Login or Register ಅತ್ಯುತ್ತಮ CarDekho experience ಗೆ
Login

ಪರೀಕ್ಷೆಯ ವೇಳೆಯಲ್ಲಿ Skoda Sub-4m ಎಸ್‌ಯುವಿ ಪ್ರತ್ಯಕ್ಷ, ಈ ಬಾರಿ Kushaq ಜೊತೆಗೆ ಹೋಲಿಕೆ

ಸ್ಕೋಡಾ kylaq ಗಾಗಿ dipan ಮೂಲಕ ಜುಲೈ 01, 2024 08:54 pm ರಂದು ಪ್ರಕಟಿಸಲಾಗಿದೆ

ಮುಂಬರುವ ಸ್ಕೋಡಾ ಎಸ್‌ಯುವಿಯು ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಮತ್ತು ಕಿಯಾ ಸೋನೆಟ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ

  • ಸ್ಕೋಡಾದ ಸಬ್-4ಎಮ್‌ ಎಸ್‌ಯುವಿಯನ್ನು ಕುಶಾಕ್ ಮತ್ತು ಸ್ಲಾವಿಯಾದಲ್ಲಿ ಬಳಸಲಾಗುವ ಅದೇ MQ-AO-IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸುವ ಸಾಧ್ಯತೆಯಿದೆ.
  • ಇದು ಸುತ್ತಲೂ ಎಲ್ಇಡಿ ಲೈಟ್‌ಗಳನ್ನು ಹೊಂದಿದೆ ಮತ್ತು ಪ್ರಸ್ತುತ ಸ್ಕೋಡಾ ಕೊಡಿಯಾಕ್ ಅನ್ನು ಹೋಲುವ ಅಲಾಯ್ ವೀಲ್‌ಗಳನ್ನು ಹೊಂದಿದೆ.
  • ಇದು ಕುಶಾಕ್ ತರಹದ ಸ್ಟೀಯರಿಂಗ್ ವೀಲ್, 10-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಪಡೆಯಬಹುದು.
  • ಸುರಕ್ಷತಾ ವೈಶಿಷ್ಟ್ಯಗಳು ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರಬಹುದು.
  • ಇದು 1-ಲೀಟರ್ ಟಿಎಸ್‌ಐ ಟರ್ಬೊ-ಪೆಟ್ರೋಲ್ ಎಂಜಿನ್ (115 ಪಿಎಸ್‌/178 ಎನ್‌ಎಮ್‌) ಪಡೆಯುವ ನಿರೀಕ್ಷೆಯಿದೆ.
  • ಇದು 2025ರ ಏಪ್ರಿಲ್ ವೇಳೆಗೆ 8.50 ಲಕ್ಷ ರೂಪಾಯಿಗಳ (ಎಕ್ಸ್ ಶೋ ರೂಂ) ಬೆಲೆಯೊಂದಿಗೆ ಮಾರಾಟವಾಗುವ ಸಾಧ್ಯತೆಯಿದೆ.

Skoda ಸಬ್‌-4ಎಮ್‌ ಎಸ್‌ಯುವಿಯನ್ನು ಸಂಪೂರ್ಣ ಕವರ್‌ನೊಂದಿಗೆ ಮತ್ತೆ ಗುರುತಿಸಲಾಗಿದೆ, ಈ ಬಾರಿ ಸ್ಕೋಡಾ ಕುಶಾಕ್‌ನೊಂದಿಗೆ ಅದರ ಗಾತ್ರ ಮತ್ತು ವಿನ್ಯಾಸದ ಕಲ್ಪನೆಯನ್ನು ನಮಗೆ ನೀಡುತ್ತದೆ. ಇದನ್ನು ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾದಲ್ಲಿ ಬಳಸಲಾಗುವ ಅದೇ MQ-AO-IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸುವ ಸಾಧ್ಯತೆಯಿದೆ. ನಾವು ಗಮನಿಸಿದ್ದನ್ನು ವಿವರವಾಗಿ ತಿಳಿಯೋಣ ಬನ್ನಿ:

ಏನಿದೆ ಹೊಸತು?

