ಕ್ವಿಡ್, ಕೈಗರ್ ಮತ್ತು ಟ್ರೈಬರ್ ಕಾರುಗಳ ಲಿಮಿಟೆಡ್ ರನ್ ಅರ್ಬನ್ ನೈಟ್ ಆವೃತ್ತಿ ಹೊರತರಲಿರುವ ರೆನಾಲ್ಟ್
ರೆನಾಲ್ಟ್ ಕ್ವಿಡ್ ಗಾಗಿ shreyash ಮೂಲಕ ಸೆಪ್ಟೆಂಬರ್ 04, 2023 06:44 pm ರಂದು ಪ್ರಕಟಿಸಲಾಗಿದೆ
- 28 Views
- ಕಾಮೆಂಟ್ ಅನ್ನು ಬರೆಯಿರಿ
ಈ ವಿಶೇಷ ಅರ್ಬನ್ ನೈಟ್ ಆವೃತ್ತಿಯ ಅಡಿಯಲ್ಲಿ ಪ್ರತಿ ರೆನಾಲ್ಟ್ ಮಾದರಿಯ ಕೇವಲ 300 ಕಾರುಗಳಷ್ಟೇ ಹೊರಬರಲಿವೆ.
- ರೆನಾಲ್ಟ್ ಕಾರುಗಳ ಅರ್ಬನ್ ನೈಟ್ ಆವೃತ್ತಿಯು ಸ್ಟೀಲ್ತ್ ಬ್ಲ್ಯಾಕ್ ಎಕ್ಸ್ ಟೀರಿಯರ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದೆ.
- ಮುಂದಿನ ಮತ್ತು ಹಿಂದಿನ ಬಂಪರ್, ರೂಪ್ ರೇಲ್ ಗಳು ಸಿಲ್ವರ್ ಇನ್ಸರ್ಟ್ ಗಳನ್ನು ಪಡೆಯಲಿವೆ.
- ಕೈಗರ್ ಮತ್ತು ಟ್ರೈಬರ್ ಮಾದರಿಗಳು ಆಂಬಿಯೆಂಟ್ ಲೈಟಿಂಗ್ ಮತ್ತು ಇಂಟೀರಿಯರ್ ರಿಯರ್ ವ್ಯೂ ಮಿರರ್ ಮತ್ತು ಡ್ಯುವಲ್ ಡ್ಯಾಶ್ ಕ್ಯಾಮ್ ಸೆಟಪ್ ಎರಡರಲ್ಲೂ ಕಾರ್ಯ ನಿರ್ವಹಿಸುವ ಸ್ಮಾರ್ಟ್ ವ್ಯೂ ಮಾನಿಟರ್ ಅನ್ನು ಪಡೆಯಲಿದೆ.
- ಕ್ವಿಡ್ ಕಾರಿನ ವಿಶೇಷ ಆವೃತ್ತಿಗೆ ರೂ. 6,999 ರಷ್ಟು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾದರೆ, ಕೈಗರ್ ಮತ್ತು ಟ್ರೈಬರ್ ಗಳಿಗೆ ಗ್ರಾಹಕರು ರೂ. 14,999 ರಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ನೀಡಬೇಕು.
ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡುವುದಕ್ಕಾಗಿ, ರೆನಾಲ್ಟ್ ಇಂಡಿಯಾ ಕಾರು ತಯಾರಕ ಸಂಸ್ಥೆಯು ತನ್ನ ಎಲ್ಲಾ ಮೂರು ಮಾದರಿಗಳಿಗೆ ಹೊಸ ಅರ್ಬನ್ ನೈಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಅವೆಂದರೆ: ರೆನಾಲ್ಟ್ ಕ್ವಿಡ್, ರೆನಾಲ್ಟ್ ಕೈಗರ್, ಮತ್ತು ರೆನಾಲ್ಟ್ ಟ್ರೈಬರ್. ಪ್ರತಿ ರೆನಾಲ್ಟ್ ಮಾದರಿಯ ಟಾಪ್ ಸ್ಪೆಕ್ ವೇರಿಯಂಟ್ ಅನ್ನು ಆಧರಿಸಿರುವ ಈ ವಿಶೇಷ ಆವೃತ್ತಿಯು, ಹೊಸ ಸ್ಟೀಲ್ತ್ ಬ್ಲ್ಯಾಕ್ ಎಕ್ಸ್ ಟೀರಿಯರ್ ಶೇಡ್ ಅನ್ನು ಹೊಂದಿದೆ ಮಾತ್ರವಲ್ಲದೆ, ಹೊರಗಿನ ನೋಟಕ್ಕೂ ಬದಲಾವಣೆ ಮಾಡಲಾಗಿದೆ. ರೆನಾಲ್ಟ್ ಕಾರುಗಳ ಈ ಹೊಸ ಆವೃತ್ತಿಯು ಏನೆಲ್ಲ ಹೊಸತನಗಳೊಂದಿಗೆ ಬರಲಿದೆ ಎಂಬುದನ್ನು ನೋಡೋಣ.
