ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಸ್ಕೋಡಾ ಕೈಲಾಕ್ ಪಡೆದಿದೆ ಭರ್ಜರಿ 5-ಸ್ಟಾರ್ ಸುರಕ್ಷತಾ ರೇಟಿಂಗ್
ಸ್ಕೋಡಾ kylaq ಗಾಗಿ dipan ಮೂಲಕ ಜನವರಿ 16, 2025 08:37 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಕೋಡಾ ಕೈಲಾಕ್, ಭಾರತ್ NCAP ನಿಂದ ಕ್ರ್ಯಾಶ್-ಪರೀಕ್ಷೆಗೆ ಒಳಗಾದ ಜೆಕ್ ಕಾರು ತಯಾರಕ ಕಂಪನಿಯ ಮೊದಲ ಕಾರಾಗಿದೆ
-
ಇದು 30.88/32 ಅಂಕಗಳನ್ನು ಗಳಿಸಿದೆ, ಆದ್ದರಿಂದ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ 5 ಸ್ಟಾರ್‌ಗಳನ್ನು ಪಡೆದುಕೊಂಡಿದೆ.
-
ಮಕ್ಕಳ ರಕ್ಷಣೆಯಲ್ಲಿ, ಇದು 45/49 ಅಂಕಗಳನ್ನು ಗಳಿಸಿದೆ ಮತ್ತು 5 ಸ್ಟಾರ್‌ಗಳನ್ನು ಪಡೆದುಕೊಂಡಿದೆ.
-
ಇದು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ADAS ಸೂಟ್‌ನೊಂದಿಗೆ ಬರುತ್ತದೆ.
-
ಕೈಲಾಕ್ ಬೆಲೆಯು ರೂ. 7.89 ಲಕ್ಷಗಳಿಂದ ರೂ.14.40 ಲಕ್ಷಗಳವರೆಗೆ (ಎಕ್ಸ್ ಶೋ ರೂಂ) ಇದೆ.
ಸ್ಕೋಡಾದ ಹೊಸದಾದ ಮತ್ತು ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯ ಕೊಡುಗೆಯಾದ ಸ್ಕೋಡಾ ಕೈಲಾಕ್, ಇತ್ತೀಚಿನ ಪರೀಕ್ಷೆಗಳಲ್ಲಿ ಭಾರತ್ NCAP ನಿಂದ 5-ಸ್ಟಾರ್ ಕ್ರ್ಯಾಶ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಇದು ಅಡಲ್ಟ್ ಆಕ್ಯೂಪಂಟ್ ಪ್ರೊಟೆಕ್ಷನ್ (AOP) ಪರೀಕ್ಷೆಗಳಲ್ಲಿ 30.88/32 ಅಂಕಗಳನ್ನು ಮತ್ತು ಚೈಲ್ಡ್ ಆಕ್ಯೂಪಂಟ್ ಪ್ರೊಟೆಕ್ಷನ್ (COP) ಪರೀಕ್ಷೆಗಳಲ್ಲಿ 45/49 ಅಂಕಗಳನ್ನು ಗಳಿಸಿದೆ. ಈ ಫಲಿತಾಂಶಗಳು ವಯಸ್ಕ ಮತ್ತು ಮಕ್ಕಳ ಪ್ರಯಾಣಿಕರಿಬ್ಬರಿಗೂ 5 ಸ್ಟಾರ್ ರೇಟಿಂಗ್‌ಗಳನ್ನು ಗಳಿಸಲು ಸಹಾಯ ಮಾಡಿವೆ.
ಬನ್ನಿ, ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳನ್ನು ವಿವರವಾಗಿ ನೋಡೋಣ.
ಅಡಲ್ಟ್ ಆಕ್ಯೂಪಂಟ್ ಪ್ರೊಟೆಕ್ಷನ್ (AOP)
ಮುಂಭಾಗದ ಆಫ್‌ಸೆಟ್ ಡಿಫಾರ್ಮೇಬಲ್ ಬ್ಯಾರಿಯರ್ ಪರೀಕ್ಷೆ: 15.04/16 ಅಂಕಗಳು
ಸೈಡ್ ಡಿಫಾರ್ಮೇಬಲ್ ಬ್ಯಾರಿಯರ್ ಪರೀಕ್ಷೆ: 15.84/16 ಅಂಕಗಳು
ವಯಸ್ಕ ಪ್ರಯಾಣಿಕರಿಗಾಗಿ ನಡೆಸಲಾದ ಮುಂಭಾಗದ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ, ಸ್ಕೋಡಾ ಕೈಲಾಕ್ ಸಹ-ಚಾಲಕ ಮತ್ತು ಚಾಲಕ ಇಬ್ಬರ ಹೆಚ್ಚಿನ ದೇಹದ ಭಾಗಗಳಿಗೆ 'ಗುಡ್' ರಕ್ಷಣೆಯನ್ನು ಪಡೆದುಕೊಂಡಿದೆ. ಆದರೆ, ಚಾಲಕನ ಎದೆ ಮತ್ತು ಎಡ ಮೊಣಕಾಲಿಗೆ ರಕ್ಷಣೆಯನ್ನು 'ಆಡಿಕ್ವೆಟ್' ಎಂದು ರೇಟ್ ಮಾಡಲಾಗಿದೆ.
