ಮೊದಲ ಬಾರಿಗೆ ಪ್ರತ್ಯಕ್ಷವಾದ ಸ್ಕೋಡಾ ಕೈಲಾಕ್‌ನ ಬೇಸ್ ವೇರಿಯೆಂಟ್..!
ಸ್ಕೋಡಾ kylaq ಗಾಗಿ shreyash ಮೂಲಕ ಅಕ್ಟೋಬರ್ 25, 2024 06:11 pm ರಂದು ಮಾರ್ಪಡಿಸಲಾಗಿದೆ
- 119 Views
- ಕಾಮೆಂಟ್ ಅನ್ನು ಬರೆಯಿರಿ
ಕೈಲಾಕ್‌ನ ಬೇಸ್ ವೇರಿಯೆಂಟ್ 16-ಇಂಚಿನ ಸ್ಟೀಲ್‌ನ ವೀಲ್‌ಗಳೊಂದಿಗೆ ಕಂಡುಬಂದಿದೆ ಮತ್ತು ಇದು ಹಿಂಭಾಗದ ವೈಪರ್, ಹಿಂಭಾಗದ ಡಿಫಾಗರ್ ಮತ್ತು ಟಚ್‌ಸ್ಕ್ರೀನ್ ಪ್ಯಾನಲ್ ಅನ್ನು ಒಳಗೊಂಡಿಲ್ಲ
-
ಕೈಲಾಕ್ ಭಾರತದಲ್ಲಿ ಜೆಕ್ ವಾಹನ ತಯಾರಕರ ಎಂಟ್ರಿ ಲೆವೆಲ್‌ನ ಕಾರು ಆಗಿದೆ.
-
ಇತ್ತೀಚಿನ ಸ್ಪೈ ಶಾಟ್‌ಗಳು ನಮಗೆ ಬೇಸ್-ಸ್ಪೆಕ್ ಕೈಲಾಕ್‌ನ ಕ್ಯಾಬಿನ್‌ನಲ್ಲಿ ಸ್ಪಷ್ಟ ನೋಟವನ್ನು ನೀಡುತ್ತವೆ.
-
ಕ್ಯಾಬಿನ್ ವಿವರಗಳಲ್ಲಿ 2-ಸ್ಪೋಕ್ ಸ್ಟೀರಿಂಗ್ ವೀಲ್, ಅನಲಾಗ್ ಕ್ಲಸ್ಟರ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಲಿವರ್ ಸೇರಿವೆ.
-
ಕವರ್ ಮಾಡಲಾಗಿದ್ದ ಪರೀಕ್ಷಾ ಆವೃತ್ತಿಯು 16-ಇಂಚಿನ ಉಕ್ಕಿನ ಚಕ್ರಗಳ ಮೇಲೆ ಸಾಗಿದ್ದು, ಮತ್ತು ಹಿಂಭಾಗದ ವೈಪರ್ ಅಥವಾ ಡಿಫಾಗರ್ ಅನ್ನು ಹೊಂದಿರಲಿಲ್ಲ.
-
6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾದ 115 ಪಿಎಸ್ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ.
-
ಇದರ ಬೆಲೆ 8.50 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
ಕೈಲಾಕ್ ನಮ್ಮ ಮಾರುಕಟ್ಟೆಯಲ್ಲಿ ಸ್ಕೋಡಾ ಕಂಪೆನಿಯ 'ಇಂಡಿಯಾ 2.5' ಥೀಮ್‌ನ ಅಡಿಯಲ್ಲಿ ಸಿದ್ಧವಾಗುತ್ತಿರುವ ಸಂಪೂರ್ಣ-ಹೊಸ ಕಾರು ಆಗಿದೆ, ಇದು ನವೆಂಬರ್ 6 ರಂದು ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ. ಕೈಲಾಕ್ ಭಾರತದಲ್ಲಿನ ಜೆಕ್ ವಾಹನ ತಯಾರಕರ ಎಂಟ್ರಿ-ಲೆವೆಲ್‌ನ ಕಾರು ಆಗಿದ್ದು ಮತ್ತು ಅತ್ಯಂತ ಕೈಗೆಟುಕುವ ಎಸ್‌ಯುವಿ ಆಗಿದೆ. ಅದರ ಜಾಗತಿಕ ಪ್ರವೇಶದ ಮುಂಚಿತವಾಗಿ, ಕೈಲಾಕ್‌ನ ಪರೀಕ್ಷಾ ಆವೃತ್ತಿಯನ್ನು ಮತ್ತೊಮ್ಮೆ ಗುರುತಿಸಲಾಯಿತು, ಆದರೆ ಈ ಬಾರಿ ಕಂಡದ್ದು ಬೇಸ್-ಸ್ಪೇಕ್ ವೇರಿಯೆಂಟ್.
