Skoda Kushaq ಮತ್ತು Slavia ಬೆಲೆಯಲ್ಲಿ ಕಡಿತ, ಎರಡೂ ಮೊಡೆಲ್‌ಗಳಿಗೆ ಹೊಸ ಆವೃತ್ತಿಯ ಸೇರ್ಪಡೆ
ಸ್ಕೋಡಾದ ಎರಡೂ ಕಾರುಗಳಿಗೆ ಈ ಪರಿಷ್ಕೃತ ಬೆಲೆಗಳು ಸೀಮಿತ ಅವಧಿಗೆ ಮಾತ್ರ ಅನ್ವಯಿಸುತ್ತವೆ
- ಎರಡೂ ಮೊಡೆಲ್‌ಗಳಿಗೆ ಹೊಸ ಸ್ಕೋಡಾ ಆವೃತ್ತಿಗಳ ಹೆಸರುಗಳು ಕ್ಲಾಸಿಕ್, ಸಿಗ್ನೇಚರ್ ಮತ್ತು ಪ್ರೆಸ್ಟೀಜ್.
- ಸ್ಲಾವಿಯಾದ ಆರಂಭಿಕ ಬೆಲೆಯಲ್ಲಿ 94,000 ರೂ.ವರೆಗೆ ಕಡಿತವಾಗಿದೆ, ಆದರೆ ಕೆಲವು ಆವೃತಿಗಳ ಬೆಲೆಯಲ್ಲಿ 36,000 ರೂ.ವರೆಗೆ ಏರಿಕೆ ಕಂಡಿದೆ.
- ಸ್ಲಾವಿಯಾದ ಪರಿಷ್ಕೃತ ಬೆಲೆಗಳು 10.69 ಲಕ್ಷ ರೂ.ನಿಂದ 18.69 ಲಕ್ಷ ರೂ.ವರೆಗೆ ಇರುತ್ತದೆ.
- ಸ್ಕೋಡಾ ತನ್ನ ಕುಶಾಕ್‌ನ ಬೆಲೆಯನ್ನು 2.19 ಲಕ್ಷ ರೂ.ವರೆಗೆ ಕಡಿತಗೊಳಿಸಿದೆ.
- ಕುಶಾಕ್‌ನ ಹೊಸ ಬೆಲೆಗಳು 10.89 ಲಕ್ಷ ರೂ.ನಿಂದ 18.79 ಲಕ್ಷ ರೂ.ನ ನಡುವೆ ಇರಲಿದೆ.
- ಇವೆರಡೂ ಹಿಂದಿನಂತೆಯೇ ಅದೇ 1-ಲೀಟರ್ ಮತ್ತು 1.5-ಲೀಟರ್ ಟರ್ಬೊ-ಪೆಟ್ರೋಲ್ ಪವರ್‌ಟ್ರೇನ್‌ಗಳೊಂದಿಗೆ ಮುಂದುವರಿಯುತ್ತವೆ.
ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾವು ಮಾರುಕಟ್ಟೆಯ ತಮ್ಮ ಸ್ಥಾನವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ, ಈ ಕಾರು ತಯಾರಕರು ಸೀಮಿತ ಅವಧಿಗೆ ಎರಡೂ ಮೊಡೆಲ್‌ಗಳ ಆಯ್ದ ಆವೃತ್ತಿಗಳ ಬೆಲೆಗಳನ್ನು ಕಡಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಸ್ಕೋಡಾ ಈಗ ಎಸ್‌ಯುವಿ-ಸೆಡಾನ್ ಜೋಡಿಯ ಅಸ್ತಿತ್ವದಲ್ಲಿರುವ ಆವೃತ್ತಿಗಳನ್ನು ಮರುನಾಮಕರಣ ಮಾಡಿದೆ. ಹೆಸರು ಮತ್ತು ಬೆಲೆಯಲ್ಲಿ ಬದಲಾವಣೆಯನ್ನು ಹೊರತುಪಡಿಸಿ, ಸ್ಕೋಡಾದ ಈ ಎಸ್‌ಯುವಿ-ಸೆಡಾನ್ ಜೋಡಿಗೆ ಯಾವುದೇ ವೈಶಿಷ್ಟ್ಯ ಬದಲಾವಣೆಗಳನ್ನು ನೀಡಲಾಗಿಲ್ಲ. ಎರಡು ಸ್ಕೋಡಾ ಕಾರುಗಳ ಆಪ್‌ಡೇಟ್ ಮಾಡಲಾದ ಆವೃತ್ತಿಗಳ ಹೆಸರುಗಳನ್ನು ಇಲ್ಲಿ ನೋಡೋಣ:
ಕುಶಾಕ್ ಮತ್ತು ಸ್ಲಾವಿಯಾದ ಹೊಸ ಆವೃತ್ತಿಗಳ ಹೆಸರುಗಳು
ಹಳೆಯ ಆವೃತ್ತಿಗಳ ಹೆಸರು |
ಹೊಸ ಆವೃತ್ತಿಗಳ ಹೆಸರು |
ಆಕ್ಟಿವ್ |
ಕ್ಲಾಸಿಕ್ |
ಆಂಬೀಶನ್ |
ಸಿಗ್ನೇಚರ್ |
ಸ್ಟೈಲ್ |
ಪ್ರೆಸ್ಟೀಜ್ |
ಈಗ ಎರಡು ಮೊಡೆಲ್‌ಗಳ ನವೀಕರಿಸಿದ ವೇರಿಯಂಟ್-ವಾರು ಬೆಲೆಗಳನ್ನು ಪರಿಶೀಲಿಸೋಣ:
2024ರ ಸ್ಕೋಡಾ ಸ್ಲಾವಿಯಾ
ಆವೃತ್ತಿ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
1-ಲೀಟರ್ ಟಿಎಸ್‌ಐ |
|||
ಕ್ಲಾಸಿಕ್ |
11.63 ಲಕ್ಷ ರೂ. (ಆಕ್ಟಿವ್) |
10.69 ಲಕ್ಷ ರೂ. |
(-)94,000 ರೂ. |
ಸಿಗ್ನೇಚರ್ |
13.78 ಲಕ್ಷ ರೂ. (ಆಂಬೀಶನ್) |
13.99 ಲಕ್ಷ ರೂ. |
+21,000 ರೂ. |
ಪ್ರೆಸ್ಟೀಜ್ |
15.63 ಲಕ್ಷ ರೂ. (ಸ್ಟೈಲ್) |
15.99 ಲಕ್ಷ ರೂ. |
+36,000 ರೂ. |
ಸಿಗ್ನೇಚರ್ ಆಟೋಮ್ಯಾಟಿಕ್ |
15.08 ಲಕ್ಷ ರೂ. (ಆಂಬೀಶನ್ ಆಟೋಮ್ಯಾಟಿಕ್) |
15.09 ಲಕ್ಷ ರೂ. |
+1,000 ರೂ. |
ಪ್ರೆಸ್ಟೀಜ್ ಆಟೋಮ್ಯಾಟಿಕ್ |
16.93 ಲಕ್ಷ ರೂ. (ಸ್ಟೈಲ್ ಆಟೋಮ್ಯಾಟಿಕ್) |
17.09 ಲಕ್ಷ ರೂ. |
+16,000 ರೂ. |
1.5-ಲೀಟರ್ ಟಿಎಸ್‌ಐ |
|||
ಸಿಗ್ನೇಚರ್ |
15.23 ಲಕ್ಷ ರೂ. (ಆಂಬೀಶನ್) |
15.49 ಲಕ್ಷ ರೂ. |
+26,000 ರೂ. |
ಪ್ರೆಸ್ಟೀಜ್ |
17.43 ಲಕ್ಷ ರೂ. (ಸ್ಟೈಲ್) |
17.49 ಲಕ್ಷ ರೂ. |
+Rs 6,000 ರೂ. |
ಸಿಗ್ನೇಚರ್ ಡಿಸಿಟಿ |
16.63 ಲಕ್ಷ ರೂ. (ಆಂಬೀಶನ್ ಡಿಸಿಟಿ) |
16.69 ಲಕ್ಷ ರೂ. |
+6,000 ರೂ. |
ಪ್ರೆಸ್ಟೀಜ್ ಡಿಸಿಟಿ |
18.83 ಲಕ್ಷ ರೂ. (ಸ್ಟೈಲ್ ಡಿಸಿಟಿ) |
18.69 ಲಕ್ಷ ರೂ. |
(-)14,000 ರೂ. |
-
ಸೆಡಾನ್ ತನ್ನ ಆರಂಭಿಕ ಆವೃತ್ತಿಯಲ್ಲಿ 94,000 ರೂ.ವರೆಗೆ ಬೆಲೆ ಕಡಿತದೊಂದಿಗೆ ಹಿಂದೆಗಿಂತ ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಿದೆ. -
ಸ್ಲಾವಿಯಾದ ಟಾಪ್-ಸ್ಪೆಕ್ 1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನ್ಯುವಲ್ ಆಯ್ಕೆಗೆ 36,000 ರೂ.ಗಳ ದೊಡ್ಡ ಏರಿಕೆಯೊಂದಿಗೆ ಇತರ ಎಲ್ಲಾ ಆವೃತ್ತಿಗಳಲ್ಲಿ ಸ್ವಲ್ಪ ಹೆಚ್ಚು ದುಬಾರಿಯಾಗಿವೆ.
