ಪರೀಕ್ಷಾ ವೇಳೆಯಲ್ಲಿ ಮತ್ತೊಮ್ಮೆ ಪ್ರತ್ಯಕ್ಷವಾದ Skoda Sub-4m ಎಸ್‌ಯುವಿ;ಈ ಬಾರಿ ಕಂಡಿದ್ದೇನು ?
ಸ್ಕೋಡಾ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಕುಶಾಕ್‌ನ ಹೆಚ್ಚಾಗಿ ಭಾರತದಲ್ಲೇ ನಿರ್ಮಾಣವಾಗುವ MQB-A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ
- ಇತ್ತೀಚಿನ ಸ್ಪೈ ಶಾಟ್ ನಮಗೆ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಟೈಲ್ ಲೈಟ್ ಕ್ಲಸ್ಟರ್ ಅನ್ನು ಹತ್ತಿರದಿಂದ ತೋರಿಸಿದೆ.
- ಕಪ್ಪು ವೀಲ್ ಕವರ್‌ಗಳೊಂದಿಗೆ ಸ್ಟೀಲ್ ಚಕ್ರಗಳೊಂದಿಗೆ ಕಂಡುಬಂದಿರುವುದರಿಂದ ಇದನ್ನು ಲೋವರ್-ಸ್ಪೆಕ್ ಆವೃತ್ತಿ ಇರಬಹುದೆಂದು ಅಂದಾಜಿಸಲಾಗಿದೆ.
- ಫೀಚರ್ ಹೈಲೈಟ್ಸ್'ಗಳು 10-ಇಂಚಿನ ಟಚ್‌ಸ್ಕ್ರೀನ್, ಮುಂಭಾಗದ ವೆಂಟಿಲೇಟೆಡ್ ಸೀಟುಗಳು ಮತ್ತು ಸನ್‌ರೂಫ್ಅನ್ನು ಒಳಗೊಂಡಿರಬಹುದು.
- ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆಯುವ ಸಾಧ್ಯತೆಯಿದೆ.
- 6-ಸ್ಪೀಡ್ ಮ್ಯಾನುಯಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಜೊತೆ ಜೋಡಿಸಲಾದ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆಯುವ ಸಾಧ್ಯತೆಯಿದೆ.
- 2025ರ ವೇಳೆಗೆ ಭಾರತದಲ್ಲಿ 8.50 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಮಾರಾಟವಾಗಬಹುದೆಂದು ಎಂದು ನಿರೀಕ್ಷಿಸಲಾಗಿದೆ.
ಸ್ಕೋಡಾ ಸಬ್-4ಎಮ್ ಎಸ್ಯುವಿಯು ಭಾರತದಲ್ಲಿ ಈ ಕಾರು ತಯಾರಕರಿಂದ ಪರಿಚಯಿಸಲ್ಪಡುವ ಮುಂಬರುವ ಪ್ರಮುಖ ಮೊಡೆಲ್ ಗಳಲ್ಲಿ ಒಂದಾಗಿದೆ ಮತ್ತು ಇದು 2025ರಲ್ಲಿ ಬಿಡುಗಡೆಯಾಗಬಹುದೆಂದು ಎಂದು ನಿರೀಕ್ಷಿಸಲಾಗಿದೆ. ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾಗಳಿಗೆ ಬೇಸ್ ಆಗಿರುವ MQB-A0-IN ಪ್ಲಾಟ್‌ಫಾರ್ಮ್ ಅನ್ನೇ ಹೊಸ ಸ್ಕೋಡಾ ಸಬ್-4ಎಮ್ ಎಸ್‌ಯುವಿಯು ಆಧರಿಸಿದೆ. ಮುಂಬರುವ ಈ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಪರೀಕ್ಷಾ ಆವೃತ್ತಿಯನ್ನು ನಾವು ಇತ್ತೀಚೆಗೆ ಗುರುತಿಸಿದ್ದೇವೆ ಮತ್ತು ನಾವು ಅದರಲ್ಲಿ ಕಂಡದ್ದು ಇಲ್ಲಿದೆ.