ಇದರಲ್ಲಿ ಹೊಸತೇನಿದೆ?
ಹೊಸ ಸ್ಟೀಲ್ತ್ ಬ್ಲ್ಯಾಕ್ ಬಾಡಿ ಕಲರ್ ಜೊತೆಗೆ, ಈ ವಿಶೇಷ ಆವೃತ್ತಿಯ ಮಾದರಿಗಳ ಹೊರನೋಟವನ್ನು ಹೆಡ್ ಲ್ಯಾಂಪ್ ಬೆಜೆಲ್ ಮತ್ತು ಬಂಪರ್ ಗಾರ್ನಿಶ್, ಪಿಯಾನೊ ಬ್ಲ್ಯಾಕ್ ORVM ಗಳು, ರಿಯರ್ ಟ್ರಂಕ್ ಕ್ರೋಮ್ ಲೈನರ್, ರೂಫ್ ರೇಲ್ ಗಳ ಮೇಲೆ ಸಿಲ್ವರ್ ಇನ್ಸರ್ಟ್, ಪಡಲ್ ಲ್ಯಾಂಪ್ ಗಳು ಮತ್ತು ಇಲ್ಯುಮಿನೇಟೆಡ್ ಸ್ಕಫ್ ಪ್ಲೇಟುಗಳೊಂದಿಗೆ, ಮುಂದಿನ ಮತ್ತು ಹಿಂದಿನ ಬಂಪರ್ ಗಳ ಮೇಲೆ ಸ್ಟಾರ್ ಡಸ್ಟ್ ಸಿಲ್ವರ್ ಟಚ್ ಅನ್ನು ನೀಡುವ ಮೂಲಕ ವರ್ಧಿಸಲಾಗಿದೆ.
ಜೊತೆಗೆ 9.66 ಇಂಚಿನ ಸ್ಮಾರ್ಟ್ ವ್ಯೂ ಮಾನಿಟರ್ ಮತ್ತು ಆಂಬಿಯೆಂಟ್ ಲೈಟಿಂಗ್ ಸಹ ಹೊಸ ವೈಶಿಷ್ಟ್ಯಗಳಲ್ಲಿ ಒಳಗೊಂಡಿದೆ. ಆದರೆ ಆಂಬಿಯೆಂಟ್ ಲೈಟಿಂಗ್ ಕೈಗರ್ ಮಾದರಿಗಳಲ್ಲಿ ಮಾತ್ರವೇ ಲಭಿಸಲಿದೆ. ಇವುಗಳ ಸ್ಮಾರ್ಟ್ ವ್ಯೂ ಮಾನಿಟರ್, ಹೊಂದಿಸಬಹುದಾದ ಕೋನಗಳೊಂದಿಗೆ ಇಂಟೀರಿಯರ್ ರಿಯರ್ ವ್ಯೂ ಮಿರರ್ (IRVM) ಮತ್ತು ಮುಂದಿನ ಹಾಗೂ ಹಿಂದಿನ ಕ್ಯಾಮರಾಗಳು ಮತ್ತು ರೆಕಾರ್ಡ್ ಮಾಡಿರುವ ಕಂಟೆಂಟ್ ಗಳನ್ನು ಡೌನ್ಲೋಡ್ ಮಾಡುವುದಕ್ಕಾಗಿ ವೈರ್ ಲೆಸ್ ಕನೆಕ್ಟಿವಿಟಿ ವೈಶಿಷ್ಟ್ಯವನ್ನು ಹೊಂದಿರುವ ಡ್ಯುವಲ್ ಡ್ಯಾಶ್ ಕ್ಯಾಮ್ ಸೆಟಪ್ ಆಗಿಯೂ ಕಾರ್ಯ ನಿರ್ವಹಿಸಲಿದೆ.
