೆ ಲಾಯಲ್ಟಿ ಬೋನಸ್ ಮಾತ್ರ ಅನ್ವಯಿಸುತ್ತದೆ.
-
ರೆನಾಲ್ಟ್ ಕ್ವಿಡ್ ಬೆಲೆ 4.70 ಲಕ್ಷದಿಂದ ಶುರುವಾಗಿ 6.45 ಲಕ್ಷದವರೆಗೆ ಇದೆ.
ಇದನ್ನು ಕೂಡ ಓದಿ: ರೆಗ್ಯುಲರ್ ಟಾಟಾ ಪಂಚ್‌ಗಿಂತ ಟಾಟಾ ಪಂಚ್ EV ನೀಡುವ ಟಾಪ್ 10 ವೈಶಿಷ್ಟ್ಯಗಳು
-
ನಿಮ್ಮ ಬಾಕಿ ಇರುವ ಚಲನ್ ಅನ್ನು ಪರಿಶೀಲಿಸಿ
-
ಉಪಯೋಗಿಸಿದ ಕಾರಿನ ಮೌಲ್ಯಮಾಪನ
ರೆನಾಲ್ಟ್ ಟ್ರೈಬರ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ.20,000 ವರೆಗೆ |
ವಿನಿಮಯ ಬೋನಸ್ |
ರೂ.20,000 ವರೆಗೆ |
ಲಾಯಲ್ಟಿ ಬೋನಸ್ |
ರೂ.10,000 ವರೆಗೆ |
ಕಾರ್ಪೊರೇಟ್ ರಿಯಾಯಿತಿ |
ರೂ.12,000 ವರೆಗೆ |
ಗರಿಷ್ಠ ಲಾಭಗಳು |
ರೂ.62,000 ವರೆಗೆ |
-
ಮೇಲೆ ತಿಳಿಸಲಾದ ಕೊಡುಗೆಗಳು ರೆನಾಲ್ಟ್ ಟ್ರೈಬರ್ನ ಬೇಸ್-ಸ್ಪೆಕ್ RXE ವೇರಿಯಂಟ್ ಅನ್ನು ಹೊರತುಪಡಿಸಿ ಎಲ್ಲಾ ವೇರಿಯಂಟ್ ಗಳಿಗೆ ಅನ್ವಯಿಸುತ್ತವೆ.
-
MPV ಯ ಅರ್ಬನ್ ನೈಟ್ ಎಡಿಷನ್ ನಲ್ಲಿ ನಗದು ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಲಭ್ಯವಿಲ್ಲ, ಆದರೆ ವಿನಿಮಯ ಮತ್ತು ಲಾಯಲ್ಟಿ ಬೋನಸ್ಗಳು ಸಿಗಲಿದೆ.
-
ಟ್ರೈಬರ್ನ ಬೇಸ್-ಸ್ಪೆಕ್ RXE ವೇರಿಯಂಟ್ ನೊಂದಿಗೆ ಲಾಯಲ್ಟಿ ಬೋನಸ್ ಮಾತ್ರ ಲಭ್ಯವಿದೆ.
-
ರೆನಾಲ್ಟ್ ಟ್ರೈಬರ್ನ ಬೆಲೆ 6.33 ಲಕ್ಷದಿಂದ ಶುರುವಾಗಿ 8.97 ಲಕ್ಷದವರೆಗೆ ಇದೆ.
ರೆನಾಲ್ಟ್ ಕಿಗರ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ.25,000 ವರೆಗೆ |
ವಿನಿಮಯ ಬೋನಸ್ |
ರೂ.20,000 ವರೆಗೆ |
ಲಾಯಲ್ಟಿ ಬೋನಸ್ |
ರೂ.10,000 ವರೆಗೆ |
ಕಾರ್ಪೊರೇಟ್ ರಿಯಾಯಿತಿ |
ರೂ.10,000 ವರೆಗೆ |
ಗರಿಷ್ಠ ಲಾಭಗಳು |
ರೂ.65,000 ವರೆಗೆ |
-
ಕಿಗರ್ ಗೆ ಅತಿ ಹೆಚ್ಚು ಅಂದರೆ ರೂ.25,000 ವರೆಗಿನ ನಗದು ಲಾಭವನ್ನು ನೀಡಲಾಗುತ್ತಿದೆ.
-
ಮೇಲೆ ತಿಳಿಸಲಾದ ಗರಿಷ್ಠ ಲಾಭಗಳು ಸಬ್ಕಾಂಪ್ಯಾಕ್ಟ್ SUV ಯ ಬೇಸ್-ಸ್ಪೆಕ್ RXE ಟ್ರಿಮ್ ಅನ್ನು ಹೊರತುಪಡಿಸಿ ಇತರ ಎಲ್ಲಾ ವೇರಿಯಂಟ್ ಗಳಿಗೆ ಲಭ್ಯವಿದೆ.
-
ಕಿಗರ್ನ ಅರ್ಬನ್ ನೈಟ್ ಎಡಿಷನ್ ಗೆ, ಗ್ರಾಹಕರು ವಿನಿಮಯ ಮತ್ತು ಲಾಯಲ್ಟಿ ಬೋನಸ್ಗಳನ್ನು ಪಡೆಯಬಹುದು, ಆದರೆ RXE ವೇರಿಯಂಟ್ ಗೆ ಲಾಯಲ್ಟಿ ಬೋನಸ್ ಮಾತ್ರ ಲಭ್ಯವಿದೆ.
-
ರೆನಾಲ್ಟ್ ಕಿಗರ್ನ ಬೆಲೆ 6.50 ಲಕ್ಷದಿಂದ ಶುರುವಾಗಿ 11.23 ಲಕ್ಷದವರೆಗೆ ಇದೆ.
ಟಿಪ್ಪಣಿಗಳು:
-
ರೆನಾಲ್ಟ್ ತನ್ನ ಎಲ್ಲಾ ಕಾರುಗಳ ಮೇಲೆ ರೂ 5,000 ರೂರಲ್ ರಿಯಾಯಿತಿಯನ್ನು ನೀಡುತ್ತಿದೆ, ಆದರೆ ಇದನ್ನು ಕಾರ್ಪೊರೇಟ್ ರಿಯಾಯಿತಿಯೊಂದಿಗೆ ಕಂಬೈನ್ ಮಾಡಲು ಸಾಧ್ಯವಿಲ್ಲ.
-
'R.E.Li.V.E' ಸ್ಕ್ರ್ಯಾಪೇಜ್ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಕಾರುಗಳ ಮೇಲೆ 10,000 ರೂಪಾಯಿಗಳ ರಿಯಾಯಿತಿಯನ್ನು ಸಹ ನೀಡಲಾಗುತ್ತದೆ.
-
ಮೇಲೆ ತಿಳಿಸಲಾದ ರಿಯಾಯಿತಿಗಳು ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಬದಲಾಗಬಹುದು, ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ರೆನಾಲ್ಟ್ ಡೀಲರ್ಶಿಪ್ ಅನ್ನು ಸಂಪರ್ಕಿಸಿ.
-
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ
ಇನ್ನಷ್ಟು ಓದಿ: ಕ್ವಿಡ್ AMT