ಇದನ್ನೂ ಓದಿ: ಭಾರತದಲ್ಲಿ 15 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಉತ್ಪಾದಿಸಿದ ಸ್ಕೋಡಾ- ವೋಕ್ಸ್‌ವ್ಯಾಗನ್
ಕುಶಾಕ್
ಆವೃತ್ತಿ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
1-ಲೀಟರ್ ಟಿಎಸ್‌ಐ |
|||
ಕ್ಲಾಸಿಕ್ |
11.99 ಲಕ್ಷ ರೂ. (ಆಕ್ಟಿವ್) |
10.89 ಲಕ್ಷ ರೂ. |
(-) 1.10 ಲಕ್ಷ ರೂ. |
ಓನಿಕ್ಸ್ |
12.89 ಲಕ್ಷ ರೂ. |
12.89 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಸಿಗ್ನೇಚರ್ |
14.54 ಲಕ್ಷ ರೂ. (ಆಂಬೀಶನ್) |
14.19 ಲಕ್ಷ ರೂ. |
(-) 35,000 ರೂ. |
ಮಾಂಟೆ ಕಾರ್ಲೊ |
17.29 ಲಕ್ಷ ರೂ. |
15.59 ಲಕ್ಷ ರೂ. |
(-) 1.70 ಲಕ್ಷ ರೂ. |
ಪ್ರೆಸ್ಟೀಜ್ |
16.59 ಲಕ್ಷ ರೂ. (ಸ್ಟೈಲ್) |
16.09 ಲಕ್ಷ ರೂ. |
(-) 50,000 ರೂ. |
ಓನಿಕ್ಸ್ ಆಟೋಮ್ಯಾಟಿಕ್ |
13.49 ಲಕ್ಷ ರೂ. |
13.49 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಸಿಗ್ನೇಚರ್ ಆಟೋಮ್ಯಾಟಿಕ್ |
15.84 ಲಕ್ಷ ರೂ. (ಆಂಬೀಶನ್ ಆಟೋಮ್ಯಾಟಿಕ್) |
15.29 ಲಕ್ಷ ರೂ. |
(-) 55,000 ರೂ. |
ಮಾಂಟೆ ಕಾರ್ಲೊ ಆಟೋಮ್ಯಾಟಿಕ್ |
18.59 ಲಕ್ಷ ರೂ. |
16.70 ಲಕ್ಷ ರೂ. |
(-) 1.89 ಲಕ್ಷ ರೂ. |
ಪ್ರೆಸ್ಟೀಜ್ ಆಟೋಮ್ಯಾಟಿಕ್ |
17.89 ಲಕ್ಷ ರೂ. (ಸ್ಟೈಲ್ ಆಟೋಮ್ಯಾಟಿಕ್) |
17.19 ಲಕ್ಷ ರೂ. |
(-) 70,000 ರೂ. |
1.5-ಲೀಟರ್ ಟಿಎಸ್‌ಐ |
|||
ಸಿಗ್ನೇಚರ್ |
15.99 ಲಕ್ಷ ರೂ. (ಆಂಬಿಶನ್) |
15.69 ಲಕ್ಷ ರೂ. |
(-) 30,000 ರೂ. |
ಮಾಂಟೆ ಕಾರ್ಲೊ |
19.09 ಲಕ್ಷ ರೂ. |
17.14 ಲಕ್ಷ ರೂ. |
(-) 1.95 ಲಕ್ಷ ರೂ. |
ಪ್ರೆಸ್ಟೀಜ್ |
18.39 ಲಕ್ಷ ರೂ. (ಸ್ಟೈಲ್) |
17.59 ಲಕ್ಷ ರೂ. |
(-) 80,000 ರೂ. |
ಸಿಗ್ನೇಚರ್ ಡಿಸಿಟಿ |
17.39 ಲಕ್ಷ ರೂ. (ಆಂಬೀಶನ್ ಡಿಸಿಟಿ) |
16.89 ಲಕ್ಷ ರೂ. |
(-) 50,000 ರೂ. |
ಮಾಂಟೆ ಕಾರ್ಲೊ ಡಿಸಿಟಿ |
20.49 ಲಕ್ಷ ರೂ. |
18.30 ಲಕ್ಷ ರೂ. |
(-) 2.19 ಲಕ್ಷ ರೂ. |
ಪ್ರೆಸ್ಟೀಜ್ ಡಿಸಿಟಿ |
19.79 ಲಕ್ಷ ರೂ. (ಸ್ಟೈಲ್ ಡಿಸಿಟಿ) |
18.79 ಲಕ್ಷ ರೂ. |
(-) 1 ಲಕ್ಷ ರೂ. |
-
ಸ್ಕೋಡಾ ತನ್ನ ಕುಶಾಕ್ ಬೆಲೆಯನ್ನು 2.19 ಲಕ್ಷ ರೂ.ವರೆಗೆ ಕಡಿತಗೊಳಿಸಿದೆ. ಆದರೆ ಸ್ಲಾವಿಯಾದಂತೆ, ಕಾಂಪ್ಯಾಕ್ಟ್ ಎಸ್‌ಯುವಿಯ ಯಾವುದೇ ಆವೃತ್ತಿಗೆ ಬೆಲೆ ಹೆಚ್ಚಳಗೊಳಿಸಲಾಗಿಲ್ಲ.