ಭಾರೀ ಮರೆಮಾಚುವಿಕೆಯ ಹೊರತಾಗಿಯೂ, ಸ್ಕೋಡಾದ ಮುಂಬರುವ ಸಬ್-4ಎಮ್‌ ಎಸ್‌ಯುವಿಯು ವಿನ್ಯಾಸದ ಅಂಶಗಳನ್ನು ದೊಡ್ಡ ಸ್ಕೋಡಾ ಕುಶಾಕ್‌ನೊಂದಿಗೆ ಹಂಚಿಕೊಳ್ಳುತ್ತದೆ. ಇದು ಇತರ ಸ್ಕೋಡಾ ಮೊಡೆಲ್‌ಗಳಂತೆಯೇ ಲಂಬವಾದ ಸ್ಲ್ಯಾಟ್‌ಗಳೊಂದಿಗೆ ಬಟರ್‌ಫ್ಲೈ ಗ್ರಿಲ್ ಅನ್ನು ಒಳಗೊಂಡಿದೆ. ಇದು ಎಲ್ಇಡಿ ಡಿಆರ್‌ಎಲ್‌ಗಳಲ್ಲಿ ಇಂಟಿಗ್ರೇಟೆಡ್ ಇಂಡಿಕೇಟರ್‌ಗಳೊಂದಿಗೆ ಸ್ಪ್ಲಿಟ್-ಹೆಡ್‌ಲ್ಯಾಂಪ್‌ ವಿನ್ಯಾಸವನ್ನು ಹೊಂದಿದೆ. ಆದಾಗಿಯೂ, ಕುಶಾಕ್‌ಗೆ ಹೋಲಿಸಿದರೆ, ಮುಂಬರುವ ಸಬ್‌-4ಎಮ್‌ ಎಸ್‌ಯುವಿ ಬದಲಾವಣೆ ಮಾಡಿದ ಜೋಡಿ ಬಂಪರ್‌ಗಳನ್ನು ಹೊಂದಿರುತ್ತದೆ. ಇದು ಕುಶಾಕ್‌ನಂತೆಯೇ ಕಾಣುವ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಸಹ ಪಡೆಯುತ್ತದೆ.

ಇಂಟಿರೀಯರ್‌ ಮತ್ತು ಫೀಚರ್‌ಗಳು

ಕ್ಯಾಬಿನ್‌ನ ಒಳಭಾಗದ ಬಗ್ಗೆ ತಿಳಿಯಲು ನಮಗೆ ಯಾವುದೇ ಸ್ಪೈ ಶಾಟ್‌ಗಳಿಲ್ಲ, ಆದರೆ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್‌ ಹವಾನಿಯಂತ್ರಣ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸಿಂಗಲ್‌ ಪೇನ್‌ ಸನ್‌ರೂಫ್‌ ಸೇರಿದಂತೆ ಕುಶಾಕ್‌ನಂತೆಯೇ 10-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸ್ಟೀರಿಂಗ್ ವೀಲ್ ಅನ್ನು ಇದು ಪಡೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಇದರ ಸುರಕ್ಷತಾ ಪ್ಯಾಕೇಜ್‌ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ (ESC), ಆರು ಏರ್‌ಬ್ಯಾಗ್‌ಗಳು ಮತ್ತು ಟೈರ್ ಪ್ರೆಶರ್‌ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿರಬಹುದು.

ಕೇವಲ ಒಂದು ಎಂಜಿನ್ ಇರುವ ಸಾಧ್ಯತೆ

ಕುಶಾಕ್ ಮತ್ತು ಸ್ಲಾವಿಯಾ ಮೊಡೆಲ್‌ಗಳಲ್ಲಿ ನೀಡಲಾಗುವ ಈ ಮುಂಬರುವ ಸ್ಕೋಡಾ ಎಸ್‌ಯುವಿಯು ಸಣ್ಣ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಬಹುದು. ಈ ಎಂಜಿನ್ 115 ಪಿಎಸ್‌ ಮತ್ತು 178 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಸ್ಕೋಡಾ ಸಬ್-4ಎಮ್‌ ಎಸ್‌ಯುವಿಯು ಭಾರತದಲ್ಲಿ 2025ರ ಆರಂಭದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ, ಇದರ ಬೆಲೆಗಳು 8.50 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ. ಇದು ಟಾಟಾ ನೆಕ್ಸಾನ್‌, ಮಾರುತಿ ಬ್ರೇಝಾ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ, ಕಿಯಾ ಸೊನೆಟ್‌, ಹ್ಯುಂಡೈ ವೆನ್ಯೂ, ರೆನಾಲ್ಟ್‌ ಕೈಗರ್‌, ನಿಸ್ಸಾನ್‌ ಮೆಗ್ನೈಟ್‌, ಮತ್ತು ಸಬ್‌-4ಎಮ್‌ ಕ್ರಾಸ್‌ಒವರ್‌ಗಳಾದ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಆಟೋಮೋಟಿವ್ ಪ್ರಪಂಚದ ಕುರಿತು ತ್ವರಿತ ಆಪ್‌ಡೇಟ್‌ಗಳನ್ನು ಬಯಸುವಿರಾ? ದಯವಿಟ್ಟು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

ಹೆಚ್ಚು ಓದಿ : ಕುಶಾಕ್ ಆನ್ ರೋಡ್ ಬೆಲೆ

Share via

Write your Comment on Skoda kylaq

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