ಕುಶಾಕ್‌ನಂತಹ ನೋಟ
ಇತ್ತೀಚಿನ ಸ್ಪೈ ಶಾಟ್‌ಗಳು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು ಅಸ್ತಿತ್ವದಲ್ಲಿರುವ ಕುಶಾಕ್ ಎಸ್‌ಯುವಿಯಂತೆಯೇ ಆಕಾರ ಮತ್ತು ಶೈಲಿಯನ್ನು ಹೊಂದಿರುತ್ತದೆ ಎಂದು ತೋರಿಸುತ್ತದೆ. ಪರೀಕ್ಷಾ ಆವೃತ್ತಿಯನ್ನು ಸಂಪೂರ್ಣವಾಗಿ ಮರೆಮಾಚಿದ್ದರೂ, ಅದರ ಸ್ಪ್ಲಿಟ್ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ DRLಗಳು ಇದುವರೆಗಿನ ಈ ಸ್ಪಷ್ಟವಾದ ಪತ್ತೇದಾರಿ ಫೋಟೊಗಳಲ್ಲಿ ಇನ್ನೂ ಗಮನಾರ್ಹವಾಗಿದೆ. ಕುಶಾಕ್‌ನಂತೆಯೇ, ಸ್ಕೋಡಾದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು ಸಹ ಅದೇ ಬಟರ್‌ಫ್ಲೈ ಸ್ಕೋಡಾ ಗ್ರಿಲ್ ಅನ್ನು ಹೊಂದಿದೆ.
ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಈ ಪರೀಕ್ಷಾ ಆವೃತ್ತಿಯು ಕಪ್ಪು ವೀಲ್ ಕವರ್‌ಗಳೊಂದಿಗೆ ಸ್ಟೀಲ್ ಚಕ್ರಗಳನ್ನು ಹೊಂದಿದೆ. ಸ್ಕೋಡಾ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಹತ್ತಿರದಿಂದ ಪರೀಕ್ಷಿಸಲು ನಮಗೆ ಅವಕಾಶ ಸಿಕ್ಕಿದ್ದು, ಇದು ಕುಶಾಕ್‌ನಲ್ಲಿ ನೀಡಲಾದಂತೆಯೇ ಕಾಣುತ್ತದೆ.
ಇದನ್ನು ಓದಿ: : ಎಕ್ಸ್‌ಕ್ಲೂಸಿವ್: ಭಾರತದಲ್ಲಿ ಮೊದಲ ಬಾರಿಗೆ ಪರೀಕ್ಷೆಯ ವೇಳೆಯಲ್ಲಿ ಕಾಣಿಸಿಕೊಂಡ 2025ರ Skoda Kodiaq
ಕ್ಯಾಬಿನ್ ಮತ್ತು ವೈಶಿಷ್ಟ್ಯಗಳು
ಸ್ಕೋಡಾ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಒಳಗೆ ಇಣುಕಿ ನೋಡುವ ಅವಕಾಶ ನಮಗೆ ಸಿಗದಿದ್ದರೂ, ಕುಶಾಕ್‌ನಲ್ಲಿ ಕಂಡುಬರುವ ಅದೇ ಇನ್ಫೋಟೈನ್‌ಮೆಂಟ್ ಯುನಿಟ್ ಮತ್ತು ಸ್ಟೀರಿಂಗ್ ವೀಲ್ ಅನ್ನು ಇದು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ. ವೈಶಿಷ್ಟ್ಯಗಳ ವಿಷಯದಲ್ಲಿ, ಇದು 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಎಸಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸನ್‌ರೂಫ್ ಅನ್ನು ಪಡೆಯುವ ನಿರೀಕ್ಷೆಯಿದೆ.
ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿರಬಹುದು.
ಒಂದೇ ಪವರ್‌ಟ್ರೇನ್ ಆಯ್ಕೆಯನ್ನು ಪಡೆಯುವ ಸಾಧ್ಯತೆ
ಸ್ಕೋಡಾ ತನ್ನ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯನ್ನು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ನೀಡಬಹುದು, ಇದನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ ಕುಶಾಕ್ ಮತ್ತು ಸ್ಲಾವಿಯಾದಲ್ಲಿಯೂ ನೀಡಲಾಗುತ್ತಿದೆ. ಈ ಎಂಜಿನ್ 115 ಪಿಎಸ್ ಮತ್ತು 178 ಎನ್ಎಮ್ ನಷ್ಟು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗೆ ಜೋಡಿಯಾಗಿ ಬರುತ್ತದೆ..
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
Tಸ್ಕೋಡಾ ಸಬ್-4ಎಮ್ ಎಸ್ಯುವಿಯು ಭಾರತದಲ್ಲಿ 2025ರ ಆರಂಭದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ನಿರೀಕ್ಷೆಯಿದೆ, ಇದರ ಬೆಲೆಗಳು 8.50 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್ಯುವಿ 3XO, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಜೊತೆಗೆ ಮಾರುತಿ ಫ್ರಾಂಕ್ಸ್ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ನಂತಹ ಸಬ್-4m ಕ್ರಾಸ್ಒವರ್‌ಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ.
ರೆಗುಲರ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್‌ಅನ್ನು ಫಾಲೋ ಮಾಡಿ
shreyash
- 127 ವೀಕ್ಷಣಿಗಳು