ಸೈಡ್ ಮೊವೇಬಲ್ ಡಿಫಾರ್ಮೇಬಲ್ ಬ್ಯಾರಿಯರ್ ಪರೀಕ್ಷೆಯಲ್ಲಿ, ವಯಸ್ಕ ಡಮ್ಮಿಯ ಎದೆಗೆ 'ಆಡಿಕ್ವೆಟ್' ರಕ್ಷಣೆ ಸಿಕ್ಕಿದೆ, ಆದರೆ ತಲೆ, ಹೊಟ್ಟೆ ಮತ್ತು ಸೊಂಟಕ್ಕೆ ರಕ್ಷಣೆಯನ್ನು 'ಗುಡ್' ಎಂದು ರೇಟ್ ಮಾಡಲಾಗಿದೆ. ಸೈಡ್ ಪೋಲ್ ಇಂಪ್ಯಾಕ್ಟ್ ಟೆಸ್ಟ್ (ಪೋಲ್) ಪರೀಕ್ಷೆಯಲ್ಲಿ, ಎಲ್ಲಾ ಭಾಗಗಳು 'ಗುಡ್' ರಕ್ಷಣೆಯನ್ನು ಪಡೆದಿವೆ.
ಚೈಲ್ಡ್ ಆಕ್ಯೂಪಂಟ್ ಪ್ರೊಟೆಕ್ಷನ್ (COP)
ಡೈನಾಮಿಕ್ ಸ್ಕೋರ್: 24/24 ಅಂಕಗಳು
ಚೈಲ್ಡ್ ರಿಸ್ಟ್ರೈನ್ಟ್ ಸಿಸ್ಟಮ್ (CRS) ಇನ್ಸ್ಟಾಲೇಷನ್ ಸ್ಕೋರ್: 12/12 ಅಂಕಗಳು
ವೆಹಿಕಲ್ ಅಸೆಸ್ಮೆಂಟ್ ಸ್ಕೋರ್: 9/13 ಅಂಕಗಳು
COP ಗಾಗಿ, ಕೈಲಾಕ್ ಚೈಲ್ಡ್ ರಿಸ್ಟ್ರೈನ್ಟ್ ಸಿಸ್ಟಮ್‌ಗಳನ್ನು ಬಳಸಿಕೊಂಡು ನಡೆಸಿದ ಡೈನಾಮಿಕ್ ಪರೀಕ್ಷೆಯಲ್ಲಿ ಪೂರ್ಣ ಅಂಕಗಳನ್ನು (24 ರಲ್ಲಿ 24) ಗಳಿಸಿದೆ. 18 ತಿಂಗಳ ಮತ್ತು 3 ವರ್ಷದ ಮಗುವಿನ ಡಮ್ಮಿಯ ಮುಂಭಾಗ ಮತ್ತು ಸೈಡ್ ರಕ್ಷಣೆಗೆ, ಡೈನಾಮಿಕ್ ಸ್ಕೋರ್ ಕ್ರಮವಾಗಿ 8 ರಲ್ಲಿ 8 ಮತ್ತು 4 ರಲ್ಲಿ 4 ಆಗಿತ್ತು.
ಇದನ್ನು ಕೂಡ ಓದಿ: ಲಾಂಚ್‌ಗೆ ಮುನ್ನ ಲೀಕ್ ಆಗಿದೆ ಮಹೀಂದ್ರಾ XEV 7e (XUV700 EV) ಡಿಸೈನ್
ಸ್ಕೋಡಾ ಕೈಲಾಕ್: ಸುರಕ್ಷತಾ ಫೀಚರ್‌ಗಳು
ಸ್ಕೋಡಾ ಕೈಲಾಕ್ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ-ಕೊಲಿಷನ್-ಬ್ರೇಕಿಂಗ್ ಸಿಸ್ಟಮ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಫೀಚರ್‌ಗಳನ್ನು ಒಳಗೊಂಡಂತೆ ಸದೃಢವಾದ ಸುರಕ್ಷತಾ ಸೂಟ್‌ನೊಂದಿಗೆ ಬರುತ್ತದೆ.
ಸ್ಕೋಡಾ ಕೈಲಾಕ್: ಪವರ್‌ಟ್ರೇನ್ ಆಯ್ಕೆಗಳು
ಸ್ಕೋಡಾ ಕೈಲಾಕ್ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಮತ್ತು ಇದರ ಸ್ಪೆಸಿಫಿಕೇಷನ್‌ಗಳು ಈ ಕೆಳಗಿನಂತಿವೆ:
ಎಂಜಿನ್ |
1-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ |
115 PS |
ಟಾರ್ಕ್ |
178 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT, 6-ಸ್ಪೀಡ್ AT* |
*AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಸ್ಕೋಡಾ ಕೈಲಾಕ್: ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸ್ಕೋಡಾ ಕೈಲಾಕ್ ಬೆಲೆಯು ರೂ 7.89 ಲಕ್ಷದಿಂದ ರೂ 14.40 ಲಕ್ಷದ (ಎಕ್ಸ್ ಶೋರೂಂ) ನಡುವೆ ಇದೆ. ಇದು ಮಾರುತಿ ಬ್ರೆಝಾ, ಟಾಟಾ ನೆಕ್ಸನ್, ಕಿಯಾ ಸೋನೆಟ್ ಮತ್ತು ಹುಂಡೈ ವೆನ್ಯೂ ನಂತಹ ಇತರ ಸಬ್-4m ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಕೈಲಾಕ್ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.