ಆದರೆ ಈ ಎಲ್ಲಾ ಮೂರು ಮಾದರಿಗಳ ಪೈಕಿ ಕ್ವಿಡ್ ನಲ್ಲಿ ಸ್ಮಾರ್ಟ್ ವ್ಯೂ ಮಾನಿಟರ್ ಮತ್ತು ಆಂಬಿಯೆಂಟ್ ಲೈಟಿಂಗ್ ಸೌಲಭ್ಯ ದೊರೆಯುವುದಿಲ್ಲ. ಆದರೆ ಕ್ವಿಡ್ ಕಾರು ಚಕ್ರಗಳಿಗೆ ಸ್ವಾರ್ ಡಸ್ಟ್ ಸಿಲ್ವರ್ ಫ್ಲೆಕ್ಸ್ ಫಿನಿಶ್ ಅನ್ನು ಪಡೆಯಲಿದೆ.
ಇದನ್ನು ಸಹ ನೋಡಿರಿ: 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ರಸ್ತೆಗಿಳಿಯಲಿರುವ 6 ಕಾರುಗಳಿವು
ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲ
ಈ ಹೊರಾಂಗಣ ಮತ್ತು ಒಳಾಂಗಣ ಬದಲಾವಣೆಗಳ ಹೊರತಾಗಿ ಈ ಕಾರುಗಳ ವಿಶೇಷ ಆವೃತ್ತಿಗೆ ಯಾವುದೇ ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲ. ಕ್ವಿಡ್ ಮಾದರಿಯು 1-ಲೀಟರ್ ಪೆಟ್ರೋಲ್ ಎಂಜಿನ್ (68PS/ 91Nm) ಅನ್ನು ಬಳಸಲಿದ್ದು ಇದನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಅಥವಾ 5- ಸ್ಪೀಡ್ AMT ಜೊತೆಗೆ ಹೊಂದಿಸಲಾಗುತ್ತದೆ. ಇನ್ನೊಂದೆಡೆ ಟ್ರೈಬರ್ ಕಾರು 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ (72PS/ 96Nm) ಜೊತೆಗೆ ಬರಲಿದ್ದು, ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಜೊತೆಗೆ ಕೂಡಿಸಲಾಗುತ್ತದೆ.
ಕೈಗರ್ ಮಾತ್ರ ಎಂಜಿನ್ ಗಳ ಎರಡು ಆಯ್ಕೆಗಳೊಂದಿಗೆ ಬರಲಿದೆ: 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (72PS/ 96Nm) ಮತ್ತು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (100PS/ 160Nm). ಎರಡೂ ಘಟಕಗಳನ್ನು ಪ್ರಮಾಣಿತವಾಗಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾಗಿದೆ. ಜತೆಗೆ, ಎರಡೂ ಘಟಕಗಳಿಗೆ ಅಟೊಮ್ಯಾಟಿಕ್ ಟ್ರಾನ್ಸ್ ಮಿಶನ್ ಲಭ್ಯ. ಮೊದಲನೆಯದ್ದಕ್ಕೆ 5-ಸ್ಪೀಡ್ AMT ದೊರತರೆ ಎರಡನೆಯದ್ದು CVT ಜೊತೆಗೆ ಬರಲಿದೆ.
ನೀವು ಎಷ್ಟು ಹಣವನ್ನು ಹೆಚ್ಚುವರಿಯಾಗಿ ಪಾವತಿಸಬೇಕು?