ಗಮನಿಸಿದ್ದು ಏನು?

ಇತ್ತೀಚಿನ ಸ್ಪೈ ಶಾಟ್‌ಗಳು ಕೈಲಾಕ್‌ನ ಬೇಸ್-ಸ್ಪೆಕ್ ವೇರಿಯೆಂಟ್‌ನ ಕ್ಯಾಬಿನ್‌ನೊಳಗೆ ಮೊದಲ ನೋಟವನ್ನು ಒದಗಿಸುತ್ತವೆ. ಇದು 2-ಸ್ಪೋಕ್ ಸ್ಟೀರಿಂಗ್ ವೀಲ್, ಅನಲಾಗ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಾಕ್‌ನಲ್ಲಿ ಕಂಡುಬರುವ ಗೇರ್ ಲಿವರ್ ಅನ್ನು ಹೋಲುತ್ತದೆ. ಬೇಸ್-ಸ್ಪೆಕ್ ವೇರಿಯೆಂಟ್ ಆಗಿರುವುದರಿಂದ, ಇದು ಯಾವುದೇ ಟಚ್‌ಸ್ಕ್ರೀನ್ ಪ್ಯಾನೆಲ್ ಅನ್ನು ಒಳಗೊಂಡಿರಲಿಲ್ಲ.


ಇದು ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್ ಅನ್ನು ಹೊಂದಿದ್ದು, ಹೆಡ್‌ಲೈಟ್‌ಗಳನ್ನು ಡಿಆರ್‌ಎಲ್‌ಗಳ ಕೆಳಗೆ ಇರಿಸಲಾಗಿದೆ. ಪರೀಕ್ಷಾ ಆವೃತ್ತಿಯು ಕಪ್ಪು ಕವರ್‌ಗಳೊಂದಿಗೆ 16-ಇಂಚಿನ ಚಕ್ರಗಳನ್ನು ಹೊಂದಿತ್ತು, ಮತ್ತು ಇದು ಹಿಂಭಾಗದ ವೈಪರ್ ಮತ್ತು ಹಿಂಭಾಗದ ಡಿಫಾಗರ್ ಅನ್ನು ಹೊಂದಿಲ್ಲ, ಆದುದರಿಂದ ಇದು ಬೇಸ್-ಸ್ಪೆಕ್ ವೇರಿಯೆಂಟ್ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ.
ಟಾಪ್ ವೇರಿಯೆಂಟ್‌ಗಳಲ್ಲಿ ನಿರೀಕ್ಷಿತ ಫೀಚರ್‌ಗಳು
ಸ್ಕೋಡಾ ಕುಶಾಕ್ ಟಚ್‌ಸ್ಕ್ರೀನ್ ಚಿತ್ರವನ್ನು ಮಾಹಿತಿಗಾಗಿ ಬಳಸಲಾಗಿದೆ
ಸ್ಕೋಡಾದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು 10.1-ಇಂಚಿನ ಟಚ್‌ಸ್ಕ್ರೀನ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಹಿಂಭಾಗದ ದ್ವಾರಗಳೊಂದಿಗೆ ಆಟೋ ಎಸಿ ಮತ್ತು ಸಿಂಗಲ್-ಪೇನ್ ಸನ್‌ರೂಫ್ ಅನ್ನು ಪಡೆಯುವ ಸಾಧ್ಯತೆಯಿದೆ. ಇದು ವೆಂಟಿಲೇಶನ್ ಫಂಕ್ಷನ್‌ನೊಂದಿಗೆ 6-ರೀತಿಯಲ್ಲಿ ಹೊಂದಾಣಿಕ್ ಮಾಡಬಹುದಾದ ಮುಂಭಾಗದ ಸೀಟ್‌ಗಳನ್ನು ಪಡೆಯುತ್ತದೆ. ಸುರಕ್ಷತಾ ಫೀಚರ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಒಳಗೊಂಡಿರುತ್ತದೆ, ಹಾಗೆಯೇ ಇದು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತದೆ.
ನಿರೀಕ್ಷಿತ ಪವರ್‌ಟ್ರೈನ್
ಇದು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 115 ಪಿಎಸ್ ಮತ್ತು 178 ಎನ್‌ಎಮ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ನೊಂದಿಗೆ ಜೋಡಿಯಾಗಲಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸ್ಕೋಡಾ ಕೈಲಾಕ್ ಬೆಲೆ 8.50 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಮತ್ತು ಮಹೀಂದ್ರಾ ಎಕ್ಸ್‌ಯುವಿ 3XO ಮತ್ತು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್-4ಎಮ್ ಕ್ರಾಸ್‌ಒವರ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