-
ಮಿಡ್-ಸ್ಪೆಕ್ ಓನಿಕ್ಸ್ ಟ್ರಿಮ್ ಈ ಬೆಲೆ ತಿದ್ದುಪಡಿಗೆ ಒಳಪಟ್ಟಿಲ್ಲ. ಇದರ ಬೆಲೆ ಹಿಂದಿನಂತೆ ಇರಲಿದೆ.
ಎಂಜಿನ್ ಮತ್ತು ಗೇರ್‌ಬಾಕ್ಸ್‌ನ ವಿವರಗಳು
ಸ್ಲಾವಿಯಾ ಮತ್ತು ಕುಶಾಕ್ ಎರಡೂ ಕೆಳಗೆ ತಿಳಿಸಿದಂತೆ ಒಂದೇ ರೀತಿಯ ಪವರ್‌ಟ್ರೇನ್‌ಗಳೊಂದಿಗೆ ಬರುತ್ತವೆ:
|
1-ಲೀಟರ್ ಟರ್ಬೋ ಪೆಟ್ರೋಲ್ |
1.5-ಲೀಟರ್ ಟರ್ಬೋ ಪೆಟ್ರೋಲ್ |
ಪವರ್ |
115 ಪಿಎಸ್ |
150 ಪಿಎಸ್ |
ಟಾರ್ಕ್ |
178 ಎನ್‌ಎಮ್ |
250 ಎನ್‌ಎಮ್ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನುಯಲ್, 6-ಸ್ಪೀಡ್ ಆಟೋಮ್ಯಾಟಿಕ |
6-ಸ್ಪೀಡ್ ಮ್ಯಾನುಯಲ್, 7-ಸ್ಪೀಡ್ ಡಿಸಿಟಿ |
ದೊಡ್ಡದಾದ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಕ್ಟಿವ್ ಸಿಲಿಂಡರ್ ನಿಷ್ಕ್ರಿಯಗೊಳಿಸುವ ತಂತ್ರಜ್ಞಾನವನ್ನು ಸಹ ಹೊಂದಿದೆ, ಇದು ಕಾರಿನ ಇಂಧನ ದಕ್ಷತೆಯನ್ನು ಸುಧಾರಿಸಲು ಕಡಿಮೆ ಒತ್ತಡದ ಪರಿಸ್ಥಿತಿಗಳಲ್ಲಿ ಎರಡು ಸಿಲಿಂಡರ್‌ಗಳನ್ನು ಬಳಸುವುದಿಲ್ಲ.
ಸ್ಲಾವಿಯಾ ಮತ್ತು ಕುಶಾಕ್‌ನ ಪ್ರತಿಸ್ಪರ್ಧಿಗಳು
ಸ್ಕೋಡಾ ಸ್ಲಾವಿಯಾವು ಹ್ಯುಂಡೈ ವೆರ್ನಾ, ಫೋಕ್ಸ್‌ವ್ಯಾಗನ್ ವರ್ಟಸ್, ಹೋಂಡಾ ಸಿಟಿ ಮತ್ತು ಮಾರುತಿ ಸಿಯಾಜ್‌ಗಳಿಗೆ ಪ್ರತಿಸ್ಪರ್ಧಿಯಾಗಿದ್ದು, ಸ್ಕೋಡಾ ಕುಶಾಕ್ ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ಮಾರುತಿ ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ ಮತ್ತು ಎಂಜಿ ಆಸ್ಟರ್‌ಗಳನ್ನು ಎದುರಿಸುತ್ತದೆ. ಎರಡೂ ಸ್ಕೋಡಾ ಇಂಡಿಯಾ ಮೊಡೆಲ್‌ಗಳ ಆಪ್‌ಡೇಟ್ ಮಾಡಲಾದ ವೇರಿಯೆಂಟ್-ವಾರು ವೈಶಿಷ್ಟ್ಯಗಳ ವಿವರವಾದ ಮಾಹಿತಿಗಾಗಿ ಟ್ಯೂನ್ ಮಾಡಿ.
ರೆಗುಲರ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್‌ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಸ್ಕೋಡಾ ಸ್ಲಾವಿಯಾ ಆಟೋಮ್ಯಾಟಿಕ್