ರೆನಾಲ್ಟ್ ನ ಎಲ್ಲಾ ಮಾದರಿಗಳ ಅರ್ಬನ್ ನೈಟ್ ಆವೃತ್ತಿಯು ಅವುಗಳ ಟಾಪ್ ಸ್ಪೆಕ್ ವೇರಿಯಂಟ್ ಅನ್ನು ಆಧರಿಸಿದೆ. ಕೈಗರ್ ಮತ್ತು ಟ್ರೈಬರ್ ಗಳ ವಿಶೇಷ ಆವೃತ್ತಿಗೆ ರೂ. 14,999 ರಷ್ಟು ಹೆಚ್ವುವರಿ ಹಣ ಪಾವತಿಸಬೇಕಾದರೆ, ಕ್ವಿಡ್ ಗ್ರಾಹಕರು ರೂ. 6,999 ರಷ್ಟು ಹೆಚ್ಚಿನ ಮೊತ್ತವನ್ನು ನೀಡಬೇಕು. ನಿಮ್ಮ ಉಲ್ಲೇಖಕ್ಕಾಗಿ ಪ್ರತಿ ರೆನಾಲ್ಟ್ ವಾಹನದ ಟಾಪ್ ಎಂಡ್ ವೇರಿಯಂಟ್ ಗಳ ಬೆಲೆಯನ್ನು ಈ ಕೆಳಗೆ ನೀಡಲಾಗಿದೆ:
ಮಾದರಿ |
ಎಕ್ಸ್ - ಶೋರೂಂ (ದೆಹಲಿ) |
ರೆನಾಲ್ಟ್ ಕ್ವಿಡ್ RXT |
ರೂ 5.67 ಲಕ್ಷ |
ರೆನಾಲ್ಟ್ ಟ್ರೈಬರ್ RXZ |
ರೂ 8.22 ಲಕ್ಷ |
ರೆನಾಲ್ಟ್ ಟ್ರೈಬರ್ RXZ EASY-R |
ರೂ 8.74 ಲಕ್ಷ |
ರೆನಾಲ್ಟ್ ಕೈಗರ್ RXZ ಎನರ್ಜಿ MT |
ರೂ 8.80 ಲಕ್ಷ |
ರೆನಾಲ್ಟ್ ಕೈಗರ್ RXZ EASY-R AMT 1-ಲೀಟರ್ ಎನರ್ಜಿ |
ರೂ 9.35 ಲಕ್ಷ |
ರೆನಾಲ್ಟ್ ಕೈಗರ್ RXZ 1-ಲೀಟರ್ ಟರ್ಬೊ MT |
ರೂ 10 ಲಕ್ಷ |
ರೆನಾಲ್ಟ್ ಕೈಗರ್ RXZ X-ಟ್ರಾನಿಕ್ (CVT) 1.0L ಟರ್ಬೊ |
ರೂ 10.10 ಲಕ್ಷ |
ರೆನಾಲ್ಟ್ ಕೈಗರ್ ಅರ್ಬನ್ ನೈಟ್ ಆವೃತ್ತಿಯು ಟಾಟಾ ನೆಕ್ಸನ್ ಡಾರ್ಕ್ ಎಡಿಷನ್, ಕಿಯಾ ಸೋನೆಟ್ X-ಲೈನ್ ಮತ್ತು ಹ್ಯುಂಡೈ ವೆನ್ಯು ನೈಟ್ ಎಡಿಷನ್ ಇತ್ಯಾದಿಗಳೊಂದಿಗೆ ಸ್ಪರ್ಧಿಸಲಿದೆ. ಇದೇ ವೇಳೆ ಕ್ವಿಡ್ ಮಾದರಿಯು, ಬ್ಲ್ಯಾಕ್ ಬಾಡಿ ಶೇಡ್ ನಲ್ಲಿ ಲಭ್ಯವಿರುವ ಮಾರುತಿ ಆಲ್ಟೊ K10 ಮತ್ತು S-ಪ್ರೆಸ್ಸೊ ಕಾರುಗಳ ಎದುರಾಳಿ ಎನಿಸಲಿದೆ. ಆದರೆ ಟ್ರೈಬರ್ ಗೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಕ್ವಿಡ್ AMT
0 out of 0 found this helpful