• English
  • Login / Register

ಕೆಲವು ಡೀಲರ್‌ಶಿಪ್‌ಗಳಲ್ಲಿ Skoda Kylaqನ ಆಫ್‌ಲೈನ್ ಬುಕಿಂಗ್‌ಗಳು ಪ್ರಾರಂಭ

ಸ್ಕೋಡಾ kylaq ಗಾಗಿ rohit ಮೂಲಕ ನವೆಂಬರ್ 25, 2024 08:07 pm ರಂದು ಪ್ರಕಟಿಸಲಾಗಿದೆ

  • 75 Views
  • ಕಾಮೆಂಟ್‌ ಅನ್ನು ಬರೆಯಿರಿ

ಕೈಲಾಕ್ ಸಬ್‌-4ಎಮ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಸ್ಕೋಡಾದ ಮೊದಲ ಪ್ರಯತ್ನವಾಗಿದೆ ಮತ್ತು ಇದು ಸ್ಕೋಡಾ ಇಂಡಿಯಾದ ಕಾರುಗಳ ಪಟ್ಟಿಯಲ್ಲಿ ಕಡಿಮೆ ಬೆಲೆಯ ಕಾರು ಆಗಲಿದೆ

Skoda Kylaq unofficial bookings open

  • ಸ್ಕೋಡಾ ತನ್ನ ಭಾರತೀಯ ಎಸ್‌ಯುವಿ ಪಟ್ಟಿಯಲ್ಲಿ ಕೈಲಾಕ್ ಅನ್ನು ಕುಶಾಕ್‌ನ ಕೆಳಗಿನ ಸ್ಥಾನವನ್ನು ನೀಡಿದೆ.

  • ಇದನ್ನು ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್ ಪ್ಲಸ್ ಮತ್ತು ಪ್ರೆಸ್ಟೀಜ್ ಎಂಬ ನಾಲ್ಕು ವಿಶಾಲವಾದ ಟ್ರಿಮ್‌ಗಳಲ್ಲಿ ನೀಡಲಾಗುವುದು.

  • ಡಿಸೈನ್‌ನ ಹೈಲೈಟ್ಸ್‌ಗಳಲ್ಲಿ ಎಲ್ಲಾ-ಎಲ್‌ಇಡಿ ಲೈಟಿಂಗ್ ಮತ್ತು 17-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳನ್ನು ಒಳಗೊಂಡಿವೆ.

  • ಕಪ್ಪು ಮತ್ತು ಬೂದು ಬಣ್ಣದ ಕ್ಯಾಬಿನ್ ಥೀಮ್ ಮತ್ತು ಸೆಮಿ-ಲೆಥೆರೆಟ್ ಕವರ್‌ ಅನ್ನು ಪಡೆಯುತ್ತದೆ.

  • ಫೀಚರ್‌ಗಳ ಪಟ್ಟಿಯಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

  • ಒಂದೇ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 6-ಸ್ಪೀಡ್ ಮ್ಯಾನ್ಯುವಲ್‌ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್‌ ಆಯ್ಕೆಗಳನ್ನು ಪಡೆಯುತ್ತದೆ.

  • ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್ ಶೋ ರೂಂ ಬೆಲೆಗಳು 7.89 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ.

ಸ್ಕೋಡಾ ಕೈಲಾಕ್ ಭಾರತದಲ್ಲಿನ ಸಬ್‌-4ಎಮ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಇತ್ತೀಚಿನ ಪ್ರವೇಶವಾಗಿದೆ. ಇದು ಈಗಾಗಲೇ ಜಾಗತಿಕವಾಗಿ ಪಾದಾರ್ಪಣೆ ಮಾಡಿದೆ ಮತ್ತು ಕಾರು ತಯಾರಕರು ಅದರ ಆರಂಭಿಕ ಬೆಲೆಯನ್ನು ಸಹ ಬಹಿರಂಗಪಡಿಸಿದ್ದಾರೆ, ಅದರ ಅಧಿಕೃತ ಬುಕಿಂಗ್‌ಗಳು ಡಿಸೆಂಬರ್ 2 ರಿಂದ ಪ್ರಾರಂಭವಾಗಲಿದೆ. ನಿಮಗೆ ಅಲ್ಲಿಯವರೆಗೆ ಕಾಯಲು ಸಾಧ್ಯವಾಗದಿದ್ದರೆ, ಕೆಲವು ಸ್ಕೋಡಾ ಡೀಲರ್‌ಗಳು ಈ ಎಸ್‌ಯುವಿಗಾಗಿ ಬುಕಿಂಗ್‌ಗಳನ್ನು ಸ್ವೀಕರಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಬಲ್ಲ ಮೂಲಗಳಿಂದ ತಿಳಿದುಕೊಂಡಿದ್ದೇವೆ. ಸ್ಕೋಡಾ ಕೈಲಾಕ್‌ನ ಕುರಿತ ಒಂದು ಅವಲೋಕನ ಇಲ್ಲಿದೆ:

ಡಿಸೈನ್‌ ಕುರಿತ ವಿವರಗಳು

Skoda Kylaq front

ಮೊದಲ ನೋಟದಲ್ಲಿ, ನೀವು ಕೈಲಾಕ್ ಅನ್ನು ಕುಶಾಕ್ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆಗಳಿವೆ, ಏಕೆಂದರೆ ಸ್ಕೋಡಾದ ಈ ಎರಡೂ ಎಸ್‌ಯುವಿಗಳು ಒಂದೇ ರೀತಿ ಕಾಣುತ್ತವೆ. ಸ್ಕೋಡಾದ ಸಬ್-4ಎಮ್‌ ಎಸ್‌ಯುವಿಯ ಹೊರಭಾಗದ ಹೈಲೈಟ್ಸ್‌ಗಳು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸ್ಪ್ಲಿಟ್‌-ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಚಿಟ್ಟೆ-ಆಕಾರದ ಗ್ರಿಲ್ ಅನ್ನು ಒಳಗೊಂಡಿವೆ. ಇದು 17-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳು ಮತ್ತು 'ಸ್ಕೋಡಾ' ಮಾನಿಕರ್ ಅನ್ನು ಹೊಂದಿರುವ ಕಪ್ಪು ಪಟ್ಟಿಯಿಂದ ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲೈಟ್‌ಗಳೊಂದಿಗೆ ಬರುತ್ತದೆ.

ಕ್ಯಾಬಿನ್‌ ಮತ್ತು ಫೀಚರ್‌ಗಳ ಕುರಿತು

Skoda Kylaq cabin

ಕೈಲಾಕ್ ಕಪ್ಪು ಮತ್ತು ಬೂದು ಬಣ್ಣದ ಕ್ಯಾಬಿನ್ ಥೀಮ್, 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಸೆಮಿ-ಲೆಥೆರೆಟ್ ಸೀಟ್ ಕವರ್‌ ಅನ್ನು ಹೊಂದಿದೆ. ಇದರ ಫೀಚರ್‌ಗಳ ಸೆಟ್ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸ್ಕೋಡಾ ಸಿಂಗಲ್-ಪೇನ್ ಸನ್‌ರೂಫ್ ಮತ್ತು 6-ರೀತಿಯಲ್ಲಿ ಹೊಂದಾಣಿಸಬಹುದಾದ ಮುಂಭಾಗದ ಸೀಟ್‌ಗಳನ್ನು ವೆಂಟಿಲೇಶನ್‌ನೊಂದಿಗೆ ಒದಗಿಸಿದೆ.

ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರಿವರ್ಸಿಂಗ್ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Citroen C5 Aircrossನ ಎಂಟ್ರಿ-ಲೆವೆಲ್ ವೇರಿಯಂಟ್ ಸ್ಥಗಿತ, ಹೆಚ್ಚಾಯಿತು ಈ ಎಸ್‌ಯುವಿಯ ಬೆಲೆ..!

ಪೆಟ್ರೋಲ್‌ ಎಂಜಿನ್‌ ಮಾತ್ರ ಲಭ್ಯ

ಕುಶಾಕ್ ಮತ್ತು ಸ್ಲಾವಿಯಾದಲ್ಲಿ ಕಂಡುಬರುವ ಅದೇ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (115 ಪಿಎಸ್‌/178 ಎನ್‌ಎಮ್‌) ನೊಂದಿಗೆ ಸ್ಕೋಡಾ ಇದನ್ನು ಸಜ್ಜುಗೊಳಿಸಿದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿದೆ.

ಇದರ ಬೆಲೆ ಎಷ್ಟು?

Skoda Kylaq rear

ಭಾರತದಾದ್ಯಂತ ಸ್ಕೋಡಾ ಕೈಲಾಕ್‌ನ ಪರಿಚಯಾತ್ಮಕ ಎಕ್ಸ್ ಶೋ ರೂಂ ಬೆಲೆಗಳು 7.89 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಅದರ ಸಂಪೂರ್ಣ ಬೆಲೆ ಪಟ್ಟಿ ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ. ಈ ಎಸ್‌ಯುವಿ ಕಿಯಾ ಸೋನೆಟ್, ಮಾರುತಿ ಬ್ರೆಜ್ಜಾ, ಮಹೀಂದ್ರಾ ಎಕ್ಸ್‌ಯುವಿ 3XO ಮತ್ತು ರೆನಾಲ್ಟ್ ಕಿಗರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.  

ವಾಹನ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

ಇದರ ಬಗ್ಗೆ ಇನ್ನಷ್ಟು ಓದಲು  : ಕೈಲಾಕ್ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Skoda kylaq

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience